Very delicious Crab Ghee Roast Recipe / ಅತ್ಯಂತ ರುಚಿಕರ ಏಡಿ (ಕ್ರ್ಯಾಬ್) ಘೀ ರೋಸ್ಟ್

แชร์
ฝัง
  • เผยแพร่เมื่อ 7 มิ.ย. 2024
  • ಇವತ್ತು ನಾವು ಏಡಿ ಘೀ ರೋಸ್ಟ್ ಅಥವಾ Crab Ghee Roast ಮಾಡೋಣ. ಏಡಿಯು ಉತ್ತಮ ಗುಣಮಟ್ಟದ ಪ್ರೊಟೀನ್ ಮತ್ತು ಒಮೇಗಾ - 3 ಕೊಬ್ಬಿನ ಆಮ್ಲಗಳನ್ನು ಸಮೃದ್ಧವಾಗಿ ಒಳಗೊಂಡಿರುವ ಪೌಷ್ಟಿಕ ಸಮುದ್ರ ಆಹಾರವಾಗಿದೆ. ಇದು ಸ್ನಾಯುಗಳ ಬೆಳವಣಿಗೆಗೆ ಮತ್ತು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿರುವ ಜೀವಸತ್ವಗಳು ಮತ್ತು ಬಿ12, ಸೆಲೇನಿಯಮ್ ಹಾಗೂ ಸತುಗಳಂತಹ ಖನಿಜಗಳು ಇರುವುದರಿಂದ ಬೆಳೆಯುವ ಮಕ್ಕಳಿಗೆ ಇದು ಅತ್ತ್ಯುತ್ತಮ ಆಹಾರ. ಈಗ ನಾವು ಕ್ರ್ಯಾಬ್ ಘೀ ರೋಸ್ಟ್ ಮಾಡುವ ಸುಲಭದ ವಿಧಾನವನ್ನು ನೋಡೋಣ.
    ಅತ್ಯಂತ ರುಚಿಕರ ಏಡಿ (ಕ್ರ್ಯಾಬ್) ಘೀ ರೋಸ್ಟ್ ಮಾಡುವ ವಿಧಾನ:
    ಏಡಿಯು ಉತ್ತಮ ಗುಣಮಟ್ಟದ ಪ್ರೊಟೀನ್ ಮತ್ತು ಒಮೇಗಾ - 3 ಕೊಬ್ಬಿನ ಆಮ್ಲಗಳನ್ನು ಸಮೃದ್ಧವಾಗಿ ಒಳಗೊಂಡಿರುವ ಪೌಷ್ಟಿಕ ಸಮುದ್ರ ಆಹಾರವಾಗಿದೆ. ಇದು ಸ್ನಾಯುಗಳ ಬೆಳವಣಿಗೆಗೆ ಮತ್ತು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿರುವ ಜೀವಸತ್ವಗಳು ಮತ್ತು ಬಿ12, ಸೆಲೇನಿಯಮ್ ಹಾಗೂ ಸತುಗಳಂತಹ ಖನಿಜಗಳು ಇರುವುದರಿಂದ ಬೆಳೆಯುವ ಮಕ್ಕಳಿಗೆ ಇದು ಅತ್ತ್ಯುತ್ತಮ ಆಹಾರ. ಈಗ ನಾವು ಕ್ರ್ಯಾಬ್ ಘೀ ರೋಸ್ಟ್ ಮಾಡುವ ಸುಲಭದ ವಿಧಾನವನ್ನು ನೋಡೋಣ.
    ಬೇಕಾಗುವ ಪದಾರ್ಥಗಳು:
    - ತೊಳೆದು ಸ್ವಚ್ಛಗೊಳಿಸಿದ 1½ ಕೆಜಿ ಏಡಿಗಳು
    -1 ಟೇಬಲ್ ಸ್ಪೂನ್ ಹರಶಿನ ಹುಡಿ
    - ರುಚಿಗೆ ಉಪ್ಪು
    - 25 ಬ್ಯಾಡಗಿ ಮೆಣಸುಗಳು (ಅಥವಾ ಯಾವುದೇ ಜಾಸ್ತಿ ಖಾರವಲ್ಲದ ಒಣಗಿದ ಕೆಂಪು ಮೆಣಸು)
    - 4 ಟೀಸ್ಪೂನ್ ಕೊತ್ತಂಬರಿ
    - 1 ಟೇಬಲ್ ಸ್ಪೂನ್ ಜೀರಿಗೆ
    - 1 ಕತ್ತರಿಸಿದ ಮಧ್ಯಮ ಗಾತ್ರದ ಈರುಳ್ಳಿ
    - 8 ಬೆಳ್ಳುಳ್ಳಿ ಎಸಳುಗಳು
    - ದಪ್ಪವಾದ ಮಸಾಲೆ ಬೇಕಾದಲ್ಲಿ 10 ಗೋಡಂಬಿಗಳನ್ನು ಸೇರಿಸಬಹುದು. ರುಚಿಯಾಗುತ್ತೆ.
    - 1 ಚಿಟಿಕೆ ಸಾಸಿವೆ
    - ¼ ಚಮಚದಷ್ಟು ಮೆಂತ್ಯ
    - ಸಣ್ಣ ನಿಂಬೆಯ ಅರ್ಧ ತುಂಡಿನ ಗಾತ್ರದಷ್ಟು ಹುಣಸೆ ಹುಳಿ
    - ಅಗತ್ಯವಿರುವಷ್ಟು ತುಪ್ಪ
    - 1 ಟೀಸ್ಪೂನ್ ಕರಿಬೇವಿನ ಎಲೆಗಳು (ಐಚ್ಛಿಕ)
    ತಯಾರಿಸುವ ವಿಧಾನ:
    1. ಏಡಿಗಳನ್ನು ಬೇಯಿಸುವುದು:
    - ದೊಡ್ಡ ಪಾತ್ರೆಯಲ್ಲಿ, ಸ್ವಚ್ಛಗೊಳಿಸಿದ ಏಡಿಗಳನ್ನು ಸೇರಿಸಿ.
    - ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
    - ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ. ನೀರನ್ನು ಸೇರಿಸುವ ಅಗತ್ಯವಿಲ್ಲ; ಆದರೂ ಬೇಕಿದ್ದಲ್ಲಿ ಕೇವಲ ಒಂದೇ ಚಮಚ ನೀರನ್ನು ಸೇರಿಸಿ.
    - ಏಡಿಗಳು ಕೆಂಪು ಬಣ್ಣಕ್ಕೆ ತಿರುಗುವವರೆಗೆ ಅಂದರೆ ಸುಮಾರು 10 ನಿಮಿಷ ಚೆನ್ನಾಗಿ ಬೇಯಿಸಿ. ಪಕ್ಕಕ್ಕೆ ಇರಿಸಿ.
    2. ಮಸಾಲೆ ಮಿಶ್ರಣ:
    - ಬಾಣಲೆಯಲ್ಲಿ, ಬ್ಯಾಡಗಿ ಮೆಣಸುಗಳನ್ನು ಪರಿಮಳ ಬರುವವರೆಗೆ ಹುರಿದು ಪಕ್ಕಕ್ಕಿಡಿ.
    - ಕೊತ್ತಂಬರಿ, ಜೀರಿಗೆ, ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಗೋಡಂಬಿ (ಬೇಕಿದ್ದಲ್ಲಿ), ಕರಿಬೇವಿನ ಎಲೆಗಳು ಮತ್ತು ಮೆಂತ್ಯವನ್ನು ಸೇರಿಸಿ.
    - ಎಲ್ಲವೂ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯುಯಿರಿ.
    - ಹುರಿದ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ.
    - ಮಿಕ್ಸರ್ ಜಾರ್ಗೆ ಸಣ್ಣ ನಿಂಬೆಯ ಅರ್ಧ ಗಾತ್ರದಷ್ಟು ಹುಣಸೆ ಹುಳಿ ಸೇರಿಸಿ.
    - ಸಾಧ್ಯವಾದಷ್ಟು ಕಡಿಮೆ ನೀರನ್ನು ಬಳಸಿ ಮಿಶ್ರಣವನ್ನು ನಯವಾದ ಪೇಸ್ಟ್ ಆಗುವವರೆಗೆ ರುಬ್ಬಿಕೊಳ್ಳಿ,.
    3. ಘೀ ರೋಸ್ಟ್ ಮಸಾಲಾ
    - ಬಾಣಲೆಯಲ್ಲಿ, ½ ಕಪ್ ತುಪ್ಪ ಸೇರಿಸಿ.
    - ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ
    - ಅದಕ್ಕೆ ರುಬ್ಬಿದ ಮಸಾಲೆ ಪೇಸ್ಟ್ ಸೇರಿಸಿ.
    - ಮಿಶ್ರಣವನ್ನು ಚೆನ್ನಾಗಿ ಹುರಿಯಿರಿ, ಆಗಾಗ್ಗೆ ಕಲಸಿ. ಮಿಶ್ರಣವು ಪರಿಮಳಯುಕ್ತವಾಗುವವ ವರೆಗೆ ಚೆನ್ನಾಗಿ ಹುರಿಯಬೇಕು.
    - ಮಸಾಲೆ ಬಾಣಲೆಗೆ ಅಂಟಿಕೊಳ್ಳದಂತೆ ಆಗಾಗ್ಗೆ ತುಪ್ಪವನ್ನು ಸೇರಿಸಬಹುದು. ತುಪ್ಪ ಹೆಚ್ಚು ಹಾಕಿ ಹುರಿದಷ್ಟು ಮಸಾಲೆ ಮಿಶ್ರಣವು ಶ್ರೀಮಂತ ಪರಿಮಳವನ್ನು ಹೊಂದುತ್ತದೆ.
    4. ಅಂತಿಮ ಹಂತ
    - ಬೇಯಿಸಿದ ಏಡಿಗಳನ್ನು ಹುರಿದ ಮಸಾಲೆ ಮಿಶ್ರಣದೊಂದಿಗೆ ಬಾಣಲೆಗೆ ಹಾಕಿ.
    - ಏಡಿಗಳನ್ನು ಮಸಾಲಾದೊಂದಿಗೆ ಸಮವಾಗಿ ಲೇಪಿಸಲು ಚೆನ್ನಾಗಿ ಮಿಶ್ರಣ ಮಾಡಿ.
    - ಸುವಾಸನೆಯು ಒಟ್ಟಿಗೆ ಬೆರೆಯಲು ಹೆಚ್ಚುವರಿ 2 ನಿಮಿಷ ಬೇಯಿಸಿ
    - ಈಗ ನಿಮ್ಮ ಕ್ರ್ಯಾಬ್ ಘೀ ರೋಸ್ಟ್ ರೆಡಿ. ಅದನ್ನು ಅನ್ನ, ನಾನ್ ಅಥವಾ ರೋಟಿಯೊಂದಿಗೆ ಬಿಸಿಯಾಗಿ ಬಡಿಸಿ.
    ನಿಮ್ಮ ರುಚಿಕರವಾದ ಏಡಿ ತುಪ್ಪದ ರೋಸ್ಟ್ ಅನ್ನು ಆನಂದಿಸಿ!
    Crab Ghee Roast Recipe
    Ingredients:
    - 1½ kg crabs, washed and cleaned
    - 1 Tblsn Turmeric Powder
    - Salt to taste
    - 25 Byadagi Chillies
    - 4 tbsp coriander seeds
    - 1 tbsp cumin seeds
    - 1 medium-sized onion, sliced
    - 8 cloves of garlic
    - 10 cashews Nuts (optional, for thickening)
    - 1 pinch mustard seeds
    - ¼ tsp fenugreek seeds
    - Small piece (half if the size of a small lemon) of Tamarind
    - Ghee as required
    - 1 tsp curry leaves (optional)
    Instructions:
    1. Cooking the Crabs:
    - In a large pot, add the cleaned crabs.
    - Add salt to taste.
    - Mix well and cook on a stove top. No need to add water; if needed, add only 1 tablespoon of water.
    - Cook until the crabs turn red and are fully cooked. Set aside.
    2. Prepare the Spice Mix:
    - In a pan, dry roast the Byadagi Chillies until fragrant.
    - Add the coriander seeds, cumin seeds, sliced onion, garlic cloves, cashews (if using), curry leaves, mustard seeds, and fenugreek seeds.
    - Continue roasting until everything is aromatic and slightly browned.
    - Transfer the roasted ingredients to a mixer jar.
    -Add a small piece (half of the size of a small lemon) of Tamarind
    - Grind the mixture into a smooth paste, adding as little water as possible.
    3. Make the Ghee Roast Masala:
    - Place a Kadai and on burning stove
    - Add ½ cup (6-10 Tblsn) of Ghee.
    - Add curry leaves
    - Add the ground spice paste.
    - Roast the mixture well, stirring frequently.
    - Add ghee as required to ensure the spices do not stick and burn. Roast until the spices are well cooked and the mixture has a rich, roasted flavor.
    4. Combine and Final Cook:
    - Add the cooked crabs to the pan with the roasted spice mixture.
    - Mix well to coat the crabs evenly with the masala.
    - Cook for an additional 2 minutes, allowing the flavors to meld together.
    5. Serve:
    - Serve the Crab Ghee Roast hot with rice, naan, or roti.
    Enjoy your delicious Crab Ghee Roast!
    Please share, subscribe and comment!

ความคิดเห็น • 7

  • @allanfernandes745
    @allanfernandes745 หลายเดือนก่อน +1

    Very nice 👍

  • @3Chaddibuddies
    @3Chaddibuddies 2 หลายเดือนก่อน +1

    ❤️❤️

  • @hemafernandes9192
    @hemafernandes9192 2 หลายเดือนก่อน +1

    Easy and delicious. ❤

  • @hemafernandes9192
    @hemafernandes9192 หลายเดือนก่อน


    😊

  • @santhusanthu1557
    @santhusanthu1557 หลายเดือนก่อน

    ❤sup😢

  • @lidwinpinto8985
    @lidwinpinto8985 หลายเดือนก่อน

    Nice recipe..And I liked the cute boy, who comes in the end❤

    • @joachimpinto
      @joachimpinto หลายเดือนก่อน

      True, he steals the show!😀