ರುದ್ರ ವೀರಭದ್ರ ಆದ್ರಿನಂದನೆ ರಮಣ | Rudra veerabhadra | ರಚನೆ-ವಿಜಯದಾಸರು |Lakshmi Muralidhar

แชร์
ฝัง
  • เผยแพร่เมื่อ 4 มี.ค. 2024
  • ರುದ್ರ ವೀರಭದ್ರ ಆದ್ರಿನಂದನೆ ರಮಣ IIಪII
    ಕೌದ್ರ ಮೂರುತಿ ದಯಾ ಸಮುದ್ರ ಎನ್ನನು ಕಾಯೊ II ಅ ಪ II
    ಮುಪ್ಪುರ ವಗೆದ್ದ ಮುಕ್ಕಣ್ಣ ಮನ್ಮಥ ವೈರಿ
    ಸರ್ಪಭೂಷಣ ಮೃತ್ಯು ನಿವಾರಣ
    ಕಪ್ಪು ಕೊರಳ ಕೃತಿವಾಸ ವ್ಯೋಮಕೇಶ
    ಒಪ್ಪಿಕೊಳ ಬೇಕು ಒಲಿದು ಈ ವಾಕ||1||
    ಸದ್ಯೋಜಾತಭೂತನಾಥಭಕುತರ ವಾತ
    ಖದ್ಯೋತ ಲಾವಣ್ಯ ಸುರಜೇಷ್ಟನ
    ಮದ್ಯದಾನನ ಛೇದಶ್ರೀವಿಷ್ಣುವಿನಪಾದ
    ಹೃದ್ಯದೊಳಗಿಟ್ಟ ಜಟಾಜೂಟ ಬಲು ದಿಟ್ಟ||2||
    ಮನೋನಿಯಾಮಕ ಗುರುವೆ ದೈನ್ಯದಿಂದಲಿ ಕರೆವೆ
    ಜನಿಸಿ ಕಾಡುವ ರೋಗ ಕಳೆಯೋ ಬೇಗ
    ಅನುಪಮ ವಿಜಯವಿಠ್ಠಲನ ನಾಮಾಮೃತ
    ಎನ ಗುಣಿಸುವುದೋ ಸಾಂಬಮೂರುತಪ್ರತಿಬಿಂಬಾ||3||

ความคิดเห็น • 7

  • @sudarshannnagaraj279
    @sudarshannnagaraj279 4 หลายเดือนก่อน +1

    ಹರ ಹರ ಮಹಾದೇವ....🙏 ಸುಮಧುರ ಸಂಗೀತ ಗಾನ ಕೋಗಿಲೆ ❤

  • @vyshampayanaananth6292
    @vyshampayanaananth6292 4 หลายเดือนก่อน +1

    Very nice song n very good singing madam-geetha ananth