ಜಾನಪದ ಗೀತೆ | ಮಣ್ಣೆತ್ತಿನ ಅಮಾವಾಸ್ಯೆಯ ಜಾನಪದ ಹಾಡು | ಬೆಳ್ಳನೆ ಎರಡೆತ್ತು| Lakshmi Muralidhar

แชร์
ฝัง
  • เผยแพร่เมื่อ 4 ก.ค. 2024
  • ಸಾಹಿತ್ಯ :-
    ಬೆಳ್ಳಾನೆ ಎರಡೆತ್ತು ಬೆಳ್ಳಿಯ ಬಾರುಕೋಲು
    ಬಂಗಾರದ ಸೆಡ್ಡೆ ಬಲಗೈಲಿ
    ಹೊನ್ನ ಬಿತ್ಯಾರೋ ಓಳಿಸಾಲ
    ಕರಿ ಎತ್ತು ಕಾಳಿಂಗ ಬಿಳಿ ಎತ್ತು ಮಾಲಿಂಗ
    ಸರದಾರ ನನ್ನೆತ್ತು ಸಾರಂಗ ಬರುವಾಗ
    ಸರ್ಕಾರವೆಲ್ಲ ನಡುಗೀತೋ
    ಬೆಳೆಯಾರ ಬಂದಯ್ತೆ ಬಸವಣ್ಣನ ದಯದಿಂದ
    ಮದ್ದೂರು ಜಾತ್ರೆಗೆ ಹೋಗ್ತೀನಿ ನಿಮಗಾಗಿ
    ಹುರಿಗೆಜ್ಜೆ ಗಂಟೆ ತರುತೀನಿ
    ಆ ವರ್ಷ ಹಂಗಾತು ಈ ವರ್ಷ ಹಿಂಗಾತು
    ಮುಂದಿನ ವರ್ಷ ಬೆಳೆ ಬರಲು ಬಸವಣ್ಣ
    ಕೊರಳಾಗ ಬಂಗಾರದ ಸಿರಿ ಗೆಜ್ಜೆ
    ಆ ತೇರು ಈ ತೇರು ಜ್ಯೋತಿರ್ಲಿಂಗ ನ ತೇರು
    ಅಪ್ಪ ಕಳಿಸಯ್ಯ ಹೊಸ ತೇರು ಬರುವಾಗ
    ಆಕಾಶದ ಗಂಟೆ ನುಡಿದವೋ

ความคิดเห็น • 8