BANDI EKADE MANAVE(ಬಂದಿ ಏಕಾದೆ ಮನವೇ?) | ASHWINI KODIBAILU| RAGHAVENDRA BEEJADI

แชร์
ฝัง
  • เผยแพร่เมื่อ 12 ก.ย. 2024
  • LYRICS :- ASHWINI KODIBAILU
    MUSIC:- RAGHAVENDRA BEEJADI
    ORCHESTRATION:- ‪@SameerRao‬
    SONGER :- RAGHAVENDRA BEEJADI
    #kannadafolksongs #sadsong #kannadabhavageethegalu
    ಸಾಹಿತ್ಯ
    ಬಂದಿ ಏಕಾದೆ ಮನವೇ....
    ~~~~~~~~~~~~~~
    ಬಂದಿ ಏಕಾದೆ ಮನವೇ ಬಂದಿ ಏಕಾದೆ
    ನೀ ಬಂದಿ ಏಕಾದೆ ಮನವೇ ಬಂದಿ ಏಕಾದೆ
    ದೃಷ್ಟಿ ಇದ್ದೂ ಕುರುಡು ಆದೆ
    ಮಾತು ಬಂದರು ಮೂಕವಾದೆ
    ನಿನಗೆ ನೀನೇ ಕೋಳ ತೊಡಿಸಿ
    ಬಂದಿ ಏಕಾದೆ ಮನವೇ ಬಂದಿ ಏಕಾದೆ
    ಬಣ್ಣವಿದ್ದೂ ಕಪ್ಪು ಕಂಡೆ
    ಸಿಹಿಯು ಇರಲೂ ಕಹಿಯ ಉಂಡೆ
    ಸುಖವು ಇರಲು ಸವಿಯದೇ ನೀ
    ಏಕೆ ಹೀಗಾದೆ ಮನವೇ ಏಕೆ ಹೀಗಾದೆ
    ಉಣ್ಣಲಿರಲೂ ಸೊರಗಿಹೋದೆ
    ಸೂರು ಇರಲೂ ಊರ ಅಲೆದೆ
    ಗುರುವು ಇರಲು ಗುರಿಯ ಅರಿಯದೆ
    ಎಲ್ಲಿ ಮರೆಯಾದೆ ಮನವೇ ಎಲ್ಲಿ ಮರೆಯಾದೆ
    ಸುಡುವ ಬಿಸಿಲಲು ನಡುಗಿ ಕುಳಿತೆ
    ಕೊರೆವ ಚಳಿಯಲು ಬೆವರಿ ನಿಂತೆ
    ಸುರಿವ ಮಳೆಯಲು ಕೊಡೆಯ ಹಿಡಿಯದೆ
    ಎಲ್ಲಿ ಕಳೆದೋದೆ ಮನವೇ ಎಲ್ಲಿ ಕಳೆದೋದೆ
    ನಲಿವಿನಲ್ಲೂ ನಗುವ ಮರೆತೆ
    ಎಲ್ಲೆ ಹೋದರು ಬಿಡದು ಚಿಂತೆ
    ನಿನ್ನ ಕೊಳೆಯನು ಹೊರಗೆ ಹಾಕದೆ
    ಒಂಟಿ ಏಕಾದೆ ಮನವೇ ಒಂಟಿ ಏಕಾದೆ
    ಕೊರಗಿ ನೀನು ಕಮರಿಹೋದೆ
    ಚಟವೆ ಇಲ್ಲದೆ ವ್ಯಸನಿಯಾದೆ
    ನಿನ್ನ ನೀನು ಜಯಿಸಲಾರದೆ
    ಏನು ಸಾಧಿಸಿದೆ ಮನವೇ ಏನು ಸಾಧಿಸಿದೆ
    ......ಅಶ್ವಿನಿ ಕೋಡಿಬೈಲು
    VIDEO CREDITS
    • No Copyright©Video||Ro...
    • Video
    • Free Stock footage of ...
    • Video
    • Video
    • Quarantine and lockdow...
    • Sun Burst Between Erie...
    • Sun Burst Between Erie...
    • Himalaya 4k Timelapse ...
    • Woman walking on beach...
    • LONELY GIRL ON THE BEA...
    • Sad Depression No Copy...
    • Sad Girl No Copyright ...
    • Sad Girl Depressed sor...
    • Clouds No Copyright Vi...

ความคิดเห็น • 354

  • @suryarashmi969
    @suryarashmi969 2 ปีที่แล้ว +69

    ಇತ್ತೀಚಿನ ದಿನಗಳಲ್ಲಿ ನಾನು ಅತ್ಯಂತ ಹೆಚ್ಚು ಇಷ್ಟಪಟ್ಟ ಗೀತೆ. ಅಶ್ವಿನಿ ಅವರ ಭಾವುಕ ಸಾಹಿತ್ಯಕ್ಕೆ ರಾಘವೇಂದ್ರ ಸರ್ ಭಾವಪೂರ್ಣ ಗಾಯನ.. ಸೂಪರ್

  • @sampathkumarspsampathkumar133
    @sampathkumarspsampathkumar133 2 ปีที่แล้ว +32

    ಮಾನಸಿಕ ಖಿನ್ನತೆ ಗೆ ಈ ಹಾಡು ಒಂದು ರೀತಿಯ ಮನೆಯ ಮದ್ದು ಇದ್ದಂಗೆ,,super song

  • @mahadevpalled7716
    @mahadevpalled7716 2 ปีที่แล้ว +20

    ಏನಿದು ಸಾಹಿತ್ಯ....ಎಷ್ಟೊಂದು ಅರ್ಥ ಗರ್ಭಿತ..ಸುಮಧುರ ಗಾಯನ.

  • @annappayk
    @annappayk 2 ปีที่แล้ว +13

    ಅನವಶ್ಯಕ ನಕಾರಾತ್ಮಕತೆಯನ್ನು ರೂಢಿಸಿಕೊಂಡ ಪ್ರತಿಯೊಬ್ಬರೂ ಕೇಳಲೇಬೇಕಾದ ಗೀತೆ SUPER

  • @jayakavibhavageetha7145
    @jayakavibhavageetha7145 2 ปีที่แล้ว +14

    ಚನ್ನಾಗಿದೆ... ಆಲಿಸಿ ಆನಂದಿಸಿದೆ..!
    ಆತ್ಮಪೂರ್ವಕ ಅಭಿನಂದನೆಗಳು..!!!
    ಮಮತೆಯ ಮುಂಜಾನೆ...

  • @kannadavana
    @kannadavana 2 ปีที่แล้ว +10

    ಸಾಹಿತ್ಯ ಸಂಗೀತ ಗಾಯನ ಎಲ್ಲವೂ ಚೆನ್ನಾಗಿದೆ.
    ಮತ್ತೆ ಮತ್ತೆ ಇಷ್ಟವಾಗುವ ಧ್ವನಿ.

  • @gopalachara3359
    @gopalachara3359 หลายเดือนก่อน

    ಹಳೆಯ ಮನೆಯಿದು ನಂತರದ ನನ್ನ ಇಷ್ಟವಾದ ಹಾಡಿದು ,ಬಿಜಾಡಿ ಅವರಿಗೆ ನಮಸ್ಕಾರಗಳು.

  • @jyothihg1396
    @jyothihg1396 2 ปีที่แล้ว +32

    ಇಂದಿನ ಧಾವಂತದ ಜೀವನದಲ್ಲಿ ನಾವೇ ನಮ್ಮ ಮನಸ್ಸಿಗೆ ಕೇಳಿಕೊಳ್ಳ ವಂತಹ ಸಾಹಿತ್ಯ... ಅದ್ಬುತ ಗಾಯನ... ಅನಂತ ವಂದನೆಗಳು.... 👌👌👌🙏🙏🙏❣️

  • @singersujathakarnam7737
    @singersujathakarnam7737 2 ปีที่แล้ว +16

    ರಾಘವೇಂದ್ರ ಬೀಜಾಡಿ ಸರ್ ಅವರ ಗಾಯನ ಮನಮುಟ್ಟುವ ಗಾಯನ,ಸಮೀರ್ ಸರ್ ಅವರ ವೇಣುನಾದ, ಅಶ್ವಿನಿ ಅವರ ಸಾಹಿತ್ಯ...ವಾಹ್!! ಸೂಪರ್.👌👏🙏

  • @Vinutha2368
    @Vinutha2368 ปีที่แล้ว +7

    ಮನಸ್ಸಿಗೆ ಮುಟ್ಟಿದ ನಿಮ್ಮ ಅದ್ಬುತ ಗಾಯನ, ಹಾಗೂ ಅರ್ಥಗರ್ಭಿತವಾದ ಸುಂದರ ಸಾಹಿತ್ಯ. ಸೊಗಸಾದ ಹಿನ್ನೆಲೆಸಂಗೀತ. ಎಲ್ಲವೂ ಮನಸ್ಸಿಗೆ ಮುಧನೀಡಿತು❤️👌👌👌.TQ sir 🙏🙂

  • @7starjhankarmelodieshungun751
    @7starjhankarmelodieshungun751 ปีที่แล้ว +3

    ಈ ಗೀತೆ ಕೇಳಿದರೆ ಕುಂತಲ್ಲೇ ಮಾಯೆ ಆಗಿದ್ದೇನೆ.. 🥺🙏🏼ನಾನು ಯಾವ್ ಲೋಕದಲ್ಲಿ ಇದ್ದೇನೆ ಗೊತ್ತಾಗುತ್ತಿಲ್ಲಾ... ನಿಜ್ವಾಗ್ಲೂ ಬಂದಿ ಆಗಿದ್ದೇನೆ 🥺🥺🥺

  • @vi_bha
    @vi_bha 2 ปีที่แล้ว +15

    ಅನವಶ್ಯಕ ನಕಾರಾತ್ಮಕತೆಯನ್ನು ರೂಢಿಸಿಕೊಂಡ ಪ್ರತಿಯೊಬ್ಬರೂ ಕೇಳಲೇಬೇಕಾದ ಗೀತೆ👍👍. asusual ....ಸರ್ ಗಾಯನ 👌👌 ಧ್ವನಿ... soothing😊😊

  • @shanthashantha1633
    @shanthashantha1633 4 หลายเดือนก่อน +3

    Very good sahithya meaningful super👍 singing🎤 God bless you🙏

  • @gknews3858
    @gknews3858 2 ปีที่แล้ว +14

    ಮನಸ್ಸು ಹಗುರವಾಗಿ ಸಮಾಧಾನ ಆಯಿತು.
    ತುಂಬಾ ಒಳ್ಳೆ ಸಾಹಿತ್ಯ...
    ನಿಮ್ಮ ಟೀಮ್ ಒಳ್ಳೆ ಕೆಲಸ ಮಾಡ್ತಿದೆ.
    Thank u all🌹

  • @Rudra.ap1991
    @Rudra.ap1991 2 ปีที่แล้ว +7

    ನನ್ನ ಮನಸು ಬಂದಿ ಅಗೋ ಮುನ್ನ ಕೇಳ ಬಯಸುವ ಹಾಡು ಇದು♥️♥️

  • @mealsandmemoriesarchanapra6695
    @mealsandmemoriesarchanapra6695 2 ปีที่แล้ว +15

    ಪ್ರಸ್ತುತ ವಾಸ್ತವ ಸ್ಥಿತಿ ..... ಸಾಹಿತ್ಯ, ಗಾಯನ ಎಂದಿನಂತೆ ಸುಮಧುರ ಸರ್....

  • @deepakammar7053
    @deepakammar7053 20 วันที่ผ่านมา +1

    ಅನಾವಶ್ಯಕ ಆಲೋಚನೆಗಳು ಹೇಗೆ ನಮ್ಮ ಬಂಧಿಸಿದೆ ಎಂದು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಧನ್ಯವಾದಗಳು

  • @sangameshgbarigidad7349
    @sangameshgbarigidad7349 2 ปีที่แล้ว +8

    ಭಾವ ಉನ್ಮಾದದ ಸ್ವರ ಸಂಯೋಜನೆ ಈ ಗೀತೆಯನ್ನು ರಚಿಸಿದವರಿಗು ಸಂಗೀತ ಸಂಯೋಜನೆ ಮಾಡಿದವರಿಗೂ ಗಾಯಕರಿಗೆ ಪ್ರೀತಿ ಗೌರವ ಪೂರ್ವಕ ತುಂಬು ಹೃದಯದ ಧನ್ಯವಾದಗಳು

  • @pramadanagesh6981
    @pramadanagesh6981 2 ปีที่แล้ว +14

    ಅಶ್ವಿನಿಯವರ ಸಾಹಿತ್ಯ ತುಂಬಾ ಚೆನ್ನಾಗಿದೆ, ಗಾಯನ ಇನ್ನೂ ಚೆನ್ನಾಗಿ ಮೂಡಿ ಬಂದಿದೆ 🙏🙏

  • @HbpreetHbpreet
    @HbpreetHbpreet 3 หลายเดือนก่อน +2

    ❤️ನೋವತುಂಬಿದ ಭಾವಗೀತೆ ಮನಮುಟ್ಟಿ ಮರುಗುವಂತಿದೆ. ಸಾಹಿತ್ಯ. ಸಂಗೀತ. ಗಾಯನ ಸುಂದರ ಸುಂದರ ಸುಂದರ ❤

  • @kanchanasy5811
    @kanchanasy5811 2 ปีที่แล้ว +10

    ಪ್ರತಿಯೊಂದು ಹೆಣ್ಣಿನ ಪರಿಸ್ಥಿತಿ , ಹೇಳಿಕೊಳ್ಳಲು ಆಗದ ಮನಸ್ಸಿನ ನೋವು......

    • @NaveenKumar-vm4xm
      @NaveenKumar-vm4xm 7 หลายเดือนก่อน +2

      ಇದರಲ್ಲಿ ಗಂಡು ಹೆಣ್ಣು ಎಂಬ ಬೇಧ ಭಾವ ಇಲ್ಲ ಇಬ್ಬರಿಗೂ ಅನ್ವಯಿಸುತ್ತೆ

    • @btsusheela1183
      @btsusheela1183 4 หลายเดือนก่อน

      Yes true 👌 👏 🤝 👍 🙌

    • @btsusheela1183
      @btsusheela1183 4 หลายเดือนก่อน

      Aadre hechhu mahileyaru bhaavanaa jeevigalu adakke 😊😊

  • @vishwanathhulakund9179
    @vishwanathhulakund9179 2 ปีที่แล้ว +6

    ಸೊಗಸಾದ ಸಾಹಿತ್ಯ ಅದ್ಬುತ ದ್ವನಿಯಲ್ಲಿ ಮನಸಿನ ಅಂತರಾಳ ಸೇರಿದ ಗೀತೆ 🙏🙏

  • @prabhauday7287
    @prabhauday7287 2 ปีที่แล้ว +7

    ಹಳೆಯ ಮನೆ ಹಾಡಿನಂತೆ ಈ ಹಾಡನ್ನು ಎಷ್ಟು ಸಾರಿ ಕೇಳಿದರೂ ಕೇಳಬೇಕು ಅನಿಸುತ್ತದೆ super Anna

  • @food-volgs
    @food-volgs 2 ปีที่แล้ว +8

    Sir nanu ea geete yannu daily kelade malgodilla... Its something attracted and emotinal attached with feel happy sir

  • @goodday9493
    @goodday9493 2 ปีที่แล้ว +6

    ಹಾಡು ಕೇಳುವ ಸಮಯ ಆಮೇಲೆ ಕೆಲ ಸಮಯ ಮನಸ್ಸು ಹಗುರವಾಗಿ ಎಲ್ಲೋ ಹೋದ ಅನುಭವ 😊

  • @hairaj480
    @hairaj480 2 ปีที่แล้ว +6

    ಎಂತಾ ಅದ್ಭುತ ಗಾಯನ ಎಂಥ ಅದ್ಭುತ ಸಾಹಿತ್ಯ ಸೂಪರ್ ......

  • @vishalabelavigi8562
    @vishalabelavigi8562 2 ปีที่แล้ว +9

    ಅದ್ಭುತ ಸಾಹಿತ್ಯ... ಅಮೋಘ ಗಾಯನ ಸರ್ 🙏🙏

  • @gpadmavathigpadmavathi1631
    @gpadmavathigpadmavathi1631 หลายเดือนก่อน

    ತುಂಬಾ ಚೆನ್ನಾಗಿದೆ. ನಿಮ್ಮ ಧ್ವನಿ ಚೆನ್ನಾಗಿದೆ ಧನ್ಯ ವಾದಗಳು 🎉

  • @ramachandrakodibail7521
    @ramachandrakodibail7521 2 ปีที่แล้ว +7

    ಉತ್ತಮ ಸಾಹಿತ್ಯ, ಅದಕ್ಕೊಪ್ಪುವ ಸಂಗೀತ....
    ಭಾವ ತುಂಬಿದ ಗಾಯನ...ಸುಪರ್

  • @umeshmundalli2378
    @umeshmundalli2378 2 ปีที่แล้ว +9

    ಅಶ್ವಿನಿ ಕೋಡಿಬೈಲು ಅವರ ಸಾಹಿತ್ಯ ಅದ್ಭುತವಾಗಿದೆ .ಅಷ್ಟೇ ಅದ್ಭುತವಾಗಿ ಸ್ವರಸಂಯೋಜನೆ ಮಾಡಿ ಅದ್ಬುತವಾಗಿ ತಾವು ಹಾಡಿರುವಿರಿ.ತುಂಬಾ ಇಷ್ಟವಾಯಿತು.ಅಭಿನಂದನೆಗಳು ಬ್ರದರ್ 💐💐💐

    • @sribalajipowersolutions530
      @sribalajipowersolutions530 2 ปีที่แล้ว

      🙄🙄🙄🙄🙄🙄🙄🙄🙄🙄 onmy 🙄🙏🙄😆🙄🙏🙏o 🙄lll 🙄 llc lo 🙄 lockpo 🙄 let 🙏🎉🙏🎉 like lypc 🙄🙏🙏 lc lylloll 🙄 yo 🙄 c

    • @sribalajipowersolutions530
      @sribalajipowersolutions530 2 ปีที่แล้ว

      LL send you pulled lol

  • @madhuar2597
    @madhuar2597 2 ปีที่แล้ว +5

    ಅಶ್ವಿನಿ ಯವರೇ ಈ ಸಾಹಿತ್ಯ ತುಂಬಾ ಅದ್ಬುತ ವಾಗಿದೆ

  • @btsusheela1183
    @btsusheela1183 4 หลายเดือนก่อน +1

    Chatave ellade vaysaniyaade ,adbutaa ❤❤❤❤

  • @sukheshk9499
    @sukheshk9499 2 ปีที่แล้ว +5

    ಹಾಡು ಕೇಳಿದರೆ ಮನಸು ಹಗುರವಾಗುತ್ತದೆ.....ಉತ್ತಮವಾಗಿದೆ

  • @t.v.girimudipu6466
    @t.v.girimudipu6466 ปีที่แล้ว +3

    ಪ್ರಭುದ್ದ ಕಲಾವಿದರ ತಂಡದಿಂದ ಉತ್ತಮ ಕೊಡುಗೆ 👏🏻👏🏻

  • @manjunathamanju8430
    @manjunathamanju8430 4 หลายเดือนก่อน +1

    ಅದ್ಬುತ ಸಾಹಿತ್ಯ. ಗಾಯನ ಕೂಡ..❤👌

  • @mrsidduangadi4576
    @mrsidduangadi4576 2 ปีที่แล้ว +3

    ಮತ್ತೆ ಮತ್ತೆ ಕೇಳಲೇಬೇಕಾದ ಹಾಡು...,..ನಮ್ಮನ್ನು ನಾವೇ ಮರೆತಂತಾಗುತ್ತದೆ

  • @vinaybhandary1307
    @vinaybhandary1307 2 ปีที่แล้ว +3

    ನಾನು ಯಾಕೋ ಇಂದು ಈ ಗೀತೆ ಕೇಳಿ ಬಂದಿಯಾದೆ..😍

  • @ganeshagganeshag7646
    @ganeshagganeshag7646 2 ปีที่แล้ว +3

    ನಿಜವಾಗಿ ಸತ್ಯವಾದ ಸಾಹಿತ್ಯ. ನಾವೇ ಅರ್ಥ ಮಾಡಿಕೊಬೇಕು ಅಷ್ಟೇ.

  • @yashodharak9677
    @yashodharak9677 ปีที่แล้ว +2

    ಅದ್ಭುತ ಸಾಹಿತ್ಯ, ಸಂಗೀತ

  • @anithamt8247
    @anithamt8247 2 ปีที่แล้ว +4

    ಅಬ್ಬಾ...ಅದ್ಭುತ ಸಾಹಿತ್ಯ.. ಅತ್ಯದ್ಭುತ ಸಂಗೀತ ಮತ್ತು ಗಾಯನ ...

  • @rajendraprasadn3477
    @rajendraprasadn3477 6 หลายเดือนก่อน +1

    Ashwini and team please continue your great work on poetry in the same manner you people are marvelous

  • @mamathaacharya4520
    @mamathaacharya4520 2 ปีที่แล้ว +10

    ಪುನಃ ಸುಸ್ವಾಗತ ನಿಮ್ಮೆಲ್ಲರಿಗೂ 👍🙏
    ಸದಾ ನಿಮ್ಮ ಹಾಡುಗಳಿಗೆ ನಾವು ಕಾಯುತ್ತಿರುತ್ತವೆ,,,,

  • @paneendraprathap1607
    @paneendraprathap1607 2 ปีที่แล้ว +6

    ಅದ್ಭುವಾಗಿದೆ ಸಾಹಿತ್ಯ ಸಂಗೀತ ಹಾಗೂ ಗಾಯನ 🙏🙏🙏

  • @sureshsarjapur6232
    @sureshsarjapur6232 4 หลายเดือนก่อน +1

    I can’t explain,, how beautiful and how melodious this song is ❤❤

  • @saraswathidrao3592
    @saraswathidrao3592 ปีที่แล้ว +2

    ಮನದಾ ಅಂತರಾಳಕ್ಕೆ ಮುದ ನೀಡುವುದು ಈ ಹಾಡು ಕೇಳಿದಾಗ ತುಂಬಾ ಖುಷಿಯಾಯಿತು

  • @yogirobin
    @yogirobin 2 ปีที่แล้ว +7

    Ashwini madam lyrics and ragavender Beejadi sir voice super combination 👌🏻👌🏻👌🏻💐

  • @gopalkalaburgi4693
    @gopalkalaburgi4693 2 ปีที่แล้ว +3

    ಏನೂ ಗುರು ಈ ಸಾಂಗು... ಸೂಪರ್... 👌👌👌👌

  • @rajkumarnabhirajjain4228
    @rajkumarnabhirajjain4228 2 ปีที่แล้ว +3

    ಅಧ್ಭುತ ಸಾಹಿತ್ಯ ಅಮೋಘ ಗಾಯನ

  • @hbestinternetwatch
    @hbestinternetwatch 9 หลายเดือนก่อน +2

    The lyrics is so touching and splendid rendering ❤❤❤❤❤❤❤❤❤❤❤❤❤❤❤

  • @arvindkaradi3542
    @arvindkaradi3542 ปีที่แล้ว +1

    ಮತ್ತೆ ಶ್ರೀ ಸಿ,ಅಶ್ವತರವರನ್ನು ನೆನಪಿಸುವ ಸಂಗೀತ ಮತ್ತು ಗಾಯನ.ನಿಜವಾಗಲೂ ಹೃದಯ ಮಿಡಿಯಿತು ಸರ್..ಇಂಥಹ ಭಾವಗೀತೆಗಳು ಇನ್ನೂಹೆಚ್ಚಾಗಿ ಮೂಡಿಬರಲಿ ಸರ್..👍👏👏

  • @amruthaprashanth5583
    @amruthaprashanth5583 2 ปีที่แล้ว +6

    ಅದ್ಬುತ.... 👌👌👌👌

  • @handral_yk
    @handral_yk 2 ปีที่แล้ว +2

    ಬಹಳ ಸೊಗಸಾದ ಗಾಯನ ಸರ್.ಜೀವತುಂಬಿದ್ದೀರಿ ಗೀತೆಗೆ.
    ಯಲ್ಲಪ್ಪ ಹಂದ್ರಾಳ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ

  • @rakeshghatage4901
    @rakeshghatage4901 6 หลายเดือนก่อน +1

    ಅದ್ಭುತವಾದ ಹಾಡು 🙏

  • @rekharamesh91
    @rekharamesh91 ปีที่แล้ว +1

    ಒಳ್ಳೆಯ ಸಾಹಿತ್ಯ ಮೇಡಂ

  • @btsusheela1183
    @btsusheela1183 4 หลายเดือนก่อน +1

    Prtii baariyuu hosaa anubhavaa osaaa gnadaa belaku H S Venkateh murthi mattu Lakshmi naaraayana battara geetegalu andre tumbaaa estaa❤❤❤❤❤❤❤

  • @SunitaMarigoudar-rh3uc
    @SunitaMarigoudar-rh3uc 10 หลายเดือนก่อน +1

    ಹಾಡು ಕೇಳಿದಾಗಲೆಲ್ಲ ಹೃದಯ ಹಗುರವಾದಂತೆ ಅನಿಸುತ್ತದೆ ಮತ್ತೆ ಮತ್ತೆ ಕೇಳತಾನೆ ಇರ್ತೀನಿ 🙏🙏🙏👌🏻

  • @arunkop1400
    @arunkop1400 ปีที่แล้ว +1

    ನಾನು ಅತೀಯಾಗಿ ಮೆಚ್ಚಿದ ಗಾಯನ.🙏🙏

  • @gururajasr6207
    @gururajasr6207 2 ปีที่แล้ว +3

    ಅರ್ಥಗರ್ಭಿತ ಸಾಹಿತ್ಯ ಹಾಗೂ ಮಧುರ ಗಾಯನ ಗುರುಗಳೇ 🙏🙏

  • @RajeshS-u3x
    @RajeshS-u3x 6 หลายเดือนก่อน +1

    ಕನ್ನಡ ಸಾಹಿತ್ಯದ ಬೆರಗು ನೋಡಿ ಅತ್ಯದ್ಭುತ

  • @arunkop1400
    @arunkop1400 ปีที่แล้ว +2

    ಅರ್ಥಗರ್ಭಿತವಾದ ಹಾಡು ಮತ್ತು ಅಷ್ಟೇ ಚೆನ್ನಾಗಿ ಹಾಡಿದ್ದಾರೆ

  • @jalayogiMRaviJalayogiMRavimysu
    @jalayogiMRaviJalayogiMRavimysu 2 ปีที่แล้ว +3

    ಅರ್ಥಪೂರ್ಣ ಸಾಹಿತ್ಯ ಹಾಡು ಸಂಗೀತ ಕ್ಕೆನಮ್ಮ ಅಭಿನಂಧನೆಗಳು ಸರ್ ಮೇ ಡಂ

  • @ಜಗನ್ಮಾತೆ
    @ಜಗನ್ಮಾತೆ 2 ปีที่แล้ว +4

    ನಿಮ್ಮ ಎಲ್ಲ ಹಾಡುಗಳು ತುಂಬಾ ಚೆನ್ನಾಗಿ ಇರುತ್ತವೆ sir,, ಬದುಕು ಬದಲಿಸುವ ಹಾಡುಗಳು 🙏🙏🙏🙏

  • @mallikakumbar9496
    @mallikakumbar9496 2 ปีที่แล้ว +4

    ಮನಸ್ಸನ್ನು ಸುಶಾಂತಗೊಳಿಸುವ ಗೀತೆಯ ರಚನೆ ಮೈ ಮನವನ್ನು ಹದಗೊಳಿಸುತ್ತದೆ

  • @ramesham3218
    @ramesham3218 2 ปีที่แล้ว +3

    ಶುಭವಾಗಲಿ ಮಿತ್ರ...🌹🌹🌹🌹🌹

  • @praveenshirol3891
    @praveenshirol3891 ปีที่แล้ว +1

    Super relaxing song....jeevanada arta helidiri...manasu change agatte

  • @prasadtm6849
    @prasadtm6849 ปีที่แล้ว +3

    ಇದನ್ನು ಕೇಳುವುದು ಸಂಗೀತವಷ್ಟೆ ಅಲ್ಲ, ಇದು ದ್ಯಾನದ ಅತೀವ ಅನುಭವ... Lessons for life

  • @prashanthak867
    @prashanthak867 2 ปีที่แล้ว +7

    Namaste.....So divine voice after C aswath I felt......Thank you raghu bro

  • @ravikumartr6091
    @ravikumartr6091 ปีที่แล้ว +1

    ಅದ್ಭುತ ಪ್ರಸ್ತುತಿ, ಅಭಿನಂದನೆಗಳು💐💐💐 ಇಡಿಯ ತಂಡಕ್ಕೆ

  • @appasahebpatil4125
    @appasahebpatil4125 ปีที่แล้ว +1

    ಮನ ಸೆಳೆಯುವ ಉತ್ತಮ ಸಾಹಿತ್ಯ ಸಂಗೀತ ಗಾಯನ...

  • @bhimukodannavar2596
    @bhimukodannavar2596 2 หลายเดือนก่อน

    ಅತ್ಯುತ್ತಮ ಸಾಹಿತ್ಯ ಬಾರಿ ಬಾರಿ ಕೇಳಬೇಕು ಅನಿಸುತ್ತೆ

  • @aarthikhandalkar5619
    @aarthikhandalkar5619 ปีที่แล้ว +1

    ಹಾಡು ಕೇಳುತ್ತಾ ಕೇಳುತ್ತಾ ನಾವು ಯಾವುದೇ ಬೇರೆ ಲೋಕದಲ್ಲಿ ಹೋದಹಾಗೆ ಅನುಭವ.....ಮನಸ್ಸು ಹಗುರವಾಯಿತು

  • @basavarajbasu7052
    @basavarajbasu7052 2 ปีที่แล้ว +1

    ಸೊಗಸಾದ ಸಾಹಿತ್ಯ heart touching lyrics

  • @cherrycreations570
    @cherrycreations570 ปีที่แล้ว +1

    ಅಶ್ವಿನಿ ನಕ್ಷತ್ರದ ಸರಸ್ವತಿ ಯ ಮುಂದೆ ಕುಳಿತು ಗುರುರಾಘವೇಂದ್ರ ಕಂಠದಲ್ಲಿ ಕಳೆದು ಬಂದಿಯಾದೆ..
    ನಿನ್ನ ನಿನ್ನ ಗೆಲ್ಲಲಾಗದ ಸತ್ಯ.....ಮತ್ತೆ ನೆನಪಿಸಿದೆ...ಅದ್ಭುತ ಸಾಹಿತ್ಯ. ಅಮೋಘ ಚಿಂತನೆ.... ನಿಜ ಜೀವನದ ಸತ್ಯ.. ಎಲ್ಲವೂ... ಇಲ್ಲಿ ಬಂದಿಯಾಗಿದೆ.... 👏🏻

  • @agastyaapoorva
    @agastyaapoorva ปีที่แล้ว +1

    ನಿಮ್ಮ ಸಾಹಿತ್ಯ, ಸಂಗೀತ, ಗೀತಾಗಾಯನ ಕ್ಕೆ ಬಂದಿ ಆಗದೇ ಇರೋರೆ ಇಲ್ಲಾ... ❤️❤️🙏🙏🙏

  • @akshathadk8415
    @akshathadk8415 2 ปีที่แล้ว +2

    Suduva bisilalu nadugi kulithe... Koreva chali yallu bevari nithe wat a beautiful line

  • @paramgok
    @paramgok 2 ปีที่แล้ว +3

    ಚಟವೆ ಇಲ್ಲದೆ ವ್ಯಸನಿ ಆದೆ.. 👌👌👌👌

  • @tejunaveen5509
    @tejunaveen5509 2 ปีที่แล้ว +2

    ಚಂದದ ಸಾಲುಗಳು ಅದ್ಭುತವಾಗಿ ಮೂಡಿಬಂದಿದೆ

  • @unknown09488
    @unknown09488 ปีที่แล้ว +1

    ಗೊತ್ತಿಲ್ಲ.........
    ಅಶ್ವಿನಿ ಮೇಡಂ ರವರು, ರಾಘವೇಂದ್ರ ಸಾರ್ ಹಾಗೂ ಸಮೀರ್ ಸಾರ್ ರವರ ಈ ಕೊಡುಗೆಗೆ ನನ್ನ ನಮನಗಳು.......

  • @divakarsp922
    @divakarsp922 4 หลายเดือนก่อน +1

    ನನ್ನ ಕಣ್ಣು ತೆರೆಸಿದ ಅದ್ಭುತ ಗಾಯನ

  • @kusumabhat1454
    @kusumabhat1454 2 ปีที่แล้ว +4

    ಅತ್ಯದ್ಭುತ ಸಾಹಿತ್ಯ, ಸಂಗೀತ ಹಾಗೂ ಗಾಯನ👌👌🙏😘
    Speechless 🙏

  • @mahadevipatil9159
    @mahadevipatil9159 2 ปีที่แล้ว +2

    ಅದ್ಭುತವಾಗಿ ಮೂಡಿಬಂದಿದೆ

  • @raghavendramangasuli7290
    @raghavendramangasuli7290 11 หลายเดือนก่อน +1

    ಸೂಪರ್ ಮೇಡಂ ಸಾಹಿತ್ಯ 🥰

  • @nagalambikakalmat2926
    @nagalambikakalmat2926 2 ปีที่แล้ว +2

    ಕರುಳ ಬಗೆಯುವ ಸಾಹಿತ್ಯ ಮೋಡಿ ಮಾಡುವ ಗಾಯನ ನಮಸ್ಕಾರ ನಮಸ್ಕಾರ ನಮಸ್ಕಾರ🙏🙏🙏

  • @vijayalakshmirao6702
    @vijayalakshmirao6702 2 ปีที่แล้ว +1

    ತುಂಬಾ ಸೊಗಸಾದ ಸಾಹಿತ್ಯ. ಸುಂದರ ಸುಮಧುರ ಗಾಯನ. ಧನ್ಯವಾದಗಳು.🙏🙏🙏🙏

  • @jyothijb350
    @jyothijb350 ปีที่แล้ว +2

    Song thumba chennagide sir, ಮನ ಕಲಕುವ ಸಾಹಿತ್ಯ, ಅದೆಷ್ಟು ಸರಿ songs ಕೇಳಿದೆನೋ ಗೊತ್ತಿಲ್ಲ, ನನ್ನ ಜೀವನದ ಹಾಡು sir,

  • @anithashreevatsa1779
    @anithashreevatsa1779 2 ปีที่แล้ว +2

    Lyrics tumba chennagide 👌👌👌,sir voice🙏🙏🙏🙏🙏

  • @sadanandkalmady8165
    @sadanandkalmady8165 2 ปีที่แล้ว +2

    Yestondu sundara hadu....Ashwini hatsup for ur..Sahitya,beautifl singing too...

  • @Ramkumarmm3762
    @Ramkumarmm3762 ปีที่แล้ว +3

    ನಿಮ್ಮ ತಂಡದ ಈ ಪ್ರಯತ್ನಕ್ಕೆ ನಿಮ್ಮ ಅದ್ಭುತವಾದ ಗಾಯನಕ್ಕೆ ನಾನೇನು ಹೇಳಬೇಕೆಂದು ತಿಳಿಯದೆ ಮೌನಿ ಆಗಿರುವೆ . ಅರೆ ಬಾಪ್ ರೆ . ಕ್ಯಾ ಬಾತ್ ಹೈ .🙏🙏

  • @shankarsdundigoudar9277
    @shankarsdundigoudar9277 2 ปีที่แล้ว +1

    ತುಂಬಾ ಅರ್ಥಗರ್ಭಿತವಾದಂತ ಭಾವಗೀತೆ ಸರ್

  • @jalayogiMRaviJalayogiMRavimysu
    @jalayogiMRaviJalayogiMRavimysu 2 ปีที่แล้ว +3

    ಅತ್ಯುತ್ತಮ ವಾಗಿದೆ ಸಾಹಿತ್ಯ ಸಂಗೀತ ಹಾಡು ಅದ್ಭುತ ಧನ್ಯವಾದಗಳು ಮೇಡಂ ಸರ್

  • @TheWadiraj
    @TheWadiraj 2 ปีที่แล้ว +3

    ಅಶ್ವಿನಿಯವರಿಗೆ ಒಂದು ದೊಡ್ಡ ನಮಸ್ಕಾರ. ಅತ್ಯದ್ಭುತ ಸಾಹಿತ್ಯ. ಮನಸ್ಸನ್ನು ತೆರೆದಿಡುವ ಕವನ. ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆ ಎಂದಿನಂತೆ ಅತ್ಯದ್ಭುತ.

  • @geethalakshmi6539
    @geethalakshmi6539 2 ปีที่แล้ว +3

    ಸಾಹಿತ್ಯ, ಸಂಗೀತಾ & ಗಾಯನ superrr sir👌🙏

  • @user-qp5yl9yo5v
    @user-qp5yl9yo5v 11 หลายเดือนก่อน +1

    ಅದ್ಭುತ ಗಾಯನ ಸಂಗೀತ ಗಾಯನ

  • @roopaprabhu1171
    @roopaprabhu1171 2 ปีที่แล้ว +1

    ನನಗೆ ತುಂಬ ಇಷ್ಟ ಆದ ಹಾಡು

  • @mythilisram6077
    @mythilisram6077 2 ปีที่แล้ว +4

    Heartly touching emotionally meaning full song melodiousely singing wonderful music composition fantastic lyrics fantastic video graphics

  • @nagrajkamath9677
    @nagrajkamath9677 2 ปีที่แล้ว +1

    ಪದ್ಯದ ಸಾಲುಗಳು ತುಂಬಾ ಅರ್ಥಪೂರ್ಣ 💕ವಾಗಿದೆ

  • @maaludhoni7689
    @maaludhoni7689 ปีที่แล้ว +1

    ನಿಮ್ಮ ಈ ಧ್ವನಿ ಅದ್ಭುತ ಸರ್

  • @rameshl5638
    @rameshl5638 2 ปีที่แล้ว +3

    ನಿಮ್ಮ ಹಾಡಿನಿಂದ ಮನಸು ಸ್ವಲ್ಪ ಹಗುರವಾಯಿತು

  • @prameelarajraj7363
    @prameelarajraj7363 ปีที่แล้ว +1

    ತುಂಬಾ ಭಾವಪೂರ್ಣ ಸಾಹಿತ್ಯ. ರಾಗ ಸಂಯೋಜನೆ ಅದ್ಭುತ. 👌👌👏👏👏

  • @arvindnanjundaswamy2442
    @arvindnanjundaswamy2442 2 ปีที่แล้ว +3

    ಸೊಗಸಾದ ಸಾಹಿತ್ಯ ಹಾಗು ಸಂಗೀತ 🙏🙏