ವೃಂದಾವನಿದೇವಿ ವಂದಿಸುವೆ ಶ್ರೀತುಳಸಿ | ಶ್ರೀ ಕಾರ್ಪರ ನರಹರಿದಾಸರು | Vrundavanidevi Vandisuve |Sri Tulasi Hadu

แชร์
ฝัง
  • เผยแพร่เมื่อ 1 ม.ค. 2025
  • ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ವೃಂದಾವನಿದೇವಿ ವಂದಿಸುವೆ ಶ್ರೀ ತುಳಸಿ ಮಂದಿರಳೆ ನಿನ್ನ ಪದಕೆ
    ವಂದಾರು ಜನತತಿಗೆ ಮಂದಾರಳೆನಿಸಿರುವಿ ಸಂದೇಹವಿಲ್ಲವಿದಕೆ ||೧||
    ಅಂದು ಧನ್ವಂತರಿಯು ತಂದಿರುವ ಪೀಯೂಷದಿಂದ ಪೂರಿತ ಕಲಶದಿ
    ಇಂದಿರಾಪತಿಯ ಆನಂದ ಬಾಷ್ಪೋದಕದ ಬಿಂದು ಬೀಳಲು ಜನಿಸಿದೆ ||೨||
    ಶ್ರೀ ತುಳಸಿ ನಿನ್ನನು ನಿಕೇತನದಿ ಪೂಜಿಪರ ಪಾತಕವ ಪರಿಹರಿಸುವಿ
    ಶ್ರೀ ತರುಣಿ ಪತಿಗೆ ಬಲು ಪ್ರೀತಿ ವಿಷಯಳೆ ನಿನ್ನ ನಾ ಸ್ತುತಿಸಲೆಂತು ಜನನಿ ||೩||
    ಸರ್ವ ತೀರ್ಥಗಳೆಲ್ಲ ತರುಮೂಲದಲ್ಲಿಹವು ಸರ್ವವಿಬುಧರು ಮಧ್ಯದಿ
    ಸರ್ವ ವೇದಗಳೆಲ್ಲ ತರುಅಗ್ರಭಾಗದಲಿ ಇರುತಿಹರು ಬಿಡದೆ ನಿರುತ ||೪||
    ತುಳಸಿ ನಿಮ್ಮಯ ಲಕ್ಷದಳಗಳಿಂದಲಿ ಲಕ್ಷ್ಮಿನಿಲಯನಂಘ್ರಿಗಳರ್ಚಿಸೆ
    ಕಲುಷ ವರ್ಜಿತನಾಗಿ ಬಲುಬೇಗ ಶ್ರೀಹರಿಯ ಒಲುಮೆ ಪಡೆವನು ಜಗದೊಳು ||೫||
    ತುಳಸಿ ದೇವಿಯೇ ನಿನಗೆ ಜಲವೆರೆದು ಕುಂಕುಮದ ತಿಲಕವಿಡುತಲಿ ನಿತ್ಯದಿ
    ಲಲನೆಯರು ಪೂಜಿಸಲು ಒಲಿದಿತ್ತು ಸೌಭಾಗ್ಯ ಸಲಹುವಿಯೆ ಕರುಣದಿಂದ ||೬||
    ಮಾಧವಪ್ರಿಯ ತುಳಸಿ ಸಾದರದಿ ನಿನ್ನೊಳಗೆ ಶ್ರೀದೇವಿ ನಿಂದಿರುವಳು
    ಮೋದಮುನಿ ಶಾಸ್ತ್ರವನು ಬೋಧಿಸುವ ಬುಧ ಜನರ ಪಾದ ಸೇವೆಯ ಕರುಣಿಸು ||೭||
    ಮಿತ್ರನುದಯದಲೆದ್ದು ಚಿತ್ತನಿರ್ಮಲರಾಗಿ ಭಕ್ತಿಯಲಿ ಶ್ರೀ ತುಳಸಿಯ
    ಮೃತ್ತಿಕೆಯ ಧರಿಸಿದ ಮಹಾತ್ಮರನ್ನು ಕಂಡು ಯಮಭೃತ್ಯರಂಜುವರು ಭಯದಿ ||೮||
    ಇಂತು ಶ್ರೀ ತುಳಸಿ ಸೀಮಂತಿನಿಯ ಸ್ತೋತ್ರವ ನಿರಂತರದಿ ಪಠಿಸುವವರ
    ಚಿಂತಿತಪ್ರದನಾಗಿ ನಿಂತು ಕಾರ್ಪರದಿ ಸಿರಿಕಾಂತ ನರಹರಿ ಪೊರೆವನು ||೯||
    vRuMdaavanidEvi vaMdisuve SrI tuLasi maMdiraLe ninna padake
    vaMdaaru janatatige maMdaaraLenisiruvi saMdEhavillavidake ||1||
    aMdu dhanvaMtariyu taMdiruva pIyUShadiMda pUrita kalaSadi
    iMdiraapatiya AnaMda baaShpOdakada biMdu bILalu janiside ||2||
    SrI tuLasi ninnanu nikEtanadi pUjipara paatakava pariharisuvi
    SrI taruNi patige balu prIti viShayaLe ninna naa stutisaleMtu janani ||3||
    sarva tIrthagaLella tarumUladallihavu sarvavibudharu madhyadi
    sarva vEdagaLella taruagrabhaagadali irutiharu biDade niruta ||4||
    tuLasi nimmaya lakShadaLagaLiMdali lakShminilayanaMGrigaLarcise
    kaluSha varjitanaagi balubEga SrIhariya olume paDevanu jagadoLu ||5||
    tuLasi dEviyE ninage jalaveredu kuMkumada tilakaviDutali nityadi
    lalaneyaru pUjisalu olidittu saubhaagya salahuviye karuNadiMda ||6||
    maadhavapriya tuLasi saadaradi ninnoLage SrIdERvi niMdiruvaLu
    mOdamuni Saastravanu bOdhisuva budha janara paada sEveya karuNisu ||7||
    mitranudayadaleddu cittanirmalaraagi bhaktiyali SrI tuLasiya
    mRuttikeya dharisida mahaatmarannu kaMDu yamabhRutyaraMjuvaru bhayadi ||8||
    iMtu SrI tuLasi sImaMtiniya stOtrava niraMtaradi paThisuvavara
    ciMtitapradanaagi niMtu kaarparadi sirikaaMta narahari porevanu ||9||

ความคิดเห็น • 13

  • @shashirekhashashirekha8536
    @shashirekhashashirekha8536 หลายเดือนก่อน

    ತುಳಸಿ ಹಬ್ಬದ ಶುಭಾಶಯಗಳು 🙏🌹❤️

  • @annapurna6462
    @annapurna6462 หลายเดือนก่อน +2

    Amma thulasi habbada shubhashayagalu nimage🙏🙏🙏🙏🙏🙏🙏

  • @ramadevidhanya4722
    @ramadevidhanya4722 หลายเดือนก่อน

    ತುಂಬಾ ಚೆನ್ನಾಗಿದೆ ತುಳಸಿ ಹಾಡು

  • @Savitri-y9l
    @Savitri-y9l หลายเดือนก่อน

    Very beautifully rendered ri! Aneka hrutpoorvaka dhanyavadagalu 🙏🏻🙏🏻🙏🏻

  • @savithrihn3595
    @savithrihn3595 หลายเดือนก่อน

    ಚೆನ್ನಾಗಿ ಹಾಡಿದ್ದೀರಿ

  • @ramadevidhanya4722
    @ramadevidhanya4722 หลายเดือนก่อน

    👌👌🙏🙏👏👏

  • @Latha67
    @Latha67 หลายเดือนก่อน

    🙏🙏🙏🙏🌹💐🌹💐🌹💐

  • @annapurna6462
    @annapurna6462 หลายเดือนก่อน +1

    Hadu super nimma singing super❤❤❤❤❤❤🎉🎉🎉🎉🎉🎉

  • @lakshmijagannathnandagudi1394
    @lakshmijagannathnandagudi1394 หลายเดือนก่อน

    🙏🏻🙏🏻🙏🏻🙏🏻🙏🏻🙏🏻🙏🏻

  • @sudhakrishnan9796
    @sudhakrishnan9796 หลายเดือนก่อน

    Super, thanks for sharing ❤

  • @venkateswaraambabhavani1784
    @venkateswaraambabhavani1784 14 วันที่ผ่านมา

    ಶ್ರೀ ತುಳಜಾಭವಾನಿ ಬಗ್ಗೆ ಸಾಂಗು ಹೇಳಿ

  • @rekharao5878
    @rekharao5878 หลายเดือนก่อน

    Madam ,rudra devara arti haadu haadi....thanjs