ಐ.ಟಿ ಉದ್ಯೋಗಿಗಳಿಗೇಕೆ ಇಷ್ಟೊಂದು ಖಾಯಿಲೆ? | ಅವಧೂತ ಶ್ರೀ ವಿನಯ್ ಗುರೂಜಿ

แชร์
ฝัง
  • เผยแพร่เมื่อ 19 ต.ค. 2024
  • ಐ.ಟಿ ಉದ್ಯೋಗಿಗಳಿಗೇಕೆ ಇಷ್ಟೊಂದು ಖಾಯಿಲೆ? | ಅವಧೂತ ಶ್ರೀ ವಿನಯ್ ಗುರೂಜಿ
    ನಾವು ಇಂದಿನ ಕಾಲದಲ್ಲಿ ಹಣ ಸಂಪಾದನೆ ಮಾಡುವ ತವಕದಲ್ಲಿ ಪ್ರಕೃತಿಯನ್ನು ಮರೆತು ಬದುಕುತ್ತಿದ್ದೇವೆ. ಮನುಷ್ಯ ಪ್ರಕೃತಿಯ ಜೊತೆ ಹೊಂದಿಕೊಂಡು ಪ್ರಕೃತಿಯ ಭಾಗವಾಗಿ ಇರುವ ತನಕ ಅವನಿಗೆ ರೋಗಗಳು ಕಡಿಮೆಯಾಗಿರುತ್ತದೆ. ಸೂರ್ಯೋದಯ ಸಮಯದಲ್ಲಿ ಗಿಡಗಳು ಬಿಡುವ ಆಮ್ಲಜನಕವನ್ನು ಸ್ವೀಕಾರ ಮಾಡುವುದರಿಂದಲೇ ಅರ್ಧ ಖಾಯಿಲೆ ಹೋಗುತ್ತದೆ. ಹಳ್ಳಿಯಲ್ಲಿರುವ ಜನರು ದೈಹಿಕ ಕೆಲಸಗಳನ್ನು ಹೆಚ್ಚೆಚ್ಚು ಮಾಡುವುದರಿಂದ ಅವರ ದೇಹ ಸದೃಢವಾಗಿರುತ್ತದೆ. ಇಂದಿನ ಜಗತ್ತಿನಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿ ವಿಧ್ಯಾವಂತರ ಮಧ್ಯೆಯೂ ಕೂಡಾ ಸಂಬಂಧಗಳ ಬೆಲೆ ಕಡಿಮೆಯಾಗುತ್ತಿದೆ. ಅಷ್ಟೇ ಅಲ್ಲದೇ ಹಳ್ಳಿಯ ಜನರಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿನ ಜನರಲ್ಲಿ ಮಾನವೀಯತೆಯ ಮೌಲ್ಯಗಳು ಕೂಡಾ ಕಡಿಮೆಯಾಗುತ್ತಿವೆ. ನಮ್ಮ ಜೀವನ ಶೈಲಿಯಿಂದಲೇ ಆಧ್ಯಾತ್ಮ ಶುರುವಾಗುತ್ತದೆ. ಲೌಕಿಕದಲ್ಲಿ ನಾವು ಸದ್ಭಾವನೆ, ಸತ್ಯ, ಪಾರದರ್ಶಕತೆ ಮತ್ತು ಪ್ರತಿಯೊಂದು ಜೀವಿಯ ಪ್ರಾಮುಖ್ಯತೆ ನಮಗೆ ತಿಳಿಯುತ್ತದೆ. ದೈವಾರಾಧನೆಗಳ ಸಂಕೇತವೇ ಒಂದಾಗಿರಿ ಎಂಬುದಾಗಿದೆ. ಹಬ್ಬಗಳ ಆಚರಣೆಗಳ ಹಿಂದೆ ನಮ್ಮಲ್ಲಿರುವ ಪ್ರಜ್ಞೆಯನ್ನು ಬೆಳೆಸುವ ಕಾರಣವೂ ಇತ್ತು. ಎಲ್ಲಾ ಧರ್ಮಗಳ ಎಲ್ಲಾ ಆಚರಣೆಗಳು ಕೂಡಾ ಎಲ್ಲರನ್ನೂ ಒಟ್ಟುಗೂಡಿಸುವ ಕಾರ್ಯವನ್ನು ಮಾಡುತ್ತದೆ. ಅದೇ ರೀತಿ ನಮ್ಮ ರಾಷ್ಟ್ರಗೀತೆಯ ಮೂಲ ಉದ್ದೇಶವೂ ಸಹಬಾಳ್ವೆ ಎಂಬುದಾಗಿದೆ. ರಾಜಕೀಯ ನಾಯಕರೇ ದೇಶವನ್ನು ಸರಿಪಡಿಸಲಿ ಎಂಬ ಮನೋಭಾವವನ್ನು ಬಿಟ್ಟು ನಾವು ಕೂಡಾ ದೇಶದ ಒಂದು ಭಾಗ ಅನ್ನುವ ಮನೋಭಾವ ನಮ್ಮಲ್ಲಿ ಸದಾ ಇರಬೇಕು. ಹಳ್ಳಿಗಳಲ್ಲಿರುವ ಜನರಿಗೆ ಹೋಲಿಸಿದರೆ ನಗರಗಳಲ್ಲಿನ ಜನರಿಗೆ ಖಾಯಿಲೆಗಳು ಅಧಿಕವಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ನಮ್ಮ ನಗರಗಳಲ್ಲಿನ ಜೀವನ ಶೈಲಿ ಮತ್ತು ಆಹಾರ ಕ್ರಮ. ಹಾಗಾಗಿಯೇ ಕನಿಷ್ಠ ಪಕ್ಷ ನಾವು ಯೋಗವನ್ನಾದರೂ ಅಭ್ಯಾಸ ಮಾಡಬೇಕು. ಯಾಕೆಂದರೆ ಯೋಗ ಮಾಡುವವನು ನಿರೋಗಿಯಾಗುತ್ತಾನೆ. ನಾವು ನಾಟಕ ರಹಿತವಾದ ಬದುಕನ್ನು ಮುನ್ನಡೆಸುವಂತಾಗಬೇಕು. ಅದು ಬಿಟ್ಟು ನಾವು ಭಾವನೆಗಳಿಲ್ಲದೆ ಕೆಲಸ ಮಾತ್ರ ಮಾಡುವ ರೋಬೋಟ್ ಗಳ ತರ ಆಗಬಾರದು. ನಾವು ದೇವರನ್ನು ನಂಬದಿದ್ದರೂ ಪಂಚತತ್ವಗಳನ್ನು ಅಭ್ಯಾಸ ಮಾಡುವಂತಾಗಬೇಕು. ಸನ್ಯಾಸ ಅಂದರೆ ಬರೀ ಖಾವಿ ಬಟ್ಟೆಯಲ್ಲ, ಅದೊಂದು ಜವಾಬ್ದಾರಿ. ಮಾತು, ಕೃತಿ ಮತ್ತು ನಡತೆಯಲ್ಲಿ ಬೆಳಕನ್ನು ಇಟ್ಟು ಬದುಕುವುದೇ ಸನ್ಯಾಸ. ಸನ್ಯಾಸ ಅಂದರೆ ಬರೀ ಖಾವೆ ಬಟ್ಟೆ ಅಲ್ಲ, ಅದೊಂದು ಜವಾಬ್ದಾರಿ. ಜಗತ್ತಿಗೆ ಸತ್ತು ಹೋದವನೇ ಸನ್ಯಾಸಿ. ತಾನು ಸತ್ತು ಜಗತ್ತಿಗೆ ಬೆಳಕು ಹರಡುವ ಕ್ಯಾಂಡಲ್ ಜೀವನವೇ ಸನ್ಯಾಸಿ ಜೀವನ. ಸನ್ಯಾಸತ್ವದಲ್ಲಿ ಆಚರಣೆಗಳಿಗಿಂತ ಆಚಾರದ ಕಡೆ ಗಮನವಿರುತ್ತದೆ. ಪ್ರತಿಯೊಂದು ಮಕ್ಕಳ ದೇಹದ ಬೆಳವಣಿಗೆಯ ಜವಾಬ್ದಾರಿ ತಂದೆ ತಾಯಿಯರಿಗಿರುತ್ತದೆ. ಅದೇ ರೀತಿ ಮಕ್ಕಳ ಪ್ರಬುದ್ದತೆಯ ಬೆಳವಣಿಗೆ ಮತ್ತು ಮಕ್ಕಳನ್ನು ರೋಗ ಮುಕ್ತರನ್ನಾಗಿಸುವುದು ಕೂಡಾ ತಂದೆ ತಾಯಿಯರ ದೊಡ್ಡ ಜವಾಬ್ದಾರಿಯಾಗಿದೆ. ದೇವರು ನಮ್ಮನ್ನು ಪರೀಕ್ಷೆ ಮಾಡುತ್ತಾನೆ ಎಂದು ಕೊರಗುವುದಕ್ಕಿಂತ ದೇವರು ನಮಗೆ ವಿವೇಕ ಕೊಟ್ಟಿದ್ದಾನೆ, ಅದನ್ನು ನಾವು ಉಪಯೋಗಿಸದೇ ಇದ್ದುದು ನಮ್ಮದೇ ತಪ್ಪಾಗಿರುತ್ತದೆ. ಪ್ರಾಯೋಗಿಕ ಜೀವನವನ್ನು ದೇವರು ನಮಗೆ ನೀಡಿದ್ದಾನೆ. ಆದರೆ ನಾವು ಅದನ್ನು ಸರಿಯಾಗಿ ಕಲಿಯುವ ಗೋಜಿಗೆ ಹೋಗುತ್ತಿಲ್ಲ. ದೇಶಕ್ಕೆ ದೊಡ್ಡ ಆಸ್ತಿ ಅಂದರೆ ಅದು ಮಾನವ ಸಂಪನ್ಮೂಲ. ನಮ್ಮ ಭಾರತ ದೇಶದಲ್ಲಿ ಅಷ್ಟೊಂದು ಮಾನವ ಸಂಪನ್ಮೂಲ ಇದ್ದರೂ ಸರಿಯಾದ ಮಾರ್ಗಸೂಚಿ ಇಲ್ಲದೇ ಸಮಸ್ಯೆಯಾಗಿದೆ. ದುಡ್ಡು ಮಾಡುವುದು ಹೇಗೆ ಎಂದು ಶಾಲಾ ಕಾಲೇಜುಗಳು ಹೇಳಿಕೊಟ್ಟಿವೆ. ಆದರೆ ದುಡ್ಡನ್ನು ಹೇಗೆ ಉಪಯೋಗಿಸುವುದು ಎಂದು ಗೊತ್ತಾಗಬೇಕಾದರೆ ನಾವು ಪ್ರಕೃತಿಯ ಮಧ್ಯೆ ಬದುಕಬೇಕು.
    For More Videos:
    ಅವಧೂತರಿಂದ ಸಾಮಾಜಿಕ ಕಾರ್ಯಗಳು|ನೇತ್ರ ತಪಾಸಣಾ ಶಿಬಿರ|ಗಾಂಧೀ ಕುಟೀರ ಭೂಮಿ ಪೂಜೆ|Social Activities by Avadhootha • ಅವಧೂತರಿಂದ ಸಾಮಾಜಿಕ ಕಾರ್...
    ಅವಧೂತರಿಂದ ಬ್ಯಾಹಟ್ಟಿಯಲ್ಲಿ ಗ್ರಾಮದೇವತೆ ಪ್ರಾಣ ಪ್ರತಿಷ್ಠಾಪನೆ|Gramadevate Pranapratishthapana by Avadhootha • ಅವಧೂತರಿಂದ ಬ್ಯಾಹಟ್ಟಿಯಲ್...
    ನಾಗಲಿಂಗ ಮಹಾಸ್ವಾಮಿಗಳ ಜೀವಂತ ಸಮಾಧಿಗೆ ಅವಧೂತರ ಭೇಟಿ|Avadhootha visited living tomb of Nagalinga Mahaswamy • ನಾಗಲಿಂಗ ಮಹಾಸ್ವಾಮಿಗಳ ಜೀ...
    ನಾವೆಲ್ಲರೂ ನಿಮಿತ್ತ ಮಾತ್ರ | We are all here only for a reason • ನಾವೆಲ್ಲರೂ ನಿಮಿತ್ತ ಮಾತ್...
    ಜೀವನ ಬದಲಿಸಿದ 5 ಪುಸ್ತಕಗಳು | 5 Books which changed my life • ಜೀವನ ಬದಲಿಸಿದ 5 ಪುಸ್ತಕಗ...
    #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #shivaratri #shivaratripuja #aradhana #lordshiva #Nonvegetarianism #idolatry #eating #idolsofgods #Buddha #BhagavadGita #itjobs #informationtechnology #Jobs #ITemployees

ความคิดเห็น • 29