ಪತ್ತೇದಾರಿ ಪ್ರಣವ ಪುಸ್ತಕ ಪರಿಚಯ

แชร์
ฝัง
  • เผยแพร่เมื่อ 7 ส.ค. 2024
  • ಈ ವಾರದ ಪುಸ್ತಕ "ಪತ್ತೇದಾರ ಪ್ರಣವ"
    ಲೇಖಕಿ- ಅನುಪಮಾ ಕೆ ಬೆಳಚಿನಮರ್ಡಿ
    ಪ್ರಕಾಶನ - ಅವ್ವ ಪುಸ್ತಕ
    ಬೆಲೆ 175/
    ಪ್ರಣವ ಒಬ್ಬ ತುಂಟ ಹುಡುಗ.ಅವನ ತುಂಟತನದಿಂದ ಸದಾ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದ. ಮನೆಯಲ್ಲಿ ಏನೇ ಆದರೂ ಅದು ಪ್ರಣವನ ತಲೆ ಮೇಲೆ ಬರುತ್ತಿತ್ತು. ಅಂತಹ ತುಂಟ ಹುಡುಗನ ಜಾಣ್ಮೆಯಿಂದಲೇ ಮನೆಯಲ್ಲಿ ನಡೆಯುತ್ತಿದ್ದ ಒಂದು ಸಮಸ್ಯೆಯನ್ನು ಬಗೆಹರಿಸುವ ಕಥೆ ಇರುವಂತಹ ಪುಸ್ತಕ.
    ತುಂಬಾ ಸೊಗಸಾದ ಕಥೆ, ದೊಡ್ಡವಳಾದ ನಾನೇ ಕುತೂಹಲದಿಂದ ಓದಿ, ಖರೀದಿ ಮಾಡಿದೆ. ಸರಾಗವಾಗಿ ಓದಲು ಬರುವ ಮೂರನೇ ತರಗತಿಯ ಮಗುವಿನಿಂದ ಹಿಡಿದು ಏಳನೇ ತರಗತಿಯ ಮಗುವಿನವರೆಗೆ ಖುಷಿಯಿಂದ ಓದಬಹುದಾದ ಪುಸ್ತಕ. (ನನ್ನ ಐದು ವರ್ಷ ಮಗನಿಗೆ ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟ ಆಯ್ತು. ಚಿಲಕಗಳ ಕೆಲಸ ಮಾಡುವ ವಿಧಾನ ಅವನಿಗೆ ಸ್ವಲ್ಪ ಗೊಂದಲ ಆಯ್ತು. ಆದ್ರೆ ನಾನು ವಿವರವಾಗಿ ವಿವರಿಸಿ ಹೇಳಿದ ಮೇಲೆ ಅರ್ಥ ಮಾಡಿಕೊಂಡ.)
    ಲೇಖಕಿ ಒಂದು ಮಹತ್ವದ ವಿಚಾರವನ್ನು ಕಥೆಯ ಮೂಲಕ ದೊಡ್ಡವರಿಗೆ ಹೇಳಿದ್ದಾರೆ. ತುಂಟ ಮಕ್ಕಳಲ್ಲಿ ಎನರ್ಜಿ ಜಾಸ್ತಿ, ಕುತೂಹಲ ಜಾಸ್ತಿ. ಅದಕ್ಕಾಗಿ ಅವರು ನಿಂತಲ್ಲಿ ನಿಲ್ಲದೆ ಇರುವುದು. ಅದು ನಮಗೆ ದೊಡ್ಡವರಿಗೆ ತುಂಟತನ ಅನ್ನಿಸುತ್ತದೆ ಅಷ್ಟೇ, ಆದ್ರೆ ಅದೇ ಅವರ ತಾಕತ್ತು. ಆ ತಾಕತ್ತಿಗೆ ನಾವು ದೊಡ್ಡವರು, ಒಂದು ಸರಿಯಾದ ಮಾರ್ಗ ಮಾಡಿಕೊಟ್ಟರೆ, ಅವರಿಂದ ವಿಶೇಷವಾದ ಕೆಲಸವನ್ನು ಹೊರ ತೆಗೆಯಬಹುದು.
    ಪಾಲಕರ ನೋಡುವ ದೃಷ್ಟಿ ಬದಲಾಗಬೇಕು ಎನ್ನುವುದು ಕಥೆಯ ಆಶಯ ಅಂತ ನನಗೆ ಅನ್ನಿಸಿತು.
    ಈ ಪುಸ್ತಕದಲ್ಲಿ ಮಕ್ಕಳಿಗೆ ಮನರಂಜನೆಯ ಜೊತೆಗೆ ದೊಡ್ಡವರಿಗೆ ಒಂದು ಪಾಠವಿದೆ.
    ಒಮ್ಮೆ ಕೊಂಡು ತಂದು ಓದಿ ನೋಡಿ.
    #bookrecommendation #bookrecommendation #kannadabooks #bookcollection #bookrecommendations #bookslover #booktuber #mylittlethings #kannadabook #childrenbook #storybook #childrenillustration #kannadamakkalasahitya #childrenillustrationbook

ความคิดเห็น • 3

  • @Appukamalapur
    @Appukamalapur 3 หลายเดือนก่อน

    Like❤very good👍👍

  • @VinaySharma-gd8uq
    @VinaySharma-gd8uq 3 หลายเดือนก่อน

    Very good narration madam... thank you...