ಕೇಂದ್ರ ಸರ್ಕಾರದ ನೌಕರರಿಗೆ Good News:ಬದಲಾಯ್ತು ಪೆನ್ಷನ್‌ ಸ್ಕೀಮ್‌, NPS ಜೊತೆಗೆ UPS!| Economic Times Kannada

แชร์
ฝัง
  • เผยแพร่เมื่อ 2 ต.ค. 2024
  • ಹೊಸ ಪಿಂಚಣಿ ವ್ಯವಸ್ಥೆ-ಎನ್‌ಪಿಎಸ್ ವಿರುದ್ಧ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಎನ್‌ಪಿಎಸ್‌ ಮತ್ತು ಒಪಿಎಸ್‌ ಸಂಘರ್ಷದ ಮಧ್ಯೆ ಕೇಂದ್ರ ಸರ್ಕಾರವು ಶನಿವಾರ ಮಹತ್ವದ ಘೋಷಣೆ ಮಾಡಿದೆ. ಏಕೀಕೃತ ಪಿಂಚಣಿ ಯೋಜನೆಯಿಂದ (UPS) ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಬಗೆಯ ಪಿಂಚಣಿ ಲಾಭವಾಗಲಿದೆ ಅಂತ ಸರ್ಕಾರ ತಿಳಿಸಿದೆ. ಈ ಯೋಜನೆಯು 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯೋಜನ ಒದಗಿಸಲಿದೆ ಅಂತ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಯುಪಿಎಸ್‌ಗೆ ಅನುಮೋದನೆ ದೊರಕಿದೆ. ಈ ನೂತನ ಪಿಂಚಣಿ ಯೋಜನೆಯು 2025ರ ಏಪ್ರಿಲ್ 1ರಿಂದ ಅಸ್ತಿತ್ವಕ್ಕೆ ಬರಲಿದೆ. ಈ ವ್ಯವಸ್ಥೆಯಲ್ಲಿ ಮೂಲ ವೇತನದ ಶೇಕಡ 50ರಷ್ಟು ಪಿಂಚಣಿಯಾಗಿ ಸಿಗಲಿದೆ. ಏಕೀಕೃತ ಪಿಂಚಣಿ ಯೋಜನೆಯ ಲಾಭ ಪಡೆಯಲು ಸರಕಾರಿ ಹುದ್ದೆಯಲ್ಲಿ ಕನಿಷ್ಠ ಹತ್ತು ವರ್ಷ ಸೇವೆ ಸಲ್ಲಿಸಿರಬೇಕಾಗುತ್ತದೆ. ಅಂಥ ನೌಕರರು ನಿವೃತ್ತರಾದ ಮೇಲೆ ಕನಿಷ್ಠ 10 ಸಾವಿರ ರೂಪಾಯಿಯನ್ನು ತಿಂಗಳಿಗೆ ಪೆನ್ಷನ್‌ ಆಗಿ ಪಡೆಯುತ್ತಾರೆ. ಇನ್ನು ಪಿಂಚಣಿದಾರರು ಸಾವಿನ ನಂತರ ಅವರ ಕುಟುಂಬಕ್ಕೆ ಪಿಂಚಣಿ ಸೇರುತ್ತದೆ. ಸಾವಿಗೂ ಮುನ್ನ ಕೊನೆಯ ತಿಂಗಳು ಪಡೆದಿರುವ ಪಿಂಚಣಿ ಮೊತ್ತದಲ್ಲಿ ಶೇಕಡ 60ರಷ್ಟು ಮೊತ್ತವು ಕುಟುಂಬಕ್ಕೆ ಪೆನ್ಷನ್‌ ರೂಪದಲ್ಲಿ ಸಿಗುತ್ತದೆ.
    #nps #pensionscheme #governmentemployees
    Our Website : kannada.econom...
    Facebook: / etkannada
    Twitter: / etkannada
    A destination to know all that is happening in the economic world in your favorite language Kannada. Business, Finance, India and World Economy news in Kannada.

ความคิดเห็น •