ನಾ ಜಾತ್ರೆಗೆ ಹೊಂಟೀನಿ | ಮಂಜುಳಾ ಅವರ ರಚನೆ ನಾನು ರಾಗ ಸಂಯೋಜಿಸಿ ಹಾಡಿರುವೆ.| ಜಾನಪದ ಶೈಲಿ|Lakshmi Muralidhar.

แชร์
ฝัง
  • เผยแพร่เมื่อ 25 ก.พ. 2024
  • ನಾ ಜಾತ್ರಿಗೆ ಹೊಂಟೀನಿ ಸೀರೆ ರವಿಕೆ ತೋಟ್ಟೀನಿ I| ಪ||
    ಕರಕೊಂಡ್ಕೋಗೋಕ್ ನನ್ನ ರಾಯ
    ಬರ್ಲಿಲ್ಯಾಕವ್ವಾ|| ಅ.ಪ||
    ರೊಟ್ಟಿ ಮಾಡಿ ಇಟ್ಟೀನಿ
    ಬಾಜೂಕು ಬೆಣ್ಣೆ ಹಾಕಿನಿ
    ಪಲ್ಯಮಾಡಿ ಉಳ್ಳಾಗಡ್ಡಿ ಜೊತೆಗೆ ಕೊಟ್ಟಿವ್ನಿ
    ರೊಟ್ಟಿ ತಿಂದು ಜಟ್ಟಿ ಹಾಂಗೆ ಗಟ್ಟಿಯಾಗಿ ನನ್ನ ರಾಯ
    ಕರ್ಕೊಂಡ್ಹೋಗೋಕೆ ನನ್ನ ರಾಯ ಬರಲಿಲ್ಯಾಕ ವ್ವಾ ||1||
    ಜಾತ್ರೆಯಲ್ಲಿ ನನ್ನರಾಯ ಕೈಯಿಗೆ ಬಳೆಯ ತೊಡಿಸ್ಯಾನ
    ಮುಡಿಯ ತುಂಬ ಮಲ್ಲಿಗೆ ಹೊಸ ಮುಡಿನೀ ಅಂದಾನ
    ಪರದೆಯ ತೋರ್ಸಿ ಪನ್ನಿರತಿನ್ಸಿನಗೆಯ ಕೆಂಪನ ಕೆನ್ನಿಗೆ ತೊಡಿಸಿ ಮನಸನುಮರೆಸುವ ನನ್ನರಾಯ ಬರ್ಲಿಲ್ಯಾಕ ವ್ವಾ||2||
    ಜಾತ್ರಿಯಿಂದ ಮನೀಗೆ ಬಂದು ಊಟವ ಮಾಡಿ ವೀಳ್ಯವ ಮೆದ್ದು ಚಾಪೆಯ ಹಾಸಿ ಚಂದ್ರನ ನೋಡಿ ಚಿಂತಿಯ ಮರೆಸುತ ನಿದ್ದಿಯ ತರುವ ಚಂದಿರನಂಥ ನನ್ನರಾಯ
    ಹೊತ್ತು ಹೋದರು ಮನೆಯಕಡೆಗೆ ಬರ್ಲಿಲ್ಯಾಕವ್ವಾ||3||

ความคิดเห็น • 2

  • @kg2696
    @kg2696 4 หลายเดือนก่อน +1

    ಸೂಪರ್ ಮೇಡಂ ಬೆರೆದು ಹಾಕಿದಕೆ ತುಂಬಾ ದನ್ಯವಾದಗಳು