ไม่สามารถเล่นวิดีโอนี้
ขออภัยในความไม่สะดวก

Tastiest Udupi Mango Curry/ರುಚಿಯುತ ಮತ್ತು ಸುಲಭವಾದ ಉಡುಪಿ ಶೈಲಿಯ ಮಾವಿನ ಹಣ್ಣಿನ ಸಿಹಿ ಗಸಿ

แชร์
ฝัง
  • เผยแพร่เมื่อ 23 เม.ย. 2024
  • Tastiest and Easiest Udupi Style Mango Curry Recipe
    Dive into the flavors of South India with this delectable Udupi style Mango Curry recipe! Join us as we guide you through the simple steps to create a mouthwatering curry that pairs perfectly with idli, dosa, chapatti, or rice. Let's get started!
    Ingredients:
    6 ripe small or medium mangos
    2-4 tbsp ghee or cooking oil (ghee recommended)
    1 tsp split gram
    1 tsp mustard seeds
    2 dry red chillies
    1 green chilli sliced
    ¼ tsp turmeric powder
    Curry leaves
    Small piece of jaggery or 2 tbsp jaggery powder
    Salt to taste
    ½ tsp fenugreek seeds powder
    ¼ tsp asafoetida powder
    Instructions:
    1. Wash and wipe six ripe small or medium mangoes. Remove the tip and skin, then squeeze the juice out of the mangos, keeping the seeds.
    2. Heat a kadai and add 2-4 tbsp of ghee or cooking oil. Ghee adds a richer flavor to the curry.
    3. Once the ghee is hot, add 1 tsp of split gram (chana dal) and sauté until they turn golden brown.
    4. Add 1 tsp of mustard seeds, 2 dry red chillies, one green chilli, and some curry leaves. Mix well.
    5. Sprinkle in ¼ tsp of turmeric powder and continue to mix the ingredients.
    6. Now, add the mango pulp along with the seeds into the kadai. Pour in 2-3 tbsp of water from the same vessel where you extracted the mango pulp. Mix everything well.
    7. Add a small piece of jaggery or 2 tbsp of jaggery powder, salt to taste, and ½ tsp of fenugreek seeds powder. Also, sprinkle in ¼ tsp of asafoetida powder.
    8. Adjust the consistency by adding ¼ cup of water if needed, but remember, thicker curry is better.
    9. Allow the curry to boil on low flame, mixing occasionally. Once it boils, mix well and let it boil again.
    10. Once ready, serve this tantalizing Udupi style Mango Curry with your favorite South Indian dishes like idli, dosa, chapatti, or rice.
    11. Enjoy the burst of flavors in every bite!
    Join us on this culinary adventure and discover the joy of traditional Udupi cuisine with this delightful Mango Curry recipe. Don't forget to comment, like, share, and subscribe for more delicious recipes!
    ರುಚಿಯುತ ಮತ್ತು ಸುಲಭವಾದ ಉಡುಪಿ ಶೈಲಿಯ ಮಾವಿನ ಹಣ್ಣಿನ ಗಸಿ
    ಈ ಅದ್ಭುತ ಉಡುಪಿ ಶೈಲಿಯ ಸಿಹಿಯಾದ ಮಾವಿನ ಹಣ್ಣಿನ ಗಸಿಯನ್ನು ಒಮ್ಮೆ ಮಾಡಿ ರುಚಿ ನೋಡಿದಲ್ಲಿ ಮತ್ತೆಂದೂ ನೀವು ಮಾವಿನ ಹಣ್ಣನ್ನು ನೇರವಾಗಿ ತಿನ್ನಲು ಇಷ್ಟಪಡಲಾರಿರಿ! ಅಷ್ಟೊಂದು ರುಚಿಕರವಾಗಿರುವುದು.
    ಬೇಕಾಗುವ ಸಾಮಗ್ರಿಗಳು:
    6 ಸಿಹಿ ಸಣ್ಣ ಅಥವಾ ಮಧ್ಯಮ ಗಾತ್ರದ ಮಾವಿನ ಹಣ್ಣುಗಳು
    4 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ (ತುಪ್ಪ ಉತ್ತಮ)
    1 ಟೀಸ್ಪೂನ್ ಉದ್ದಿನ ಬೇಳೆ
    1 ಅಥವಾ 1½ ಟೀಸ್ಪೂನ್ ಸಾಸಿವೆ
    2 ಒಣ ಕೆಂಪು ಮೆಣಸುಗಳು
    1 ಹಸಿರು ಮೆಣಸು ಚೆನ್ನಾಗಿ ಕತ್ತರಿಸಿದ್ದು
    ಸ್ವಲ್ಪ ಕರಿಬೇವು ಸೊಪ್ಪು
    ¼ ಟೀಸ್ಪೂನ್ ಅರಶಿನ ಹುಡಿ
    ಚಿಕ್ಕ ತುಂಡು ಬೆಲ್ಲ ಅಥವಾ 2-3 ಟೀಸ್ಪೂನ್ ಬೆಲ್ಲದ ಹುಡಿ
    ರುಚಿಗೆ ತಕ್ಕಷ್ಟು ಉಪ್ಪು
    ½ ಟೀಸ್ಪೂನ್ ಮೆಂತ್ಯ ಬೀಜದ ಹುಡಿ
    ¼ ಟೀಸ್ಪೂನ್ ಇಂಗು ಹುಡಿ
    ತಯಾರಿಸುವ ವಿಧಾನ:
    1. 6 ಸಿಹಿ ಸಣ್ಣ ಅಥವಾ ಮಧ್ಯಮ ಗಾತ್ರದ ಮಾವಿನ ಹಣ್ಣುಗಳನ್ನು ತೊಳೆದು, ಒರೆಸಿರಿ. ಅವುಗಳ ತೊಟ್ಟು ತೆಗೆದು, ಸಿಪ್ಪೆ ಸುಲಿಯಿರಿ.
    2. ನಂತರ ಅವುಗಳನ್ನು ಹಿಂಡಿ ರಸ ತೆಗೆಯಿರಿ. ಗೊರಟನ್ನು ಬಿಸಾಡದೆ ಜೊತೆಗೆ ಹಾಕಿಡಿ.
    3. ಸ್ಟವ್ ಮೇಲೆ ಒಂದು ಪಾತ್ರೆಯಿಟ್ಟು ಅದರಲ್ಲಿ 4 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ ಹಾಕಿ. (ತುಪ್ಪದ ಒಗ್ಗರಣೆ ತುಂಬಾ ರುಚಿಕರ ಮತ್ತು ಪರಿಮಳಯುಕ್ತ.)
    4. ತುಪ್ಪ ಸ್ವಲ್ಪ ಬಿಸಿಯಾದಾಗ, 1 ಟೀಸ್ಪೂನ್ ಉದ್ದಿನ ಬೇಳೆ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯುರಿ.
    5. ನಂತರ ಅದಕ್ಕೆ 1 ಟೀಸ್ಪೂನ್ ಉದ್ದಿನ ಬೇಳೆ, 1 ಅಥವಾ 1½ ಟೀಸ್ಪೂನ್ ಸಾಸಿವೆ ಬೀಜಗಳು, 2 ಒಣ ಕೆಂಪು ಮೆಣಸುಗಳು, 1 ಹಸಿರು ಮೆಣಸು ಚೆನ್ನಾಗಿ ಕತ್ತರಿಸಿದ್ದು, ಸ್ವಲ್ಪ ಕರಿಬೇವು ಸೊಪ್ಪು ಮತ್ತು ¼ ಟೀಸ್ಪೂನ್ ಅರಶಿನ ಪುಡಿ ಸೇರಿಸಿರಿ.
    6. ಈಗ, ಮಾವಿನ ಹಣ್ಣಿನ ರಸ ಮತ್ತು ಬೀಜಗಳನ್ನು ಅದಕ್ಕೆ ಸೇರಿಸಿ, ಬೆರೆಸಿ. ರಸದ ಪಾತ್ರೆಗೆ 2-3 ಚಮಚ ನೀರು ಹಾಕಿ ಕಲಸಿ ಆ ನೀರುನ್ನೂ ಸ್ಟವ್ ಮೇಲಿನ ಪಾತ್ರೆಗೆ ಸೇರಿಸಿ ಚಿನ್ನಾಗಿ ಬೆರೆಸಿ.
    7. ನಂತರ ಚಿಕ್ಕ ತುಂಡು ಬೆಲ್ಲ (ಅಥವಾ 2-3 ಟೀಸ್ಪೂನ್ ಬೆಲ್ಲದ ಹುಡಿ), ರುಚಿಗೆ ತಕ್ಕಷ್ಟು ಉಪ್ಪು, ½ ಟೀಸ್ಪೂನ್ ಮೆಂತ್ಯದ ಹುಡಿ, ¼ ಟೀಸ್ಪೂನ್ ಇಂಗು ಹುಡಿ ಸೇರಿಸಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
    8. ಬೇಕಾದಲ್ಲಿ, ¼ ಕಪ್ ನೀರನ್ನು ಹಾಕಿ ಚೆನ್ನಾಗಿ ಬೆರೆಸಿ. ಆದರೆ ಪದಾರ್ಥ ದಪ್ಪವಿದ್ದಷ್ಟು ಉತ್ತಮ.
    9. ಕಡಿಮೆ ಉರಿಯಲ್ಲಿ ಚೆನ್ನಾಗಿ ಕುದಿಸಿ. ಬೆನ್ನಾಗಿ ಬೆರೆಸಿ ಪುನಃ ಇನ್ನೊಂದು ಕುಡಿ ಬರಲಿ.
    10. ಈಗಂತೂ ನಿಮ್ಮ ಅದ್ಭುತ ಉಡುಪಿ ಶೈಲಿಯ ಮಾವಿನ ಹಣ್ಣಿನ ಗಸಿ ರೆಡಿ. ಇದನ್ನು ನಿಮ್ಮ ನೆಚ್ಚಿನ ಇಡ್ಲಿ, ದೋಸೆ, ಚಪಾತಿ, ಅನ್ನದ ಜೊತೆ ಅಥವಾ ಕಾಲಿ ಬಾಯಿಗೂ ತಿನ್ನಬಹುದು. ಅತ್ಯಂತ ರುಚಿಕರ ಮಾತ್ರವಲ್ಲ ಆರೋಗ್ಯಕರವೂ ಹೌದು. ತಯಾರಿಸಿ ಸವಿದ ಬಳಿಕ ಕಮೆಂಟ್ ಮಾಡಿ, ಈ ವಿಡಿಯೊವನ್ನು ಲೈಕ್ ಮಾಡಿ, ನಿಮ್ಮ ಆಪ್ತರೊಂದಿಗೆ ಶೇರ್ ಮಾಡಿ.

ความคิดเห็น • 6

  • @leelaswamy1834
    @leelaswamy1834 หลายเดือนก่อน +1

    Nice

  • @leelaswamy1834
    @leelaswamy1834 หลายเดือนก่อน +1

    Looked an i am going try 🙏

  • @hemafernandes9192
    @hemafernandes9192 3 หลายเดือนก่อน +1

    Yummy❤❤❤

  • @prabhamanip4583
    @prabhamanip4583 3 หลายเดือนก่อน

    ಹುಳಿ ಮಾವಿನ ಹಣ್ಣಾ ಅಥವಾ ಸಿಹಿಯಾದ ಹಣ್ಣಾ ತಿಳಿಸಿ
    Thanks for sharing good recipe

    • @joachimpinto
      @joachimpinto 3 หลายเดือนก่อน

      ಸಿಹಿಯಾದ ಮಾವಿನ ಹಣ್ಣೇ ಉತ್ತಮ. ನಾನು ತಯಾರಿಸಿ ರುಚಿ ನೋಡಿದೆ. ತುಂಬಾ ರುಚಿಕರ. ಮಾವಿನ ಹಣ್ಣು ಹುಳಿಯಾಗಿದ್ದಲ್ಲಿ ಬೆಲ್ಲ ಜಾಸ್ತಿ ಸೇರಿಸಬೇಕಾಗುತ್ತದೆ...

    • @joachimpinto
      @joachimpinto 3 หลายเดือนก่อน

      ಮಾವಿನ ಹುಳಿ ಸಾರು Mavinakayi saaru | Raw mango rasam ಬೇಕಾದಲ್ಲಿ ಇಲ್ಲಿ ನೋಡಿ: th-cam.com/video/Zmy_-rS5RtM/w-d-xo.html