ಜ್ಯೋತಿಷ್ಯದ ಆಳ-ಅಗಲ ಮತ್ತು ವಾಸ್ತವ | ಅವಧೂತ ಶ್ರೀ ವಿನಯ್ ಗುರೂಜಿ

แชร์
ฝัง
  • เผยแพร่เมื่อ 19 ต.ค. 2024
  • ಜ್ಯೋತಿಷ್ಯದ ಆಳ-ಅಗಲ ಮತ್ತು ವಾಸ್ತವ | ಅವಧೂತ ಶ್ರೀ ವಿನಯ್ ಗುರೂಜಿ
    ಜ್ಯೋತಿಷ್ಯ ಎಂದರೆ ಜ್ಯೋತಿರ್ನಿಶಃ ಎಂದರ್ಥ. ಜ್ಯೋತಿ ಎಂದರೆ ಬೆಳಕು ನಿಶಾ ಎಂದರೆ ಕತ್ತಲೆ. ಆ ಕತ್ತಲೆಯಿಂದ ಹೊರಗೆ ಬರುವ ಮಾರ್ಗವೇ ಜ್ಯೋತಿಶಾಸ್ತ್ರ ಎನಿಸುತ್ತದೆ. ಉಪನಿಶತ್ತು ಮತ್ತು ವೇದಗಳಿಂದ ಬಂದ ಭಾಗವಾಗಿರುವ ಜ್ಯೋತಿಷ್ಯಶಾಸ್ತ್ರ ವಿದ್ಯೆಯನ್ನು ಒಲಿಸಿಕೊಳ್ಳಲು ಹದಿನಾರು ವರ್ಷಗಳ ಅಧ್ಯಯನ ಅಗತ್ಯ. ಜ್ಯೋತಿಷ್ಯ ಮತ್ತು ಶಾಸ್ತ್ರದ ಬಗೆಗೆ ಯಾವುದೇ ವಿರೋಧಾಭಾಸಗಳಿಲ್ಲದಿದ್ದರೂ, ಜ್ಯೋತಿಷ್ಯವನ್ನು ಅರ್ಧಂಬರ್ಧ ಕಲಿತು ಹಣ ಸಂಪಾದನೆಗಾಗಿ ಜ್ಯೋತಿಷ್ಯದ ಹೆಸರಿನಲ್ಲಿ ಭಯ ಹುಟ್ಟಿಸುವವರನ್ನು ನಿಶ್ಚಿತವಾಗಿ ವಿರೋಧಿಸಬೇಕು. ಜ್ಯೋತಿಷ್ಯ ಭಕ್ತಿ ಹುಟ್ಟಿಸುವ ಮಾಧ್ಯಮವಾಗಬೇಕೇ ಹೊರತು ಭಯ ಹುಟ್ಟಿಸುವಂತಿರಬಾರದು. ಪೂಜೆಗಳನ್ನು ಮಾಡಿದರೆ ಪರಿಹಾರ ಸಿಗುತ್ತದೆ ಎನ್ನುತ್ತಾರೆ. ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರು ಇದಾವುದನ್ನೂ ಬೋಧಿಸಲಿಲ್ಲ. ಧ್ಯಾನ ಮಾಡು ಎಂದರು. ಅಂತರ್‌ಜ್ಞಾನದಿಂದ ನಮ್ಮೊಳಗಿನ ಜ್ಯೋತಿಯನ್ನು ಕಂಡುಕೊಳ್ಳುವುದೇ ನಿಜವಾದ ಜ್ಯೋತಿಷ್ಯವಾಗಿದೆ. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ತ್ರಿಕಾಲ ಜ್ಞಾನ ಪ್ರಾಪ್ತಿಯಾಗುತ್ತದೆ ಎನ್ನುವುದನ್ನು ಶಾಸ್ತ್ರಗಳು ಪ್ರತಿಪಾದಿಸುತ್ತದೆ. ಅಷ್ಟ ಮಂಗಳ, ಆರೂಢ ಪ್ರಶ್ನೆ ಇವೆಲ್ಲಾ ಜ್ಯೋತಿಶಾಸ್ತ್ರದ ಅಂಗಗಳಾಗಿವೆ. ಇವೆಲ್ಲವೂ ಭವಿಷ್ಯವನ್ನು ಊಹಿಸುವ ಸಾಧನಗಳಾಗಿವೆ. ನಮ್ಮ ತಪ್ಪುಗಳನ್ನು ಹುಡುಕಿ ಹೇಳುವುದೂ ಜ್ಯೋತಿಷ್ಯವೇ ಆಗಿದೆ. ಅಷ್ಟ ಮಂಗಳದಲ್ಲೂ ತಪ್ಪು ಮತ್ತು ಪ್ರಾಯಶ್ಚಿತ್ತಗಳ ಪರಿಹಾರ ಪ್ರಾಪ್ತಿಯಾಗುತ್ತದೆ. ಒಬ್ಬ ಮನುಷ್ಯ ಕರ್ಮ ಅಥವಾ ಮನುಷ್ಯ ಭೂಮಿಗೆ ಬರುವ ಕಾರಣವೇ ಅವನ ಪಾಪ ಪುಣ್ಯಗಳ ಲೆಕ್ಕಾಚಾರವನ್ನು ಪರಿಹರಿಸುವ ಉದ್ದೇಶದಿಂದಲೇ ಆಗಿರುತ್ತದೆ. ಮೋಕ್ಷ ಪ್ರಾಪ್ತಿಗೆ ಮನುಷ್ಯ ಕರ್ಮ ಮಾಡಬೇಕು. ಆದರೆ ಯಾವ ಕರ್ಮ ಮಾಡಬೇಕು, ಮಾಡಬಾರದು ಎಂದು ತಿಳಿಸಿಕೊಡುವುದೇ ಜ್ಯೋತಿಷ್ಯವಾಗಿದೆ. ಸತ್ಯ ನಾರಾಯಣ ದೇವರ ಪೂಜೆಯ ಉದ್ದೇಶದ ಹಿನ್ನೆಲೆ ಸತ್ಯ ಹೇಳುವುದನ್ನು ಕಲಿ ಎಂದು ತಿಳಿಸಿಕೊಡುವುದೇ ಆಗಿದೆ. ಪ್ರಸ್ತುತ ಜ್ಯೋತಿಷ್ಯರು ಈ ರೀತಿಯಾಗಿ ಬೋಧಿಸುತ್ತಿಲ್ಲ. ಪೈಪೋಟಿಗಾಗಿ ಪೂಜೆ ಪುನಸ್ಕಾರಗಳಾಗುತ್ತಿದೆ. ಅದಕ್ಕೆ ಲಕ್ಷಗಟ್ಟಲೇ ಹಣವನ್ನು ಸುರಿಯುತ್ತಿದ್ದಾರೆ. ರಾಮಕೃಷ್ಣ ಪರಮಹಂಸರು ಹೇಳುವಂತೆ, ಒಂದು ಪ್ರಾಣವನ್ನು ಭಗವಂತನಿಗೆ ಇಟ್ಟು ಪ್ರತಿಷ್ಠೆ ಮಾಡುವುದು ಪ್ರಾಣ ಪ್ರತಿಷ್ಠೆ ಎಂದೆನಿಸಿಕೊಳ್ಳುತ್ತದೆ. ಪ್ರಸ್ತುತ ಆಚರಣೆಯನ್ನು ಮಾಡುತ್ತಿದ್ದೇವೆ ಆದರೆ ವಾಸ್ತವಿಕತೆಯನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿಲ್ಲ. ನಾವು ಮಾಡುವ ಪೂಜೆ ಪ್ರತಿಷ್ಠೆ, ಯಾಗ ಯಜ್ಞಗಳು ಪ್ರತಿಫಲಿಸದ ಕಾರಣಗಳನ್ನು ನೋಡುವುದಾದರೆ. ಪೂಜೆ ಮಾಡುವವನಿಗೆ ಹಸ್ತಶುದ್ಧಿ ಇರುವುದಿಲ್ಲ, ಆತನಿಗೆ ಧನದಾಸೆ ಇರುತ್ತದೆ. ಅದನ್ನು ಮಾಡಿಸುವವನಲ್ಲಿ ದ್ರವ್ಯ ಶುದ್ಧಿ ಇರುವುದಿಲ್ಲ. ಕೆಟ್ಟ ಕೆಲಸಗಳಿಂದ ಸಂಪಾದಿಸಿದ ಹಣವನ್ನು ದೇವರ ಪೂಜೆಗೆ ಬಳಸುತ್ತಾನೆ. ಇದು ದೊಡ್ಡ ತಪ್ಪು ಎಂದೆನಿಸಿಕೊಳ್ಳುತ್ತದೆ. ಭಗವದ್ಗೀತೆಯಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮನುಷ್ಯ ಭೂತ ಮತ್ತು ಭವಿಷ್ಯತ್ತಿನಲ್ಲಿ ನೆಮ್ಮದಿಯಾಗಿರಲು ಜ್ಯೋತಿಷ್ಯದತ್ತ ವಾಲುತ್ತಾನೆ. ಅದಕ್ಕಿಂತ ಪ್ರಸ್ತುತದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಇವೆಲ್ಲದರ ಅವಶ್ಯಕತೆಯೇ ಬೀಳುವುದಿಲ್ಲ. ಪಾಪ ಕಾರ್ಯ ಮಾಡಿ ಕುಂಭ ಮೇಳಕ್ಕೆ ಹೋಗಿ ಮುಳುಗುವ ಬದಲು, ದೇಹವೆಂಬ ಕುಂಭದಿಂದ ಆದಷ್ಟು ಸತ್ಕಾರ್ಯ ಕೈಗೊಂಡರೆ ಭವಿಷ್ಯ ಉತ್ತಮವಾಗಿಯೇ ಇರುತ್ತದೆ. ಹಿಂದಿನ ತಲೆಮಾರುಗಳಲ್ಲಿ ಜ್ಯೋತಿಷ್ಯದ ಪ್ರಭಾವ ಈ ಮಟ್ಟಕ್ಕಿರಲಿಲ್ಲ. ಆದರೆ ಪ್ರಸ್ತುತ ಪ್ರತಿಯೊಂದಕ್ಕೂ ಜ್ಯೋತಿಷ್ಯವನ್ನು ನಂಬಿ ಕೂರುವ ಪರಿಸ್ಥಿತಿ ಉಂಟಾಗಿದೆ. ಮಹಾತ್ಮರೇ ಹೇಳಿರುವಂತೆ ಸರ್ವಪೂಜೆಗಳಿಗಿಂತ ಶ್ರೇಷ್ಠವಾದದ್ದು ದೇಶಸೇವೆ. ಇತರರ ಒಳ್ಳೆಯದರಲ್ಲಿ ನಮ್ಮ ಒಳ್ಳೆಯದನ್ನು ಕಾಣುವುದೇ ಜ್ಯೋತಿಷ್ಯ. ಪ್ರಸ್ತುತ ಗುಪ್ತಭಕ್ತಿ ಕಾಣೆಯಾಗಿದೆ. ಜ್ಞಾನದೃಷ್ಠಿಯಿಂದ ನೋಡಿದರೆ ಅದು ಜ್ಯೋತಿಷ್ಯವೆನಿಸುತ್ತದೆ ಅಜ್ಞಾನದಿಂದ ನೋಡಿದರೆ ಅಜ್ಞಾನ ಎನಿಸಿಕೊಳ್ಳುತ್ತದೆ.
    For More Videos:
    ಸೂತಕದ ಮನೆ ಹನ್ನೊಂದು ದಿನ ಹೇಗಿರಬೇಕು ಗೊತ್ತೇ ? | ಅವಧೂತ ಶ್ರೀ ವಿನಯ್ ಗುರೂಜಿ • ಸೂತಕದ ಮನೆ ಹನ್ನೊಂದು ದಿನ...
    ವಿವಾಹ ಯೋಗ ಕೈ ತಪ್ಪುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ • ವಿವಾಹ ಯೋಗ ಕೈ ತಪ್ಪುವುದು...
    ಸರ್ಪ ದೋಷ ನಿವಾರಣೆ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ • ಸರ್ಪ ದೋಷ ನಿವಾರಣೆ ಹೇಗೆ?...
    ಹೀಗೆ ಮಾಡುವುದರಿಂದ ಮೋಕ್ಷದ ಬಾಗಿಲು ತೆರೆಯುತ್ತದೆ! | ಭಾಗ - 2 | ಅವಧೂತ ಶ್ರೀ ವಿನಯ್ ಗುರೂಜಿ • ಹೀಗೆ ಮಾಡುವುದರಿಂದ ಮೋಕ್ಷ...
    ಇದುವೇ ಸ್ವರ್ಗ ನರಕದ ಮಹಾ ರಹಸ್ಯ ! | ಭಾಗ - ೧ | ಅವಧೂತ ಶ್ರೀ ವಿನಯ್ ಗುರೂಜಿ • ಇದುವೇ ಸ್ವರ್ಗ ನರಕದ ಮಹಾ ...
    #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
    #hospital #medicine #Family #Familylife #blessing #GayatriMantra #Bilpapatre #Eshwara #Shiva

ความคิดเห็น • 65