ಕನಕ ದಾಸರ ಕೃತಿ.. ಅಂಗಳದೂಳು ರಾಮನಾಡಿದ..

แชร์
ฝัง
  • เผยแพร่เมื่อ 29 ก.ย. 2024
  • ಅಂಗಳದೂಳು ರಾಮನಾಡಿದ..
    ಹಾಡಿದವರು ಕುಮಾರಿ ರಚನ ಶರ್ಮ
    Lyrics :
    ಅಂಗಳದೊಳು ರಾಮನಾಡಿದ . ರಾಗ : ಅಭೇರಿ . ಆದಿ ತಾಳ. ಕನಕದಾಸ
    P: ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಠ ಮಾಡಿದ
    C1: ತಾಯಿಯ ಕರೆದು ಕೈ ಮಾಡಿ ತೋರಿದ ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
    ಚಿನ್ನಿಕೊಳು ಚಂಡು ಬೂಗುರಿ ಎಲ್ಲವ ಬೇಡ ಬೇಡ ಎಂದು ತಾ ಬಿಸಾಡಿದ
    2: ಕಂದ ಬಾ ಎಂದು ತಾಯಿ ಕರೆದಳು ಮಮ್ಮು ಉನ್ನೆಂದು ಬಣ್ಣಿಸುತ್ತಿದ್ದಳು
    ತಾಯಿ ಕೌಸಲ್ಯ ಕಳವಳ ಗೊಂಡಳು ಕಂದ ಅಂಜಿದನು ಎನ್ನುತಿದ್ದಳು
    3: ಅಳುವ ಧ್ವನಿ ಕೇಳಿ ರಾಜನು ಮಂತ್ರಿ ಸಹಿತಾಗಿ ಧಾವಿಸಿ ಬಂದನು
    ನಿಲುವ ಕನ್ನಡಿ ತಂದಿರಿಸಿದ ಶ್ರೀ ರಾಮನ ಎತ್ತಿ ಮುದ್ದಾಡಿದ
    4: ಕನ್ನಡಿಯೊಳು ಬಿಂಬ ನೋಡಿದ ಚಂದ್ರ ಸಿಕ್ಕಿದನೆಂದು ಕುಣಿದಾಡಿದ
    ಈ ಸಂಭ್ರಮ ನೋಡಿ ಆದಿ ಕೇಶವ ರಘು ವಂಶವನ್ನೇ ಕೊಂಡಾಡಿದ
    angaLadoLu rAmanADida. rAgA: AbhEri. Adi tALA. Kanakadasa.
    P: angaLadoLu rAmanADida candra bEkendu tA haTha mADidA
    C1: tAyiya karedu kai mADi tOridA mugila kaDegomme diTTisi nODida
    ciNikOLu chaNDu buguri ellava bEDa bEDa endu tA bisADidA
    2: khanda bA endu tAyi karedaLu mammu uNNEndu baNNisuttiddaLu
    tAyi kausalya kaLavaLa goNDalu kanda anjidanu ennutiddaLu
    3: ALuva dhvani kELi rAjanu mantri sahitAgi dhAvisi bandanu
    niluva kannaDi tanDisidA shrI rAmana etti muddADidA
    4: kannaDiyoLu bimba nODidA chandra sikkidanendu kuNidADidA
    I sambhrama nODi Adi kEshava raghu vamsahavannE koNDADidA

ความคิดเห็น •