# ಜನಪದ ಶೈಲಿಯ ಗೀತೆ #🪕ತಂಬೂರಿಯವ🪕

แชร์
ฝัง
  • เผยแพร่เมื่อ 11 ต.ค. 2024
  • 🙏 ಮಲೆನಾಡಿನ ಶಿರಸಿ ತಾಲೂಕಿನ ತೋಟದ ಸೀಮೆ ಎಂದೇ ಹೆಸರಾದ ನನ್ನ ತವರೂರಿಗೆ ಬಯಲುಸೀಮೆಯಿಂದ ಸೋರೆಕಾಯಿಯಿಂದ ತಯಾರಿಸಿದ ತಂತಿ ವಾದ್ಯ ನುಡಿಸುತ್ತ ಭಜನೆ , ಜಪಪದಗೀತೆಗಳನ್ನು ಹಾಡುತ್ತ ಬರುವ ಸಂಪ್ರದಾಯವಿಟ್ಟುಕೊಂಡ ಜನರು ಈಗಲೂ ಇದ್ದಾರೆ. ಕಿನ್ನರಿ ಎಂದು ಕರೆಯಬಹುದಾದ ತಂತಿ ವಾದ್ಯಕ್ಕೆ ಗ್ರಾಮೀಣರು ತಂಬೂರಿ ಎಂದೇ ಕರೆಯುತ್ತಾರೆ. ಆದ್ದರಿಂದ ಕವನಕ್ಕೆ ತಂಬೂರಿಯವ ಎಂದೇ ಶೀರ್ಷಿಕೆ ನೀಡಿರುತ್ತೇನೆ.
    ಸಹಕರಿಸಿದ ಪವಿತ್ರಾ ಹೆಗಡೆ ಮತ್ತು ಖ್ಯಾತ ವ್ಯಂಗ್ಯಚಿತ್ರಕಾರರಾದ ಎನ್ ಆರ್ ಹೆಗಡೆ ಬೊಮ್ಮನಳ್ಳಿ ಮತ್ತು ಅನಂತ್ ತಾಮ್ಹಣ್ಕರ್ ಮೈಸೂರು ಇವರಿಗೂ ಹೃತ್ಪೂರ್ವಕ ಧನ್ಯವಾದಗಳು 🙏
    ಸಾಹಿತ್ಯ -
    🪕ತಂಬೂರಿ /ಕಿನ್ನರಿ ಜೋಗಿ 🪕
    ಬಲು ಚಂದ ನೋಡು ಮಲೆನಾಡ ಬೀಡು
    ಸುತ್ತೆಲ್ಲ ಗುಡ್ಡ ಬೆಟ್ಟ
    ಹುಲುಸಾದ ತೋಟ ಹಸಿರಾದ ಮಾಟ
    ತಂಬೂರಿಯವಗು ಇಷ್ಟ ||೧||
    ಬಡ ರೈತನಾತ ಅವನೂರಿನಲ್ಲಿ ಬರಗಾಲ
    ಬಿಸಿಲ ಝಳವು
    ಪುಡಿಗಾಸ ನಂಬಿ ಕುಲಕಸುಬ ನೆಚ್ಚಿ
    ಬರುವಾತನೊಳಗೆ ಛಲವು ||೨||
    ಕೈಯಲ್ಲಿ ಹಿಡಿದು ತಂಬೂರಿಯೊಂದ
    ಬರುತಾನೆ ದೌಡ ದೌಡ
    ಬಾಯಲ್ಲಿ ವೀಳ್ಯ ಬಗಲಲ್ಲಿ ಚೀಲ
    ತಂಬೂರಿ ಜೋಗಿ ನೋಡ ||೩||
    ಉಡುತಾನೆ ಪಂಚೆ ಮೇಲೊಂದು ಅಂಗಿ ತೊಡುತಾನೆ ತಲೆಗೆ ಪೇಟ
    ನಡೆನಡೆದು ಬೆವರು ಮೈಯೆಲ್ಲ ಕೆಸರು
    ಚಿಂತಿಲ್ಲ ಅವನು ದಿಟ್ಟ ||೪||
    ಭರಭರನೆ ಹೆಜ್ಜೆ ಇಡುತಾನೆ ಅವಗೆ
    ನಮ್ಮೂರ ಹಾದಿ ಸ್ಪಷ್ಟ
    ತರತರಹ ಭಜನೆ ಶ್ರುತಿ ಲಯವು ತಾಳ
    ಅವಗಿಲ್ಲ ಯಾವ ಕಷ್ಟ ||೫||
    ಬಳ್ಳಿಯಲಿ ಬಲಿತ ದುಂಡನೆಯ ಸೋರೆ
    ಕಾಯಿಗಳೆ ಮೂಲವಸ್ತು
    ಪೊಳ್ಳಾಗಿ ಮಾಡೆ ಬಿಳಿ ತಿರುಳ ತೆಗೆದು
    ಒಣಗಿಸಲು ಅದುವೆ ಶಿಸ್ತು ||೬||
    ಪೊಳ್ಳಾದ ಮೂರು ಸೋರೆಗಳು ಮತ್ತೆ
    ಮೊಳ ಉದ್ದ ಮರದ ಪಟ್ಟಿ
    ತೆಳ್ಳನೆಯ ಮೂರು ತಂತಿಗಳೆ ಸಾಕು
    ತಂಬೂರಿ ವಾದ್ಯ ಗಟ್ಟಿ ||೭||
    ಬಂದಾನೊ ರಾಮ ಬಂದಾನೊ ಕೃಷ್ಣ
    ಬಂದಾನೊ ರಾಘವೇಂದ್ರ
    ತಂದಾನೊ ಭಾವ ಹಾಡಿನಲೆ ದೇವ
    ಭಕ್ತಿಯಾ ಅಲೆಯು ಸಾಂದ್ರ ||೮||
    ಕಲಿತಿರದಿರೇನು ಸಂಗೀತ ವಿದ್ಯೆ ರಕುತದಲೆ ಇಹುದು ಕಲೆಯು
    ತಲೆಮಾರಿನಿಂದ ಜನಪದರ ರೂಢಿ
    ಉಳಿದಿರಲು ಅದಕೆ ಬೆಲೆಯು ||೯||
    ಮಲೆನಾಡ ಜಗುಲಿ ತೆರೆದಿರುವ ಅಗುಳಿ ಬೊಗಸೆಯಲಿ ಕೆಂಪು ಅಡಿಕೆ
    ಅಲೆಯುತ್ತ ಬರುವ ಕಲೆಗಾರಗಿಲ್ಲಿ
    ಮೊರತುಂಬ ಅಕ್ಕಿ ಕಾಣ್ಕೆ ||೧೦||
    ಬದಲಾದ ಕಾಲ ಮೊದಲಂತೆ ಇಲ್ಲ
    ಹಳ್ಳಿಯಾ ಮನೆಯು ಖಾಲಿ
    ಬದುಕಿಲ್ಲಿ ಭಾರ ಎಂದೆನುತ ಎಲ್ಲ
    ನೆಲೆಸಿಹರು ದೂರದಲ್ಲಿ ||೧೧||
    ನಿಂದನೆಯು ಬೇಡ ಅಲೆಮಾರಿ ಯಾನ
    ಹರಿದಾಸ ಪರಂಪರೆಯು
    ಮುಂದಿಲ್ಲವಾಗೆ ತಂಬೂರಿ ಗಾನ
    ಬರಿದಕ್ಕು ಸಂಸ್ಕೃತಿಯೂ ||೧೨||
    ✍️ರೋಹಿಣಿ.ಹೆಗಡೆ.ಶಿರಸಿ.

ความคิดเห็น • 36

  • @sannidhihegde1006
    @sannidhihegde1006 2 หลายเดือนก่อน +1

    Wow !! Super !!👌👌

  • @veenachandrashekar
    @veenachandrashekar 2 หลายเดือนก่อน +1

    ಚೆಂದ ಚೆಂದ ಗಾಯನ, ಸಾಹಿತ್ಯ, ಚಿತ್ರಣ ಎಲ್ಲ. ಹೆಚ್ಚು ಹೆಚ್ಚು ಜಾನಪದ ಗೀತೆ ಬರಲಿ.🎉❤

  • @lnhegde3689
    @lnhegde3689 2 หลายเดือนก่อน +1

    ತುಂಬಾ ಚೆನ್ನಾಗಿದೆ,ಸಾಹಿತ್ಯ ಸಂಗೀತ,ಸೀನರಿ ,ಸ್ಕೆಚ್ ಎಲ್ಲ ಒಳ್ಳೇ ಸಂಯೋಜನೆ.ಧನ್ಯವಾದಗಳು

  • @sahanajoshi8148
    @sahanajoshi8148 2 หลายเดือนก่อน +1

    ಆಹಾ..ರಾಶಿ ಚಂದ..ಸಾಹಿತ್ಯ ಹಾಡುಗಾರಿಕೆ ಎರಡೂ super

  • @mangalagourihegde
    @mangalagourihegde 2 หลายเดือนก่อน +1

    Chenda haadidde Pavitrakka 👌👌sahityanu super👌👌

  • @ramsirsi1260
    @ramsirsi1260 2 หลายเดือนก่อน +1

    Excellent singing Pavitrakka. And wonderful song lyrics 🎉

  • @geetadeshpande361
    @geetadeshpande361 หลายเดือนก่อน +1

    ಸುಂದರ ಗಾಯನ

  • @shailabhat4349
    @shailabhat4349 2 หลายเดือนก่อน +1

    Pavitra supper. Sahityanu balu chenda.

  • @archanahebbar6557
    @archanahebbar6557 2 หลายเดือนก่อน +1

    👌👏👏👏

  • @eshwarimudliar3632
    @eshwarimudliar3632 2 หลายเดือนก่อน +1

    Superb Rohini!👌👍

  • @ganeshhegde2867
    @ganeshhegde2867 2 หลายเดือนก่อน +1

    ಚಂದಾ ಸಾಹಿತ್ಯ, ತಂಗಿ ಮಸ್ತ ಹಾಡಿದ್ದೆ 👌👌❤

    • @pavitrahegde4152
      @pavitrahegde4152 2 หลายเดือนก่อน

      Thank you Ganeshanna 😊😍

  • @vinutaraghavendrahegde3006
    @vinutaraghavendrahegde3006 2 หลายเดือนก่อน +1

    Supeerr payitrakkooooo.
    Ellavu super rrrr

  • @mamathahegde5203
    @mamathahegde5203 2 หลายเดือนก่อน +1

    Sooooper 👍👍💐💐💐💐

  • @vaniraj5958
    @vaniraj5958 2 หลายเดือนก่อน +1

    ಚೆಂದಾ👏

  • @haadugoodu5183
    @haadugoodu5183 2 หลายเดือนก่อน +1

    Super

  • @ananthtamhankar2443
    @ananthtamhankar2443 2 หลายเดือนก่อน +1

    ಸಾಹಿತ್ಯ ,ರಾಗ ಸಂಯೋಜನೆ ಗಾಯನ ಹಾಗೂ ದೃಶ್ಯ ಸಂಕಲನ - ಎಲ್ಲವೂ ಉತ್ತಮ

    • @pavitrahegde4152
      @pavitrahegde4152 2 หลายเดือนก่อน

      Thank you so much Sir🙏😊

  • @parudev5348
    @parudev5348 2 หลายเดือนก่อน +1

    ಚಂದ 👌👌

  • @vijayahegde5482
    @vijayahegde5482 2 หลายเดือนก่อน +1

    Supper.. pavitra..sahitya raga gayana ella channagide❤

  • @athirasuresh528
    @athirasuresh528 2 หลายเดือนก่อน +2

    ❤❤❤