ಪ್ರೇಮಗಾನ

แชร์
ฝัง
  • เผยแพร่เมื่อ 16 ต.ค. 2024
  • ರಚನೆ: ಶ್ರೀಮತಿ ಪಾರ್ವತಿ ಶಾಸ್ತ್ರಿ, ಪುತ್ತೂರು
    ರಾಗಸಂಯೋಜನೆ ಮತ್ತು ಗಾಯನ: ಶ್ರೀಮತಿ ಯಶೋದಾ ಭಟ್, ಉಪ್ಪಂಗಳ
    ದಯವಿಟ್ಟು ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ ಎಂದು ವಿನಂತಿಸುತ್ತೇನೆ
    ಪ್ರೇಮಗಾನ
    **********
    ನೀನಂದು ಬಂದು ನನ್ನೆದೆಯ ಮೀಟಿ
    ನುಡಿಸಿದ್ದೆ ಪ್ರೇಮಗಾನ|
    ನಿನಗಾಗಿ ಕಾದು ಕಂಗೆಟ್ಟ ನನಗೆ
    ದಿನವೆಲ್ಲ ನಿನ್ನ ಧ್ಯಾನ|
    ಗಿರಿಯೇರಿ ನವಿಲು ಗರಿಗಳನು
    ಬಿಚ್ಚಿ
    ಹಿಗ್ಗುತ್ತ ಕುಣಿಯುತಿಹುದು|
    ಸುರಪಾರಿಜಾತ ಹೂಮಳೆಯಗರೆದು
    ಸ್ವಾಗತವ ಕೋರುತಿಹುದು||
    ಘಮವನ್ನು ಹರಡಿ ಕರೆಯುತ್ತಲಿಹುದು
    ತಂದಿರುವ ಮಾರುಮೊಲ್ಲೆ|
    ಸುಮನಸಳೆ ಚೆಲುವೆ ಮುಡಿಸುವೆನು ಮುಡಿಗೆ
    ಬಾಬಾರೆ ನನ್ನ ನಲ್ಲೆ||
    ಹೊಂಗನಸುಗಳನು ಬಚ್ಚಿಟ್ಟುಕೊಳುತ ಕಾಣುವೆನು ಮನದ ತುಂಬ|
    ಕಂಗಳನು ಸೆಳೆದ ಬನದೊಳಗೆ ಕಂಡೆ ಸುಮಗಳಲಿ ಪ್ರೇಮ ಬಿಂಬ||
    ಸೋಲು ಗೆಲುವಲ್ಲಿ ಸಹಭಾಗಿಯಾಗಿ
    ತೃಪ್ತಿಯಲಿ ಹೆಜ್ಜೆಯಿರಿಸಿ|
    ಏಳೇಳು ಜನ್ಮ ಜೊತೆಯಾಗಿ ನಾವು ಬಾಳೋಣ ಪ್ರೇಮದರಸಿ||
    ---------------
    ಪಾರ್ವತಿ ಶಾಸ್ತ್ರಿ

ความคิดเห็น • 6

  • @bhuvaneshwaris520
    @bhuvaneshwaris520 2 หลายเดือนก่อน +1

    ❤❤❤❤

  • @PrakritiSamskriti
    @PrakritiSamskriti 2 หลายเดือนก่อน +1

    👌👌😊

  • @CBParvathi-es9qq
    @CBParvathi-es9qq 2 หลายเดือนก่อน +1

    ಬಲು ಸೊಗಸಾದ ಗಾಯನ ಮುದ ನೀಡಿದೆ,,ಬಹಳ ಸುಂದರವಾಗಿದೆ ಪ್ರಸ್ತುತಿ,🎉ಇಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು 🎉🎉

  • @gaanatharanga
    @gaanatharanga 2 หลายเดือนก่อน +1

    ಸೊಗಸಾಗಿದೆ 👍👌🌹

  • @yashodashama9561
    @yashodashama9561 2 หลายเดือนก่อน +1

    ಧನ್ಯವಾದಗಳು 🙏🙏 🙏🙏👍👍

  • @premasbhat8301
    @premasbhat8301 2 หลายเดือนก่อน +1

    ಸೊಗಸಾಗಿದೆ 🎉