YEDEYA BHAVAVU KARAGI | ಎದೆಯ ಭಾವವು ಕರಗಿ | RAVINDRA NAYAK SANNAKKIBETTU | RAGHAVENDRA BEEJADI

แชร์
ฝัง
  • เผยแพร่เมื่อ 12 ก.ย. 2024
  • YEDEYA BHAVAVU KARAGI
    ಎದೆಯ ಭಾವವು ಕರಗಿ
    Kannada Bhavageethe
    ಕನ್ನಡ ಭಾವಗೀತೆ
    Lyrics : Ravindra nayak sannakkibettu
    Music and Singer : Raghavendra beejadi
    Orchestration : Sameer rao
    Keyboard : Sangeeth thomas
    Tabala : Karthik bhat
    Rhytham pad : vinay rangadhol
    Flute : Sameer rao
    ಎದೆಯ ಭಾವವು ಕರಗಿ ಖಾಲಿಯಾಗಿದೆ ನೋವು
    ಕನಸು ಕಣ್ಣಲಿ ಹಿಂಗಿತು.
    ಜೊತೆಗೆ ಸಾಗಿದ ಜೀವ ಯಾವ ಮಾತಿಗೆ ಕೆರಳಿ
    ಹಿಡಿದ ಕೈಯನು ಬಿಟ್ಟಿತು?
    ನೂರು ಕನಸಿನ ದಾರ ಹೆಣೆದು ಕಟ್ಟಿದ ಗೂಡು
    ಬಯಸಿ ನಾಳೆಯ ಬದುಕಿಗೆ.
    ಯಾವ ಪೊಟರೆಯ ಹಕ್ಕಿ ನಿನ್ನ ಸೆಳೆಯಿತು ದೂರ?
    ನೆಪವು ಸಿಕ್ಕಿದೆ ಸಾವಿಗೆ.
    ಹಳೆಯ ಪೊರೆಯನು ಕಳಚಿ ಹೊಸತು ಆಗುವ ಜೀವ
    ಬರಿದೆ ಮೋಹವ ಕೆಣಕಿತೆ?
    ಬೀಸಿ ಹೃದಯದ ಗಾಳಿ ಅರಿವ ದೀಪವೆ ಆರಿ
    ಹಾವ ಹುತ್ತವ ತಬ್ಬಿತೆ?
    ಕಾರಿರುಳ ಆಗಸಕೆ ಉಂಟು ಅಗಣಿತ ತಾರೆ
    ಮನೆಯ ಕತ್ತಲು ಕಾಡಿದೆ.
    ಯಾವ ಕಿಟಕಿಯ ತೆರೆದು ಒಳಗೆ ಕರೆಯಲಿ ಬೆಳಕು?
    ತೆರೆವ ಕರವೇ ಸೋತಿದೆ.
    ~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
    For more Ravindra nayak sannakkibettu songs:
    Nooru novina naduve ನೂರು ನೋವಿನ ನಡುವೆ
    • ನೂರು ನೋವಿನ ನಡುವೆ |Noor...
    Mucchibidu manassina ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
    • Kannada bhavageethe |M...
    Gokulake hogona ಗೋಕುಲಕೆ ಹೋಗೋಣ
    • Gokulake hogona ಗೋಕುಲಕ...
    Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
    • Gazal |Nasheyeride nin...
    ಭಾವಪೂರ್ಣ ಭಾವಗೀತೆ Must watch
    • Kannada bhavageethe |D...
    Hucchu hrudaya ಹುಚ್ಚು ಹೃದಯ
    • Breakup song | Hucchu ...
    Yenintha naviru ಏನಿಂಥ ನವಿರು
    • Yenintha naviru ಏನಿಂಥ ...
    Olava shravana ಒಲವ ಶ್ರಾವಣ
    • Bhavageethe| Olava shr...
    #bhavageethegalu #ಭಾವಗೀತೆಗಳು
    #pain
    #ravindranayaksannakkibettu

ความคิดเห็น • 374

  • @gururajasr6207
    @gururajasr6207 5 หลายเดือนก่อน +79

    ಮನವ ಒಲೈಸುತ ದುಃಖಗಳನ್ನು ಮರೆಸುವ ಅತ್ಯದ್ಭುತ ಸಾಹಿತ್ಯ ರವೀಂದ್ರ ಸರ್, ಭಾವಭರಿತ ಸಾಹಿತ್ಯವನ್ನು ಭಾವತುಂಬಿ ಅನುಭಾವದಿಂದ ಹಾಡಿದ್ದಾರೆ ರಾಘವೇಂದ್ರ ಬಿಜಾಡಿ ಸರ್, ಸಾಹಿತ್ಯಕ್ಕೆ ತಕ್ಕಂತೆ ಅಮೋಘವಾಗಿ ರಾಗಸಂಯೋಜನೆ ಮಾಡಿದ್ದಾರೆ ಸುಮಧುರ ಸಂಗೀತದಿಂದ,
    ಸೊಗಸಾಗಿದೆ ರವೀಂದ್ರ ಸರ್ ಕೇಳಿ ನನ್ನನ್ನು ನಾನು ಮರೆತೆ,
    ನಿಮ್ಮ ಅಭಿಮಾನಿ,,👏👏👌👌💐💐❤️❤️🙏🙏 7:33

    • @Ravindranayaksannakkibettu
      @Ravindranayaksannakkibettu  5 หลายเดือนก่อน +11

      ಏನೆನ್ನಲಿ ನಿಮ್ಮ ನಿರಂತರವಾದ ಪ್ರೀತಿ ಪ್ರೋತ್ಸಾಹಕ್ಕೆ❤️❤️❤️❤️

    • @vidyaa6453
      @vidyaa6453 5 หลายเดือนก่อน +1

      Super sir 🙏

    • @krishnamurthykg2625
      @krishnamurthykg2625 5 หลายเดือนก่อน +1

      .super

    • @gollarasomashekhara9479
      @gollarasomashekhara9479 4 หลายเดือนก่อน

      @@Ravindranayaksannakkibettu http ùii

    • @pragathibanavasi8424
      @pragathibanavasi8424 3 หลายเดือนก่อน

      Howdu

  • @manjaiahmallodi6661
    @manjaiahmallodi6661 วันที่ผ่านมา

    Male voice ಅಲ್ಲಿ ನಾನು ಈ ಹಾಡಿಗೆ ಮನಸೋತು ಮತ್ತೆ ಮತ್ತೆ ಕೇಳುತ್ತಿದ್ದೆ..❤❤
    ಇದೆ ದಾಟಿಯಲ್ಲಿ ನಮ್ಮ ಜೈನ ಭಕ್ತಿ ಗೀತೆಯ ಸಾಹಿತ್ಯ ಬರೆದಿರುವೆ..❤❤
    Female voice also..👌👌😍

  • @punithlokesh4163
    @punithlokesh4163 3 วันที่ผ่านมา +1

    ನನ್ನ ಅಂಥರಾಳದ ನೋವು ಇ ಹಾಡನು ಕೇಳಿ ಕಂಬನಿ ಜರಿಯಾಗಿ ಮೂಡಿಸಿದ ನಿಮ್ಮ ಸಾಹಿತ್ಯಾಕೇ ನನ್ನ ಪ್ರಣಾಮಗಳು.

    • @Ravindranayaksannakkibettu
      @Ravindranayaksannakkibettu  3 วันที่ผ่านมา

      @@punithlokesh4163 ಪ್ರೀತಿಯ ಧನ್ಯವಾದ❤️
      ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ ಸರ್. ಈ ಚಾನೆಲ್ ನಲ್ಲಿ 50+ ಇಂತಹ ಭಾವಗೀತೆಗಳಿವೆ. ಬಿಡುವಿದ್ದಾಗ ಕೇಳಿ
      th-cam.com/video/eQMVh7nZwCU/w-d-xo.htmlsi=bnnOgN9abZO7PqZl
      ಒಂದು ಹೊಸ ಭಾವಗೀತೆ
      *ನೂರು ನೋವಿನ ನಡುವೆ*
      *ಒಂದು ನಗೆಯು ಕಾಡಿ*
      ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
      ಸಂಗೀತ ಮತ್ತು ಗಾಯನ: ಗಣೇಶ್ ದೇಸಾಯಿ
      ನಮಸ್ತೆ💐

  • @Arya2026PSI
    @Arya2026PSI 18 วันที่ผ่านมา +3

    ಹಾಡು ಕೇಳ್ತಾ ಇದ್ರೆ ...ಅಂತರಾಳದಿ ಪುಟಿದು ..ದೇಹದ ತುಂಬೆಲ್ಲಾ ಸಾಲುಗಳು ಮುದ ನೀಡುತ್ತವೆ...ಅದ್ಬುತ ಸಾಹಿತ್ಯ ಸರ್ ..

  • @ramyavinay292
    @ramyavinay292 5 หลายเดือนก่อน +29

    ಹಾಡನ್ನು ಕೇಳುತ್ತಾ ನನ್ನ ಅಂತರಂಗದಿ ಬಸಿದ ಭಾವವನ್ನು ಅಂಗೈಯಲ್ಲಿ ಹಿಡಿದು, ಕೈಜಾರಿದ ಹನಿಗಳನ್ನು ನೋಡುತ್ತಾ ಉಪಾಯವಿಲ್ಲದೆ ನಿಟ್ಟುಸಿರಿಡುತ್ತಾ ಕುಳಿತ ಹಾಗಿದೆ.. No comments❤

    • @Ravindranayaksannakkibettu
      @Ravindranayaksannakkibettu  5 หลายเดือนก่อน +2

      ವ್ಹಾ ...ಪ್ರತಿಕ್ರಿಯೆಯೇ ಕವಿತೆಯಾಗಿದೆ❤️❤️❤️

    • @meeranagarajarao6887
      @meeranagarajarao6887 2 หลายเดือนก่อน +1

      ಬಹಳ ಸುಂದರವಾಗಿ ಬರೆದಿದ್ದೀರಿ 🎉🎉🎉

    • @Vinayak-134
      @Vinayak-134 28 วันที่ผ่านมา +1

    • @UdayDudhawade
      @UdayDudhawade 24 วันที่ผ่านมา +1

      Llllll​@@Ravindranayaksannakkibettu

    • @moviemaker2486
      @moviemaker2486 10 วันที่ผ่านมา +1

      👌Waaa

  • @gram1434
    @gram1434 หลายเดือนก่อน +4

    ಅದ್ಭುತ ಗೀತೆ ಮತ್ತು ಘಾಯನ ಜೊತೆಗೆ ಸುಂಯೋಜನೆ ಕೂಡ ಅಷ್ಟೇ ಚನ್ನಾಗಿದೆ
    ಧನ್ಯವಾದಗಳು

  • @KamalaKamalamamm
    @KamalaKamalamamm 2 วันที่ผ่านมา +1

    Mana❤ muttuvantaha saalugalu aaha adbutavada song ❤️❤️❤️❤️🙏🙏

    • @Ravindranayaksannakkibettu
      @Ravindranayaksannakkibettu  2 วันที่ผ่านมา

      ನಿಮ್ಮ ಪ್ರತೀ ಪ್ರತಿಕ್ರಿಯೆ ಸ್ಫೂರ್ತಿಯ ಸೆಲೆಯನ್ನು ಜಿನುಗಿಸುತ್ತಿದೆ ❤️
      ಬಿಡುವಿದ್ದಾಗ ಕೇಳಿ
      th-cam.com/video/5EJfq-IOeTQ/w-d-xo.htmlsi=_5nElbHBva8IV9fz

  • @deepikahebbar5361
    @deepikahebbar5361 5 หลายเดือนก่อน +6

    ಅತ್ಯದ್ಭುತ ಸಾಹಿತ್ಯ... ಎದೆಯ ಭಾವವು ಕರಗಿ ಖಾಲಿಯಾಗಿದೆ ನೋವು ಕನಸು ಕಣ್ಣಲಿ ಹಿಂಗಿತು..........

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಖುಷಿ ಕೊಟ್ಟಿತು ನೀವು ಕೇಳಿ ಪ್ರತಿಕ್ರಿಯಿಸಿದ್ದು❤️

  • @Vasu-H-Tejaswi
    @Vasu-H-Tejaswi 5 หลายเดือนก่อน +5

    ಹಾಡೊಂದನ್ನು ಕೇಳಿ ಕಣ್ತುಂಬಿ ಬಂದು ತುಂಬಾ ಕಾಲವಾಗಿತ್ತು. ಎದೆಯ ಭಾವ ಕರಗಿಸಿದ್ದಕ್ಕೆ ಧನ್ಯವಾದಗಳು.

    • @Ravindranayaksannakkibettu
      @Ravindranayaksannakkibettu  5 หลายเดือนก่อน +2

      ಇಷ್ಟು ಸಾಕು ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿಯಾಗಲು❤️

  • @somashekharodeyar.ghpsnorw6537
    @somashekharodeyar.ghpsnorw6537 5 หลายเดือนก่อน +6

    ಧನ್ಯವಾದಗಳು ಸರ್ 💕💕💕ಸಾಹಿತ್ಯ ಅದ್ಭುತ.. ಸಣ್ಣಕ್ಕಿ ಬೆಟ್ಟು ಸರ್.. ತುಂಬಾ ಅನುಭವಿಸಿ ಕೇಳುವಂತೆ ಮಾಡುತ್ತದೆ... ರಾಘವೇಂದ್ರ ಸರ್ ಗಾಯನ 👍👍👍ಹಿನ್ನಲೆ ಸಂಗೀತ 🙏🙏ಧನ್ಯೋಸ್ಮಿ ಕೇಳಿ... ನಿಮ್ಮ ಎಲ್ಲ ತಂಡಕ್ಕೂ ಅಭಿನಂದನೆಗಳು 🌺🌺💕💕ಯಾವ ಕಿಟಕಿ ತೆರೆದು ಕರೆಯಲಿ ಬೆಳಕು.. ಆಹಾ ಎಂತಹ ಭಾವ 💕💕💕

    • @Ravindranayaksannakkibettu
      @Ravindranayaksannakkibettu  5 หลายเดือนก่อน +1

      ಧನ್ಯವಾಯ್ತು ಕವಿತೆ❤️❤️❤️
      ನೀವು ಕೇಳಿ ಪ್ರತಿಕ್ರಿಯಿಸಿದ್ದು ಸಂಭ್ರಮ❤️

  • @jayakavibhavageetha7145
    @jayakavibhavageetha7145 5 หลายเดือนก่อน +6

    ಚನ್ನಾಗಿದೆ...
    ಸ್ವರಸಂಯೋಜನೆ ಹಾಗೂ ಗಾಯನ ಕೂಡಾ ಚೆನ್ನಾಗಿದೆ..!
    ಆಲಿಸಿ ಆನಂದಿಸಿದೆ...
    ಆತ್ಮಪೂರ್ವಕ ಅಭಿನಂದನೆಗಳು..!
    ಸವಿರಾಗಗಳ ಸುಖಸ್ವಪ್ನಗಳ ಶುಭರಾತ್ರಿ...
    ಶರಣಾರ್ಥಿ..!

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಧನ್ಯವಾದ ಕವಿಗಳೇ ❤️
      ಕಾವ್ಯ ಸೂಕ್ಷ್ಮಗ್ರಾಹಿಯಾದ ನಿಮ್ಮ ಪ್ರತಿಕ್ರಿಯೆ ಎಂದಿಗೂ ನನಗೆ ಸ್ಪೆಶಲ್❤️

  • @user-kr7tv6ds1n
    @user-kr7tv6ds1n 16 วันที่ผ่านมา

    ❤ ಕತ್ತಲು ಕವಿದ ಕಾರ್ಮೋಡ ದ ಜೀವನಕೆ ನಿಮ್ಮ ಗೀತೆ ಗಳು ಮಳೆ ಯಾಗಿ ಎದೆಯೊಳಗೆ ಹೊಸ ಅಧ್ಯಾಯ ತೆರೆದಂತಿದೆ .... ಆಹಾ...

  • @ishwarabhatmk878
    @ishwarabhatmk878 หลายเดือนก่อน +1

    ಅದ್ಭುತವಾದ....ಸಾಹಿತ್ಯ....ಸಂಗೀತ...ಮತ್ತು.....ಗಾಯನವನ್ನು....ಕೇಳಿ...ಮನಸ್ಸು...ಮತ್ತು...ಎದೆಯ....ಭಾರ.....ಇಳಿದು...ಹೋಯಿತು

  • @rajkumarnabhirajjain4228
    @rajkumarnabhirajjain4228 5 หลายเดือนก่อน +6

    ಅಧ್ಭುತವಾದ ಸಾಹಿತ್ಯ
    ಅಷ್ಟೇ ಅದ್ಭುತವಾದ ಸ್ವರ ಸಂಯೋಜನೆ ಹಾಗೂ ಗಾಯನ
    ಅಭಿನಂದನೆಗಳು ಸರ್

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️❤️❤️

  • @Vinutha2368
    @Vinutha2368 5 หลายเดือนก่อน +6

    ಆಹಾ...ಅತ್ಯುತ್ತಮ ಸಾಹಿತ್ಯಸರ್.ಪ್ರತೀಸಾಲುಗಳು ಅರ್ಥಗರ್ಬಿತ👌❤ಪ್ರತೀಬಾರಿ ನಿಮ್ಮ ಸಾಹಿತ್ಯ ಅಲಿಸಿದಾಗ ಏನೋ ಹೊಸತನ ತುಂಬಿರುತ್ತದೆ.ರಾಘವೇಂದ್ರ ಸರ್ ಅವರು ಕೂಡ ಭಾವತುಂಬಿ ಅದ್ಬುತವಾಗಿ ಹಾಡಿದ್ದಾರೆ.ಚೆಂದದ ರಾಗಸಂಯೋಜನೆ., ಹಿನ್ನೆಲೆ ಸಂಗೀತ.❤👌ಮಗದೊಮ್ಮೆ ಇಷ್ಟು ಒಳ್ಳೆ ಸಾಹಿತ್ಯ ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ರವೀಂದ್ರ ಸರ್🙏😊❤

    • @Ravindranayaksannakkibettu
      @Ravindranayaksannakkibettu  5 หลายเดือนก่อน +1

      ಹಾಡನ್ನು ಎದೆಗಪ್ಪಿಕೊಂಡು ಜನರಿಗೆ ತಲುಪಿಸಿದವರು ನೀವು. ನೀವು ಇಷ್ಟಪಟ್ಟು Share ಮಾಡಿರದಿದ್ರೆ ಇದೆಲ್ಲಾ ತಲುಪುತ್ತಿರಲಿಲ್ಲ. ತುಂಬಾ ತುಂಬಾ ಥ್ಯಾಂಕ್ಸು❤️❤️❤️

    • @Vinutha2368
      @Vinutha2368 5 หลายเดือนก่อน

      Tqqqq so much sir.🙏
      ಇನ್ನಷ್ಟು ಹೊಸ ಭಾವಗೀತೆಗಳು ನಿಮ್ಮಿಂದ ನಿರೀಕ್ಷಿಸುತ್ತೇನೆ ❤️🙂
      ನಿಮ್ಮ ಪ್ರತಿಯೊಂದು ಸಾಹಿತ್ಯವೂ ನನ್ನ ಮನಸ್ಸಿನೊಳಗೆ ಅಚ್ಚಳಿಯದೆ ನೆನಪಾಗಿ ಉಳಿದುಬಿಟ್ಟಿದೆ.❤🙂🙏

  • @positivitysmile3718
    @positivitysmile3718 5 หลายเดือนก่อน +2

    ಅದ್ಭುತ ಗಾಯನ .....ಅದ್ಭುತ ಭಾವ....ಅದ್ಭುತಧ್ವನಿ...ಮನ ಮುಟ್ಟುವ ರಾಗ.....ಕೆಳುವ ಪ್ರತಿ ಕ್ಷಣ ಮೈ ಮರೆತು ಹೋಗುವ ಭಾವ.....ಧನ್ಯವಾದ ಮನಸಿನ ಆಳದಿಂದ......❤

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ
      ಮತ್ತೆ ಹೊಸ ಭಾವಗೀತೆ ಗಜಲ್ ಜೊತೆಯಲ್ಲಿ ಬರುತ್ತೇವೆ❤️

  • @sanjaygsajja9226
    @sanjaygsajja9226 หลายเดือนก่อน +1

    Sahithyavau mana vannu tanisutthade, adakke jeeva nidida gayakaranthu Bhava thumbi manasannu eccharisiddare😮❤

  • @anirashmi275
    @anirashmi275 24 วันที่ผ่านมา +1

    ಮನಿಸಿನಾಂತರಳದಲಿ ಅಚ್ಚಳಿಯದ ನೆನಪನ್ನು ಉಳಿಸುವ ಸಾಹಿತ್ಯ 🙏🙏🙏

    • @Ravindranayaksannakkibettu
      @Ravindranayaksannakkibettu  23 วันที่ผ่านมา

      ಖುಷಿ ಆಯ್ತು ಸರ್ ನೀವು ಕೇಳಿ ಪ್ರತಿಕ್ರಿಯೆ ಬರೆದದ್ದು. ಪ್ರೀತಿಪ್ರೋತ್ಸಾಹ ಸದಾ ಇರಲಿ❤️
      ಬಿಡುವಿದ್ದಾಗ ಕೇಳಿ
      th-cam.com/video/1kTsvmyygGY/w-d-xo.html

  • @vaniramesh8527
    @vaniramesh8527 5 หลายเดือนก่อน +2

    ಅತ್ಯುತ್ತಮ ಸಾಹಿತ್ಯ , ರಾಗಸಂಯೋಜನೆ,ಹಾಗೂ ಗಾಯನ. ಇಂತಹ ಉತ್ತಮ ಸಾಹಿತ್ಯ ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏😊

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಸ್ಫೂರ್ತಿ ತುಂಬಿದೆ ನಿಮ್ಮ ಪ್ರತಿಕ್ರಿಯೆ❤️❤️❤️

  • @user-up7gw5qd1w
    @user-up7gw5qd1w 5 หลายเดือนก่อน +2

    ಎದೆಯ ಭಾವದ ಮಾತಿಗೆ ಪದಗಳಾಗುವ ಸಾಹಿತ್ಯ ತುಂಬಾ ಅರ್ಥಪೂರ್ಣ ಸಾಲುಗಳಲ್ಲಿ ಮೂಡಿದೆ ಸರ್.ಗಾಯನ ಸಂಯೋಜನೆ ಎಲ್ಲವೂ ಸುಮಧುರ.. ಅಭಿನಂದನೆಗಳು.

    • @Ravindranayaksannakkibettu
      @Ravindranayaksannakkibettu  5 หลายเดือนก่อน +1

      ಸರ್ ನಿಮ್ಮ ಪ್ರತೀ ಪ್ರತಿಕ್ರಿಯೆಯೂ ನನಗೆ ಸ್ಪೆಷಲ್❤️❤️❤️

  • @deepapavanje2429
    @deepapavanje2429 5 หลายเดือนก่อน +8

    ಅರ್ಥಪೂರ್ಣ ಸಾಲುಗಳು.... ಬದುಕಿನ ಕುರಿತು ಏನೇನೋ ಅಂದುಕೊಳ್ತೇವೆ...ಆದ್ರೆ ಆಗೋದೇ ಬೇರೆ.. ಎದೆಯ ನೋವ ಭಾವವೇ ಕರಗಿ ,.ಕಣ್ಣೀರಿನ ಒರತೆ ಅರಿವಿಲ್ಲದಂತೆ ಬಂದು ಕಂಡ ಕನಸು ಮಾಯವಾಗಿದೆ..

    • @Ravindranayaksannakkibettu
      @Ravindranayaksannakkibettu  5 หลายเดือนก่อน +1

      ಹಲವುತನದ ಮೈ ಮರೆಸುವಾಟವಿದು ನಿಜವು ತೋರದಲ್ಲ ಅಂತ ಅಂದಿದ್ದಾರೆ ಅಡಿಗರು. ಬದುಕು ನಮ್ಮ ಪಾಲಿಗೆ ಅಪ್ರಮೇಯ.
      ನಿಮ್ಮ ನಿರಂತರವಾದ ಪ್ರೋತ್ಸಾಹಕ್ಕೆ ಥ್ಯಾಂಕ್ಯೂ ❤️

  • @vishwanathakulalmithur2928
    @vishwanathakulalmithur2928 5 หลายเดือนก่อน +2

    ಬಹಳ ಸೊಗಸಾದ ಭಾವಗೀತೆ....
    ಬೀಜಾಡಿ ಸರ್ ದನಿಯಲ್ಲಿ ಎದೆ ತಟ್ಟುವಂತೆ....❤❤

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ತುಂಬಾ ತುಂಬಾ ಧನ್ಯವಾದ
      ಖುಷಿ ಆಯ್ತು ❤️

  • @jayashreepai5244
    @jayashreepai5244 2 หลายเดือนก่อน +1

    ಮನಸ್ಸು ಒಂಥರಾ ನಿರಾಳ ಭಾವಕೆ ಬಂತು 🙏

  • @prajnayanevanil8032
    @prajnayanevanil8032 5 หลายเดือนก่อน +10

    ಯಾವ ಕಿಟಕಿಯ ತೆರೆದು ಒಳಗೆ ಕರೆಯಲಿ ಬೆಳಕು ತೆರೆವ ಕರವೇ ಸೋತಿದೆ.wawwwwww ಅತ್ಯದ್ಬುತ ಸಾಹಿತ್ಯ.ಎಂಥ ಸಾಲುಗಳು ಸರ್. ಹೃದಯ ತಟ್ಟಿತು ಈ ಹಾಡು. ಹಾಗೆಯೇ ಇಂಪಾದ ರಾಗ.superrrr sir

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಥ್ಯಾಂಕ್ಯೂ ಮೇಡಮ್. ನೀವು ಕೇಳಿ ಪ್ರತಿಕ್ರಿಯಿಸಿದ್ದು ತುಂಬಾನೇ ಖುಷಿ❤️

    • @ganga6460
      @ganga6460 4 หลายเดือนก่อน

      ನಿಜಕ್ಕೂ ಎದೆಯ ಭಾರವೆಲ್ಲ ದೂರವಾಯಿತು ಈ ಹಾಡು, ಸಾಹಿತ್ಯ, ಸಂಗೀತ ಕೇಳಿ ಮನಸ್ಸು ನಿರಾಳವಾಯಿತು. ದಣಿವಾದ ಮನಸ್ಸಿಗೆ ಇಂತಹ ಸಂಗೀತ ತುಂಬಾನೇ ಅವಶ್ಯಕ , ದಿವ್ಯ ಔಷಧ.... ಮೊದಲು ಬಾರಿ ಈ ಸಂಗೀತ ಕೇಳಿದೊಡನೆ ನಿಮ್ ಚಾನೆಲ್‌ ಸಬ್ ಸ್ಕ್ರೈಬ್ ಆದೆ. ಒಂದೊಂದು ಸಾಲು ಅತ್ಯದ್ಭುತ❤

    • @sk-qn6ne
      @sk-qn6ne 2 หลายเดือนก่อน

      ನಿಜವಾಗಿಯೂ ಸಾಹಿತ್ಯ ಅತ್ಯದ್ಭುತ

  • @shridharchakkadi2658
    @shridharchakkadi2658 4 หลายเดือนก่อน +1

    ಕೇಳಿ ಮನಸು ಹಗುರಾಯಿತು ಗುರುಗಳೆ 🙏 ಉತೃಷ್ಟ ಸಾಹಿತ್ಯ, ಸವಿಯಾದ ಗಾಯನ, ಇಂಪಾದ ಸಂಗೀತ
    ಸುಗಮ್ಯ ❤❤

    • @Ravindranayaksannakkibettu
      @Ravindranayaksannakkibettu  4 หลายเดือนก่อน

      ನಿಮ್ಮ ಪ್ರತಿಕ್ರಿಯೆ ಸ್ಫೂರ್ತಿ ತುಂಬಿದೆ❤️❤️❤️

  • @cmanju5229
    @cmanju5229 หลายเดือนก่อน

    ಈ ಹಾಡು ಹಾಡಿದ ಮಹಾನುಬಾವನಿಗೆ ಇದೋ ನನ್ನ ವಂದನೆಗಳು ನನ್ನ ಕತೆ ಈಗೆ ಇದೆ ಸೂಪರ್

  • @veenabhat2284
    @veenabhat2284 5 หลายเดือนก่อน +2

    ಆಹಾ ಎಂತಹ ಅದ್ಭುತ ಕಲ್ಪನೆ, ಸಾಹಿತ್ಯ ರವೀಂದ್ರ ಸರ್ 🙏🙏

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದ❤️
      ನಿಮ್ಮ ಆಪ್ತರಲ್ಲಿ share ಮಾಡಿ💐

  • @Heavenzone2004
    @Heavenzone2004 4 หลายเดือนก่อน +3

    ಈ ಹಾಡು ಅದ್ಭುತವಾಗಿದೆ. ಕೇಳಿದ ಮೇಲೆ ನನ್ನ ಕಣ್ಣುಗಳು ನೀರಾಯಿತು.ನಿಮ್ಮ ಧ್ವನಿ ಅತ್ಯಂತ ಅದ್ಭುತವಾಗಿದೆ. ಹಾಡುವುದನ್ನು ಎಂದಿಗೂ ನಿಲ್ಲಿಸಬೇಡಿ. ನಿಮ್ಮ ಹೊಸ ಹಾಡುಗಳನ್ನು ಕೇಳಲು ನಾವು ಯಾವಾಗಲೂ ಕಾದಿರುತ್ತೇವೆ.❤🥹

    • @Ravindranayaksannakkibettu
      @Ravindranayaksannakkibettu  4 หลายเดือนก่อน

      ಹೌದು, ಭಾವನೆಗಳನ್ನು ಉದ್ದೀಪಿಸುವ ದನಿ ರಾಘವೇಂದ್ರ ಬೀಜಾಡಿ ಅವರದ್ದು❤️
      ಧನ್ಯವಾದ ನಿಮಗೆ, ಭಾವಗೀತೆ ಕೇಳಿ ಪ್ರತಿಕ್ರಿಯಿಸಿ ಸ್ಫೂರ್ತಿ ತುಂಬಿದ್ದೀರಿ❤️

  • @jayarampaniyadi615
    @jayarampaniyadi615 5 หลายเดือนก่อน +2

    ಪಲ್ಲವಿಯಲ್ಲೇ ಹಾಡಿನ ಸೊಗಸು ಅತ್ಯಂತ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು ಸರ್.

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಕಾವ್ಯಸೂಕ್ಷ್ಮಗ್ರಾಹಿಯಾದ ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿತು. ಥ್ಯಾಂಕ್ಯೂ ಸರ್❤️

  • @avvannaavaralli5663
    @avvannaavaralli5663 4 หลายเดือนก่อน +1

    ಅದ್ಭುತವಾದ ಕಂಠ ನಿಮ್ದು ತುಂಬಾ ಚೆನ್ನಾಗಿ ಹಾಡಿದಿರ👍🏼

  • @Vijayashree-A1382
    @Vijayashree-A1382 5 หลายเดือนก่อน +1

    ಅಬ್ಬಾ ಎಂತಹ ಸಾಹಿತ್ಯ ನಿಮ್ಮದು ಸರ್, ಎದೆಯ ಭಾವ ಕರಗೋಹಾಗಿದೆ... ❤❤
    ಬೀಜಾಡೆ ಸರ್ ನಿಮ್ದು ಸಂಗೀತ, ಗಾಯನ ಅದ್ಭುತ ..🙏🥰

  • @sureshk7690
    @sureshk7690 3 หลายเดือนก่อน +1

    ಚೆನ್ನಾಗಿದೆ ಸಾಹಿತ್ಯ, ಸಂಗೀತ ಮತ್ತು ಧ್ವನಿ. ಮತ್ತಷ್ಟು ನವ ನವೀನ ಹಾಡುಗಳು ಬರಲಿ.

    • @Ravindranayaksannakkibettu
      @Ravindranayaksannakkibettu  3 หลายเดือนก่อน

      ನಿಮ್ಮ ಪ್ರೋತ್ಸಾಹ ಸ್ಫೂರ್ತಿ ತುಂಬಿದೆ❤️

  • @bmirshad8010
    @bmirshad8010 5 หลายเดือนก่อน +3

    ಅದ್ಭುತ ರವೀಂದ್ರರವರೆ, ಸಾಲುಗಳು ಹೃದಯ ತಟ್ಟುತ್ತದೆ

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️

  • @hspremaleela5744
    @hspremaleela5744 5 หลายเดือนก่อน +2

    ಕಳೆದು ಹೋದ ಭಾವಕ್ಕೆ ಹೆಣೆದ ಪದಗಳು ಅದ್ಬುತ 👌🏻👌🏻👌🏻
    ಚಂದ 🌹

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಯಾವುದೋ ಅಮೃತ ಘಳಿಗೆಯಲ್ಲಿ ಹುಟ್ಟುವ ಸಾಲುಗಳು ನನಗೂ ಬೆರಗು❤️

  • @PRD821
    @PRD821 5 หลายเดือนก่อน +4

    ನಿಮ್ಮ ಎಲ್ಲಾ ಗೀತೆಗಳು ಅತ್ಯ ಅಧ್ಬುತ

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಥ್ಯಾಂಕ್ಯೂ
      ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದ್ದೀರಿ. ಈ ಪ್ರೀತಿ ಸದಾ ಇರಲಿ❤️

  • @veenasrinivas487
    @veenasrinivas487 5 หลายเดือนก่อน +1

    ಹೃದಯಕ್ಕೆ ತಾಕುವಂತ ಭಾವಪೂರ್ಣ ಸಾಹಿತ್ಯ ಮತ್ತು ಸಂಗೀತ.

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️❤️❤️

  • @savitrivs779
    @savitrivs779 4 หลายเดือนก่อน +2

    ಅದ್ಭುತ ಸಾಲುಗಳು...
    ಮನ ಮುಟ್ಟಿತು.. ಹೃದಯ ತಟ್ಟಿತು 🙏

    • @Ravindranayaksannakkibettu
      @Ravindranayaksannakkibettu  4 หลายเดือนก่อน

      ನಿಮ್ಮ ಪ್ರೋತ್ಸಾಹ ಸದಾ ಇರಲಿ
      ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ ಹರಸಿ
      ನಿಮ್ಮ ಆಪ್ತರೊಂದಿಗೆ ಈ ಗೀತೆಗಳನ್ನು ಹಂಚಿಕೊಳ್ಳಿ❤️

  • @stumbagi1934
    @stumbagi1934 12 วันที่ผ่านมา +1

    Supr song

  • @jeevangaikwad8372
    @jeevangaikwad8372 5 หลายเดือนก่อน +2

    ಪ್ರತಿ ಒಂದು ಸಾಲಿನಲ್ಲಿ ಅರ್ಥಪೂರ್ಣವಾದ ಸಾಲುಗಳಿವೆ ತುಂಬಾ ಅದ್ಭುತ ಸಾಹಿತ್ಯ ಹಾಡಿದವರು ಕೂಡ ತುಂಬಾ ಚೆನ್ನಾಗಿ ಹಾಡಿದ್ದಾರೆ ❤

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಥ್ಯಾಂಕ್ಯೂ ಜೀವನ್ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️❤️❤️

  • @supritakr
    @supritakr 5 หลายเดือนก่อน +2

    ಕವಿಗಳೇ‌ 👌👌👌♥
    ಚಂದದ ಭಾವಗೀತೆ 😍
    ಅಭಿನಂದನೆಗಳು 🎉

  • @pushyakadekkana600
    @pushyakadekkana600 4 หลายเดือนก่อน +1

    ಅರ್ಥ ಪೂರ್ಣ ಸಾಹಿತ್ಯ ಕವಿಗಳೇ.
    ಹಾಡಿದ ಶೈಲಿಯು ಮನ ಮುಟ್ಟಿತು ❤️

    • @Ravindranayaksannakkibettu
      @Ravindranayaksannakkibettu  4 หลายเดือนก่อน

      ಸ್ಫೂರ್ತಿ ತುಂಬಿತು ನಿಮ್ಮ ಪ್ರತಿಕ್ರಿಯೆ❤️

  • @lifeisgreat3393
    @lifeisgreat3393 5 หลายเดือนก่อน +1

    ಅದ್ಬುತವಾದ ಸಾಲುಗಳು ಎಷ್ಟು ನೋವು ಅಲ್ಲಿ ಇದ್ರು ಮನಸಿಗೆ ಸಮಾಧಾನ ಅಯ್ತು ಈ ಗೀತೆ ಕೇಳಿ... ಅಮ್ಮ miss ಯು 😢😢

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಮಡುಗಟ್ಟಿದ ನೋವು ಕರಗಲಿ...ನೆಮ್ಮದಿ ಸಿಗಲಿ
      ಧನ್ಯವಾದ ನೀವು ಕೇಳಿ ಪ್ರತಿಕ್ರಿಯಿಸಿದ್ದಕ್ಕೆ❤️
      ಈ ಭಾವಗೀತೆ ಕೇಳಿ
      th-cam.com/video/eQMVh7nZwCU/w-d-xo.htmlsi=bnnOgN9abZO7PqZl

  • @shreelatabhat673
    @shreelatabhat673 5 หลายเดือนก่อน +3

    ಏನ್ ಚಂದ ಗಾಯನ ಸಾಹಿತ್ಯ ಸಂಗೀತ ವಾವ್ ಸೂಪರ್ 🎉❤

  • @shambhavibhimappadevarushi4260
    @shambhavibhimappadevarushi4260 5 หลายเดือนก่อน +25

    ಸಂಗೀತ ಬೇರೆ ರಾಗದಲ್ಲಿ ಮಾಡ್ಬೇಕಿತ್ತು ಅನ್ಸುತ್ತೆ ಯಾಕಂದ್ರೆ ಎಲ್ಲ ಹಾಡುಗಳು ಒಂದೇ ಥರ ಅನ್ಸತ್ತೆ ಕೇಳೋಕೆ

    • @Ravindranayaksannakkibettu
      @Ravindranayaksannakkibettu  5 หลายเดือนก่อน +10

      ಧನ್ಯವಾದ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ. ಖಂಡಿತಾವಾಗಿಯೂ ಪರಿಶೀಲಿಸುತ್ತೇವೆ❤️

    • @shambhavibhimappadevarushi4260
      @shambhavibhimappadevarushi4260 5 หลายเดือนก่อน +2

      ತಪ್ಪಾಗಿದ್ರೆ ದಯವಿಟ್ಟು ಕ್ಷಮೆ ಇರಲಿ 🙏

    • @manju8027
      @manju8027 5 หลายเดือนก่อน +3

      ನಿಮ್ಮ ಅನಿಸಿಕೆ ನಿಜ ಅನ್ನಿಸುತ್ತೆ 👍
      ಸಾಹಿತ್ಯ ಚೆನ್ನಾಗಿದೆ ರಾಗ ಸಂಯೋಜನೆ ಎಲ್ಲೊ ಕೇಳಿದ ಹಾಗೆ ಮತ್ತು ಹೃದಯಕ್ಕೆ ತಟ್ಟುತಿಲ್ಲ

    • @manjunathmanju2011
      @manjunathmanju2011 4 หลายเดือนก่อน +1

      Artha grahike bere ide

    • @krishnashetty7359
      @krishnashetty7359 4 หลายเดือนก่อน

      I am also feel same

  • @user-fj7me7kr1y
    @user-fj7me7kr1y 5 หลายเดือนก่อน +1

    Yedeya bhavagalella hoahommidantide e sahitya raga mathra bere iddidre innu chenda irtittu,,,adru manassu badidaga kelalebekada hadu. ❤❤

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ❤️

  • @ShivuShivu-hj6nr
    @ShivuShivu-hj6nr 4 หลายเดือนก่อน +1

    ಈ ಭಾವ ಗೀತೆ ಕೇಳಿ ನನ್ನ ಮನಸ್ಸು ತುಂಬಾ ಹಗುರವಾಇತು.❤

    • @Ravindranayaksannakkibettu
      @Ravindranayaksannakkibettu  4 หลายเดือนก่อน +1

      ಕವಿತೆಯ ಗೆಲುವು ಇದು❤️
      ನಿಮ್ಮ ಬಳಗದಲ್ಲಿ ಹಾಡನ್ನು ಹಂಚಿಕೊಳ್ಳಿ. ಹೆಚ್ಚು ಜನರಿಗೆ ತಲುಪಲಿ🙏
      ಧನ್ಯವಾದ ಸರ್ ಪ್ರತಿಕ್ರಿಸಿದ್ದಕ್ಕೆ. ಈ ಚಾನೆಲ್ ನ ಇತರ ಹಾಡುಗಳನ್ನೂ ಕೇಳಿ ಬಿಡುವಿದ್ದಾಗ💐

  • @shanthashantha1633
    @shanthashantha1633 4 หลายเดือนก่อน +2

    Very good beautiful and meaningful sahithya super👍 singing🎤 God bless you🙏

  • @knagaraja1306
    @knagaraja1306 5 หลายเดือนก่อน +2

    ಅದ್ಭುತ ವಾದ ಸಾಹಿತ್ಯ, ಮನದಲಿ ನಾಟುವ ಸಂಗೀತ ಸರ್ 🎉❤

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ತುಂಬಾ ತುಂಬಾ ಧನ್ಯವಾದ❤️❤️❤️

  • @venkatramanahegde1899
    @venkatramanahegde1899 5 หลายเดือนก่อน +1

    ಹಾಗೆ ಮೈಮರೆಯುವ ಸಾಹಿತ್ಯ, ಸಂಗೀತ, ಧ್ವನಿ ... 🥺❤❤

    • @Ravindranayaksannakkibettu
      @Ravindranayaksannakkibettu  5 หลายเดือนก่อน +1

      ನಿಮ್ಮ ಪ್ರತಿಕ್ರಿಯೆ ಸ್ಫೂರ್ತಿ ತುಂಬಿದೆ❤️

  • @vanishreek.gurumurthy6119
    @vanishreek.gurumurthy6119 5 หลายเดือนก่อน +2

    ಮನಸು ಮುಟ್ಟುವ ಸಾಹಿತ್ಯ.... ನನ್ನ ಪ್ರತಿಯೊಂದು ಭಾವನೆಗಳನ್ನು ನಿಮ್ಮ ಈ ಭಾವಗೀತೆಯ ಪ್ರತಿ ಸಾಲಿನಲ್ಲೂ ಹಿಡಿದಿಟ್ಟಿದಂತಿದೆ❤❤.... ಧನ್ಯವಾದಗಳು

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಪೂರ್ತಿ ಭಾವಗೀತೆ ಕೇಳುವ ಕೆಲವೇ ಕಾವ್ಯರಸಿಕರಲ್ಲಿ ನೀವೊಬ್ಬರು very very special. ಸೂಕ್ಷ್ಮಕಾವ್ಯಗ್ರಾಹಿ. ನಿಮ್ಮಂತಹ ಕೇಳುಗರಿರುವುದೇ ನನ್ನ ಬರೆಯುವ ಕಸುವು ಹೆಚ್ಚಾಗಲು ಕಾರಣ. ತುಂಬಾ ತುಂಬಾ ಧನ್ಯವಾದ❤️

    • @vanishreek.gurumurthy6119
      @vanishreek.gurumurthy6119 5 หลายเดือนก่อน +1

      ನಿಮ್ಮಂಥ ಸಾಹಿತಿಗಳು ಕೋಟಿಗೋಬ್ಬರು.... ನಿಮ್ಮನ್ನ ಭೇಟಿಯಾಗಿದ್ದೇ ನನ್ನ ಅದೃಷ್ಟ.... ಮತ್ತೊಮ್ಮೆ ನಿಮ್ಮನ್ನ ಭೇಟಿಯಾಗುವ ಹಂಬಲ ಹೆಚ್ಚುತ್ತಲೇ ಇದೆ.... ಅತ್ಯಂತ ಸರಳ ಸುಂದರ ಸಹೃದಯಿ ಕವಿ ನೀವು.... ನಿಮ್ಮ ಪ್ರತೀ ಭಾವಗೀತೆಯ ಕೇಳುಗಳು ನಾನು.... ನಿಮ್ಮ ಭಾವನೆ ತುಂಬಿದ ಭಾವಗೀತೆ ಹೊರಹೊಮ್ಮುವುದನ್ನೇ ಕಾಯುತ್ತಿರುವ ಕೇಳುಗಳು ನಾನು ಶಬರಿಯಂತೆ​@@Ravindranayaksannakkibettu

    • @Ravindranayaksannakkibettu
      @Ravindranayaksannakkibettu  5 หลายเดือนก่อน

      @@vanishreek.gurumurthy6119
      ಎತ್ತರಕ್ಕೇರಿಸಿ ದೂರ ಇಡಬೇಡಿ. ಜೊತೆಯಲ್ಲಿ ನಡೆಯುವ ಮಾತಾಡುವ ಸಲಿಗೆ ಹೀಗೆಯೇ ಇರಲಿ. ಮತ್ತಷ್ಟು ಹೊಸ ಭಾವಗೀತೆ, ಎರಡು ಗಜಲ್ ವಿಡಿಯೋ ಆಗ್ತಿದೆ. ಸದ್ಯದಲ್ಲಿಯೇ ಸಿಗಲಿದೆ.
      ಈ ಸಲ ಆರಾಮದಲ್ಲಿ ಕೂತು ಮಾತಾಡುವ ಹಾಗೆ ಭೇಟಿಯಾಗ್ತೇನೆ❤️

    • @Ravindranayaksannakkibettu
      @Ravindranayaksannakkibettu  5 หลายเดือนก่อน

      @@vanishreek.gurumurthy6119
      ಎತ್ತರಕ್ಕೇರಿಸಿ ದೂರ ಇಡಬೇಡಿ. ಜೊತೆಯಲ್ಲಿ ನಡೆಯುವ ಮಾತಾಡುವ ಸಲಿಗೆ ಹೀಗೆಯೇ ಇರಲಿ. ಮತ್ತಷ್ಟು ಹೊಸ ಭಾವಗೀತೆ, ಎರಡು ಗಜಲ್ ವಿಡಿಯೋ ಆಗ್ತಿದೆ. ಸದ್ಯದಲ್ಲಿಯೇ ಸಿಗಲಿದೆ.
      ಈ ಸಲ ಆರಾಮದಲ್ಲಿ ಕೂತು ಮಾತಾಡುವ ಹಾಗೆ ಭೇಟಿಯಾಗ್ತೇನೆ❤️

    • @Ravindranayaksannakkibettu
      @Ravindranayaksannakkibettu  5 หลายเดือนก่อน

      @@vanishreek.gurumurthy6119
      ಎತ್ತರಕ್ಕೇರಿಸಿ ದೂರ ಇಡಬೇಡಿ. ಜೊತೆಯಲ್ಲಿ ನಡೆಯುವ ಮಾತಾಡುವ ಸಲಿಗೆ ಹೀಗೆಯೇ ಇರಲಿ. ಮತ್ತಷ್ಟು ಹೊಸ ಭಾವಗೀತೆ, ಎರಡು ಗಜಲ್ ವೀಡಿಯೋ ಆಗ್ತಿದೆ. ಸದ್ಯದಲ್ಲಿಯೇ ಸಿಗಲಿದೆ.
      ಈ ಸಲ ಆರಾಮದಲ್ಲಿ ಕೂತು ಮಾತಾಡುವ ಹಾಗೆ ಭೇಟಿಯಾಗ್ತೇನೆ❤️

  • @padmasridhar1486
    @padmasridhar1486 5 หลายเดือนก่อน +2

    Very nice👏, ಉತ್ತಮ ಸಾಹಿತ್ಯ, ಸಂಗೀತ, ಗಾಯನ..ಎಲ್ಲವೂ 👌👌👌

    • @Ravindranayaksannakkibettu
      @Ravindranayaksannakkibettu  5 หลายเดือนก่อน +1

      ನಿಮ್ಮ ಪ್ರೀತಿಪ್ರೋತ್ಸಾಹ ಹೊಸ ಉತ್ಸಾಹ ಸ್ಫೂರ್ತಿ ತುಂಬಿದೆ❤️

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ನಿಮ್ಮ ಪ್ರೀತಿಪ್ರೋತ್ಸಾಹ ಹೊಸ ಉತ್ಸಾಹ ಸ್ಫೂರ್ತಿ ತುಂಬಿದೆ❤️

  • @VeeragangadhargoudVPatel
    @VeeragangadhargoudVPatel 3 หลายเดือนก่อน

    ನಿಮ್ಮ ಸಾಹಿತ್ಯ ಸಂಗೀತಕ್ಕೆ ಮಾತುಗಳೇ ಬಾರದೆ ಹೋದವು ❤

  • @pushpak7271
    @pushpak7271 5 หลายเดือนก่อน +1

    Unexpectedly I got this song, after listening 3 times, iam dropping message here...
    What a lines, you have written really outstanding... And singing is too excellent...
    May God bless more strength to poet's hand n singer's voice...

    • @Ravindranayaksannakkibettu
      @Ravindranayaksannakkibettu  5 หลายเดือนก่อน +1

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ತೀತಿಪ್ರೋತ್ಸಾಹಕ್ಕೆ. ನೀವು ಕೇಳಿ ಪ್ರತಿಕ್ರಿಯಿಸಿದ್ದು ಸ್ಫೂರ್ತಿ ತುಂಬಿದೆ
      ಈ ಭಾವಗೀತೆ
      ನೂರು ನೋವಿನ ನಡುವೆ ಒಂದು ನಗೆಯು ಕಾಡಿ
      th-cam.com/video/eQMVh7nZwCU/w-d-xo.htmlsi=bnnOgN9abZO7PqZl
      ಬಿಡುವಿದ್ದಾಗ ಕೇಳಿ

  • @shrikantbadiger5289
    @shrikantbadiger5289 5 หลายเดือนก่อน +1

    ಧನ್ಯವಾದಗಳು ಸರ್ ಸಂಗೀತಕ್ಕೆ ವಯಸ್ಸಿನ ಭೇದವಿಲ್ಲ ನಾವು ಚೊಕ್ಕ ಮನಸ್ಸಿನಿಂದ ಕೇಳಿ ಆನಂದಿಸಿದೆ ❤🙏🏻

    • @Ravindranayaksannakkibettu
      @Ravindranayaksannakkibettu  5 หลายเดือนก่อน +1

      ಹೌದು ಸಂಗೀತಕ್ಕೆ ದೇಶ ಬಾಷೆ ವಯಸ್ಸುಗಳ ಭೇದವಿಲ್ಲ. ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️

  • @MythiliSRam
    @MythiliSRam 5 หลายเดือนก่อน +2

    Marvelous meaningful song melodiousely singing wonderful lyrics beautiful music composition awesome video graphics

  • @nagarajdevali7389
    @nagarajdevali7389 4 หลายเดือนก่อน +1

    ❤❤ಸೂಪರ್ ಸರ್ ಸಾಹಿತ್ಯ, ಗಾಯನ, ಸಂಗೀತ ಸಂಯೋಜನೆ 👌🏻👌🏻👌🏻🙏🏻🙏🏻

    • @Ravindranayaksannakkibettu
      @Ravindranayaksannakkibettu  4 หลายเดือนก่อน

      ತುಂಬಾ ಖುಷಿ ಆಯ್ತು ನೀವು ಕೇಳಿ ಪ್ರತಿಕ್ರಿಯಿಸಿದ್ದು❤️

  • @PRD821
    @PRD821 5 หลายเดือนก่อน +2

    ಎದೆಯ ಬಾವವು ಕರಗಿ ಕಾಲಿ ಯಾಗಿದೆ ನೋವು .....ನಿಮ್ಮ ಸಾಹಿತ್ಯ ಕ್ಕೆ ನಮ್ಮ ನಮನಗಳು ಮನಸು ಕಂಗಳಲಿ ತೇಲಿತು

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಧನ್ಯವಾದ ಸರ್ ನಿಮ್ಮ ಪ್ರತಿಕ್ರಿಯೆಗೆ. ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ❤️

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಧನ್ಯವಾದ ಸರ್ ನಿಮ್ಮ ಪ್ರತಿಕ್ರಿಯೆಗೆ. ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ❤️

  • @shanthashantha1633
    @shanthashantha1633 4 หลายเดือนก่อน +2

    Very good sahithya meaningful super👍 singing🎤 God bless you🙏

  • @VeerappaYaragoppa
    @VeerappaYaragoppa หลายเดือนก่อน

    ಅತೀ ಅದ್ಬುತವಾದ ಕವಿತೆ ಸ್ವಾಮಿ👌⚘️⚘️

  • @jeevanramsullia
    @jeevanramsullia 4 หลายเดือนก่อน +1

    ಸೊಗಸಾದ, ಭಾವಪೂರ್ಣ, ಅರ್ಥಪೂರ್ಣ ಹಾಡು!!

    • @Ravindranayaksannakkibettu
      @Ravindranayaksannakkibettu  4 หลายเดือนก่อน

      ತುಂಬಾ ತುಂಬಾ ಧನ್ಯವಾದ ಸರ್...ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️
      ಬಿಡುವಿದ್ದಾಗ ಕೇಳಿ
      th-cam.com/video/eQMVh7nZwCU/w-d-xo.htmlsi=bnnOgN9abZO7PqZl

  • @saraswathiranganath6947
    @saraswathiranganath6947 5 หลายเดือนก่อน +2

    ಧನ್ಯವಾದಗಳು ಸರ್ , ಅತ್ಯದ್ಬುತ ಸಾಹಿತ್ಯಕ್ಕೆ..

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ನಿಮ್ಮ ಪ್ರೀತಿಪ್ರೋತ್ಸಾಹದಿಂದ ಸಾಧ್ಯವಾಗಿದೆ❤️

  • @manjurajhn2790
    @manjurajhn2790 5 หลายเดือนก่อน +1

    ಅದ್ಭುತ........ಹಲವು ಸಲ ಕೇಳಬೇಕೆನಿಸಿದೆ. ಮಾತ್ರವಲ್ಲ, ಕುರಿತು ಬರೆಯಬೇಕೆನಿಸಿದೆ

    • @Ravindranayaksannakkibettu
      @Ravindranayaksannakkibettu  5 หลายเดือนก่อน +1

      ಬರೆಯಿರಿ ಸರ್. ಕೂತು ಬರೆತಾಗಲೇ ಕೆಲವು ಸಂಗತಿಗಳು ಹೆಚ್ಚು ಆಪ್ತವಾಗುತ್ತವೆ❤️

    • @manjurajhn2790
      @manjurajhn2790 5 หลายเดือนก่อน

      @@Ravindranayaksannakkibettu ಈಗಾಗಲೇ ನಿಮ್ಮದೊಂದು ಕವಿತೆ "ನಿಂದೆಯೊಳು ಮಿಂದು....." ಕುರಿತು ಬರೆದಿದ್ದೇನೆ.
      ಅರುಹು ಕುರುಹು ISSN ಪತ್ರಿಕೆಯಲ್ಲಿ ಇಂದು ಪ್ರಕಟವಾಗಿದೆ. ಲೇಖನದ ಹೆಸರು : ನಿಂದನೆ ಗೆ ವಂದನೆ !
      ನಿಮಗೆ ಕಳಿಸುವ ಬಗೆ ಹೇಗೆ?
      ದಯಮಾಡಿ ಸಂಪರ್ಕ ಸಂಖ್ಯೆ ಅಥವಾ ಮೇಲ್ ಐಡಿ ಕೊಡುವಿರಾ? 👍🙏〽️

  • @Abhishek_ಶಾಸ್ತ್ರಿ
    @Abhishek_ಶಾಸ್ತ್ರಿ 3 หลายเดือนก่อน

    ಹಾಡು,ಸಂಗೀತ ಹಾಗೂ ಚಿತ್ರೀಕರಣ ಎಲ್ಲವೂ ಅದ್ಭುತ! Beautifully done!. Please continue producing such creative bhavageete. It has a new swag! which is very soothing for this generation.

    • @Ravindranayaksannakkibettu
      @Ravindranayaksannakkibettu  3 หลายเดือนก่อน

      Thank you sir
      ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ ಶರಣು❤️
      th-cam.com/video/eQMVh7nZwCU/w-d-xo.htmlsi=bnnOgN9abZO7PqZl
      ಬಿಡುವಿದ್ದಾಗ ಕೇಳಿ

  • @serene_soul_958
    @serene_soul_958 5 หลายเดือนก่อน +1

    ಇನ್ನಷ್ಟು ಭಾವಗೀತೆಗಳು ಮೂಡಿಬರಲಿ ❤❤

    • @Ravindranayaksannakkibettu
      @Ravindranayaksannakkibettu  5 หลายเดือนก่อน +1

      ಖಂಡಿತವಾಗಿಯೂ ಮತ್ತಷ್ಟು ಹಾಡುಗಳನ್ನು ಸದ್ಯದಲ್ಲಿಯೇ Upload ಮಾಡ್ತೇನೆ❤️

  • @manikantharaj.h
    @manikantharaj.h 5 หลายเดือนก่อน +1

    ನೊಂದ ಮನಸಿಗೆ ನೆಮ್ಮದಿಯ ಲ್ಲಾಲಿಹಾಡು.......

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಧನ್ಯವಾದ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ❤️

  • @rukmayagowda3260
    @rukmayagowda3260 2 หลายเดือนก่อน

    ನಿಜವಾ ಗಿ ಜೋರು ಅಳು ಬರ್ತಾ ಇದೆ.... ಬದುಕಿಕೆ ಅರ್ಥಪೂರ್ಣ ಹಾಡು

    • @Ravindranayaksannakkibettu
      @Ravindranayaksannakkibettu  2 หลายเดือนก่อน

      ಯಾರ ಎದೆಕದವನ್ನು ನೀನು ತಟ್ಟುವೆಯೋ
      ದೊರೆತರಷ್ಟೇ ಸಾಕು ನಗೆಯ ಸ್ವಾಗತವು❤️

  • @sugunasgowda2163
    @sugunasgowda2163 4 หลายเดือนก่อน +1

    ಕಳೆದು ಹೋದ ಭಾದಕೆ ಹೆಣೆದಫದಗಳು......ಅದ್ಭುತ......

    • @Ravindranayaksannakkibettu
      @Ravindranayaksannakkibettu  4 หลายเดือนก่อน

      ಧನ್ಯವಾದ ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️
      ನಿಮ್ಮ ಆಪ್ತ ಬಳಗದಲ್ಲಿ ಹಾಡನ್ನು ಹಂಚಿಕೊಳ್ಳಿ❤️

    • @Ravindranayaksannakkibettu
      @Ravindranayaksannakkibettu  4 หลายเดือนก่อน

      ಧನ್ಯವಾದ ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️
      ನಿಮ್ಮ ಆಪ್ತ ಬಳಗದಲ್ಲಿ ಹಾಡನ್ನು ಹಂಚಿಕೊಳ್ಳಿ❤️

  • @Suryatv139
    @Suryatv139 4 หลายเดือนก่อน

    ಭಾವನೆ ಗಳನ್ನು ಹೊರಗಡೆ ಹಾಕುವ ಗೀತೆ ಗಳೂ ಒಂದೇ ತರ ಇರೋದು 🙏

  • @sathwikschannel2564
    @sathwikschannel2564 หลายเดือนก่อน +1

    ಧನ್ಯವಾದಗಳು....🙏

  • @seethak4068
    @seethak4068 5 หลายเดือนก่อน +2

    As usual another touching song Awesome song sir💐💐

  • @AnithaManjunath-x1k
    @AnithaManjunath-x1k หลายเดือนก่อน +1

    ತುಂಬಾ ಅದ್ಭುತವಾದ ಸಾಹಿತ್ಯ❤❤❤😂

  • @mallikasnayak6318
    @mallikasnayak6318 5 หลายเดือนก่อน +2

    ಕರಗಿದ ಭಾವ...ಹೃದ್ಯವಾಗಿದೆ 🙏

  • @vijaykuamr6866
    @vijaykuamr6866 4 หลายเดือนก่อน +1

    ಅರ್ಥಗರ್ಬಿತವಾದ ಹಾಡು ಸರ್ 🙏🙏🙏 😢

  • @krishnaveniv1097
    @krishnaveniv1097 5 หลายเดือนก่อน +4

    ನಿಜವಾಗಲೂ ಅದ್ಭುತ ಸಾಲುಗಳು ಸರ್.., ಆಧುನಿಕ ಭಾವಗೀತೆಯ ಕವಿ..

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಧನ್ಯವಾಯ್ತು ಕವಿತೆ❤️
      ಕೇಳಿ ಅಭಿಪ್ರಾಯ ತಿಳಿಸಿ ಪ್ರೋತ್ಸಾಹ ನೀಡಿದ್ದೀರಿ. ಥ್ಯಾಂಕ್ಯೂ❤️

  • @shivananddbb2478
    @shivananddbb2478 2 หลายเดือนก่อน +1

    🙏🙏🙏🙏🙏 ತುಂಬಾ ಅದ್ಭುತ ವಾದ ಸಾಹಿತ್ಯ.

    • @Ravindranayaksannakkibettu
      @Ravindranayaksannakkibettu  2 หลายเดือนก่อน

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
      th-cam.com/video/1kTsvmyygGY/w-d-xo.html
      ಬಿಡುವಿದ್ದಾಗ ಕೇಳಿ

  • @santosh8491
    @santosh8491 หลายเดือนก่อน +1

    ಅತ್ಯಂತ ಅರ್ಥಪೂರ್ಣವಾದ ಹಾಡು🎤🎤

    • @Ravindranayaksannakkibettu
      @Ravindranayaksannakkibettu  หลายเดือนก่อน

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ತೀತಿಪ್ರೋತ್ಸಾಹಕ್ಕೆ❤️

    • @Ravindranayaksannakkibettu
      @Ravindranayaksannakkibettu  หลายเดือนก่อน

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ತೀತಿಪ್ರೋತ್ಸಾಹಕ್ಕೆ❤️

  • @PradeepHarigal
    @PradeepHarigal 2 หลายเดือนก่อน +1

    ತುಂಬಾ ಅರ್ಥಪೂರ್ಣ ವಾಗಿದೆ

    • @Ravindranayaksannakkibettu
      @Ravindranayaksannakkibettu  2 หลายเดือนก่อน

      ಸ್ಫೂರ್ತಿ ತುಂಬಿದೆ ನಿಮ್ಮ ಮಾತು❤️

  • @gpadmavathigpadmavathi1631
    @gpadmavathigpadmavathi1631 4 หลายเดือนก่อน

    ಧನ್ಯ ವಾದಗಳು ರವೀಂದ್ರ ಸರ್ ಅದ್ಬುತ ಗಾಯನ.

  • @journeygears
    @journeygears 5 หลายเดือนก่อน +2

    ಅರ್ಥಗರ್ಭಿತ.. ಸಾಲುಗಳು

  • @aldurchandru6651
    @aldurchandru6651 5 หลายเดือนก่อน +2

    ವ್ಹಾವ್.. ಚೆನ್ನಾಗಿದೆ 😍👌

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ತುಂಬಾ ತುಂಬಾ ಧನ್ಯವಾದ 💐
      ಹಾಡು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️

  • @shashidharhjshashidharhj8254
    @shashidharhjshashidharhj8254 5 หลายเดือนก่อน +1

    Lyrics is just replica of my life😢😢😢
    Thanks for the song

  • @krishnamoorthinayakasj9257
    @krishnamoorthinayakasj9257 5 หลายเดือนก่อน +2

    ಮನಮುಟ್ಟುವ ಹಾಡು

  • @shilpaacharya4244
    @shilpaacharya4244 4 หลายเดือนก่อน +1

    No words , heart touching,well sung!

  • @arunhalyalsinger
    @arunhalyalsinger หลายเดือนก่อน

    ❤❤❤ ಭಾವನೆಗಳ ಭಾವಂತರಂಗ 😊😊😊😊😊

  • @ravimoolya4855
    @ravimoolya4855 4 หลายเดือนก่อน

    Adbhuthavada saalugalu ... sahitya 😢❤👌👌👌👌

  • @geetarwalikar5262
    @geetarwalikar5262 5 หลายเดือนก่อน +2

    Thumba chennagide👌💐

  • @soumyab904
    @soumyab904 หลายเดือนก่อน

    😢😢manassige Muda needi jeevanada sattya arthaisuvike ide.....hrudaya tumbi bantu

  • @krishnanb5565
    @krishnanb5565 5 หลายเดือนก่อน +1

    Raghvendra bijadi avaru thumba adbuta gayana ❤️🧡💛💚🩵

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಹೌದು. ಅವರು ಒಳ್ಳೆಯ ಸುಗಮಸಂಗೀತ ಗಾಯಕರು❤️
      Thank you

  • @basavarajc7927
    @basavarajc7927 13 วันที่ผ่านมา +1

    • @Ravindranayaksannakkibettu
      @Ravindranayaksannakkibettu  8 วันที่ผ่านมา

      Thank you ❤️
      ಈ ಚಾನೆಲ್ ನಲ್ಲಿ 50+ ಇಂತಹ ಹಾಡುಗಳಿವೆ. ಬಿಡುವಿದ್ದಾಗ ಕೇಳಿ
      th-cam.com/video/1kTsvmyygGY/w-d-xo.html&feature=share

  • @sumamathapati5070
    @sumamathapati5070 17 วันที่ผ่านมา

    ಬರಿ ನೋವು

  • @sarvam-w1k
    @sarvam-w1k หลายเดือนก่อน

    ಅರ್ಥ garbhitha ಹಾಡು 😢😢😢😢❤🎉

  • @parvathiaithal641
    @parvathiaithal641 4 หลายเดือนก่อน +1

    ಸೊಗಸಾದ ಭಾವಗೀತೆ...

    • @Ravindranayaksannakkibettu
      @Ravindranayaksannakkibettu  4 หลายเดือนก่อน

      ನೀವು ಇಷ್ಟಪಟ್ಟದ್ದು ಖುಷಿ❤️

  • @prathapyk4749
    @prathapyk4749 21 วันที่ผ่านมา

    Manasali novu hadaga pakkadali yaru ullada samayadali idondu song thumba bega nenapu haaguthe😢😢

  • @shashikala6748
    @shashikala6748 5 หลายเดือนก่อน +2

    ಅದ್ಭುತ

    • @Ravindranayaksannakkibettu
      @Ravindranayaksannakkibettu  5 หลายเดือนก่อน

      ಧನ್ಯವಾದ ನಿಮ್ಮ ನಿರಂತರವಾದ ಪ್ರೋತ್ಸಾಹಕ್ಕೆ❤️

  • @shakuntalashindhur9997
    @shakuntalashindhur9997 17 วันที่ผ่านมา

    Excellent 👌 congratulations 👏🎉🎉

  • @janakibasavaraju4952
    @janakibasavaraju4952 หลายเดือนก่อน

    Yake bitru gothilla thumba novide yarge helikolali😭😭😭😭😭😭😭

  • @mallikarjunbhagavati4914
    @mallikarjunbhagavati4914 หลายเดือนก่อน +1

    ❤🙏🏻🙏🏻🙏🏻

  • @GaddeshGs
    @GaddeshGs หลายเดือนก่อน +1

    👍🏽💐👌🏽

  • @GaddeshGs
    @GaddeshGs 3 วันที่ผ่านมา +1

    👍🏽💐🎉💐👌🏽

    • @Ravindranayaksannakkibettu
      @Ravindranayaksannakkibettu  2 วันที่ผ่านมา

      ಥ್ಯಾಂಕ್ಯೂ ❤️
      ಬಿಡುವಿದ್ದಾಗ ಕೇಳಿ
      th-cam.com/video/5EJfq-IOeTQ/w-d-xo.htmlsi=_5nElbHBva8IV9fz

  • @onechancemusic813
    @onechancemusic813 2 หลายเดือนก่อน

    🔥😍