Krithi, Gokula Brindavana

แชร์
ฝัง
  • เผยแพร่เมื่อ 15 ต.ค. 2024
  • Choreography: Deepthi Shree Bhat
    ಗೋಕುಲದಲ್ಲಿ ಗೊಲ್ಲ ಬಾಲಕರೊಂದಿಗೆ ಆಡುವ ಕೃಷ್ಣನೇ ಮುಂದೆ ಗೀತೋಪದೇಶವನ್ನು ಮಾಡುತ್ತಾನೆ. ಗೋಪಿಕೆಯರೊಂದಿಗೆ ರಾಸಲೀಲೆಯಾಡುವ ಕೃಷ್ಣನೇ ಗೋವರ್ಧನಗಿರಿಯನ್ನೆತ್ತಿ ಎಲ್ಲರನ್ನೂ ರಕ್ಷಿಸುತ್ತಾನೆ. ಆ ಆದರ್ಶಮಹಿಮನಾದ ಶ್ರೀ ಕೃಷ್ಣನ ಜೀವನದ ಪ್ರಮುಖ ಘಟ್ಟಗಳನ್ನು ನೆನಪಿಸುವ ನೃತ್ಯವಿದು.
    ನೃತ್ಯದ ವಿವರ:
    ೦:೦೦ - ೦:೪೦ ಗೋಕುಲ ವೃಂದಾವನ ಸುಂದರನಾದ ಕೃಷ್ಣನನ್ನು ಭಜಿಸುತ್ತೇನೆ.
    ಸಂಚಾರಿ ಭಾವ(
    ೦:೪೧- ೧:೧೮ ತನ್ನ ಗೆಳೆಯರೊಂದಿಗೆ ಗೊಲ್ಲರ ಮನೆಗೆ ನುಗ್ಗಿ, ಮೇಲೆ ಮಡಿಕೆಯಲ್ಲಿ ತೂಗಿ ಹಾಕಿದ್ದ ಬೆಣ್ಣೆಯನ್ನು ಕದ್ದು ತಿನ್ನುವುದು.
    ೧:೧೯-೧:೪೧ ಗೋಪಿಕೆಯಲ್ಲಿ ಸುಂಕ ಕೇಳುವುದು.
    ೧:೪೨ - ೨:೦೫ ಕಟ್ಟಿಹಾಕಿದ್ದ ಕರುವನ್ನು ತನ್ನ ತಾಯಿಯಬಳಿಗೆ ಕಳುಹಿಸುವುದು. ಕರು ಹಾಲು ಕುಡಿಯುವಾಗ, ತಾನೂ ಆ ಗೋವಿನ ಹಾಲನ್ನು ಸೇವಿಸುವುದು.
    )
    ೨:೨೬ -೨:೩೪ ಗೋಪಿಕಾ ಮೋನೋಹರನಾದ ಮಧುರನಾದ ಕೃಷ್ಣ.
    ೨:೩೫ - ೩:೫೪ ಕೃಷ್ಣನ ಕೊಳಲ ಗಾನಕ್ಕೆ ಮೈಮರೆತು ಅವನ ನಾದವನ್ನು ಅನುಸರಿಸುವ ಗೋಪಿಕೆಯು, ಗಾನಾಲಂಕೃತನಾದ ಕೃಷ್ಣನ ಸಮೂಹದಲ್ಲಿರುವ ಗೋಪಿಕೆಯರಲ್ಲಿ ಒಬ್ಬಳಾಗಿತ್ತಾಳೆ.
    ೪:೦೬- ೪:೧೮ ಗೀತಾಗಾಯನವೆಂಬುವುದು ಯೋಗ ವೈಭವದ ಸಾಕಾರ!
    ಸಂಚಾರಿ ಭಾವ(
    ೪:೧೯ - ೬:೧೦ ನಾಲ್ಕು ಅಶ್ವಗಳನ್ನು ಕಟ್ಟಿ ಸಾರಥಿಯಾದ ಕೃಷ್ಣನು ಅರ್ಜುನನನ್ನು ಯುದ್ಧಭೂಮಿಗೆ ಕೊಂಡೊಯ್ಯುತ್ತಾನೆ. ಗಾಂಡೀವವನ್ನೆತ್ತಿ ಇನ್ನೇನು ಬಾಣಪ್ರಯೋಗಮಾಡಬೇಕಿದ್ದ ಅರ್ಜುನನು, ನೆರೆದವರನ್ನು ಕಂಡು ಕಳವಳಗೊಳ್ಳುತ್ತಾನೆ. ಆಚಾರ್ಯರಾದ ದ್ರೋಣರು, ತಾತ ಭೀಷ್ಮನನ್ನು ಕಂಡು ಕ್ಷೋಭೆಗೊಳ್ಳುತ್ತಾನೆ. ತನ್ನ ರಕ್ತಸಂಬಂಧಿಗಳನ್ನು ಸಂಹರಿಸುವುದೇ, ತನ್ನ ಕುಲ ಸ್ತ್ರೀಯರನ್ನು ವಿಧವೆಯರನ್ನಾಗಿಸುವುದೇ ಇವೇ ಮೊದಲಾದ ಸಂದೇಹಗಳಿಂದ ದಾರಿಕಾಣದಾದೆ ಕೃಷ್ಣನಲ್ಲಿ ಶರಣಾಗುತ್ತಾನೆ. ಆಗ ಕೃಷ್ಣನು ಗೀತೋಪದೇಶವನ್ನು ಮಾಡುತ್ತಾನೆ "ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ". ಅರ್ಜುನನ ವಿನಂತಿಯ ಮೇರೆಗೆ ಶ್ರೀ ಕೃಷ್ಣನು ವಿಶ್ವರೂಪವನ್ನು ತಾಳುತ್ತಾನೆ.
    ೬:೧೧ - ೬:೩೪ ಧರ್ಮರಾಯನಿಗೆ ಪಟ್ಟಕಟ್ಟಿ, ಮಿಕ್ಕ ಪಾಂಡವರ ಪಾಂಚಾಲಿಯ ಯೋಗಕ್ಷೇಮ ವಿಚಾರಿಸಿ, ಎಲ್ಲರನ್ನೂ ಆಶೀರ್ವದಿಸುತ್ತಾನೆ.
    ೬:೩೫ - ೬:೫೨ ಗೋವರ್ಧನವನ್ನು ಹಿಡಿದ ಗೋಪಿಕೆಯರಿಗೆ ಪ್ರಿಯನಾದ ಕೃಷ್ಣ, ತ್ರಿಭುವನಗಳನ್ನು ಪಾಲಿಸುವ ಬಾಲಗೋಪಾಲ!
    ಸಂಚಾರಿ ಭಾವ(
    ೫:೫೩ - ೮:೧೦ ಅಂದು ಕೋಪಗೊಂಡ ಇಂದ್ರನು ಭಯಂಕರ ಮಳೆಸುರಿಸಿ ಗೋಕುಲವನ್ನು ತಬ್ಬಿಬ್ಬುಮಾಡಿದಾಗ, ಶ್ರೀ ಕೃಷ್ಣನು ಗೋವರ್ಧನ ಪರ್ವತವನ್ನೆತ್ತಿ ಎಲ್ಲರನ್ನೂ ಸಂತೈಸುತ್ತಾನೆ.
    )
    ೮:೧೧ - ಅಂಥಹಾ ಪರಮಮಂಗಳಕರವಾದ ಶ್ರೀ ಪದ್ಮಚರಣವನ್ನು ನಾನು ಭಜಿಸುತ್ತೇನೆ.
    Venue: Sava Sadan, Malleshwaram
    Video courtesy: shaale.com
    This song is chosen from Ananya Bengaluru's Nrithya Sangeeta Album(Vol 20)
    Composer: Vid. Padmacharan
    Singer: Vid. S. Ramani & Vid. S. Abhishek
    Mridangam and Natuvangam: Vid. S. V. Balakrishna
    Flute and Coordination: Vid. K.S Jayaram
    Violin: Vid. R. Achyutha Rao

ความคิดเห็น • 5