ಗೋಪಾಲ ದಾಸರ ರಚನೆ.. ಏಕೆ ಮಮತೆ ಕೊಟ್ಟು ದಣಿಸುವಿ ರಂಗ..

แชร์
ฝัง
  • เผยแพร่เมื่อ 17 พ.ย. 2024
  • ಏಕೆ ಮಮತೆ ಕೊಟ್ಟು ದಣಿಸುವಿ ರಂಗ..
    ಹಾಡಿದವರು ಕುಮಾರಿ ರಚನ ಶರ್ಮ
    Lyrics : ಏಕೆ ಮಮತೆ ಕೊಟ್ಟು ದಣಿಸುವಿ ರಂಗ ?
    ನೀ ಕರುಣದಿ ಎನ್ನ ಪಾಲಿಸೋ ಕೃಷ್ಣ || ಪ ||
    ನಿನ್ನನು ಭಜಿಸಲು ಅನ್ಯ ವಿಷಯಂಗಳಿ-
    ಗೆನ್ನನೊಪ್ಪಿಸುವುದು ನೀತಿಯೇ ?
    ಮನ್ನಿಸಿ ದಯದಿ ನೀ ಎನ್ನ ಪಾಲಿಸದಿರೇ
    ನಿನ್ನ ನೇಮಕೆ ಪ್ರತಿಕೂಲನೆ ರಂಗಾ ? || 1 ||
    ತನುವು ತನ್ನದು ಅಲ್ಲ ತನು ಸ೦ಬ೦ಧಿಗಳಾರೋ
    ತನುವಾರೋ ತಾನ್ಯಾರೊ ಅವರಿಗೆ
    ಧನ ಮೊದಲಾದ ವಿಷಯಗಳ ಅನುಭವ
    ಹಿ೦ದಣ ಜನುಮದ೦ತಲ್ಲವೆ ರಂಗಾ ? || 2 ||
    ಇ೦ದ್ರಿಯ೦ಗಳ ವಿಷಯದಿ೦ದ ಭೇದಿಸೇ
    ಗೋವಿ೦ದ ನಿನ್ನ ಮನಕೆ ಬಾರದೇ ?
    ಇ೦ದಿರೆ ಅರಸ ಬ್ರಹ್ಮಾದಿವ೦ದಿತ ನಿನ್ನ
    ಬ೦ಧಕ ಶಕುತಿಗೆ ನಮೋ ನಮೋ ರಂಗಾ || 3 ||
    ಅರಿತು ಅರಿತು ಎನಗೆ ಅರೆಲವವಾದರು
    ವಿರಕುತಿ ವಿಷಯದಿ ಬಾರದು
    ಕರುಣಾಸಾಗರ ನಿನ್ನ ಸ್ಮರಣೆ ಒಂದಲ್ಲದೇ
    ಮರುಳು ನೀಗುವ ಬಗೆಗಾಣೆನೊ ರಂಗಾ || 4 ||
    ಎ೦ದಿಗೆ ಇನ್ನು ನಿನ್ನ ಚಿತ್ತಕ್ಕೆ ಬರುವುದೊ
    ಅ೦ದಿಗೆ ಉದ್ಧರಿಸೋ ಕರುಣಿಯೇ
    ಸು೦ದರ ವಿಗ್ರಹ ಗೋಪಾಲವಿಠಲ ಸುಖ
    ಸಾ೦ದ್ರ ಭವಮೋಚಕ ನಮೋ ನಮೋ ರಂಗಾ || 5 ||
  • เพลง

ความคิดเห็น •