Ep. 02 Nyimisharanya Satra - Bhrigu Vamsha | Mahabharatha | Dr. Pavagada Prakash Rao

แชร์
ฝัง
  • เผยแพร่เมื่อ 8 ก.พ. 2025
  • ಮಹಾಭಾರತ ದರ್ಶನ - ಸಂಚಿಕೆ - ೨ ರ ಮುಖ್ಯಾಂಶಗಳು :-
    ಮಹಾಭಾರತ ಕಥಾ ಶ್ರವಣ ನಡೆದದ್ದು ಮೊದಲು ಜನಮೇಜಯನ ಆಸ್ಥಾನದಲ್ಲಿಯೇ ಆದರೂ , ಅದನ್ನು ಹೇಳಿದ್ದೂ , ತನ್ಮೂಲಕ ಅದರ ಬಹಿರಂಗ ಪ್ರಚಾರ ಪ್ರಾರಂಭವಾಗಿದ್ದೂ ಶೌನಕರ ದೀರ್ಘಸತ್ರದ ವಿರಾಮ‌ಕಾಲದಲ್ಲಿ ! ಅದು ನಡೆದದ್ದು ನೈಮಿಷಾರಣ್ಯದಲ್ಲಿ !!
    ನೈಮಿಷಾರಣ್ಯವೆಂದು ಆ ಕಾಡಿಗೆ ಹೆಸರು ಬಂದದ್ದು ಹೇಗೆ , ಅಲ್ಲಿಗೆ ಆಗಮಿಸಿದ ಉಗ್ರಶ್ರವಸೌತಿಗಳ ಹಿನ್ನೆಲೆ , ಭೃಗುವಂಶದ ಪರಿಚಯಾರಂಭ , ಭೃಗುವನ್ನು ಅಧ್ಯಯನ ಮಾಡುವ ಐತಿಹಾಸಿಕ , ಪೌರಾಣಿಕ ಹಾಗೂ ಉಪನಿಷತ್ತುಗಳಲ್ಲಿ ದರ್ಶನಗಳು........ ಇವುಗಳನ್ನೆಲ್ಲ ಚಿಂತಿಸಲಾಗಿದೆ .
    ಪೌರಾಣಿಕ ಭೃಗು ಒಬ್ಬ ಉದ್ಧಟ . ಈತನೊಬ್ಬ ಋಷಿ . ಇರಬಹುದು ಶಕ್ತರ್ಷಿ ; ಮಹರ್ಷಿ !! ಆದರೀತನಾರು ತ್ರಿಮೂರ್ತಿಗಳನ್ನು ಪರೀಕ್ಷಿಸಲು ? ಅಸಲು ಋಷಿಗಳಿಗೇಕೆ ಬ್ರಮ್ಹ-ವಿಷ್ಣು-ಮಹೇಶ್ವರರಲ್ಲಿ ಯಾರು ಸಾತ್ವಿಕರೆಂಬ ಕೆಟ್ಟ ಕುತೂಹಲ ? ಋಷಿ ವಲಯದಿಂದ ಬಹು ಎತ್ತರದಲ್ಲಿರುವ ಮೂರ್ತಿ ತ್ರಯರನ್ನು ಪರೀಕ್ಷಿಸುವಲ್ಲಿ ಅವರ ಅರ್ಹತೆ ಏನು ? ......... ಇರಲಿ ಇದಕ್ಕೆ ಮುಂದಾದ ಭೃಗು ಮಾಡಿದ ತಪ್ಪುಗಳೇನು ? ಮೀರಿದ ಎಲ್ಲೆಗಳೇನು ? ಕಲಿತ ಪಾಠಗಳೇನು ? ........ಇತ್ಯಾದಿಗಳನ್ನು ಪೌರಾಣಿಕ ಭೃಗುವಿನಲ್ಲಿ ಕಾಣುತ್ತೇವೆ .
    ಉಪನಿಷತ್ ಕಾಲದ ಭೃಗು ಬ್ರಮ್ಹಙ್ಞಾನಿ . ಉಪನಿಷತ್ತುಳಲ್ಲಿ ಬ್ರಮ್ಹ ಚಿಂತನೆ ಸಾಮಾನ್ಯ . ಬ್ರಮ್ಹನ್ ಎಂದರೆ ಏನೆಂಬ ಪ್ರಶ್ನೆಯ ಬೆನ್ನು ಹತ್ತಿ ಹೊರಟಾತ ಈ ಭೃಗು . ತಪಸ್ವಿ . ವಿನೀತ . ಅಪ್ಪ ವರುಣನಿಂದ ನಿರ್ದೇಶಿತನಾಗಿ ಬಹುದೀರ್ಘ ತಪಗೈದು , ಬ್ರಮ್ಹವನ್ನು " ಆನಂದೋ ಬ್ರಮ್ಹೇತಿ ವ್ಯಜಾನಾತ್ " ಎಂದು ನಿರೂಪಿಸಿದ ಒಬ್ಬ ಮಹಾನ್ ಸಾಧಕ .
    ಇತಿಹಾಸವೆಂದು ಪ್ರಸಿದ್ಧವಾದ ಮಹಾಭಾರತದಲ್ಲಿ ಬರುವ ಭೃಗುವೇ ನಮ್ಮ ಪ್ರಕೃತ ಋಷಿ . ಈತನ ಎರಡನೆಯ ಹೆಂಡತಿಯನ್ನು ಹಾರಿಸಿಕೊಂಡುಹೋದದ್ದೇ ಪುಲೋಮನೆಂಬ ರಾಕ್ಷಸ ! ..... ಇಂತಹ ಅನೇಕ ವೃತ್ತಾಂತಗಳನ್ನೊಳಗೊಂಡಿರುವುದೇ ಮಹಾಭಾರತ ದರ್ಶನದ ಎರಡನೆಯ ಸಂಚಿಕೆಯ ಬೆಳ್ಳಿ ಗರೆಗಳು .
    --------------
    Mahabharatha Darshana Ep-02 by Dr.Pavagada Prakash Rao in Kannada
    Although the first narration of Mahabharata took place in the court of King Janamejaya, the epic became widespread and popular after the YagnyaSatra ( Yagnyas conducted over a long period) by Shounak Rishi, in Nyimisharanya. ( A forest )
    The meaning of the name Nyimisharanya, the significance of Ugrashrava Shroutri who was present for the Yagnya Satra by Shounak Rishi, about Bhrigu Vamsha, especially about Bhrigu Maharshi with his multiple profiles historical, mythological as well as in the times of Upanishad are some of the highlights.
    In Mythological profile Bhrigu Maharshi is arrogant. No doubt he has a lot of knowledge, power, yet how can a Rishi go to "Test" and judge as to which one among the three great deities ( Brahma, Vishnu, Mahesh ) is superior? Deities being so far above the Rishies, this whole context is absurd. Who gave them the authority and what is this strange curiosity of all the Rishies who asked him? What are the mistakes he committed, the consequences of the same and what he learned in the process?
    On the other hand, Bhrigu Maharshi at the time of Upanishads is extremely knowledgeable Brahmarshi in fact. He undergoes a severe penance, as guided by his father Varuna, to discover the meaning of Brahman - the ultimate. He was the one to establish "Anando Brahmeti vyajanat ", yet very humble.
    Historical Bhrigu's wife Puloma has been kidnapped - why?
    Watch all of the above in this episode 2 of Mahabharata Darshana.
    Subscribe to get regular updates.

ความคิดเห็น • 70

  • @KRISHNA-hg4wt
    @KRISHNA-hg4wt 10 หลายเดือนก่อน +1

    ಶ್ರೀ ಗುರುಭ್ಯೋ ನಮ:

  • @NCGangadhara
    @NCGangadhara ปีที่แล้ว

    Namaskara Gurugale 🙏

  • @srikanthdattatribasavanaha144
    @srikanthdattatribasavanaha144 3 ปีที่แล้ว +2

    🙏💐🌹♥️ಓಂ ಶ್ರೀ ಗುರುಭ್ಯೋ ನಮಃ ಹರಿ ಓಂ ♥️🌹💐🙏

  • @giriswamy46
    @giriswamy46 2 ปีที่แล้ว

    ನಮಸ್ಕಾರ ಗರುಗಳೇ

  • @meghas7613
    @meghas7613 3 ปีที่แล้ว +1

    ನೀವೇ ವ್ಯಾಸರಿರಬೇಕು..

  • @mcarasaraju515
    @mcarasaraju515 ปีที่แล้ว

    ಹಕ್ಕಿಯಂತೆ ಪ್ರೀತಿ ಪೂರ್ವಕ ಧನ್ಯವಾದಗಳು

  • @kushaalkumar2513
    @kushaalkumar2513 2 ปีที่แล้ว

    ದಯವಿಟ್ಟು ಎಲ್ಲಾ ವೀಕ್ಷಕರು ಇದರ ಬಗ್ಗೆ ಸ್ನೇಹಿತರ ಜೊತೆ ಹಂಚಿಕೊಳ್ಳುವ ಮೂಲಕ ಜನರು ಜ್ನಾನ ಹೆಚ್ಚು ಹೆಚ್ಚು ಸಂಪಾದಿಸಿ.. 🙏🙏🙏ಧನ್ಯವಾದಗಳು..

  • @rajeshkini284
    @rajeshkini284 3 ปีที่แล้ว

    Pranaama

  • @mouna2950
    @mouna2950 2 ปีที่แล้ว

    🙏🙏 ನಮಸ್ತೆ ಗುರುಗಳೇ. ನಾನೂ ಚಂದಾದಾರಳಾಗಿದ್ದೇನೆ. (ಚಂದಾ ಎಂದರೆ ಮೊಬೈಲನ ಡಾಟಾ MB ಗಳಲ್ಲಿ ಖರ್ಚಾಗುತ್ತಲ್ಲಾ ಅದು. ಪರೋಕ್ಷವಾಗಿ ಶುಲ್ಕವೇ. ಅಂದರೆ ಅತ್ಯಂತ ಕಡಿಮೆ (ಪೈಸೆಗಳಲ್ಲಿ )ಅಂದುಕೊಂಡಿದ್ದೇನೆ).🙏🙏

  • @srinivasarangan.m.s.1529
    @srinivasarangan.m.s.1529 3 ปีที่แล้ว

    Namskra

  • @vagishnaganur5663
    @vagishnaganur5663 3 ปีที่แล้ว +2

    Very soothing to hear you sir

  • @manjumanjunathag7124
    @manjumanjunathag7124 4 ปีที่แล้ว +1

    ಹರೇಕೃಷ್ಣ ಬಹು ದಿನಗಳ ನಂತರ ತಮ್ಮ ಅಮೃತ ಮಯವಾದ ಮಾತುಗಳು ಈಗ ಕೇಳುವ ಸೌಭಾಗ್ಯ ದೊರಕಿದೆ.
    ನಿಮ್ಮ ದರ್ಶನಮಾತುಕೆಳುವಂತೆನಮಗೆಅವಕಾಶ
    ಕಲ್ಪೀಸಿದ ಭಕ್ತಭಾಂದವರಿಗೆ ನನ್ನ ಅನಂತಾನಂತ ವಂದನೆಗಳು
    ಇತ್ಯನೇಕಶ್ರೀರಾಮಚರಣಸ್ಮರಣೆಗಳೊಂದಿಗಿ
    ಶ್ರೀಗುರು ಚರಣಕ್ಕೆ ವಂದಿಸುತ್ತಾ
    ತುಂಬು ಹೃದಯದ ಧನ್ಯವಾದಗಳು

    • @dayanandasm1231
      @dayanandasm1231 3 ปีที่แล้ว

      ಸೊಗಸಾದ ಪ್ರಾರ್ಥನೆ

  • @shivanndashiva5088
    @shivanndashiva5088 4 ปีที่แล้ว

    ಗುರುಗಳಿಗೆ ನನ್ನ ನಮಸ್ಕಾರಗಳು ನಾನು ಒಬ್ಬ ಜಂಗಮ ಹಾಗೂ ಶಕ್ತಿ ವಿಶಿಷ್ಟಾದ್ವೈತ ಅಂದರೆ ಏನು ಎಂದು ತಿಳಿಸಿ ಕೊಡಿ ಗುರುಗಳೇ ಹಾಗೂ ನಿಮ್ಮ ಆದಷ್ಟು ಸಂದರ್ಶನ ನಾನು ತುಂಬಾ ಆಸಕ್ತಿ ಹಾಗೂ ಏಕಚಿತ್ತ ಆಲಿಸಿದ್ದೇನೆ ಮನದಟ್ಟು ಮಾಡಿಕೊಂಡಿದ್ದೇನೆ ಆದ್ದರಿಂದ ಸಾಕಷ್ಟು ಇತಿಹಾಸ ಹಾಗೂ ನಮ್ಮ ಭಾರತವನ್ನು ಕಿಂಚಿತ್ ನಿಮ್ಮಿಂದ ತಿಳಿದುಕೊಂಡಿದ್ದೇನೆ ಗುರುಗಳೇ ನಿಮಗೆ ನನ್ನ ಕೋಟಿ ಕೋಟಿ ನಮನಗಳು

  • @indiraswamy6197
    @indiraswamy6197 3 ปีที่แล้ว +1

    🙏 ನಮಸ್ಕಾರಗಳು ತುಂಬಾ ಚನ್ನಾಗಿದೆ

  • @nagarajraj8216
    @nagarajraj8216 9 หลายเดือนก่อน

  • @sowbhagyads2323
    @sowbhagyads2323 2 ปีที่แล้ว

    Very beautiful narrations

  • @RajaRam-vj5hx
    @RajaRam-vj5hx 11 หลายเดือนก่อน

    🌹🌹🌹🌹🌹🌹🌹🙏🙏🙏🙏🙏🙏

  • @nudigannadi-1523
    @nudigannadi-1523 4 ปีที่แล้ว

    ಗುರುಚರಣಕ್ಕೆ ವಂದನೆ ತುಂಬಾ ಸುಂದರವಾಗಿ ಮೂಡಿ ಬರುತ್ತಿದೆ.ಧನ್ಯವಾದಗಳು

  • @shivakumarhosamani7637
    @shivakumarhosamani7637 4 ปีที่แล้ว +1

    ನಮಸ್ಕಾರ ಗುರುಗಳೇ...ಸತ್ಯ ದರ್ಶನ -ದೂರದರ್ಶನದಲ್ಲಿ ತಮ್ಮನ್ನು ನೋಡುತ್ತಿದ್ದ ಅಸಂಖ್ಯಾತ ನನ್ನಂತಹವರಿಗೆ...ಅನುಕೂಲದ ಸಮಯದಲ್ಲಿ ನಿಮ್ಮ ದರ್ಶನ -ಶ್ರವಣ ಮಾಡುವ ಅವಕಾಶ ಮಾಡಿಕೊಟ್ಟಿರುವುದಕ್ಕೆ ಧನ್ಯವಾದಗಳು

  • @rakeshkashyaphr
    @rakeshkashyaphr 3 ปีที่แล้ว

    ಪೂಜ್ಯರೆ ವಂದನೆಗಳು,
    ತಮ್ಮ ಮಹಾ ಭಾರತದ ಸರಾಣಿಯನ್ನು ನೋಡುತ್ತಿದ್ದೇ ನೆ
    ಸುಂದರವಾಗಿ ಹಾಗೂ ಸ ಮೂಡುತ್ತಿದೆ ಬಹಳ ಸಂತೋಷ
    ಒಂದು ಅರಿಕೆ ಅದರಲ್ಲಿ captions ಬರುತ್ತಿದೆ ಅದು ಬಹಳ ವಿಚಿತ್ರವಾಗಿದೆ ದಯವಿಟ್ಟು ಗಮನಿಸಿ .

  • @krishnaheggade2555
    @krishnaheggade2555 4 ปีที่แล้ว

    ಜನ್ಮ ಪಾವನ ಗುರು ಬ್ರಹ್ಮ 🙏🙏🙏

  • @vijeylakshmi3364
    @vijeylakshmi3364 4 ปีที่แล้ว +1

    Thanks 🙏🙏🙏

  • @vijeylakshmi3364
    @vijeylakshmi3364 4 ปีที่แล้ว

    Thanks to the lotus feet

  • @nagaraj422
    @nagaraj422 4 ปีที่แล้ว

    I have subscribed

  • @nagammam2685
    @nagammam2685 2 ปีที่แล้ว

    Bahala channagede
    Naskara Gugale

  • @renukasr2309
    @renukasr2309 4 ปีที่แล้ว

    PUJYA SRI GURUGALIGE BAKTHIPURVAKA NAMASKARAGALU

  • @bharatitagare646
    @bharatitagare646 4 ปีที่แล้ว

    ನಾನು ಚಂದಾದಾರಳಾಗಿದ್ದೆನೆ.
    ಗುರುಗಳೆ ನಿಮಗೆ ಕೋಟಿ ನಮನ.

  • @shreeRaghavacharya
    @shreeRaghavacharya 4 ปีที่แล้ว

    ಶುಭೋದಯ ಗುರುಗಳಿಗೆ 🙏.

  • @lakshmisathyanarayana8248
    @lakshmisathyanarayana8248 4 ปีที่แล้ว +1

    👌👌🙏🙏🌺

  • @sriramaathreya3556
    @sriramaathreya3556 4 ปีที่แล้ว +1

    Daarshanikarige namaskaragalu

  • @umeshbn
    @umeshbn 4 ปีที่แล้ว

    aadhashtu vyasa bharathada vykhyana irli Sir

  • @manjunathshastry5934
    @manjunathshastry5934 4 ปีที่แล้ว

    It's good to human resource culture and namangalu

  • @mathmurthy993
    @mathmurthy993 4 ปีที่แล้ว

    వాక్కు, ఉచ్చారణ, కంఠం , భాషా పటిమ అమోఘం

    • @DrPavagadaPrakashRao
      @DrPavagadaPrakashRao  4 ปีที่แล้ว +1

      ವಂದನಮುಲು . ಕೃತಙ್ಞತುಲು .

  • @kgs1600
    @kgs1600 4 ปีที่แล้ว

    🙏🙏🙏🙏🙏🙏🙏🙏🙏🙏

  • @nikhilgowda9958
    @nikhilgowda9958 4 ปีที่แล้ว

    🙏🏻

  • @raashivishwa3889
    @raashivishwa3889 4 ปีที่แล้ว

    Chennagide adre 15 ra nanthara?

  • @divakarputhran8780
    @divakarputhran8780 4 ปีที่แล้ว

    🕉🚩🏹🐚🙏🙏🙏👌👍🤘💕💞💞

  • @s.v.prabhakararao4146
    @s.v.prabhakararao4146 4 ปีที่แล้ว

    Sri Gurubyo Namaha. Lighting is not made properly. Spectacle glaring can be avoided. Pls. try. Name namaha.

  • @genuineproducts3135
    @genuineproducts3135 4 ปีที่แล้ว

    GURUGALIGE NAMASKARAM. 🙏

  • @prm6013
    @prm6013 2 ปีที่แล้ว

    🙏🙏🙏🙏🙏🙏🙏🙏🙏🙏🙏

  • @meghnam4143
    @meghnam4143 4 ปีที่แล้ว

    🙏🏼

  • @venugopalbhat1167
    @venugopalbhat1167 4 ปีที่แล้ว

    🙏

  • @basavarajud263
    @basavarajud263 4 ปีที่แล้ว

    🙏

  • @My-67
    @My-67 3 ปีที่แล้ว

    🙏🙏🙏

  • @rahulgowdaj3055
    @rahulgowdaj3055 3 ปีที่แล้ว

    🙏

  • @ramaraot1943
    @ramaraot1943 2 ปีที่แล้ว

    🙏🙏🙏