ಶಂಭೋ ಶಂಕರ ತಂದೆ ಹರ ಮಹಾದೇವ........ ishwarana bhajane ##

แชร์
ฝัง
  • เผยแพร่เมื่อ 14 ต.ค. 2024
  • ##ಶಂಭೋ ಶಂಕರ ##ತಂದೆ ಹರ mahadeva##ishwarana ##ಭಜನೆ ##
    ಶಂಭೋ ಶಂಕರ ತಂದೆ ಹರ ಮಹಾದೇವ ನಿನ್ನ ನಂಬಿ ಬಂದೆನು ತಂದೆ ಹರ ಮಹಾದೇವ
    ಜಯ ಜಯ ಶಂಭೋ ಹರ ಮಹಾದೇವ ಶಿವ ಶಿವ ಶಂಭೋ ಹರ ಮಹಾದೇವ ||ಪ||
    ಬಾಣನ ಮನೆಯ ಕಾಯುತ ನಿಂತ ಭಕ್ತೋದ್ದಾರ ಹರ ಮಹಾದೇವ ಹಾಲಾಹಲವನು ಕಂಠದಿ ಧರಿಸಿ ಧರಣಿಯ ಪೊರೆದ ಹರ ಮಹಾದೇವ
    ಜಯ ಜಯ ಶಂಭೋ ಹರ ಮಹಾದೇವ ಶಿವ ಶಿವ ಶಂಭೋ ಹರ ಮಹಾದೇವ ||೧||
    ಚರ್ಮವನುಟ್ಟು ಚಂದ್ರನ ಮುಡಿದ ಚಂದ್ರಶೇಖರ ಹರ ಮಹಾದೇವ ತೊಡೆಯೋಳು ಗೌರಿ ಜಡೆಯಲಿ ಗಂಗೆಯ ಧರಿಸಿದ ಶಂಕರ ಹರ ಮಹಾದೇವ
    ಜಯ ಜಯ ಶಂಭೋ ಹರ ಮಹಾದೇವ ಶಿವ ಶಿವ ಶಂಭೋ ಹರ ಮಹಾದೇವ ||೨||
    ಕರದಲಿ ಢಮರುಗ ತ್ರಿಶೂಲ ಪಿಡಿದ ನಾಗಭೂಷಣ ಹರ ಮಹಾದೇವ ಭಸ್ಮವ ಬಳಿದು ಬಸವನ ಏರಿ ಬಂದಾ ನಮ್ಮ ಹರ ಮಹಾದೇವ
    ಜಯ ಜಯ ಶಂಭೋ ಹರ ಮಹಾದೇವ ಶಿವ ಶಿವ ಶಂಭೋ ಹರ ಮಹಾದೇವ ||೩||
    ಬೇಧವ ಮಾಡದೆ ಬಾಧೆಯ ಕಳೆವ ಭೈರವೇಶ್ವರ ಹರ ಮಹಾದೇವ ಭಕ್ತಗೆ ಒಲಿದು ಪ್ರಾಣಲಿಂಗವ ನೀಡಿದ ನಮ್ಮ ಹರ ಮಹಾದೇವ
    ಜಯ ಜಯ ಶಂಭೋ ಹರ ಮಹಾದೇವ ಶಿವ ಶಿವ ಶಂಭೋ ಹರ ಮಹಾದೇವ ||೪||
    ಗಜಮುಖನ ಪಿತನೇ ಗೌರಿ ವಲ್ಲಭ ಗಂಗಾಧರನೇ ಹರ ಮಹಾದೇವ ಭೋಗವನೊಲ್ಲದ ಗಿರಿಪುರ ವಾಸನೆ ಮೃತ್ಯುಂಜಯನೇ ಹರ ಮಹಾದೇವ
    ಜಯ ಜಯ ಶಂಭೋ ಹರ ಮಹಾದೇವ ಶಿವ ಶಿವ ಶಂಭೋ ಹರ ಮಹಾದೇವ ||೫||
    ಜಯ ಸರ್ವೇಶ್ವರ ಜಯ ಜಗದೀಶ್ವರ ಓಂಕಾರೇಶ್ವರ ಹರ ಮಹಾದೇವ ಜ್ಯೋತಿ ಸ್ವರೂಪ ಜ್ಞಾನ ಸ್ವರೂಪ ಲಿಂಗ ಸ್ವರೂಪ ಹರ ಮಹಾದೇವ
    ಜಯ ಜಯ ಶಂಭೋ ಹರ ಮಹಾದೇವ ಶಿವ ಶಿವ ಶಂಭೋ ಹರ ಮಹಾದೇವ ||೬||
    ಸಾಹಿತ್ಯ ಮತ್ತು ಸಂಗೀತ - ಲಲಿತಾ ಹೆಗಡೆ
    ಗಾಯನ - ವೇದಾ ಹೆಗಡೆ

ความคิดเห็น • 17

  • @LalitaHegde-nn6jw
    @LalitaHegde-nn6jw 3 หลายเดือนก่อน

    ತುಂಬಾ ಚಂದ ಆಯ್ದ ಹಾಡಿದ್ದು ಮಗಳೆ❤❤ಮಹಾದೇವನಿಗೆ ಹಾಡ ಕೇಳಿಸಲಿ ಅನುಗ್ರಹ ಆಗಲಿ🙏🙏 ನಮೊ ನಮಃ |🙏🙏

    • @vedahegde138
      @vedahegde138  3 หลายเดือนก่อน

      🙏🙏🙏🙏

  • @narayanhegde6672
    @narayanhegde6672 3 หลายเดือนก่อน

    Super gayana 🎉🎉👏👏

  • @GanaggayyaGuruvayyanavar
    @GanaggayyaGuruvayyanavar 2 หลายเดือนก่อน

    ತುಂಬಾ ಚನ್ನಾಗಿದೆ ದ್ದ್ನನ್ಯವಾದಗಳು

  • @HarishKumar-oq4ed
    @HarishKumar-oq4ed 3 หลายเดือนก่อน

    ಸೂಪರ್

    • @vedahegde138
      @vedahegde138  3 หลายเดือนก่อน

      🙏🙏🙏🙏

  • @AshaS-qs1ro
    @AshaS-qs1ro 3 หลายเดือนก่อน

    Super

  • @sadashivbhat6060
    @sadashivbhat6060 3 หลายเดือนก่อน

    Chanda ayde🙏🙏

    • @vedahegde138
      @vedahegde138  3 หลายเดือนก่อน

      ಧನ್ಯವಾದಗಳು 🙏🙏

  • @vrindavanrasoi7924
    @vrindavanrasoi7924 3 หลายเดือนก่อน

    Which raga

  • @sumahegde376
    @sumahegde376 3 หลายเดือนก่อน

    Super