ನಲಿ - ಕಲಿ ಸ್ಪರ್ಧೆ| Kannada Nali-Kali Competition 2024-25
ฝัง
- เผยแพร่เมื่อ 15 ธ.ค. 2024
- " ಕಲೆ ಎನ್ನುವುದು ಎಲ್ಲರನ್ನೂ
ಕೈಬೀಸಿ ಕರೆದರೆ ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ" ಎಂಬಂತೆ ಅಂಗಡಿ ಅಂತರಾಷ್ಟ್ರೀಯ ಶಾಲೆಯಲ್ಲಿ ದಿನಾಂಕ 30-10-2024 ರಂದು ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ ನಲಿ- ಕಲಿ ಬೋಧನಾ ಸಾಧನೆಗಳ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮವು ಮಕ್ಕಳನ್ನು ನಲಿಯುತ್ತಾ ಕಲಿಯಲು ಪ್ರೇರೇಪಿಸಿತು. ಇದು ಮಕ್ಕಳನ್ನು ಸೃಜನಶೀಲರನ್ನಾಗಿ ಮಾಡಲು ಸಹಕಾರಿಯಾಗಿದೆ, ತಮ್ಮಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಹುರಿದುಂಬಿಸುತ್ತದೆ. ಅಷ್ಟೇ ಅಲ್ಲದೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸಹಕಾರಿಯಾಗಿದೆ.ಇಂತಹ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳು ಉತ್ತಮ ರೀತಿಯಿಂದ ಭಾಗವಹಿಸಿ ತಮ್ಮ ಅತ್ಯುತ್ತಮವಾದ ಪ್ರತಿಭೆಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಕನ್ನಡ ವಿಭಾಗದ ಸಹ ಶಿಕ್ಷಕರಾದ ಶ್ರೀಮತಿ ಪಲ್ಲವಿ ಗುರ್ಜರ್ ಮತ್ತು ಶ್ರೀಮತಿ ಲಕ್ಷ್ಮಿ ಪಾಟೀಲ್ ರವರು ಕಾರ್ಯನಿರ್ವಹಿಸಿ ಉತ್ತಮವಾದ ರೀತಿಯಲ್ಲಿ ಕಾರ್ಯಕ್ರಮ ನೆರವೇರಿಸುವಲ್ಲಿ ಸಹಕರಿಸಿರುವರು.