Innastu Bekenna Hrudayakke Rama| Shashikala Sunil | Gajanana Sharma | Arun Andrew |Sharan Hiremat

แชร์
ฝัง
  • เผยแพร่เมื่อ 21 ม.ค. 2024
  • Lyrics :- Sri Gajanana Sharma
    Programming, Mixing & Mastering :- Arun Andrew
    Camera :- Sharan Hiremat
    Editing :- Sunil
    ಶ್ರೀರಾಮ ರಾಮ ರಾಮೇತಿ ರಾಮೇ ರಾಮೇ ಮನೋರಮೇ ।
    ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ॥
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    (ರಾಮ ರಾಮ ರಾಮ ರಾಮ)
    ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|
    ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
    ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
    ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
    ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
    ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    (ರಾಮ ರಾಮ ರಾಮ ರಾಮ)
    ಒಳಿತಿನೆಡೆ ಮುನ್ನೆಡೆವ ಮನವಕೊಡು‌ ರಾಮ|
    ಸೆಳೆತಕ್ಕೆ ಸಿಗದಂಥ ಸ್ಥಿರತೆ ಕೊಡು ರಾಮ|
    ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
    ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|..
    ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
    ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
    ಕಣ್ಣು ಕಳೆದರು ನಿನ್ನ ಕನಸ ಕೊಡು ರಾಮ|
    ನನ್ನ ಮರಣಕೆ ನಿನ್ನ ಚರಣ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    (ರಾಮ ರಾಮ ರಾಮ ರಾಮ)
    ಕೌಸಲ್ಯೆಯಾಗುವೆನು ಮಡಿಲಲಿರು ರಾಮ|
    ವೈದೇಹಿಯಾಗುವೆನು ಒಡನಾಡು ರಾಮ|
    ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
    ಸಹವಾಸ ಕೊಡು ನಾನು ಸೌಮಿತ್ರಿ ರಾಮ|
    ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
    ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
    ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
    (ರಾಮ ರಾಮ ರಾಮ ರಾಮ)
    ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|
    ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
    ನಾ ವಿಭೀಷಣ ಶರಣು ಭಾವ ಕೊಡು ರಾಮ|
    ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
    ಕಣ್ಣೀರು ಕರೆಯುವೆನು ನನ್ನ ತನ ಕಳೆ ರಾಮ|
    ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
    (ರಾಮ ರಾಮ ರಾಮ ರಾಮ)
    ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
    ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
    ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
    ಪೂರ್ಣ ನೀ ಪ್ರಕಟ ನೀ ಆನಂದ ರಾಮ|
    ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
    ಗುರು ನೀನೆ ಗುರಿ ನೀನೆ ಅರಿವು ನೀ ರಾಮ|
    ರಘುರಾಮ ರಘುರಾಮ ರಘುರಾಮ ರಘುರಾಮ|
    ನಗುರಾಮ ನಗರಾಮ ಜಗರಾಮ ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
  • เพลง

ความคิดเห็น • 758

  • @TharaSathya
    @TharaSathya 19 วันที่ผ่านมา +11

    ತಾಯಿ, ಒಂದು ಕ್ಷಣದಲ್ಲಿ ರಾಮ ಲೋಕವೇ ಸೃಷ್ಟಿಸಿದಂತೆ ಆಯಿತು

  • @basha7751
    @basha7751 5 หลายเดือนก่อน +244

    ಈ ಜನ್ಮದಲ್ಲಿ ರಾಮನ ಈ ಗೀತೆ ಕೇಳಿ ನನ್ನ ಜನ್ಮ ಪಾವನ ಆಯಿತು. ಇಂತ ಒಂದು ಗೀತೆ ರಚಿಸಿದವರಿಗೂ, ಹಾಡಿದವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಜೈ ಶ್ರೀ ರಾಮ 🙏

    • @sowmyab435
      @sowmyab435 3 หลายเดือนก่อน +15

    • @educationandcricketareagoo1168
      @educationandcricketareagoo1168 3 หลายเดือนก่อน

      T😅😅😅😅😅😅😅😅😅😅😅😅😅😅😅😅😅😅😅😅😅😅❤

    • @lokeshn3045
      @lokeshn3045 2 หลายเดือนก่อน

      😊❤​@@sowmyab435

    • @pushpar4423
      @pushpar4423 2 หลายเดือนก่อน +4

      🙏🙏 jai shree ram🙏🙏

    • @anumallikanumallik675
      @anumallikanumallik675 2 หลายเดือนก่อน +1

      ಜೈ ಶ್ರೀರಾಮ್

  • @lakshmims8500
    @lakshmims8500 2 หลายเดือนก่อน +31

    ಒಂದೊಂದು ಪದ, ವಾಕ್ಯ ರಚನೆ ಅದ್ಭುತ.ಹಾಡುತ್ತಿರುವವರು ಭಾವ ಭಕ್ತಿ ಯಿಂದ ಹಾಡುತ್ತಿರುವವರು ಅದಕ್ಕೆ ತಕ್ಕಂತೆ music ಎಲ್ಲವೂ ಸೊಗಸಾಗಿದೆ.ಮತ್ತೊಮ್ಮೆ ಮೊಗದೊಮ್ಮೆ ಕೇಳ ಬೇಕೆನಿಸುವ ಹಾಡು. ಎಲ್ಲರಿಗೂ ಧನ್ಯವಾದಗಳು

  • @chandrashekarhebbar4955
    @chandrashekarhebbar4955 5 หลายเดือนก่อน +51

    ಅಹಂಕಾರ, ಹೊಟ್ಟೆಕಿಚ್ಚು, ನೋವು,ಮನದ ಚಿಂತೆ ಗಾಯನ ಕೇಳುತ್ತಿದ್ದಂತೆ ಕರಗಿ, ಹಾಡನ್ನು ಮತ್ತೆ ಮತ್ತೆ ಕೇಳಬೇಕೆನಿಸಿತು...

  • @nagamahadevishanthi2856
    @nagamahadevishanthi2856 หลายเดือนก่อน +11

    ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ 💐💐💐🙏🙏🙏🙏🙏

  • @kalpanahegde4880
    @kalpanahegde4880 5 หลายเดือนก่อน +93

    ರಾಮಾಯಣದ ಪ್ರತಿಯೊಂದು ಪಾತ್ರವನ್ನೂ ಪರಿಚಯಿಸುವ, ಭಕ್ತಿ ಭಾವವನ್ನು ಪ್ರೇರೇಪಿಸುವ ಈ ಅದ್ಭುತ ಸಾಹಿತ್ಯಕ್ಕೂ ಸಾಹಿತಿಗೂ ನೂರೊಂದು ನಮನ 🙏🙏🙏🙏🙏🙏🙏
    ಭಕ್ತಿ ಭಾವದಿಂದ ಸುಮಧುರವಾಗಿ ಹಾಡಿದವರಿಗೂ ಹೃದಯ ಪೂರ್ವಕ ನಮನ 🙏🙏

  • @user-mj4jq2my5b
    @user-mj4jq2my5b 23 วันที่ผ่านมา +13

    ವ್ಹಾವ್...... One of my favorite song...... Nim voice alli bhakthi bhava... Tumbi banda e song... ಕೇಳಿದವರ ಜನ್ಮ ನಿಜಕ್ಕೂಸಾಥ೯ಕ... ಸಹೋದರಿ...... ಆ ಭಗವ೦ತ ನಿಮ್ಮ ಚೆನ್ನಾಗಿಟ್ಟಿರಲಿ........ 🙏

  • @shivakumardoddur4688
    @shivakumardoddur4688 5 หลายเดือนก่อน +81

    ನನ್ನ ಅಂತಿಮ ಉಸಿರು ಶ್ರೀ ರಾಮ ಪದದೊಂದಿಗೆ ಮುಕ್ತಾಯವಾಗಲಿದೆ ಎಂಬುವುದು ನನ್ನ ತೀರ್ಮಾನ.

    • @shikubellpatil9454
      @shikubellpatil9454 3 หลายเดือนก่อน +3

      My most favorite song

    • @shailashreebiradara8851
      @shailashreebiradara8851 2 หลายเดือนก่อน +2

      ❤❤❤❤

    • @manjunathj5098
      @manjunathj5098 2 หลายเดือนก่อน

      🎉 very nice song and lyrics so nice voice thank you

    • @shashrees4822
      @shashrees4822 19 วันที่ผ่านมา

      😊😊😊😊😊😊😊😊😊😊😊😊😊😊😊😊​@@shikubellpatil9454

  • @easwaram2041
    @easwaram2041 5 หลายเดือนก่อน +51

    ರಾಮನ ಜತೆ ಐಕ್ಯವಾಗ ಬಹುದಾದ ಮಾಧುರ್ಯತೆ ಇರುವ ಅನುರೂಪದ ಗೀತೆ ❤
    ಗಜಾನನ ಶರ್ಮ ರವರಿಗೆ & ಗಾಯಕರಿಗೆ 🙏

    • @devarajust3
      @devarajust3 4 หลายเดือนก่อน +2

      😊😊😊😊😊😊😊😊😊

  • @rameshv3817
    @rameshv3817 หลายเดือนก่อน +11

    ಉತ್ತಮ ಹಾಡು,ಸಂಗೀತ, ಒಮ್ಮೆ ಕೇಳಿದರೆ ಸಾಕು ಮನಸ್ಸು ಹಿತಾವಾಗುತ್ತೆ ,🌺🙏🌺 ಜೈ ಶ್ರೀರಾಮ 🌺🙏🌺

  • @cherrycreations570
    @cherrycreations570 2 หลายเดือนก่อน +10

    ಎಲ್ಲವನ್ನು ಮೀರಿಸಿದ್ದು ನಿಮ್ಮ ಭಕ್ತಿ, ಭಾವ..... ರಾಗ ಸೌಂದರ್ಯ,

  • @MADHUBK-yg3ju
    @MADHUBK-yg3ju 26 วันที่ผ่านมา +3

    Jai Rama shree Rama Jai jai Rama

  • @esquireprinters4424
    @esquireprinters4424 25 วันที่ผ่านมา +4

    Shree ram jai Ram Jai Ram Jai Jai
    Excellent voice 👍👍👍👍

  • @kumarprince988
    @kumarprince988 5 หลายเดือนก่อน +20

    ಅತ್ಯದ್ಭುತ ಸಾಹಿತ್ಯ ಅದಕ್ಕೆ ತಕ್ಕ ಸಂಗೀತ 🚩ಜೈ ಶ್ರೀರಾಮ 🚩

  • @royalshastri.t1065
    @royalshastri.t1065 5 หลายเดือนก่อน +27

    ನೀವು ಹಾಡುತ್ತಿದ್ದರೆ ನಮ್ಮ ಕಣ್ಣಲ್ಲಿ ನೀರು,ಮನಸಲ್ಲಿ ರಾಮನಾಮ,ಅಯೋಧ್ಯೆ ಬಾಲರಾಮನ ಕಾಣೋ ಆಸೆ ಆಗುತ್ತಿದೆ ಮೇಡಂ ಧನ್ಯವಾದಗಳು ನಿಮಗೆ ಶರಣು ಶರಣಾರ್ಥಿ🙏🙏🙏🙏🙏🙏

  • @SantoshKonnur-du4zc
    @SantoshKonnur-du4zc 2 หลายเดือนก่อน +7

    ಸೂಪರ್ ಮೇಡಂ ತುಂಬಾ ಚೆನ್ನಾಗಿದೆ ❤❤❤❤❤🙏🙏🙏🙏🙏👌👌👌👌👌

  • @santoshkannadachannel1010
    @santoshkannadachannel1010 5 หลายเดือนก่อน +15

    ಈ ಗೀತೆ ರಚೀಸಿದವರೀಗೆ ಮತ್ತು ನೀಮ್ಮಗೆ ಹೃತ್ಪೂರ್ವಕ ಧನ್ಯವಾದಗಳು ಜೈ ಶ್ರೀರಾಮ

  • @anilj1952
    @anilj1952 2 หลายเดือนก่อน +7

    ಜೈ ಶ್ರೀ ರಾಮ್, ಜೈ ಶ್ರೀ ರಾಮ್, ಜೈ ಶ್ರೀ ರಾಮ್,

  • @lingarajagoudaspatilhaveri8809
    @lingarajagoudaspatilhaveri8809 4 หลายเดือนก่อน +8

    ಎಸ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನುಸುವ ಅದ್ಭುತ ಸಾಹಿತ್ಯ ಹಾಗೂ ಸಂಗಿತ, ನಿಮ್ಮ ಭವಿಷ್ಯ ಉಜ್ವಲವಾಗಲಿ , ಜೈ ಶ್ರೀ ರಾಮ 🙏

  • @mahadevbasavannisollapure146
    @mahadevbasavannisollapure146 2 หลายเดือนก่อน +3

    ಜೈ ಶ್ರೀರಾಮ್ ಒಳ್ಳೆಯ ಸುಮಧುರ ಕಂಠದ ಪ್ರಭು ಶ್ರೀರಾಮ್ ಭಕ್ತಿಗೀತೆ ನಿಮಗೆ ಒಳ್ಳಯದಾಗಲಿ ಮೇಡಮ್

  • @kaggeppak9530
    @kaggeppak9530 4 หลายเดือนก่อน +3

    ಎಂತ ಅದ್ಬುತ ಸಾಹಿತ್ಯ & ಸಂಗೀತ & ಸುಶ್ರಾವ್ಯ ದ್ವನಿಯಲ್ಲಿ ಬಂದ ಹಾಡು ಅದ್ಬುತ ಹೃದಯ ತುಂಬಿತು.

  • @subhashss-yg2wu
    @subhashss-yg2wu 5 หลายเดือนก่อน +25

    ಅದ್ಬುತ ಹಾಡು ಸ್ವರವು ಬಹಳ ಇಂಪಾಗಿದೆ.ದೇವರ ಮೇಲೆ ಭಕ್ತಿ ಇಲ್ಲದವರನ್ನು ಭಕ್ತಿ ಮಾರ್ಗದ ಕಡೆ ಆಕರ್ಷಿಸುವಂತೆ ಸೂಪರ್ ❤

    • @pawanrathi7257
      @pawanrathi7257 4 หลายเดือนก่อน +3

      जय श्री राम 🙏🙏

    • @Vijayanthi-ez9lk
      @Vijayanthi-ez9lk 3 หลายเดือนก่อน

      ​@@pawanrathi7257kyat² se hy hu see my bi

  • @RaviKiran-ju4ed
    @RaviKiran-ju4ed 5 วันที่ผ่านมา +1

    ಶ್ರೀ ರಾಮ್ ಜಯ ರಾಮ್... ನಿಮ್ಮ ಅಧ್ಬುತ ಗಾಯನದಲ್ಲಿ ಪ್ರಭು ಶ್ರೀ ರಾಮನ ಆರಾಧನೆ ಕೇಳಿ ಸಂತೋಷವಾಯಿತು. ಎಂಥ ಅಧ್ಬುತ ಗಾಯನ ಧನ್ಯವಾದಗಳು ಮೇಡಂ❤ ಮತ್ತೇ ಮತ್ತೇ ಕೇಳಬೇಕು ಎಂದೆನಿಸುತ್ತಿದೆ ಈ ಮನಸ್ಸು.. ❤ ಜೈ ಶ್ರೀ ರಾಮ...

  • @puttaswamyg2560
    @puttaswamyg2560 หลายเดือนก่อน +3

    JAI SRIRAM JAI MARUTHI JAI SRIRAM JAI MARUTHI JAI SRIRAM JAI MARUTHI 🙏

  • @user-nl8ff7vh8d
    @user-nl8ff7vh8d 2 หลายเดือนก่อน +2

    Jai Sri Ram

  • @nanjappan2187
    @nanjappan2187 5 หลายเดือนก่อน +14

    🙏🙏 ಜೈ ಶ್ರೀ ರಾಮ್. ಒಳ್ಳೆ ಮಾರ್ಗದಲ್ಲಿ ನಡೆಯುವವರಿಗೆ ಒಳ್ಳೆಯದನ್ನೇ ಮಾಡು ದೇವರೇ

  • @adityaarushi6508
    @adityaarushi6508 5 หลายเดือนก่อน +25

    ರಾಮ ಇದ್ದಾನೆ ಇಲ್ಲವೇ ಗೊತ್ತಿಲ್ಲ ಆದರೆ ನಿಮ್ಮ voice ಅಲ್ಲಿ ಆ ದೇವರು ಇದ್ದಾನೆ,,, ಮನಸು ಏನೇ ಗೊಂದಲ ಇದ್ದರು ಇದನ್ನ ಕೇಳಿ ಸಮಾಧಾನ ಆಯ್ತು, ಶಶಿಕಲಾ ma'am ಧನ್ಯವಾದಗಳು

    • @Chandra-le8dq
      @Chandra-le8dq 2 หลายเดือนก่อน

      ಹಾಗಾದರೆ ದೇವರು ಇದ್ದಾನ?
      ರಾಮ ಇಲ್ಲವೆಂದು ಹೇಳಿದ ಕಾಂಗ್ರೆಸ್ ದೇಶದಲ್ಲಿ ಇಲ್ಲವಾಗಿದೆ

  • @SunithaSunitha-tk8lo
    @SunithaSunitha-tk8lo หลายเดือนก่อน +7

    ಜೈಶ್ರೀ ರಾಮ್ ಜೈಶ್ರೀ ರಾಮ್

  • @basupadasalagi8343
    @basupadasalagi8343 หลายเดือนก่อน +2

    Jai shree ram Jai Hanuman

  • @malathisshettyshetty5129
    @malathisshettyshetty5129 2 หลายเดือนก่อน +4

    ಶ್ರೀ ರಾಮರಿಗೂ.
    ಶ್ರೀ ರಾಮ ಭಕ್ತೆ....ಗೂ ಪ್ರಣಾಮಗಳು...💐🙏🙏🙏🙏🙏💐💐💐💐

  • @ShrutikashinathKadeshgol
    @ShrutikashinathKadeshgol 10 วันที่ผ่านมา +1

    ಈ ಹಾಡು ಕೇಳಿದ ತಕ್ಷಣ ನನ್ನ ಮನಸ್ಸು ಹಗುರವಾಗಿದೆ ಎಂದು ಅನಿಸುತ್ತದೆ. ಈ ಹಾಡನ್ನು ಹಾಡಿದ ಮತ್ತು ಬರೆದವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು .❤

  • @Janerojeeva
    @Janerojeeva หลายเดือนก่อน +2

    Jai sri ram supar song🎶🙏🙏🎤

  • @jashwanthrock3773
    @jashwanthrock3773 3 หลายเดือนก่อน +2

    Jai shree Ram ❤❤❤❤❤

  • @BharathVasistau-ve6yi
    @BharathVasistau-ve6yi 5 หลายเดือนก่อน +65

    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ರಾಮ ರಾಮ ರಾಮ ರಾಮ
    ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|
    ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
    ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
    ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
    ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
    ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಒಳಿತಿನೆಡೆ ಮುನ್ನೆಡೆವ ಮನವಕೊಡು‌ ರಾಮ|
    ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
    ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
    ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|
    ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
    ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
    ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
    ನನ್ನ ಹರಣಕೆ ನಿನ್ನ ಚರಣ ಕೊಂಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಕೌಸಲ್ಯೆಯಾಗುವೆನು ಮಡಿಲಲಿರು ರಾಮ|
    ವೈದೇಹಿಯಾಗುವೆನು ಒಡನಾಡು ರಾಮ|
    ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
    ಸಹವಾಸ ಕೊಡು ನನಗೆ ಸೌಮಿತ್ರಿ ರಾಮ|
    ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
    ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
    ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|
    ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
    ನಾ ವಿಭೀಷಣ ಶರಣುಭಾವ ಕೊಡು ರಾಮ|
    ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
    ಕಣ್ಣೀರು ಕರೆಯುವೆನು ನನ್ನತನ ಕಳೆ ರಾಮ|
    ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
    ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
    ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
    ಪೂರ್ಣ ನೀ ಪ್ರಕಟ ನೀ ಆನಂದ ರಾಮ|
    ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ರಘುರಾಮ ರಘುರಾಮ ರಘುರಾಮ ರಘುರಾಮ|
    ನಗುರಾಮ ನಗರಾಮ ಜಗರಾಮ ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    🎉🎉🎉🎉 9:38 🎉🎉🎉🎉 Shashikala Sunil sister

    • @JayaLakshmi-tg3pb
      @JayaLakshmi-tg3pb 5 หลายเดือนก่อน +2

      ❤❤❤❤

    • @sujathaer1746
      @sujathaer1746 5 หลายเดือนก่อน +2

      Thank u very much!

    • @k.v.kumaraswamy-fg8jb
      @k.v.kumaraswamy-fg8jb 3 หลายเดือนก่อน +1

      Peace full song

    • @basavaraj2600
      @basavaraj2600 3 หลายเดือนก่อน +1

      ನಿಮಗೆ ಧನ್ಯವಾದಗಳು

    • @prabhakark5503
      @prabhakark5503 2 หลายเดือนก่อน +1

      ಅದ್ಭುತ ರಚನೆ ಮತ್ತು ಹಾಡುಗಾರಿಕೆ ಧನ್ಯವಾದ ಸಹೋದರಿ

  • @GurappaIti
    @GurappaIti 2 หลายเดือนก่อน +2

    ರಾಮನೇ prathyxavadanthaithu Namasthe❤❤❤

  • @sunilgowda7526
    @sunilgowda7526 2 หลายเดือนก่อน +2

    Jai Shree Rama ❤️🚩🙏

  • @VidyashreeGane
    @VidyashreeGane 2 หลายเดือนก่อน +3

    🙏🙏 Jai Shree Ram 🙏🙏

  • @sailakshmanr5457
    @sailakshmanr5457 2 หลายเดือนก่อน +3

    🌹🙏🌹 ಜೈ ಶ್ರೀ ರಾಮ್ 🙏ಓಂ ಸಾಯಿ ರಾಮ್ 🌹🙏🌹

  • @naliniparamashiva7542
    @naliniparamashiva7542 4 หลายเดือนก่อน +4

    ನೀವು ಹಾಡಿದ ಹಾಡು ಕೇಳಿದ್ದು ಇದೇ ಮೊದಲು ತುಂಬಾ ಚೆನ್ನಾಗಿ ಹಾಡಿದಿಯಮ್ಮ ದೇವರು ನಿನಗೆ ಒಳ್ಳೆಯದನ್ನು ಮಾಡಲಿ

  • @user-pj4se9ip7r
    @user-pj4se9ip7r 9 วันที่ผ่านมา +1

    Jai..Sshri.Raama..jai.jai..shri.raam.❤❤❤🎉🎉🙏🙏

  • @user-ew5ys7pr5v
    @user-ew5ys7pr5v 2 หลายเดือนก่อน +2

    Jai shree Rama

  • @siddalingappajakkali9530
    @siddalingappajakkali9530 6 หลายเดือนก่อน +8

    ಸೂಪರ್ ಮೇಡಂ ತುಂಬಾ ಚೆನ್ನಾಗಿದೆ ನೀವು ಹಾಡುವ ಹಾಡು ಕೇಳಿದರೆ ಮೈ ರೋಮಾಂಚನ ಆಗುತ್ತೆ ರಾಮನ ದರ್ಶನ ಕೂಡ ಅಷ್ಟೇ

  • @girishsk8227
    @girishsk8227 5 หลายเดือนก่อน +15

    ತುಂಬ ಚನ್ನಾಗಿ ಹಾಡಿದಿರಿ, ಜೈ ಶ್ರೀ ರಾಮ್

    • @pawanrathi7257
      @pawanrathi7257 4 หลายเดือนก่อน +1

      जय श्री राम 🙏🙏

  • @vimalakshiananthapadmanabh9815
    @vimalakshiananthapadmanabh9815 5 หลายเดือนก่อน +9

    11:05 ಈ ಹಾಡು ಮತಷ್ಟ ಮತಷ್ಟ ಕೇಳಬೇಕು ರಾಮ ಈ ಹೃದಯದಿ ನೆಲೆಯಾರು ರಾಮ

  • @Sharankumar-vv5jy
    @Sharankumar-vv5jy 6 หลายเดือนก่อน +17

    ನೋಡುವುದಕ್ಕೂ ಚೆನ್ನಾಗಿದ್ದೀರಾ..ಗಾಯನವು ಪರಿಶುದ್ದವಾಗಿದೆ...❤ ಸಹೋದರಿ

  • @savithan5772
    @savithan5772 5 หลายเดือนก่อน +4

    ಜೈ ಶ್ರೀರಾಮ್ ಎಲ್ಲರಿಗೂ ಒಳ್ಳೆಯದು ಮಾಡು ರಾಮ

  • @user-vq6mw8im4r
    @user-vq6mw8im4r หลายเดือนก่อน +2

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @NagarajuNagaraju.B-gm9xp
    @NagarajuNagaraju.B-gm9xp 5 หลายเดือนก่อน +5

    ಆಯೋ ಧ್ಯ ಸುಂದರ ದೇವಾ ಲಯ.
    ಸಾಹಿತ್ಯ ಸುಂದರ
    ಹಾಡಿರುವ ವ ರು ಸುಂದರ
    ರಾಮ ರಾಮ ರಾಮ 🙏

  • @shashikumarbm5704
    @shashikumarbm5704 2 หลายเดือนก่อน +3

    ನನಗೆ ತುಂಬಾ ಇಷ್ಟವಾದ ಹಾಡು

  • @esquireprinters4424
    @esquireprinters4424 2 หลายเดือนก่อน +4

    Excellent voice super duper

  • @ManjuGowda-ss3wp
    @ManjuGowda-ss3wp หลายเดือนก่อน +3

    ಕಲ್ಪನೆ,ರಚನೆ, ಗಾಯನ ಎಲ್ಲವೂ ಅದ್ಭುತ..... ಸರ್ವರಿಗೂ ನನ್ನ ಸಾಷ್ಟಾಂಗ ನಮನಗಳು🙏

  • @esquireprinters4424
    @esquireprinters4424 2 หลายเดือนก่อน +3

    Jai Shree Ram Jai Ram Jai Jai shree Ram Jai Jai

  • @manjunathrn6105
    @manjunathrn6105 5 หลายเดือนก่อน +8

    What a beautiful Sri RAMA’ s song and proud to say that I worked with Sri Gajanan Sharma.

  • @sarojshah5484
    @sarojshah5484 5 หลายเดือนก่อน +5

    Ninnathe ninna ea haadu kooda sundaravagide magale Ramana daye sada ninna melirali kanda🙏🙏🙏

  • @hemalatakulkarni3527
    @hemalatakulkarni3527 5 หลายเดือนก่อน +10

    ❤❤❤❤❤❤tq so much🙏🙏🙏🙏🙏🙏🙏🙏 for🏆🎉🏆 giving nice lyric literature shashikala singer 🎤also 2:04

  • @anumallikanumallik675
    @anumallikanumallik675 2 หลายเดือนก่อน +3

    ಜೈ ಶ್ರೀರಾಮ್ ಜೈ ಜಾನಕೀ ರಾಮ ಜೈ ಶ್ರೀ ಹನುಮಾನ್

  • @vkp654
    @vkp654 10 วันที่ผ่านมา +4

    ಇಂತಹ ಆನಂದಕ್ಕೆ ಏನೆಂದು ಹೇಳಲಿ, ಮಾತು ಬಾರದಾಗಿದೆ ಮನಸು ಮೌನಿ ಯಾಗೀದೆ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ ಆನಂದ ಕೊನೇಯೇ ಇಲ್ಲ ಸಂತೋಷ ಕುಕ್ಕೆ,,,,,

  • @user-gw9nh4qk2n
    @user-gw9nh4qk2n 2 หลายเดือนก่อน +1

    Jai shreeram ,,,,mam nim voice 🙏🙏👌

  • @sachinsachinuh3709
    @sachinsachinuh3709 5 หลายเดือนก่อน +3

    Jai Shree Ram Jai Hanuman😊😊🕉🕉🤗🤗🙏🙏❤❤🌞🌞🥰🥰🚩🚩

  • @sudhakarpandari468
    @sudhakarpandari468 6 หลายเดือนก่อน +84

    ಈ ಸಾಹಿತ್ಯ ಬರೆದವರಿಗೆ 🙏🙏🙏🙏🙏🙏🙏🙏 ಇವರ ಸಾಹಿತ್ಯ ಅಯೋಧ್ಯೆಯಲ್ಲಿ ಸ್ಥಾಪನೆಗೊಂಡ ಬಾಲ ರಾಮನಷ್ಟೇ ಸುಂದರವಾಗಿದೆ💐💐💐

    • @sudha.k.hegde.584
      @sudha.k.hegde.584 5 หลายเดือนก่อน +3

      Shri Gajanan Sharma ❤❤ wrote this song....

    • @sudhakarpandari468
      @sudhakarpandari468 5 หลายเดือนก่อน +2

      👌🙏🙏

    • @ManjulaManjula-nc5fl
      @ManjulaManjula-nc5fl 5 หลายเดือนก่อน +2

      😊

    • @laxmisannakki4719
      @laxmisannakki4719 5 หลายเดือนก่อน +1

      Tq.....very wonderful , amazing lirics..... melodious singing...🎉🎉🙏🙏💐💐

    • @sharanappac
      @sharanappac 5 หลายเดือนก่อน +1

      🎉 good​@@sudha.k.hegde.584

  • @pushpalathamr2427
    @pushpalathamr2427 3 หลายเดือนก่อน +1

    Jai shree Rama,no words 🙏🏻🙏🏻🙏🏻

  • @shankarak5491
    @shankarak5491 3 หลายเดือนก่อน +3

    ಭಕ್ತಿ ಭಾವದೊಂದಿಗೆ ಅಯೋಧ್ಯಾ ಯಾನ..... ಬರೀ 11:05 ನಿಮಿಷಗಳಲ್ಲಿ.... ಕೋಪ ತಾಪಗಳ ಶಮನ ನಿಶ್ಚಿತ... ಜೀವಿತಾವಧಿ ವೃದ್ಧಿ ಖಚಿತ..... ಶಶಿಕಲಾ ಮೇಡಂರವರಿಗೆ ಧನ್ಯವಾದಗಳು... ಅಧ್ಭುತ ಕಂಠ ಸಿರಿ 👌👌👌💐💐... ಸದಾ ಹಸನ್ಮುಖಿ ಸರಿಗಮಪ ಗ್ರ್ಯಾಂಡ್ ಜ್ಯೂರಿ ತಂಡದ ಪ್ರತಿಭೆ 💐💐💐🙏🙏

  • @niranjanrgowda9796
    @niranjanrgowda9796 หลายเดือนก่อน +1

    Enamma thayei ninna hadu,no words,bava,bhakti,hurdya,thumbi hadida hadu,sharanu thayei ninga

  • @malajaiganapatyenamahababu777
    @malajaiganapatyenamahababu777 หลายเดือนก่อน +2

    Jai shree Rama🙏🙏

  • @rukminibhashyam3943
    @rukminibhashyam3943 5 หลายเดือนก่อน +5

    ಬಹಳ ಸೊಗಸಾಗಿ ಹಾಡಿದ್ದೀರಿ ಎಷ್ಟು ಕೇಳಿದರೂ ಮತ್ತಷ್ಟು ಕೇಳುವ ಹಂಬಲ

  • @venkateshdvenkateshd7958
    @venkateshdvenkateshd7958 4 หลายเดือนก่อน +2

    🙏🕉️ ಜೈ ಶ್ರೀ ರಾಮ್ ಹೃದಯಕ್ಕೆ ಮುಟ್ಟುವ ಹಾಡು ನಿಮಗೆಧನ್ಯವಾದಗಳು 🌹🌺🌹🛕

  • @sujathaalabnoor9986
    @sujathaalabnoor9986 2 หลายเดือนก่อน +1

    Rama rama rama rama rama rama ❤😍😍😍🙏🙏🙏🙏🙏🙏🙏🙏🙏

  • @radhaprasadhbangari6126
    @radhaprasadhbangari6126 หลายเดือนก่อน +2

    Super mansige thumba athiravaythu ❤️❤️🥰🙏🙏

  • @dharmarajsheeranahalli5440
    @dharmarajsheeranahalli5440 4 หลายเดือนก่อน +8

    Jai sri RAM jai hanuman 😍😍🥰😍❤🎉

    • @pawanrathi7257
      @pawanrathi7257 4 หลายเดือนก่อน +1

      जय श्री राम 🙏🙏

  • @satishkumars9473
    @satishkumars9473 4 หลายเดือนก่อน +2

    ನಿಮ್ಮ ಗಾನ ಕೇಳಿ ಮನಸೋತಿದೆ ಹೀಗೆ ಯೇ ಮುಂದುವರಿಯಲೀ ಎಂದು ಹಾರೈಸುವೆ
    ಇಂತಿ ನಿಮ್ಮವ
    ಜೈ ಶ್ರೀ ರಾಮ್

  • @roopamholal.5559
    @roopamholal.5559 7 วันที่ผ่านมา +2

    ಜೈ ಶ್ರೀರಾಮ್ 🎉

  • @esquireprinters4424
    @esquireprinters4424 2 หลายเดือนก่อน +3

    Marvelous ma very much excellent 🎉🎉🎉🎉

  • @user-iu8qk3bj9o
    @user-iu8qk3bj9o 2 หลายเดือนก่อน +2

    Sopar song sing medam

  • @kamalasitaram9194
    @kamalasitaram9194 3 หลายเดือนก่อน +2

    Raamaa kapadi 🎉❤😊

  • @radhakrishnar9730
    @radhakrishnar9730 5 หลายเดือนก่อน +10

    ಈ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಜೈ ಶ್ರೀ ರಾಮ್.

  • @Ravi-kq7rc
    @Ravi-kq7rc 5 หลายเดือนก่อน +6

    What a good voice madam God bless you madam jai sri ram

  • @user-mm5eu9pt7i
    @user-mm5eu9pt7i 3 หลายเดือนก่อน +3

    What a sweet voice 🙏

  • @kusumapai2418
    @kusumapai2418 3 หลายเดือนก่อน +2

    ಜೈ ಶ್ರೀರಾಮ.... ಕೇಳಿ ಧನ್ಯವಾಯಿತು ಮನ.

  • @ningappakusugal2135
    @ningappakusugal2135 หลายเดือนก่อน +2

    ಜೈ ಶ್ರೀ ರಾಮ್ 🌹🙏

  • @geetharani29
    @geetharani29 5 หลายเดือนก่อน +7

    Jai shree Ram...you are an amazing singer....good control in your voice n good rendering...thank you very much...thanks to the lyricist, musicians n the co singers... wonderful 👍 amazing..

  • @harishml2728
    @harishml2728 หลายเดือนก่อน +2

    ಅದ್ಭುತವಾದ ಹಾಡು

  • @vijaykumarh7721
    @vijaykumarh7721 5 หลายเดือนก่อน +4

    ಶ್ರೀ ರಾಮ ದೇವರ ಭಕ್ತಿ ಪೂರ್ಣ ಗೀತೆ ,ತುಂಬಾ ಧನ್ಯ ವಾದಗಳು...

  • @manjuswamy4777
    @manjuswamy4777 4 หลายเดือนก่อน +2

    Nimma dhvani bhakthi margada kadege dhanyavadagalu ...

  • @user-mm5eu9pt7i
    @user-mm5eu9pt7i 2 หลายเดือนก่อน +1

    ❤️Jai Shree RAM ❤️🙏🙏🙏🙏

  • @devakrishna1763
    @devakrishna1763 3 หลายเดือนก่อน +2

    ರಾಮ ಎನ್ನಿರೋ ರಾಮ ಕೃಷ್ಣ ರಾಮ

  • @jayanthidyuthi2570
    @jayanthidyuthi2570 2 หลายเดือนก่อน +1

    Nana e janma eruvaregu e song kelthane irthene, amazing bhavapurna arthapurna srirama song 🙏🙏🙏

  • @munirajuhm2363
    @munirajuhm2363 หลายเดือนก่อน +2

    Jai shri Ram❤❤❤

  • @ksrajeshwarirajeshwari5124
    @ksrajeshwarirajeshwari5124 3 หลายเดือนก่อน +1

    ❤Jai Sri Ram 👌👌👌🙏🙏🙏🌹🌹🌹

  • @user-oq4tz6oz8v
    @user-oq4tz6oz8v 24 วันที่ผ่านมา +1

    Super,very very super sister Shree Ram will bless you and your team forever.

  • @shilpage735
    @shilpage735 12 วันที่ผ่านมา +1

    Super heart touching lovely song thank you so much madam,

  • @manjunathaa2154
    @manjunathaa2154 3 หลายเดือนก่อน +2

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏🙏💐💐💐

  • @vijayashetty6730
    @vijayashetty6730 หลายเดือนก่อน +3

    Nija,anu,badaninaramnama,kaluthaejivahodthra,astasaku,anisuthakanali,nirubarutha,olayadthaaghalimaghala, vandanaghalu

  • @venkatunaik208
    @venkatunaik208 5 หลายเดือนก่อน +6

    ತುಂಬಾ ಚೆನ್ನಾಗಿದೆ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @user-cx7lk1zt2l
    @user-cx7lk1zt2l วันที่ผ่านมา

    ನಿಮ್ ಹಾಡು ಕೇಳಿ ಕಣ್ಣು ತುಂಭಿ ಬಂತು ನಿಮ್ ಧ್ವನಿ ಗೆ ಅನಂತ ನಮಸ್ಕಾರ ಗಳು ಅಕ್ಕ 🙏🙏🙏👌👌❤️❤️🌹

  • @user-fp7bs4hb9i
    @user-fp7bs4hb9i 2 หลายเดือนก่อน +2

    ❤. ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ❤❤❤

  • @keerthigowdamn907
    @keerthigowdamn907 5 หลายเดือนก่อน +3

    👌👌👌 ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🪷🌹🙏🌹🪷🙏🪷🌹

  • @nagamanishreevatsa351
    @nagamanishreevatsa351 4 หลายเดือนก่อน +1

    Neevu nimma haadu eradu sundara. Ramanadarshanave aadante aayithu. Thank u magale.

  • @ghotnalesidramappa6337
    @ghotnalesidramappa6337 28 วันที่ผ่านมา +1

    ತುಂಬಾ ಒಳ್ಳೆಯದು,
    ನನ್ನ ಇಷ್ಟದ ಹಾಡು

  • @gyanarmy2474
    @gyanarmy2474 5 หลายเดือนก่อน +6

    ನನ್ನ ಮರಣಕ್ಕಿಂತ, "ನನ್ನ ಮುಕ್ತಿಗೆ ನಿನ್ನ ಚರಣ ಕೊಡು ರಾಮ " ಚೆನ್ನಾಗಿರುತ್ತದೆ.

    • @pawanrathi7257
      @pawanrathi7257 4 หลายเดือนก่อน +1

      जय श्री राम 🙏🙏

    • @JaiRamJaiRamJaiRam108
      @JaiRamJaiRamJaiRam108 2 หลายเดือนก่อน

      Why? You scared of death?

  • @prashanthiremath9415
    @prashanthiremath9415 หลายเดือนก่อน +9

    ಜೈ ಶ್ರೀ ರಾಮ್