ಭಾವಗೀತೆ | ಬಂದಿ ಏಕಾದೆ ಮನವೇ | ಅಶ್ವಿನಿ ಕೋಡಿಬೈಲು| Ashwini Kodibail | Raghavendra Beejadi | Sameer Rao |
ฝัง
- เผยแพร่เมื่อ 10 ก.พ. 2025
- Bandi ekade manave....
Lyrics : Ashwini Kodibail
Composition : Raghavendra Beejadi
Singer : Raghavendra Beejadi
Orchestration : Sameer Rao
Tabala : Aathmarama Nayak
Programming,Recording, Mastering : Vinay Rangadhol
Swaroop Studio, Mysuru
ಬಂದಿ ಏಕಾದೆ ಮನವೇ....
~~~~~~~~~~~~~~
ಬಂದಿ ಏಕಾದೆ ಮನವೇ ಬಂದಿ ಏಕಾದೆ
ನೀ ಬಂದಿ ಏಕಾದೆ ಮನವೇ ಬಂದಿ ಏಕಾದೆ
ದೃಷ್ಟಿ ಇದ್ದೂ ಕುರುಡು ಆದೆ
ಮಾತು ಬಂದರು ಮೂಕವಾದೆ
ನಿನಗೆ ನೀನೇ ಕೋಳ ತೊಡಿಸಿ
ಬಂದಿ ಏಕಾದೆ ಮನವೇ ಬಂದಿ ಏಕಾದೆ
ಬಣ್ಣವಿದ್ದೂ ಕಪ್ಪು ಕಂಡೆ
ಸಿಹಿಯು ಇರಲೂ ಕಹಿಯ ಉಂಡೆ
ಸುಖವು ಇರಲು ಸವಿಯದೇ ನೀ
ಏಕೆ ಹೀಗಾದೆ ಮನವೇ ಏಕೆ ಹೀಗಾದೆ
ಉಣ್ಣಲಿರಲೂ ಸೊರಗಿಹೋದೆ
ಸೂರು ಇರಲೂ ಊರ ಅಲೆದೆ
ಗುರುವು ಇರಲು ಗುರಿಯ ಅರಿಯದೆ
ಎಲ್ಲಿ ಮರೆಯಾದೆ ಮನವೇ ಎಲ್ಲಿ ಮರೆಯಾದೆ
ಸುಡುವ ಬಿಸಿಲಲು ನಡುಗಿ ಕುಳಿತೆ
ಕೊರೆವ ಚಳಿಗೆ ಬೆವರಿ ನಿಂತೆ
ಸುರಿವ ಮಳೆಗೆ ಕೊಡೆಯ ಹಿಡಿಯದೆ
ಎಲ್ಲಿ ಕಳೆದೋದೆ ಮನವೇ ಎಲ್ಲಿ ಕಳೆದೋದೆ
ನಲಿವಿನಲ್ಲೂ ನಗುವ ಮರೆತೆ
ಎಲ್ಲೆ ಹೋದರು ಬಿಡದು ಚಿಂತೆ
ನಿನ್ನ ಕೊಳೆಯನು ಹೊರಗೆ ಹಾಕದೆ
ಒಂಟಿ ಏಕಾದೆ ಮನವೇ ಒಂಟಿ ಏಕಾದೆ
ಕೊರಗಿ ನೀನು ಕಮರಿಹೋದೆ
ಚಟವೆ ಇಲ್ಲದೆ ವ್ಯಸನಿಯಾದೆ
ನಿನ್ನ ನೀನು ಜಯಿಸಲಾರದೆ
ಏನು ಸಾಧಿಸಿದೆ ಮನವೇ ಏನು ಸಾಧಿಸಿದೆ
......ಅಶ್ವಿನಿ ಕೋಡಿಬೈಲು
#kannadabhavageethegalu
#emotional
#sadsong
#Raghavendra_beejadi
#Ashwini_Kodibail
#ಅಶ್ವಿನಿ_ಕೋಡಿಬೈಲು
#lightmusic
#melody
#mindblowing
#adhyatma
#adhyathmika
#ಭಾವಗೀತೆ
#ಮನರಂಜನೆ
#relaxingmusic
#newcomposition
#psychologyfacts
#phychology
Vedio credits:
• Clouds No Copyright Vi...
• Sad Girl Depressed sor...
• Sad Girl No Copyright ...
• Sad Depression No Copy...
• LONELY GIRL ON THE BEA...
• Woman walking on beach...
• Quarantine and lockdow...
• Sun Burst Between Erie...
• Himalaya 4k Timelapse ...
• Video
• Video
• Video
• Video
• No Copyright©Video||Ro...
Picture credits:
We took some pictures from Google. Our humble thanks to all those artists.