ಶುಭ ನುಡಿಯೆ ಶಕುನದ ಹಕ್ಕಿ ದ.ರಾ.ಬೇಂದ್ರೆ HKNarayana sings a Bendre Bhavageethe

แชร์
ฝัง
  • เผยแพร่เมื่อ 10 ก.ย. 2024
  • ಶುಭ ನುಡಿಯೆ ಶಕುನದ ಹಕ್ಕಿ ದ.ರಾ.ಬೇಂದ್ರೆ HKNarayana sings a Bendre Bhavageethe
    ಶುಭ ನುಡಿಯೆ ಶಕುನದ ಹಕ್ಕಿ
    ಶುಭ ನುಡಿಯೆ 
    ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ
    ನಿದ್ದೆ ಬಳಲಿ ಬಳಿಯಲಿ ಬಂದು
    ಕೂಡಿದೆವೆಗಳಾಸರೆಯಲ್ಲಿ
    ಮೆಲ್ಲಗೆ, ಒರಗುವ ಅದನು
    ಒಂಟಿ ಸೀನು ಹಾರಿಸುತಿತ್ತ
    ಶುಭ ನುಡಿಯೆ
    ನಟ್ಟಿರುಳಿನ ನೆರಳಿನಲ್ಲಿ
    ನೊಂದ ಜೀವ ಮಲಗಿರಲಾಗಿ
    ಸವಿಗನಸನು ಕಾಣುವಾಗ
    ಗೂಗೆಯೊಂದು ಘೂಕ್ಕೆನುತಿತ್ತು
    ಶುಭ ನುಡಿಯೆ
    ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I
    ಬೆಳಗಿನ ತಂಗಾಳಿ ಬಂದು
    ನಸುಕು ಮಸುಕು ಮೂಡುತಲಿರಲು
    ಚಿಲೀ ಪಿಲೀ ಚಿಲಿಪಿಲಿ ಎಂದು
    ಹಾಲಕ್ಕಿ ಉಲಿಯುತಲಿತ್ತ
    ಶುಭ ನುಡಿಯೆ
    ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I
    ನಿನ್ನ ಸೊಲ್ಲ ನಂಬಿ ಎದ್ದೆ
    ಮೈಯೆಲ್ಲ ನಡುಕವಿದ್ದು
    ನೀನೆ ಶುಭ ನುಡಿಯುವಾಗ
    ಎನಿದ್ದೇನು? ಎಲ್ಲಾ ಶುಭವೇ!
    ಶುಭ ನುಡಿಯೆ
    ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I
    ~ ದ.ರಾ. ಬೇಂದ್ರೆ ' ನಾದಲೀಲೆ '

ความคิดเห็น • 1