ವೈದ್ಯಬಂದ ನೋಡಿ |Vaidya Banda nodi | ಪುರಂದರದಾಸರರಚನೆ |Lakshmi Muralidhar

แชร์
ฝัง
  • เผยแพร่เมื่อ 30 มิ.ย. 2024
  • ವೈದ್ಯಬಂದ ನೋಡಿ ಶ್ರೀವೆಂಕಟ ನೆಂಬೋ ವೈದ್ಯಬಂದ ನೋಡಿ|| ಪ||
    ವೈದ್ಯಬಂದನೋ ವೇದ ವೇದ್ಯ ನೋಡೀಗಲೇ ಶ್ರೀದೇವಿ ರಮಣ ಶ್ರೀನಿವಾಸನೆಂಬೊ||ಅ.ಪ||
    ಎಷ್ಟೋ ದಿನದ ರೋಗಗಳೆಂ ಬೋದು ತಾಬಲ್ಲ
    ಗಟ್ಟಿಯಾಗಿ ಧಾತುರಸಗಳನೂ ಎಲ್ಲ
    ಕಷ್ಟಪಡಿಸದೆ ನಮ್ಮ ಭವರೋಗ ಕಳೆಯುವ
    ಶಿಷ್ಟವಾದ ದೇಹಕೊಟ್ಟು ಕಾಯುವ ನೀತ||೧||
    ಹೊನ್ನು ಹಣಂಗಳ ಅನ್ನುವ ಅನುಸರಿಸಿ
    ತನ್ನ ದಾಸನೆಂಬಿ ನಿಜವನ್ನು ನೋಡಿ
    ಚೆನ್ನಾಗಿ ಜಿಹೈಗೆ ಸ್ವಾದವಾಗಿರುವಂಥ
    ತನ್ನ ನಾಮಾಮೃತದಿವ್ಯ ಔಷಧವೀವ||೨||
    ಅನ್ಯವೈದ್ಯನೇಕೆ ಅನ್ಯಔಷಧವೇಕೆ
    ಅನ್ಯಮಂತ್ರ ತಂತ್ರ ಜಪವೇತಕೆ
    ಚಿನ್ನ ಪುರಂದರ ವಿಠ್ಠಲನ್ನ ನೆನೆದರೆ
    ಮನ್ನಿಸಿ ಸಲಹುವ ವೈದ್ಯಶಿರೋಮಣಿ||೩||

ความคิดเห็น • 4

  • @krhungund
    @krhungund 21 วันที่ผ่านมา +1

    ಸುಂದರ ಸುಮಧುರ ಪ್ರಸ್ತುತಿ...... ಅಜನಪಿತ ವಿಠಲದಾಸ

  • @sankarshancpshan4051
    @sankarshancpshan4051 21 วันที่ผ่านมา +1

    👏💯💯💯⭐⭐⭐👏👏👏⭐⭐⭐💯💯💯👏