ನನ್ನ ಆರೋಗ್ಯ ನನ್ನ ಜವಾಬ್ದಾರಿ : Nanna Arogya Nanna Javadari - ಗಾಳಿ ಮಾತು :ಭಾಗ-5

แชร์
ฝัง
  • เผยแพร่เมื่อ 16 ต.ค. 2024
  • ನಿಜವಾಗಿಯೂ ಇದು ಗಾಸಿಪ್ ಬಗ್ಗೆ ಅಲ್ಲ...
    ಸುಮಾರು ಜನರಿಗೆ ಬೆಲೆ ಮತ್ತು ಮೌಲ್ಯದ ವ್ಯತ್ಯಾಸ ಗೊತ್ತಿರುವುದಿಲ್ಲ.
    ಬೆಲೆಯನ್ನು ಅಳತೆ ಮಾಡೋಕೆ ಆಗುತ್ತೆ. ಮೌಲ್ಯವನ್ನ ಅಳತೆ ಮಾಡೋಕೆ ಆಗಲ್ಲ.
    ಜೀವನದಲ್ಲಿ ನಮಗೆ ಉಚಿತವಾಗಿ ಸಿಕ್ಕಿರುವ ಎಲ್ಲಾ ಅಂಶಗಳಿಗೆ ನಾವು ಮೌಲ್ಯವನ್ನು ಕೊಟ್ಟಿರುವುದು ತುಂಬಾ ಕಡಿಮೆ. ಅಂದರೆ ಗೌರವ ಕೊಟ್ಟಿರುವುದಿಲ್ಲ.
    ಅದರಲ್ಲಿ ತುಂಬಾ ಮುಖ್ಯವಾದ ಒಂದು ಅಂಶ ಎಂದರೆ ಗಾಳಿ.
    ಒಬ್ಬ ಮನುಷ್ಯ ಊಟ ಇಲ್ಲದೆ ಮೂರು ವಾರಗಳು ಬದುಕಬಹುದಂತೆ, ನೀರು ಇಲ್ಲದೆ ಮೂರು ದಿನಗಳು ಬದುಕಬಹುದಂತೆ. ಆದರೆ ಯೋಚನೆ ಮಾಡಿ ಗಾಳಿ ಇಲ್ಲದೆ ಎಷ್ಟು ಕ್ಷಣ ಅಥವಾ ಎಷ್ಟು ನಿಮಿಷ ಬದುಕಬಹುದು?
    ಗೊತ್ತಿದ್ದೂ ಗೊತ್ತಿಲ್ಲದೇನೋ ನಾವು ಉಸಿರಾಡುವ ಗಾಳಿಗೆ ಮುಖ್ಯತ್ವ ಕೊಟ್ಟಿಲ್ಲ. ಏಕೆಂದರೆ ಅದು ಉಚಿತವಾಗಿ ಸಿಗುತ್ತಿದೆಯಲ್ಲವೇ?
    20-30 ವರ್ಷಗಳ ನಂತರ ಪೆಟ್ರೋಲ್, ಗ್ಯಾಸ್, ಆಯಿಲ್ ಮುಂತಾದವುಗಳ ಹಾಗೆಯೇ ಗಾಳಿಯನ್ನು ಕೂಡಾ ದುಡ್ಡು ಕೊಟ್ಟು ಕೊಡುಕೊಳ್ಳುವ ಪರಿಸ್ಥಿತಿ ಬಂದರೂ ಬರಬಹುದು.
    ನಮ್ಮ ಉಸಿರಾಟವನ್ನು ನಾವು ನಿಯಂತ್ರಿಸಲು ಕಲಿತಿದ್ದೇ ಆದರೆ ನಮ್ಮ ಮನಸ್ಸನ್ನು ನಿಯಂತ್ರಿಸಬಹುದು.
    ಗಾಳಿಯ ಮುಖ್ಯತ್ವ, ಅದರ ನಾನಾ ರೀತಿಯ ಸದುಪಯೋಗಗಳ ಬಗ್ಗೆ ಬಾಲಕೃಷ್ಣನ್ ಗುರುಗಳ ಧ್ವನಿಯಲ್ಲಿ ನಿಮಗಾಗಿ.
    ಕೇಳಿ ಆನಂದಿಸಿ, ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ความคิดเห็น • 11