Ava Kulavo Ranga (Dasarapada) | Official Full Video Song HD 2019 | Anantraj Mistry

แชร์
ฝัง
  • เผยแพร่เมื่อ 13 พ.ค. 2019
  • (Avakulavo Ranga ) Devotional Dasarapada Song
    Produced by (Shri Venkateshwara Recording Project TTD)
    Song : Avakulavo Ranga
    Rachane : Shri Vadirajaru
    composed by : Tirumale Shrinivas
    Singer : Anantraj Mistry (Gulbarga)
    Music : Bharadwaj T.T.D
    Sound Engineer : Ramesh Kumar T.T.D
    Video Editor : Ganesh Earwal
  • เพลง

ความคิดเห็น • 1.7K

  • @sujatarameshkhajane9469
    @sujatarameshkhajane9469 ปีที่แล้ว +17

    ಆವಾ ಕುಲವೊ ರಂಗಾ..ಆ...ಆ..
    ಆವಾ ಕುಲವೊ ರಂಗಾ....ಅರಿಯಲಾಗದೂ..
    ಆವಾ ಕುಲವೊ ರಂಗಾ....ಅರಿಯಲಾಗದೂ..
    ಅವಾ ಕುಲವೆಂದರಿಯಾಲಾಗದೂ
    ಗೋವಕಾಯ್ವಾ ಗೊಲ್ಲನಂತೆ..
    ದೇವಲೋಕದ ಪಾರಿಜಾತವು
    ಹೂವ ಸತಿಗೆ ತಂದನಂತೆ..ಆವಾ ಕುಲವೊ..
    ಆವಾ ಕುಲವೊ ರಂಗಾ....ಅರಿಯಲಾಗದೂ..
    ಆವಾ ಕುಲವೊ ರಂಗಾ....ಅರಿಯಲಾಗದೂ..
    ಗೋಕುಲದಲ್ಲಿ ಹುಟ್ಟಿದನಂತೆ
    ಗೋವುಗಳನ್ನು ಕಾಯ್ದನಂತೆ..
    ಗೋಕುಲದಲ್ಲಿ ಹುಟ್ಟಿದನಂತೆ
    ಗೋವುಗಳನ್ನು ಕಾಯ್ದನಂತೆ..
    ಕೊಳಲನೂದಿ ಮೃಗಪಕ್ಷಿಗಳಾ
    ಮರಳು ಮಾಡಿದನಂತೆ..
    ತರಳತನದಿ ವರಳನಿಗಹೀ ಮರವಾ
    ಮುರಿದು ಮತ್ತೆ ಹಾರಿ
    ತೆರೆದು ಬಾಯೊಳಿಗಿರೇಳು ಲೋಕವಾ ಇರಿಸಿ
    ತಾಯಿಗೆ ತೋರ್ದನಂತೆ..
    ತೆರೆದು ಬಾಯೊಳಿಗಿರೇಳು ಲೋಕವಾ ಇರಿಸಿ
    ತಾಯಿಗೆ ತೋರ್ದನಂತೆ.. ಆವಾ ಕುಲವೊ..
    ಆವಾ ಕುಲವೊ ರಂಗಾ....ಅರಿಯಲಾಗದೂ..
    ಆವಾ ಕುಲವೊ ರಂಗಾ....ಅರಿಯಲಾಗದೂ..
    ಗೊಲ್ಲತ್ತಿಯರಾ ಮನೆಯಹೊಕ್ಕು..
    ಕಳ್ಳತನವಾ ಮಾಡಿದನಂತೆ..
    ಗೊಲ್ಲತ್ತಿಯರಾ ಮನೆಯಹೊಕ್ಕು..
    ಕಳ್ಳತನವಾ ಮಾಡಿದನಂತೆ..
    ಗೊಲ್ಲದ ಪುತನಿ ವಿಷವಾನುಂಡು
    ಮೆಲ್ಲನೆ ತೃಣನಾ ಕೊಂದನಂತೆ..
    ಪಕ್ಷಿ ತನ್ನ ವಾಹನನಂತೆ ಹಾವು
    ತನ್ನ ಹಾಸಿಗೆಯಂತೆ..
    ಮುಕ್ಕಣ್ಣ ತನ್ನ ಮೊಮ್ಮಗನಂತೆ
    ಮುದ್ದು ಮಖವಾ ಚೆಲ್ವನಂತೆ..ಆವಾ ಕುಲವೊ..
    ಆವಾ ಕುಲವೊ ರಂಗಾ....ಅರಿಯಲಾಗದೂ..
    ಆವಾ ಕುಲವೊ ರಂಗಾ....ಅರಿಯಲಾಗದೂ..
    ಕರಡಿ ಮಗಳ‌ ತಂದನಂತೆ
    ಶರಧಿ ಮಗಳು ಮಡದಿಯಂತೆ..
    ಕರಡಿ ಮಗಳ‌ ತಂದನಂತೆ
    ಶರಧಿ ಮಗಳು ಮಡದಿಯಂತೆ..
    ಧರಣಿಯನ್ನು ಬೇಡಿದನಂತೆ..
    ಇರುಳು ಲೋಕದಾ ಒಡೆಯನಂತೆ..
    ಹಡಗಿನಿಂದಲೀ ಬಂದನಂತೆ
    ಕಡಲ ದಡೆಯಲಿ ನಿಂದನಂತೆ
    ಒಡನೆ ಮಾದ್ವರಿಗೊಲಿದನಂತೆ
    ಒಡೆಯಾ ಹಯಾವದನನಂತೆ
    ಒಡನೆ ಮಾದ್ವರಿಗೊಲಿದನಂತೆ
    ಒಡೆಯಾ ಹಯಾವದನನಂತೆ ಆವಾ ಕುಲವೊ..
    ಆವಾ ಕುಲವೊ ರಂಗಾ....ಅರಿಯಲಾಗದೂ..
    ಆವಾ ಕುಲವೊ ರಂಗಾ....ಅರಿಯಲಾಗದೂ..
    ಅವಾ ಕುಲವೆಂದರಿಯಾಲಾಗದೂ
    ಗೋವಕಾಯ್ವಾ ಗೊಲ್ಲನಂತೆ..
    ದೇವಲೋಕದ ಪಾರಿಜಾತ ಹೂವ
    ಸತಿಗೆ ತಂದನಂತೆ..ಆವಾ ಕುಲವೊ
    ಆವಾ ಕುಲವೊ ರಂಗಾ....ಅರಿಯಲಾಗದೂ..
    ಆವಾ ಕುಲವೊರಂಗಾ....ಅರಿಯಲಾಗದೂ..
    ....ಅರಿಯಲಾಗದೂ..ಅರಿಯಲಾಗದೂ...

  • @swathisabloor901
    @swathisabloor901 ปีที่แล้ว +126

    Today morning I heard this song in some one's status.. immediately I googled for it... Wah..what a mesmerizing voice. I never knew till today that this geethe exists.. first time I heard and I am swimming in your melodious voice ... Very Nice sir.. 👍👏👏👏

    • @acchuraj8730
      @acchuraj8730 9 หลายเดือนก่อน +4

      Me also ❤

    • @swatikulkarni1328
      @swatikulkarni1328 9 หลายเดือนก่อน +3

      Me tooo just heard this song,, 🙏🙏💐

    • @bhalachandrabakale5361
      @bhalachandrabakale5361 9 หลายเดือนก่อน

      0😊😊😊😊😊😊😊😊😊😊😊

    • @apoorvashenoy650
      @apoorvashenoy650 9 หลายเดือนก่อน +1

      Same with me👌👌

    • @user-ff1ud2ct1m
      @user-ff1ud2ct1m 9 หลายเดือนก่อน +1

      Me too friends brothers

  • @kvrhari
    @kvrhari 2 ปีที่แล้ว +22

    ಕೃಷ್ಣನೇ ಎದಿರು ಬಂದಂತಾಯ್ತು...ಆಪ್ತವಾದ ಗಾಯನ

  • @Mukund777
    @Mukund777 7 หลายเดือนก่อน +18

    ಇಷ್ಟು ಭಾವಪೂರ್ಣವಾಗಿ ವಾದಿರಾಜರೇ ಹಾಡಿರಬೇಕು ನಿಮ್ಮ ಕಂಠದಿಂದ

  • @gvimala7247
    @gvimala7247 6 หลายเดือนก่อน +24

    Thanks for this beautiful song, ಈ ಹಾಡು ಕೇಳುತ್ತ ಹೋದರೆ ಕಳೆದು ಹೋದ ಹಾಗೆ ಆಗುತ್ತದೆ. ತುಂಬಾ ಚೆನ್ನಾಗಿ ಹಾಡಿದ್ದಾರೆ. ಹಾಡಿದವರಿಗೆ ಆ ಶ್ರೀರಂಗ ನೂರಾಯಸ್ಸು ಕೊಟ್ಟು ಅವರ ಸಂಸಾರದೊಂದಿಗೆ ಅವರನ್ನು ಚೆನ್ನಾಗಿಟ್ಟರಲಿ

  • @lakshminagendra4114
    @lakshminagendra4114 8 หลายเดือนก่อน +11

    ಸುಮಧುರ ಧ್ವನಿಯಲ್ಲಿ ಹಾಡಿರುವಿರಿ.ಹಾಡನ್ನು ಕೇಳುತ್ತಾ ಇದ್ಧರೆ ಕೇಳುತ್ತಲೇ ಇರೋಣ ಅಂತ ಅನ್ನಿಸುತ್ತದೆ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು.

  • @sunithananjundaswamy7758
    @sunithananjundaswamy7758 11 หลายเดือนก่อน +9

    ಹಾಡು ತುಂಬಾ ಭಕ್ತಿ ಯಿಂದ ಇಂಪಾಗಿ ಹಾಡಿದ್ದೀರಿ
    ಈ ಮಾಧ್ವರುಗಳು ಶ್ರೀ ಕೃಷ್ಣ ನನ್ನು ಬಿಡದೆ ನಿನ್ನ ಜಾತಿ ಯಾವುದು ಅಂತ ಕೇಳಿದಾರಲ್ಲ!!
    ಇದು ಚೋದ್ಯ

  • @user-rk1zj6qq3b
    @user-rk1zj6qq3b 7 หลายเดือนก่อน +8

    ಭಾವಪೂರ್ಣ, ಸುಂದರ,ಮತ್ತೆ ಮತ್ತೆ ಕೇಳುವ ಭಕ್ತಿಪೂರ್ಣ ನಮ್ಮ ರಂಗನ ಕರ್ಣಾಭರಿತ ಹಾಡು .

  • @muktarj2369
    @muktarj2369 4 ปีที่แล้ว +36

    ನನ್ನ ಹೆಸರು ಮುಕ್ತ, ವೃತ್ತಿಯಿಂದ ವಕೀಲೆ, ಈ ಹಾಡು ಕೇಳಿದಷ್ಟು ಕೇಳಬೇಕೆನಿಸುತ್ತದೆ...ತುಂಬಾ ಸುಶ್ರಾವ್ಯವಾಗಿ ಹಾಡಿದ್ದಾರೆ....ನಾನೂ ಕಲಿತು ನಮ್ಮ ಮನೆಯವರಿಗೂ ಕಲಿಸುತ್ತಿದ್ದೇನೆ...ಧನ್ಯವಾದಗಳು

    • @pannagarani986
      @pannagarani986 4 ปีที่แล้ว +1

      ತುಂಬಾ ಚೆನ್ನಾಗಿ ಹಾಡಿದ್ದಾರೆ

  • @neerajajagirdar8380
    @neerajajagirdar8380 4 ปีที่แล้ว +23

    ಪದೇಪದೇ ಕೇಳಲು ಮನಸ್ಸು ಆಗುವುದು ಈ ಹಾಡು. ತುಂಬಾ ಚೆನ್ನಾಗಿದೆ ಸಂತೋಷವಾಯಿತು. 👌👌

  • @acharhsv828
    @acharhsv828 9 วันที่ผ่านมา +2

    ಆಹಾ... ಎಂಥಹ ವಿಹಂಗಮ ದೃಶ್ಯ... ಇಂತಹ ಒಳ್ಳೆಯ ಸಂಸ್ಕಾರ ಎಲ್ಲರೂ ಪಡೆಯುವಂತಾದರೆ ಎಷ್ಟು ಚೆನ್ನ..

    • @acharhsv828
      @acharhsv828 9 วันที่ผ่านมา

      ವಾದಿರಾಜರ ಈ ಅಮೋಘವಾದ ರಚನೆ, BNMIT ಯ ಸಹಸ್ರಾರು ವಿದ್ಯಾರ್ಥಿಗಳು, ಮುಖ್ಯವಾಗಿ ಶ್ರೀ ಮಾನೆಯವರು, ನಿಮ್ಮಿಂದ ಹಾಡಿಸಿ ಸಂತೃಪ್ತಿ ಹೊಂದಿದ್ದಾರೆ, ಅಲ್ವಾ...

  • @parvathichikkadevaraja1837
    @parvathichikkadevaraja1837 2 ปีที่แล้ว +7

    ಭಾವ ತುಂಬಿ ಹಾಡಿದ್ದೀರಿ, ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕೆನಿಸುತ್ತದೆ. 👌👌🙏🙏

  • @shree1558
    @shree1558 4 ปีที่แล้ว +77

    ಅದೆಷ್ಟು ಬಾರಿ ಕೇಳಿದ್ದೇನೋ ಈ ಹಾಡು ಎಣಿಸವುದು ಕೂಡ ಅಸಾದ್ಯ..ವರ್ಕ್ ಮಾಡುವಾಗ, ಬುಕ್ಸ್ ಓದುವಾಗ.. ನಿಮ್ಮ ದನಿಯಲ್ಲಿ ಎಷ್ಟು ಚಂದವಾಗಿ ಮೂಡಿ ಬಂದಿದೆ.. Awesome.... 😍 😍 😍 😍 😍 😍 😍 😍 ನನ್ನ ಮನಸ್ಸಿಗೆ ಬಹು ಹತ್ತಿರವಾದ ಹಾಡು ಇದು..

  • @Prashant7025
    @Prashant7025 2 ปีที่แล้ว +12

    ಬಹಳ ಮಧುರವಾದ ಸ್ವರ, ಭಕ್ತಿ ಬಾವದ ಕಡಲಲ್ಲಿ ತೇಲುವಂತಿದೆ, ವದನೆಗಳು ಗಾಯಕರಿಗೆ, ಮತ್ತು ಸಾಹಿತ್ಯ ಈ ವಾಹಿನಿಯಲ್ಲಿ ಬರೆದವರಿಗೆ

  • @arundhathiaru4033
    @arundhathiaru4033 2 ปีที่แล้ว +11

    ಸೂಪರ್ ಸರ್ ನನಗೆ ಇಷ್ಟವಾದ ಹಾಡು ನೀವು ಹಾಡಿದ ದಾಸರ ಹಾಡನ್ನು ಕೇಳ್ತಾ ಇದ್ರೆ ಮನಸಿಗೆ ಹೇಳಲಾಗದ ಆನಂದ ಆಗುತ್ತೆ🙏 ನಿಮಗೆ ನಿಮ್ಮ ಮನದಾಳದ ವಂದನೆಗಳು🙏🙏🙏🙏 ಶ್ರೀಹರಿವಾಯುಗುರುಗಳ ಅನುಗ್ರಹ ಯಾವಾಗಲೂ ಸದಾ ನಿಮ್ಮ ಮೇಲೆ ಇರಲಿ🙏🙏👍👍👍

  • @hsripathi5888
    @hsripathi5888 7 หลายเดือนก่อน +5

    ಆವ ಕುಲವೊ ರಂಗಾ....ಸೊಗಸಾಗಿ ಹಾಡಿದ್ದೀರಿ.👍

  • @praveenkulkarni6624
    @praveenkulkarni6624 10 หลายเดือนก่อน +13

    ಇಂತಹ ಮಧುರವಾದ ಹಾಡು ಕೇಳುವ ನಾವೆಲ್ಲರೂ ಅಮರರು ಎನ್ನುವ ಭಾವನೆ ಬರುತ್ತಿದೆ❤️🙏🏻❤

  • @seleniumexpertseries8518
    @seleniumexpertseries8518 3 หลายเดือนก่อน +4

    Neevu yaru antha Gothe irlilla. This song has given recognition for you!!

  • @padmavathymadhavarao8402
    @padmavathymadhavarao8402 3 ปีที่แล้ว +8

    ನಮಸ್ಕಾರ ಪುಟ್ಟ. ನೀವು ಹಾಡಿದ ಈ ಹಾಡನ್ನು ಅದೆಷ್ಟು ಸಲ ಕೇಳಿದರೂ ತೃಪ್ತಿ ಆಗುವುದಿಲ್ಲ. ಅಷ್ಟು ಚೆನ್ನಾಗಿ ಹಾಡಿದ್ದೀರಿ. ದೇವರು ಇನ್ನೂ ಹೆಚ್ಚಿನ ಯಶಸ್ಸು ಕೀರ್ತಿ ಕೊಟ್ಟು ಸದಾ ಕಾಪಾಡಲಿ 🙏🌷🌷

  • @ganeshpai597
    @ganeshpai597 4 ปีที่แล้ว +8

    ಸುಮಧುರ ಕಂಠದಿಂದ ಮೂಡಿ ಬಂದ ಈ ಹಾಡನ್ನು ಕೇಳಿದಷ್ಟು ಇನ್ನೂ ಕೇಳೋಣ ಎನಿಸುತ್ತದೆ. ದಿನವೂ ಐದಾರು ಬಾರಿ ಕೇಳುತ್ತಿರುತ್ತೇವೆ. ಮೊಮ್ಮಗನ ಇಷ್ಟವಾದ ಹಾಡು ಇದು. ಹೃತ್ಪೂರ್ವಕ ಅಭಿನಂದನೆಗಳು ನಿಮ್ಮ ಕಂಠಸಿರಿಗೆ

    • @anupsrivatsav9105
      @anupsrivatsav9105 3 ปีที่แล้ว +1

      ನನ್ನ ಪ್ರಿಯವಾದ ಹಾಡು
      ಧನ್ಯವಾದ ಅನಂತರಾಜ್ ಮಿಸ್ತ್ರಿಯವರೇ
      ತಮ್ಮ ಕಂಠ ಬಹಳ ಚೆನ್ನಾಗಿದೆ

    • @srianthjoshi2273
      @srianthjoshi2273 3 ปีที่แล้ว

      Super 👌👌

  • @manjunathg8553
    @manjunathg8553 4 ปีที่แล้ว +86

    ಕನ್ನಡ ಕೋಗಿಲೆಯಲ್ಲಿ ಕೇಳಿ ಇಲ್ಲಿ ನಾ ಬಂದೆ ರಂಗಾ🙏🥰😍

  • @rangaswamysh408
    @rangaswamysh408 4 ปีที่แล้ว +17

    ನಂಬಿ ಕೆಟ್ಟವರಿಲ್ಲವೋ ಶ್ರೀ ರಂಗನ "
    'ಅನ್ಯಾಯರ್ಜಿತೋ ವಿತ್ತಂ ಸಮೂಲಂ ವಿನಶ್ಯತಿ'
    ಅತ್ಯದ್ಭುತವಾದ ಗಾಯನ ಅನಂತರಾಜು

    • @manjulanagaral7521
      @manjulanagaral7521 4 ปีที่แล้ว +1

      Wow excellent singing, lyrics wl give peace full mind who listen this song

  • @ThanujaPrasannesh2405
    @ThanujaPrasannesh2405 5 หลายเดือนก่อน +4

    ದಾಸರಪದಗಳನ್ನ ನಿಮ್ಮ ಕಂಠಸಿರಿಯಲ್ಲಿ ಕೇಳಿದರೆ.. ಶ್ರೀ ಕೃಷ್ಣನೇ ಮತ್ತೆ ಧರೆಗಿಳಿದು, ನಾವು ಶ್ರೀ ಹರಿಯ ಜೊತೆಯಲ್ಲಿಯೇ ಇದ್ದೇವೆ ಅನ್ನುವ ಅನುಭವವಾಗುತ್ತದೆ... ಹೀಗೆಯೇ ಮುಂದುವರಿಯಲಿ ಈ ನಿಮ್ಮ ಗಾಯನ 🙏🙏🙏

  • @manjunathganiga5660
    @manjunathganiga5660 2 ปีที่แล้ว +5

    ಒಂದೇ ದಿನಕ್ಕೆ 10ಕ್ಕು ಹೆಚ್ಚು ಸಲ ಕೇಳಿದ ಹಾಡು 🙏
    Voice...❤️🔥

  • @shreevidyamanyaru2590
    @shreevidyamanyaru2590 3 ปีที่แล้ว +3

    ನೀನು ಹಾಡಿದ ಈ ಹಾಡು ದಿನಕ್ಕೆ ಹತ್ತಾರು ಬಾರಿಯಾದರೂ ಕೇಳುತ್ತೇನೆ. ಮತ್ತೆ ಮತ್ತೆ ಕೇಳಬೇಕೆನ್ನಿಸುವ ಆಸೆಯಾಗುವ ಮನಮೋಹಕ ಧ್ವನಿ. ದೇವರು ಒಳ್ಳೆಯದು ಮಾಡಲಿ. ಹರಿವಾಯುಗುರುಗಳ ಅನುಗ್ರಹ ಇರಲಿ. ಜಗನ್ನಾಥದಾಸರ ಕೃತಿ ಹಾಗೂ ಶಾಮಸುಂದರದಾಸರ ದಾಸರ ಕಾಯೋಕಾವೇರಿ ರಂಗ. ನಿನ್ನ ಧ್ವನಿಯಲ್ಲಿ ಕೇಳುವ ಆಸೆ. ದಾಸರ ಅನುಗ್ರಹ ನಿನಗಿದೆ.
    ವಿದ್ಯಾಶ್ರೀ ಕಟ್ಟಿ

    • @ANANTRAJMISTRY
      @ANANTRAJMISTRY  3 ปีที่แล้ว

      shreevidya Manyaru Tumba dhanyavadagalu mam

  • @anjanabhat6953
    @anjanabhat6953 4 ปีที่แล้ว +6

    ಅದೆಷ್ಟು ಬಾರಿ ಕೇಳಿದೆನೋ ಈ ಹಾಡು... 🎶 ತುಂಬಾ ಇಷ್ಟವಾದ ಹಾಡು... super voice sir

  • @chandrakalas8563
    @chandrakalas8563 หลายเดือนก่อน +2

    ಯಾವ ಹಾಡು ಮತ್ತೆ ಮತ್ತೆ ಕೇಳಿಸಿಕೊಳ್ಳುತ್ತದೋ ಅದು ಅದರ ವೈಭವತೆಯನ್ನು ತೋರಿಸುತ್ತದೆ

  • @trevenikishor7811
    @trevenikishor7811 14 วันที่ผ่านมา +2

    ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟವಾದ ಹಾಡು ❤

  • @ramadas870
    @ramadas870 ปีที่แล้ว +9

    ಧನ್ಯೋಸ್ಮಿ 🙏🏻ಹುಡುಕುತ್ತ ಇದ್ದೆ.. ಇಂದು ಸಿಕ್ಕಿತು 🙏🏻

  • @chandrikaprasad6107
    @chandrikaprasad6107 4 ปีที่แล้ว +9

    ಮಿಸ್ತ್ರಿ ಅವರೇ ನೀವು ಹಾಡುತ್ತಿದ್ದರೆ ಆ ಭಗವಂತ ನೇ ಎದುರು ನಿಂತು ಪ್ರೀತಿಯಿಂದ ಆಲಿಸುವನೋ ಎನಿ ಸುತ್ತಿದೆ. ದಿನಕ್ಕೆ 2 ಬಾರಿ ಕೆಳೇ ಕೇಳು ತ್ತೇನೆ 🙏👌👌

  • @saiharini-ws4kh
    @saiharini-ws4kh วันที่ผ่านมา +1

    Namasthe sir your voice amezing wonderful singing thanks full for this great song 🙏🌹🙏

  • @ushadesai979
    @ushadesai979 8 หลายเดือนก่อน +4

    ಅದ್ಭುತ ಅನುಭವ. ಅನಂತರಾಜ್ ದೇವರು ನಿಮ್ಮ ಧ್ವನಿ ಸ್ವರ ಹೀಗೇ ಚೆನ್ನಾಗಿ ಇಟ್ಟಿರಲಿ,

  • @pushpa5126
    @pushpa5126 4 ปีที่แล้ว +14

    ಅಬ್ಬಾ ಎಂಥ ಭಾವನೆ.,.... ಧನ್ಯ ಆಯಿತು ಕಿವಿಗಳು.....ಭಕ್ತಿ ಪರವಶ ಹಾಡು....ನಿಮ್ಮಿಂದ ಇನ್ನು ಹಾಡುಗಳು ಬರಲಿ....

  • @ravindrab100
    @ravindrab100 4 ปีที่แล้ว +73

    Feeling of sailing in deep sea with a rustic green sea and the beautiful golden sun Ray's penetrating in the deep subconscious mind to freshen every moment of life. It is just awsome.. I dont need any other wat to relax...just this one song

    • @ravindrakp1715
      @ravindrakp1715 2 ปีที่แล้ว

      Tttttt

    • @nagamanip7529
      @nagamanip7529 2 ปีที่แล้ว +1

      0:39

    • @udayakumar631
      @udayakumar631 2 ปีที่แล้ว +1

      You can you please send me the opportunity to work with you Happy Birthday Brother 💞

  • @keerthikapandith9468
    @keerthikapandith9468 3 หลายเดือนก่อน +2

    ಕೃಷ್ಣ ಕಣ್ಣೆದುರು ಬಂದ ನಿಮ್ಮ ಧ್ವನಿ ಮೂಲಕ⚜️🥺🙏🏻🙏🏻

  • @user-fz4gr2mr4t
    @user-fz4gr2mr4t 13 วันที่ผ่านมา +2

    One of my favourite song.i love your voice.thank you bro 🌹

  • @amarmath836
    @amarmath836 4 ปีที่แล้ว +3

    ಅನಂತ್ ಮಿಸ್ತ್ರೀ ಅವರೆ ತುಂಬಾ ಚೆನ್ನಾಗಿದೆ ರಾಗ ಬದ್ಧವಾದ ಈ ಭಕ್ತಿ ಹಾಡು ಮನಸ್ಸನ್ನ ಹಿಡಿದಿಟ್ಟುಕೊಂಡಿತು ಮತ್ತೆ ಮತ್ತೆ ಕೇಳುವಾಸೆ ಈ ನಿಮ್ಮ ಸುಮಧುರ ಧ್ವನಿ

  • @sarveshvathar9458
    @sarveshvathar9458 4 ปีที่แล้ว +30

    Ultimate Voice And Lyric Brother. ನನ್ಗೆ ರಾತ್ರಿ ನಿದ್ದೆ ಬರ್ಲಿಲ್ಲ ಅಂದ್ರೆ ಇ ನಿಮ್ಮ ಹಾಡು ಕೇಳ್ತಾ ನಿದ್ದೆ ಮಾಡ್ತಿನಿ ಒಂದು ಕ್ಷಣ ದ್ವಾಪರ ಯುಗಕ್ಕೆ ಹೋಗಿ ಬಂದ ಹಾಗೆ Feel ಬರುತ್ತೆ .....All The Best Ur Future Bro 😍😍😍😍😍

  • @sangeethagnadigsgn5388
    @sangeethagnadigsgn5388 3 ปีที่แล้ว +4

    ಮತ್ತೆ ಮತ್ತೆ ಕೇಳಬೇಕೆನಿಸುತ್ತೆ
    ಭಕ್ತಿ ತುಂಬಿದ ಕಂಠ &ಗಾಯನ ನಮ್ಮ ಮನೆಯ ಎಲ್ಲರ ನೆಚ್ಚಿನ ಹಾಡು
    ಧನ್ಯವಾದಗಳು

  • @geethabk4307
    @geethabk4307 ปีที่แล้ว +5

    ನಿಮ್ಮ ಈ ಹಾಡಂತೂ ಅದ್ಭುತ👌🙏

  • @ganeshudupi6580
    @ganeshudupi6580 4 ปีที่แล้ว +27

    You are blessed bro....ಧನ್ಯವಾದಗಳು ವಾದಿರಾಜಗೆ , ಧನ್ಯವಾದಗಳು ಹಯವದನನಿಗೆ , ಧನ್ಯೋಸ್ಮಿ ರಂಗಾ....

  • @sujathashetty2734
    @sujathashetty2734 2 ปีที่แล้ว +5

    ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ .ನನಗೆ ನಿಮ್ಮ ಹಾಡು ಇಷ್ಟವಾಯಿತು

  • @ravishankaramaritammanahal2569
    @ravishankaramaritammanahal2569 ปีที่แล้ว +54

    Tears in my eyes after listening to your divine singing. May God bless you

  • @dhanushkumar-zm8bo
    @dhanushkumar-zm8bo 18 วันที่ผ่านมา +1

    ಬೆಳಿಗ್ಗೆ ಎದ್ದ ಕೂಡಲೇ ಈ ಹಾಡು ಕೇಳಿದ್ರೆ ಸಾಕು ಇಡೀ ದಿನ ಮೈಂಡ್ ಫ್ರೆಶ್ ಆಗಿರುತ್ತದೆ..

  • @shashiranihv8840
    @shashiranihv8840 ปีที่แล้ว +3

    Anantaraj ನಿಮ್ಮ voice ತುಂಬಾ ತುಂಬಾ ಚೆನ್ನಾಗಿದೆ. ದೇವರು ಒಳ್ಳೆಯದನ್ನು ಮಾಡಲಿ. ನಿಮಗೆ ಒಳ್ಳೆಯ ಭವಿಷ್ಯ ಇದೆ.

  • @sathyanathanjayatheerthan5536
    @sathyanathanjayatheerthan5536 ปีที่แล้ว +13

    This master piece pada of Sri Vadirajaru has been beautifully tuned by Chami Sir (Karnataka Kalashree Sri. Tirumale Srinivas).

  • @sunitakulkarni2617
    @sunitakulkarni2617 8 หลายเดือนก่อน +3

    Nija , yeshtu madhuravagide hadu Ananthraj avru tumba chennagi hadiddare, hadu keluttidre kannalli neeru barutte , dinakkomme keladidre yeno kaledukondiddene annisutte 👌👌🙏🙏

  • @sujathanshetty7929
    @sujathanshetty7929 ปีที่แล้ว +31

    ಅಣ್ಣ I must say you have the blessings of Lord Krishna 🙏 such a Devine voice, everytime I listen to this with full attention, tears roll down my eyes. Mesmerising. Beautifully sung and composed. ನಿಮ್ಮ team ಗೆ ಸಾಷ್ಟಾಂಗ ನಮಸ್ಕಾರಗಳು. 🙏

  • @chandrikaprasad6107
    @chandrikaprasad6107 4 ปีที่แล้ว +3

    ಜನತಾ ಕರ್ಫು ಇರುವ ದಿನಾ ಈ ಹಾಡು ಕೇಳಿ ನೆಮ್ಮದಿಯಾಗುತ್ತೆ

  • @shravanibasavaraj1730
    @shravanibasavaraj1730 4 ปีที่แล้ว +4

    AVA KULAVO RANGA ARIYALAGADU
    AVA KULAVO RANGA ARIYALAGADU
    AVA KULAVENDU ARIYALAGADU GOOVA KAIVA GOLLANANTHE DEVA LOKADA PARIJATHAVU HOOVA SATHIGE THANDANANTHE
    AVA KULAVO RANGA ARIYALAGADU
    GOKULADALLI HUTTIDANANTHE GOOVUGALANNU KAYIDANANTHE
    GOKULADALLI HUTTIDANANTHE GOOVUGALANNU KAYIDANANTHE...... more to type but awesome talent @ Ananthraj Mistry👏👏

  • @annapoornaj182
    @annapoornaj182 ปีที่แล้ว +3

    ತುಂಬಾ ತುಂಬಾ ಚೆನ್ನಾಗಿದೆ ಮತ್ತೆ ಮತ್ತೆ ಈ ಹಾಡನ್ನು ಕೇಳ ಕೇಳಬೇಕು ಎನಿತ್ತದೆ ನಮಗೆ ಸಂಗೀತ ಜ್ಞಾನವಿಲ್ಲ ಆದರೂ ಈ ಹಾಡನ್ನು ಪದೇ ಪದೇ ಕೇಳುತ್ತೇವೆ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @avinakshiravi9811
    @avinakshiravi9811 12 วันที่ผ่านมา +3

    My favourite song❤

  • @naveenp657
    @naveenp657 ปีที่แล้ว +3

    ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಗಾನಮೃತ

  • @mallikasnayak6318
    @mallikasnayak6318 4 ปีที่แล้ว +5

    ಆವ ಕುಲವೋ ರಂಗಾ...
    ‌ ಗೋವ ಕಾಯ್ವ ಗೊಲ್ಲರಂತೆ...
    👌👌👌👌👌

  • @MahabaleshwarVasan-js4xz
    @MahabaleshwarVasan-js4xz วันที่ผ่านมา +1

    A very beautiful presentation. Grateful to you, Sir.

  • @srikrishnatransportudupi3974
    @srikrishnatransportudupi3974 3 หลายเดือนก่อน +1

    What a meaningful song

  • @prahladraju6398
    @prahladraju6398 4 ปีที่แล้ว +96

    ನನ್ನ ಹೆಸರು ನರಹರಿ ಜಯತೀರ್ಥ ವಿದ್ಯಾಪೀಠ ದಲ್ಲಿ ಓದುತ್ತಿರುವವನು ಈ ಹಾಡು ನನಗೆ ತುಂಬಾ ಇಷ್ಟ ಆಯ್ತು ಒಬ್ಬ ಮನುಷ್ಯನಿಗೆ ನೆಮ್ಮದಿ ಬೇಕೆಂದರೆ ದೇವರ ನಾಮ ಕೇಳಲೇ ಬೇಕು ಅದು ಯಾರ ದೇವರ ನಾಮ ಎಂದರೇ ಅದು ನೀವು ಹಾಡಿರುವ ದೇವರ ನಾಮ ಕೇಳಬೇಕು

    • @madhubp1215
      @madhubp1215 4 ปีที่แล้ว +2

      Wow super voice super song

    • @vaishali123_
      @vaishali123_ 4 ปีที่แล้ว +2

      So peaceful to hear and great voice

    • @roopavasanth4520
      @roopavasanth4520 4 ปีที่แล้ว +1

      Prahlad Raju super

    • @kallabasavaihaap1223
      @kallabasavaihaap1223 4 ปีที่แล้ว

      Dayavittu bakthigeetegalannu keluvaga madhyadalli advantage kottu mudannu halu mada bedi

    • @n.sreepad8791
      @n.sreepad8791 4 ปีที่แล้ว

      Pashantiojioabnmj gv

  • @shylas.m2761
    @shylas.m2761 ปีที่แล้ว +5

    ಕೃಷ್ಣಂ ವಂದೇ ಜಗದ್ಗುರುಂ 🙏🏻

  • @shailajas148
    @shailajas148 3 หลายเดือนก่อน +2

    🙏🏻🙏🏻🙏🏻

  • @sarswatiinamdar6766
    @sarswatiinamdar6766 2 ปีที่แล้ว +3

    ಬಹಳೆ ಚೆನ್ನಾಗಿ ಹಾಡಿದಿರಿ ಈ ಸಾಂಗ್ ನನಗೆ ಬಹಳೆ ಇಷ್ಟ ಸರ್ ಚೆನ್ನಾಗಿ ಹಾಡು ಇದು

  • @nanjundakrishna6109
    @nanjundakrishna6109 8 หลายเดือนก่อน +4

    ತುಂಬಾ ತುಂಬಾ ತುಂಬಾ ಚೆನ್ನಾಗಿ ಹಾಡಿದ್ದಾರೆ

  • @meenakshipoojary6858
    @meenakshipoojary6858 3 ปีที่แล้ว +4

    Bahala bahala sundara..Hare Krishna🙏

  • @radhabaliga9329
    @radhabaliga9329 หลายเดือนก่อน +1

    ತುಂಬಾ ಅರ್ಥಪೂರ್ಣವಾದ ಗೀತೆಯೊಂದು ಭಾವಪೂರ್ಣ ಇಂಪಾದ ಸ್ವರದೊಂದಿಗೆ ಮೂಡಿಬಂದಿದೆ

  • @venkateshds5058
    @venkateshds5058 ปีที่แล้ว +2

    Ours is Hindu religion , no caste. We are all servants of God Almighty, let us bow before him

  • @veenadinni3183
    @veenadinni3183 4 ปีที่แล้ว +12

    Sir,nimma voice is very magical...feeling connected with Lord Krishna .HARI SARVOTTAMA,VAAYU JEEVOTHAMA.

  • @kaushalbenaka5047
    @kaushalbenaka5047 3 ปีที่แล้ว +3

    Sir kannalli neeru baratte... Super super

  • @roopahabbu295
    @roopahabbu295 4 ปีที่แล้ว +8

    Hi nice voice. My 6 year daughter is one of your fan. Always she sing this song. . . When she is happy or sad. . . Thanks sir

  • @sivakumar-xl2qo
    @sivakumar-xl2qo 5 หลายเดือนก่อน +3

    I don't know this language. But continuously hearing this song. Very fine to hearing.

    • @JaiRamJaiRamJaiRam108
      @JaiRamJaiRamJaiRam108 5 หลายเดือนก่อน +1

      It's Kannada language.
      Very nice song about Krishna 🙏🙏🙏🙏🙏

    • @sivakumar-xl2qo
      @sivakumar-xl2qo 5 หลายเดือนก่อน +1

      @@JaiRamJaiRamJaiRam108 Thanks sir.very fine to hearing.

    • @JaiRamJaiRamJaiRam108
      @JaiRamJaiRamJaiRam108 5 หลายเดือนก่อน

      @@sivakumar-xl2qo 🙏

  • @somashekarpadukare7989
    @somashekarpadukare7989 ปีที่แล้ว +3

    ಅದ್ಭುತ ಹಾಡುಗಾರಿಕೆ..... ಇಂದಿಗೂ.... ಎಂದೆಂದಿಗೂ

  • @kcpindian222
    @kcpindian222 5 ปีที่แล้ว +11

    ಸೂಪರ್ ಅನಂತ ರಾಜ ಅವರೆ.... this is my favourate song....

  • @user-pv4vw1hc4o
    @user-pv4vw1hc4o 7 หลายเดือนก่อน +5

    This song is very beautiful in your voice and I will say this song in compitation 🙏🙏😊

  • @naveenp657
    @naveenp657 ปีที่แล้ว +2

    ಸುಶ್ರಾವ ಗಾಯನ
    ಭಕ್ತಿ ಪರವಷತೆ 🙏

  • @happytheshihtzu8919
    @happytheshihtzu8919 4 ปีที่แล้ว +14

    Background Music is Exceptionally

  • @ananth5678_HNA
    @ananth5678_HNA ปีที่แล้ว +5

    Mellifluous singing by Anantraj MistryJi, divine singing , divine voice … May Sri Hari, Vayu and Guragalu bless him bountifully. 🙏🙏🙏

  • @girijarao6286
    @girijarao6286 2 หลายเดือนก่อน +1

    ಈ ಭಕ್ತಿಗೀತೆ ಕೇಳಿ ಮನ ಸಂತಸಗೂಂಡು ಧನ್ಯವಾಯ್ತು

  • @tonsepai
    @tonsepai หลายเดือนก่อน +2

    Mesmerizing! I don't know if it's the lyrics, the tune, the emotion, the voice, the music, all of the above or something especially divine hidden within.... This song touches you deep inside. It's Divine! ❤

  • @gaganashreegagana5709
    @gaganashreegagana5709 11 หลายเดือนก่อน +10

    Such a devotional experience it is!!..... meaning is crystal clear to go through and fly on song , awesome peaceful voice it is!🕉️🙏🏻 Radhakrishna......😌

  • @Nayana1977Shetty-hk6jk
    @Nayana1977Shetty-hk6jk ปีที่แล้ว +7

    Radhe radhe this song is the best ❤❤ i am having a good mood after listening to this song ❤❤❤

  • @ashokakrishnaraokulkarni4024
    @ashokakrishnaraokulkarni4024 3 ปีที่แล้ว +2

    Beautiful song by wonderful singer. ASHOK Kulkarni ಬೆಳ್ಳಂದೂರು ಬೆಂಗಳೂರು .

  • @lopamudrakanungo3120
    @lopamudrakanungo3120 หลายเดือนก่อน +2

    भाषा समझ में नहीं आ रही है पर बहत ही आनन्द मिल रहा है भाषा सीखने कि इच्छा हो रही है

  • @jayasudhas2804
    @jayasudhas2804 11 หลายเดือนก่อน +7

    Mesmerized 🙏🙏🙏

  • @nidhiguttal
    @nidhiguttal 2 ปีที่แล้ว +5

    Very nice rendering. My Kids love this song very much . God bless you Ananth.

  • @user-qd1ej2zl9u
    @user-qd1ej2zl9u 2 หลายเดือนก่อน +1

    Super super super

  • @raghavbhat5410
    @raghavbhat5410 ปีที่แล้ว +2

    ತುಂಬಾ ಸೊಗಸಾಗಿ ಮೂಡಿಬಂದಿದೆ.🎉🎉🎉🎉🎉

  • @anithan7631
    @anithan7631 ปีที่แล้ว +4

    ಭಗವಂತನಿಗೊ ಪ್ರಿಯಾವಾಗುವ ಗೀತೆ ಇದ್ದು 🙏

  • @shreevidyamanyaru2590
    @shreevidyamanyaru2590 3 ปีที่แล้ว +4

    ಬಹಳ ಸುಶ್ರಾವ್ಯ ವಾಗಿ ಹಾಡಿದ್ದೀಯಾ ಪ

  • @sirisingaara1506
    @sirisingaara1506 14 วันที่ผ่านมา +1

    ಕುಲಂ ಕುಲಂಮಲ್ತು , ಗುಣಂ ಕುಲಂ ಛಲಂ ಕುಲಂ ಎಂಬುದು ಸತ್ಯವಾಯಿತು 🙏🙏🙏

  • @Bhogesh.PoojarPoojar
    @Bhogesh.PoojarPoojar 21 วันที่ผ่านมา +1

    ಹರೆ ಹರೆ ಕೃಷ್ಣ ಕೃಷ್ಣ ಪರಮಾತ್ಮ

  • @user-eg9bs7nm3h
    @user-eg9bs7nm3h 4 ปีที่แล้ว +19

    ಇನ್ನಷ್ಟು ದಾಸರ ಪದಗಳನ್ನ ಹಾಡಿ ಸರ್.

  • @Sapthami7
    @Sapthami7 3 ปีที่แล้ว +5

    Aya kulavo ranga
    God krishna please make me better
    Krishna

  • @rameshjayanivas
    @rameshjayanivas 8 หลายเดือนก่อน +2

    ಬಹಳ ಚೆನ್ನಾಗಿ ಹಾಡಿದ್ದೀರಿ. ಧನ್ಯವಾದಗಳು ಮತ್ತು ಅಭಿನಂದನೆಗಳು.

  • @ashokakrishnaraokulkarni4024
    @ashokakrishnaraokulkarni4024 3 ปีที่แล้ว +2

    Wah wah ನಾನೂ ಕೂಡ ಮರಳು ಆದೆ ಸ್ವಾಮೀ. ಅಶೋಕ್ ಕುಲ್ಕರ್ಣಿ ಬೆಂಗಳೂರು ಬೆಳ್ಳಂದೂರು

  • @bskgirish
    @bskgirish 2 ปีที่แล้ว +7

    I have been listening to TH-cam songs for more than five years but never posted any comments so far. But sir, your song just took me to a different world. This is is my first ever comments posted on TH-cam. ನಿಮ್ಮ ಹಾಡು ಶ್ರೀ ಕೃಷ್ಣ ನ ದರ್ಶನವಿದಂತೆ, thank you so much. 🙏🙏🙏

  • @ravindrab100
    @ravindrab100 4 ปีที่แล้ว +5

    Not a day I miss this song ..I dont start my car with out this song...superb...

    • @ravindrab100
      @ravindrab100 4 ปีที่แล้ว

      Not just that day.....EVEN TODAY..NOT A DAY WITH OUT THIS SONG

    • @mayakamath7312
      @mayakamath7312 3 ปีที่แล้ว

      Super Sir. Edu Vasanthi Ragava?

  • @ramasuresh3554
    @ramasuresh3554 5 หลายเดือนก่อน +2

    Thumba chanagidhe hadu ❤❤❤❤🙏🙏🙏

  • @MatrixHondaBelthangady
    @MatrixHondaBelthangady ปีที่แล้ว +2

    krishna's whole chaildhood story reveals in 5 minuts song. dhanyosmi

    • @parimalasudha6555
      @parimalasudha6555 ปีที่แล้ว

      SOULFUL RENDERING. I FEEL SO FRESH AFTER LISTENING TO THIS SONG.GOD BLESS YOU.

  • @attackxhannel6851
    @attackxhannel6851 2 ปีที่แล้ว +9

    Soo Awesome Voice I addicted to this song. JAI LORD KRISHNA

  • @Baba-hd4mc
    @Baba-hd4mc ปีที่แล้ว +4

    I am addicted to this song ,I am listening this song 3*2 day💓

  • @sujathavkamath6173
    @sujathavkamath6173 5 วันที่ผ่านมา

    I'm listening to your bhajan for the first time😊what a mesmerizing voice Sir 👌super singing 🙏 so beautifully devotionally sung

  • @vijayalaxmipattar6645
    @vijayalaxmipattar6645 2 หลายเดือนก่อน +1

    ಸುಂದರ, ಭಾವಪೂರ್ಣ ಸುಶ್ರಾವ್ಯ.ಧನ್ನವಾದಗಳು.🙏🙏