ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದೊಳಿರುವ ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲ ಗೌಡನು ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ ಗಂಗೆ ಬಾರೆ ಗೌರಿ ಬಾರೆ ತುಂಗಭದ್ರೆ ತಾಯಿ ಬಾರೆ ಪುಣ್ಯಕೋಟಿ ನೀನು ಬಾರೇ ಎಂದು ಗೊಲ್ಲನು ಕರೆದನು ಗೊಲ್ಲ ಕರೆದ ಧ್ವನಿಯ ಕೇಳಿ ಎಲ್ಲ ಹಸುಗಳು ಬಂದು ನಿಂತು ಚೆಲ್ಲಿ ಸೂಸಿ ಹಾಲು ಕರೆಯಲು ಅಲ್ಲಿ ತುಂಬಿತು ಬಿಂದಿಗೆ ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು ಹಬ್ಬಿದ ಮಲೆ ಮಧ್ಯದೊಳಗೆ ಅರ್ಭುತಾನೆಂದೆಂಬ ವ್ಯಾಘ್ರನು ಅಬ್ಬರಿಸಿ ಹಸಿಹಸಿದು ಬೆಟ್ಟದ ಕಿಬ್ಬಿಯೊಳು ತಾನಿದ್ದನು ಸಿಡಿದು ರೋಷದಿ ಮೊರೆಯುತಾ ಹುಲಿ ಘುಡುಘುಡಿಸಿ ಭೋರಿಡುತ ಛಂಗನೆ ತುಡುಕಲೆರಗಿದ ರಭಸಕಂಜಿ ಚೆದರಿ ಹೋದವು ಹಸುಗಳು ಪುಣ್ಯಕೋಟಿ ಎಂಬ ಹಸುವು ತನ್ನ ಕಂದನ ನೆನೆದುಕೊಂಡು ಮುನ್ನ ಹಾಲನು ಕೊಡುವೆನೆನುತ ಚೆಂದದಿ ತಾ ಬರುತಿರೆ ಇಂದೆನಗೆ ಆಹಾರ ಸಿಕ್ಕಿತು ಎಂದು ಬೇಗನೆ ದುಷ್ಟ ವ್ಯಾಘ್ರನು ಬಂದು ಬಳಸಿ ಅಡ್ಡಗಟ್ಟಿ ನಿಂದನಾ ಹುಲಿರಾಯನು ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು ಮೇಲೆ ಬಿದ್ದು ನಿನ್ನನೀಗಲೆ ಬೀಳಹೊಯ್ವೆನು ನಿನ್ನ ಹೊಟ್ಟೆಯ ಸೀಳಿಬಿಡುವೆನು ಎನುತ ಕೋಪದಿ ಖೂಳ ವ್ಯಾಘ್ರನು ಕೂಗಲು ಒಂದು ಬಿನ್ನಹ ಹುಲಿಯೆ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ ಹಸಿದ ವೇಳೆಗೆ ಸಿಕ್ಕಿದೊಡವೆಯ ವಶವ ಮಾಡದೆ ಬಿಡಲು ನೀನು ನುಸುಳಿ ಹೋಗುವೆ ಮತ್ತೆ ಬರುವೆಯ ಹುಸಿಯನಾಡುವೆ ಎಂದಿತು ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು ಕೊಂದು ತಿನ್ನುವೆನೆಂಬ ಹುಲಿಗೆ ಚೆಂದದಿಂದ ಭಾಷೆ ಇತ್ತು ಕಂದ ನಿನ್ನನು ನೋಡಿ ಹೋಗುವೆ ನೆಂದು ಬಂದೆನು ದೊಡ್ಡಿಗೆ ಆರ ಮೊಲೆಯನು ಕುಡಿಯಲಮ್ಮ? ಆರ ಸೇರಿ ಬದುಕಲಮ್ಮ? ಆರ ಬಳಿಯಲಿ ಮಲಗಲಮ್ಮ? ಆರು ನನಗೆ ಹಿತವರು? ಅಮ್ಮಗಳಿರಾ ಅಕ್ಕಗಳಿರಾ ನಮ್ಮ ತಾಯೊಡಹುಟ್ಟುಗಳಿರಾ ನಿಮ್ಮ ಕಂದನೆಂದು ಕಾಣಿರಿ ತಬ್ಬಲಿಯನೀ ಕರುವನು ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು ತಬ್ಬಲಿಯು ನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗುವೆನು ಇಬ್ಬರ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ ಗೋವು ಕರುವನು ಬಿಟ್ಟು ಬಂದು ಸಾವಕಾಶವ ಮಾಡದಂತೆ ಗವಿಯ ಬಾಗಿಲ ಸೇರಿ ನಿಂತು ತವಕದಲಿ ಹುಲಿಗೆಂದಿತು ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದೆಕೋ ಚಂಡ ವ್ಯಾಘ್ರನೆ ನೀನಿದೆಲ್ಲವ ನುಂಡು ಸಂತಸದಿಂದಿರು ಪುಣ್ಯಕೋಟಿಯ ಮಾತ ಕೇಳಿ ಕಣ್ಣ ನೀರನು ಸುರಿಸಿ ನೊಂದು ಕನ್ನೆಯಿವಳನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ಏನ ಪಡೆವೆನು? ಎನ್ನುತ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು ಪುಣ್ಯಕೋಟಿಯು ನಲಿದು ಕರುವಿಗೆ ಉಣ್ಣಿಸಿತು ಮೊಲೆಯ ಬೇಗದಿ ಚೆನ್ನ ಗೊಲ್ಲನ ಕರೆದು ತಾನು ಮುನ್ನ ತಾನಿಂತೆಂದಿತು ಎನ್ನ ವಂಶದ ಗೋವ್ಗಳೊಳಗೆ ನಿನ್ನ ವಂಶದ ಗೊಲ್ಲರೊಳಗೆ ಮುನ್ನ ಪ್ರತಿ ಸಂಕ್ರಾಂತಿಯೊಳಗೆ ಚೆನ್ನ ಕೃಷ್ಣನ ಭಜಿಸಿರೈ ಈವನು ಸೌಭಾಗ್ಯ ಸಂಪದ ಭಾವಜಪಿತ ಕೃಷ್ಣನು
ಕನ್ನಡ ಮಾದ್ಯಮದ ವಿಧ್ಯಾರ್ಥಿಗಳಿಗೆ ಹಾಗೂ ಕನ್ನಡವನ್ನು ಉಸಿರಲ್ಲಿ ಬೆರೆಸಿಕೊಂಡವರಿಗೆ ಮಾತ್ರ ಈ ಹಾಡು ತುಂಬಾ ದುಃಖ ಉಂಟು ಮಾಡುತ್ತದೆ 😢
5 ಕ್ಲಾಸ್ ನಲ್ಲಿ ಈ ಪದ್ಯೆ ಹಾದಿ ಕಣ್ಣೀರು ಹಾಕಿದ್ದು ಉಂಟು😂❤❤❤❤❤
ನಾನು ಕೂಡ ಅತ್ತಿದ್ದೆ ಕ್ಲಾಸ್ ರೂಮ್ ನಲ್ಲಿ 🥰🥰
15years hinde. 2class padya kelidag aituu😘😘😘 🙏
Bro 5th class ali ididu idu
ಪುಣ್ಯಕೋಟಿಯ ಪಾಠ ಕೇಳಿ ಬಂದ ನಾವೆ ಪುಣ್ಯವಂತರು 😍
👌👌👌👌👌👌
❤
Super
Excellent ❤❤❤❤❤ story the truth
❤❤❤❤❤❤❤❤❤❤❤❤❤❤❤❤❤❤❤❤😊😊😊😊😊😊😊😊 1:20
Super 🎉
Just i remember my school days ❤🫶
ಒಳ್ಳೆತನಕ್ಕೆ ದೇವರು ಇದ್ದಾನೆ ಎಂಬ ಸತ್ಯ
Super.❤❤❤❤❤❤❤
ಗಂಗೆ ಬಾರೆ, ತುಂಗೆ ಬಾರೆ,ಪುಣ್ಯಕೋಟಿ, ನೀನು ಬಾರೆ,line are missing
Yes
@@jyothijyothijo7136😅
@@jyothijyothijo7136🎉😂🎉🎉🎉😂😂😭🎉😢😢😢😢😢
@@jyothijyothijo7136🎉😂🎉🎉🎉😂😂😭🎉😢😢😢😢😢
.
ನನ್ನ ಸ್ಕೂಲ್ ಲೈಫ್ನಲ್ಲಿ ತುಂಬಾ ಇಷ್ಟವಾದ ಹಾಡು ❤❤❤
So Soper song and accessted
Kugdxn
Mm @@YankammaL
My fever hit song.
Suppar song
ಸತ್ಯ ಮೇವ ಜಯತೆ 🎉🎉🎉
Super ❤
❤❤❤❤👑👑👑🌺🌺🌺🌺💜💜💜💜 ದೇವ, 🌄👏👏🌹🌄🌄🌄🌄🌄💜💜💜💜👑👑👑👑🌄🌄🌄💜💜💜🌺🌺🌺🌺🌺 ಶಾರದಾ ಅಮ್ಮ
ಮಜುನಗೌಡ
Jai golla jai yadav ❤️ Krishna paramatma 🙏🙏🙏💐
Excellent super 👌👌👌👌👌👌👌👌👌👌👌❤❤❤❤❤❤❤❤❤
🎉 editing song
'ಗೊಲ್ಲಗೌಡನು' ಈ ಪದ ತಪ್ಪು. ಅದು ' ಗೊಲ್ಲನೋರ್ವನು' ಎಂದಾಗಬೇಕು.
Satyavemba Pubyakotiya Katheidi ❤ ❤
❤
Preethi🙏🙏🙏🙏🙏👍👍👍👍👍🌹🌹
ಮಜುನಗೌಡ
Siddaramaiy GE torsi super
👏🙏♥️♥️♥️♥️♥️👏🙏👍
😊😊😊😊😮
😍ಜೈ ಗೋಲ್ಲ ❤
0p
Super Song
🙏
ಜೈ ಗೊಲ್ಲ ❤
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೇ
ಎಂದು ಗೊಲ್ಲನು ಕರೆದನು
ಗೊಲ್ಲ ಕರೆದ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು
ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು
ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ
ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು
ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ
ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಇತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ
ಆರ ಮೊಲೆಯನು ಕುಡಿಯಲಮ್ಮ?
ಆರ ಸೇರಿ ಬದುಕಲಮ್ಮ?
ಆರ ಬಳಿಯಲಿ ಮಲಗಲಮ್ಮ?
ಆರು ನನಗೆ ಹಿತವರು?
ಅಮ್ಮಗಳಿರಾ ಅಕ್ಕಗಳಿರಾ
ನಮ್ಮ ತಾಯೊಡಹುಟ್ಟುಗಳಿರಾ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ
ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು
ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು
ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು
ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು?
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನ ಗೊಲ್ಲನ ಕರೆದು ತಾನು
ಮುನ್ನ ತಾನಿಂತೆಂದಿತು
ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರೈ
ಈವನು ಸೌಭಾಗ್ಯ ಸಂಪದ
ಭಾವಜಪಿತ ಕೃಷ್ಣನು
Super
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉❤❤❤@@ambrishkalashetti5562
ಕರುನಾಡ ಹೆಮ್ಮೆಯ ಗೀತೆ
Good song
🙏🏼🙏🏼🙏🏼✌👌
Came here after hearing this bgm in Bengaluru Kambala ❤❤❤
ನಾನು 4ನೇ ತರಗತಿ ಪದ್ಯ ಓದುದಿದು 1993 ಇಸ್ವಿ
School time nalli bahal hadisutidru
ಸತ್ಯಕ್ಕೆ ಸಾವಿಲ್ಲ...😭😭😭
ಕರ್ನಾಟ ದೇಶ 💛❤
My songs 5 class
ಭಾವನಾತ್ಮಕ ಗೀತೆ ❤😊
❤
❤❤❤❤❤🎉🎉🎉🎉
Super song 🙏🙏🙏🙏🙏❤️❤️❤️👏🙏🙏
Sowmya
❤❤❤❤😊@@ExcitedBabyKittens-kw6pv
1:06 1:09
After 17 years I'm listening this poem...❤❤❤❤
ದುಃಖ ಮಾಡಿಕೊಂಡು ಆತೀದೆ 4 class ನಲ್ಲಿ 🥹
Very nice 👍👍👍👍👍
🙏🙏🙏🙏🙏🙏🙏👌
😮😊❤❤❤❤
So beautiful song ❤🙏
Yw
Yuih
Punya.koti
Suparsong
I dance with this song
Satykke yavttiddaru Jay
🌍🌍🌍
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😢😢
WaWow I love this ❤
Not only melody very meaning ful Song
I have studied this poem in 5th standard ❤❤❤❤
22yo memory
5th. Standard latsion kannada
❤
🙏🙏🙏🙏🙏🙏🙏🙏
❤
Very good song
Nice
🎉🎉
I❤ this song very much
ಒಂದು ಪ್ಯಾರಾ ಇಲ್ಲವ ಲ್ಲಾ
Video
🎉😢
🙏🙏🙏
❤❤
❤👌🙏😅
Pune kotti
❤❤❤❤❤🙏🙏🙏🙏🙏🙏🙏🙏👌👌👌👌👌👌👌👌
😊😅😊😊
😊
Pl9
🙏🥰
😢😢
❤❤❤🎉🙏🙏🙏
🙏🙏🥀🌹💐
Shaaleya pustak nenapayitu😊😊
Song
❤❤❤❤❤
🙏🙏🙏🙏🙏
Super melodious song 🙏🙏🙏👍👍👍🙏🙏🌺🌺🌺🤞🤞🤞🎉🎉🎉🙋🙋🙋🕺🕺🕺🦣🦣
2:23
This song is our lndins culture.lts animal or humans .
Prabha.
😂❤😂🎉
❤❤😢
ಚಡ್ಡಿಯೊಳಗೆ ಮೂರು ಇಲಿಗಳು ಸೇರಿಕೊಂಡು 😂😂
Foolish
❤😂
Song has cutted. Full song is not there.
😂
"S". "LOKESH.("SHAVAGI BASAPPA..)"S". "PUNNE KOTI ". I KATE HADANNU TAYI MAKKAL PRITI VATSALE BESED KONDI YANT ENDU KANDU BARUTA ADE I HADA NNU BARDA KAVGALIGU MATTU ;MATTU "POONE KOTI I HADANNU HADIDA KALA VDH AVARIGU; "S". "LOKESH.("SHAVAGI BASAPPA.")"S" IVARA PARAVAGI RATT POORVAK. DHANE WADA AGALU.". "S" "LOKESH ("SHAVAGI BASAPPA.")"S". IVER PARAVAGI.
🥰🥰🌹🌹🐄🐄🙏🌺
😢😢😢😢😢