ಸಕಲ ಗ್ರಹ ಬಲ ನೀನೇ.. ಶ್ರೀ ಪುರಂದರದಾಸರು ರಚಿಸಿರುವ ದೇವರ ನಾಮ
ฝัง
- เผยแพร่เมื่อ 3 ก.พ. 2025
- ಸಕಲ ಗ್ರಹ ಬಲ ನೀನೇ..
ಹಾಡಿದವರು ಕುಮಾರಿ ರಚನ ಶರ್ಮ
Lyrics :
ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ
ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ||ಪ||
ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ||೧||
ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣಗಳು ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ||೨||
ಋತುವತ್ಸರವು ನೀನೆ ವ್ರತ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ
ಜಿತವಾಗಿ ಎನ್ನೊಡೆಯ ಪುರಂದರ ವಿಠಲನೆ
ಸ್ತುತಿಗೇ ಸಿಲುಕದ ಮಹಾಮಹಿಮನು ನೀನೇ ||೩||