#*Republic day* #*ಗಣರಾಜ್ಯೋತ್ಸವ*# ರಚನೆ: ಪೆರ್ಮುಖ ಸುಬ್ರಹ್ಮಣ್ಯ ಭಟ್., ಗಾಯನ: ಕೃಷ್ಣಾ ಕುಮಾರಿ ಜೆ ಆರ್ ಭಟ್.
ฝัง
- เผยแพร่เมื่อ 9 ก.พ. 2025
- ಭಾರತ ಮಾತೆ
**************
ಹಡೆದಿಹ ಮಾತೆಯೆ ನಮಿಸುವೆ ಅನುದಿನ
ಗುಡಿಯಿದು ನನ್ನಯ ಹೃದಯ
ಮಡಿಲನು ನೀಡಿದ ಭಾರತ ಮಾತೆಗೆ
ತೊಡಿಸುವೆ ಕೀರ್ತಿಯ ಗರಿಯ
ಕಡಲಿನ ಅಲೆಗಳು ಚರಣವ ತೊಳೆವುದು
ಮುಡಿದಿಹೆ ಹಿಮಗಿರಿ ಸಾಲು
ನಡುವಲಿ ಸ್ವರ್ಗವು ಮಾತೆಯ ಮಡಿಲಿದು
ಪಡೆದಿಹ ನಮಗಿದು ಮೇಲು
ನುಡಿಯನು ಕಲಿಸಿದೆ ಬಾಳನು ನೀಡಿದೆ
ನಡೆಯನು ತಿದ್ದುತ ತೀಡಿ
ಬಡವರು ಧನಿಕರು ಬೇಧವು ಇಲ್ಲದೆ
ನಡೆವೆವು ಎಲ್ಲರು ಕೂಡಿ
ಗಡಿಯನು ಕಾಯುವ ಯೋಧರು ವೀರರು
ತಡೆವರು ವೈರಿಯ ದಾಳಿ
ಸಿಡಿಯುವ ಉಗ್ರರು ನುಗ್ಗುತಲಿದ್ದರೆ
ಹೆಡೆಮುರಿ ಕಟ್ಟುವ ಪಾಳಿ
ನೀತಿಯ ಹಾದಿಯ ತುಳಿಯುತ ತಾಯಿಗೆ
ಖ್ಯಾತಿಯ ತರುವೆವು ನಾವು
ನೂತನವೆನಿಸಲಿ ಅನುದಿನ ಬಾಳಲಿ
ಭೀತಿಯು ಇಲ್ಲದ ತಾವು||
ಪೆರ್ಮುಖ ಸುಬ್ರಹ್ಮಣ್ಯ ಭಟ್
***********
#ಗಣರಾಜ್ಯೋತ್ಸವ 2025
#republic day 2025