ಪುಷ್ಕರಣಿ ಮತ್ತು ಪಂಚ ಲಿಂಗಗಳು

แชร์
ฝัง
  • เผยแพร่เมื่อ 3 ก.พ. 2025
  • ಮೂಲೆಗದ್ದೆ ಮಠದ ಗುರುಗಳ ಅಪ್ಪಣೆಯಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಹೋಬಳಿಯ ಆಚಾಪುರದಲ್ಲಿ ಇರುವ ಐತಿಹಾಸಿಕ ಪುಷ್ಕರಣಿ ಮತ್ತು ಗುಡಿಗಳ ಬೀಡಿರುವ ಕ್ಷೇತ್ರಕ್ಕೆ ಭೇಟಿ ನೀಡಿ ಸ್ಥಳ ಪರೀಕ್ಷೆ ಕೈಗೊಳ್ಳಲಾಯಿತು.
    ಇಂದಿನ‌ ಆಚಾಪುರ ಅಂದಿನ‌ ರಾಜಧಾನಿ ಅಂಧಾಸುರದ ಪ್ರಮುಖ ಭಾಗವಾಗಿತ್ತು. ಸರಿಸುಮಾರು 11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯ ಚಕ್ರವರ್ತಿ ಜಗದೇಕಮಲ್ಲದೇವ (1015 - 1043) ಆಳುತ್ತಿರುವಾಗ ಸಾಂತಳಿಗೆ ೧೦೦೦ ಸೀಮೆಯ ಸಾಮಂತರಾದ ಸಾಂತಳಿಗೆ ಚಾಲುಕ್ಯ ವಂಶದ ಗೋನರಸ ಐದು ಋಷಿಗಳಿಗೆ ವಿದ್ಯಾಭ್ಯಾಸಕ್ಕೆ ಕೊಟ್ಟ ಭೂದಾನ, ಕಟ್ಟಿಸಿದ ಪುಷ್ಕರಣಿ ಅದರೊಳಗೆ ಒಂದು ಗುಡಿ ಮತ್ತು ಸುತ್ತಲೂ ಇನ್ನಷ್ಟು ಗುಡಿಗಳು ಎಲ್ಲವೂ ಬಹಳ ಆಕರ್ಷಣೀಯವಾಗಿದೆ. ಶಾಸನದಲ್ಲಿ ಉಲ್ಲೇಖಿಸಿದ ಐದು ದೇವಾಲಯಗಳು, ಅದರ ಹೆಸರು, ದೇವಾಲಯ ಕಟ್ಟಿದ ಶಿಲ್ಪಿ ಮತ್ತು ಹಲವಾರು ವಿಷಯಗಳನ್ನು ಮುಂದಿನ‌ ಹಂತದಲ್ಲಿ ಪರಾಮರ್ಶಿಸಲಾಗುವುದು. ಒಟ್ಟಾರೆ ಹೇಳುವುದಾದರೆ ಈ ಪುಷ್ಕರಣಿ ಮತ್ತು ಗುಡಿಗಳ ಬೀಡು ಜೀರ್ಣೋದ್ಧಾರಗೊಂಡ ನಂತರದಲ್ಲಿ ಪ್ರಸಿದ್ಧ ಕ್ಷೇತ್ರವಾಗಲಿದೆ. ಶಾಸನದಲ್ಲಿ ಉಲ್ಲೇಖಿತ ೫ ಲಿಂಗಗಳಲ್ಲಿ ಒಂದು ಲಿಂಗ ಮತ್ತು ವಿಷ್ಣು ಮೂರ್ತಿಗಳು ಕಣ್ಮರೆಯಾಗಿದ್ದು ಅವುಗಳು ಸಿಕ್ಕಿದ್ದು ಎಲ್ಲಿ ಎಂದು ಗೊತ್ತಾಗಲು ಸಂಪೂರ್ಣ ವಿಡಿಯೋ ನೋಡಿ.
    #westernchalukyas #santaliga #santaligachalukyas #achapura #Shivamogga #ಆಚಾಪುರ #ಸಾಂತಳಿಗೆಚಾಲುಕ್ಯರು #ಕಲ್ಯಾಣಚಾಲುಕ್ಯರು #ಶಿವಮೊಗ್ಗ

ความคิดเห็น •