ದೀಪಾವಳಿ ಹಬ್ಬದ 5ಲಕ್ಷ್ಮಿಹಾಡುಗಳು|Deepavali Lakshmi 5Songs in Kannada|Deepavali Songs In Kannada|Lakshmi

แชร์
ฝัง
  • เผยแพร่เมื่อ 14 ต.ค. 2024
  • Singer Amrutha shetty
    ದೀಪಾವಳಿ ಹಬ್ಬದ ಲಕ್ಷ್ಮಿ ಹಾಡು
    ನಡೆದು ಬಾಮ್ಮ ಲಕ್ಷ್ಮಿ ನಿನಗೆ
    ನಡೆಮುಡಿಯ ಹಾಸುವೆ
    ನಡೆಮುಡಿಯ ಹಾಸಿ ನಾ ಚರಣಕಮಲಕ್ಕೆರುವೆ ||
    ೧. ಮರುಗ ಮಲ್ಲಿಗೆ ಧವನ ಸಂಪಿಗೆ ಸರಗಳನ್ನೇ ಪೂಜಿಪೆ
    ಸರಗಳನ್ನೇ ಪೂಜಿಸಿ ನಾ ವರಗಳನ್ನೇ ಬೇಡುವೆ ||
    ೨. ಹೀರೆ ಕುಂಬಳಕಾಯಿ ಪಡವಲ ಶಾಖ ಪಾಕವ ಮಾಡುವೆ
    ಸಣ್ಣಶಾವಿಗೆ ಭಕ್ಷ್ಯವು ನೈವೇದ್ಯವು ಪರಮಾನ್ನವು ||
    ೩. ಎಷ್ಟು ಬೇಡಿದರು ದಯೆ ಬಾರಲಿಲ್ಲ ಲಕ್ಷ್ಮಿ ನಿನಗೆ
    ದಿಟ್ಟ ಪ್ರಸನ್ನ ವೆಂಕಟ ವಿಠ್ಠಲನ ಪಟ್ಟದರಾಣಿಯೇ ||
    song 2
    ಸಿರಿ ಸಂಪದವ ನೀಡು ಶ್ರೀ ಲಕ್ಷ್ಮಿಯೇ
    ಅಸುರವೈರಿ ವರಿಸಿಹ ವರಲಕ್ಷ್ಮಿಯೇ ||
    ೧. ಪುಷ್ಪಗಳ ಅರ್ಪಿಸಿ ಜ್ಯೋತಿಯನು ಬೆಳಗಿಸಿ
    ಕರಜೋಡಿಸಿ ನಮಿಸಿ ವರಬೇಡುವೆ ತಾಯೆ
    ವರನೀಡಿ ಹರಸಮ್ಮ ಮಹಾಲಕ್ಷ್ಮಿಯೇ ||
    ೨. ಉಪವಾಸ ವ್ರತವನು ನೀತಿನಿಯಮಗಳನು
    ನಿಷ್ಠೆಯಲಿ ಪಾಲಿಪೆನು ನಳಿನಾಕ್ಷಿಯೇ ತಾಯೆ
    ದಯಮಾಡಿ ನೆಲೆಸಮ್ಮ ಈ ಮನೆಯಲ್ಲಿ ||
    ೩. ನಿನ್ನ ಕೃಪೆ ದೊರೆತಾಗ ಬಾಳಿನಲಿ ವೈಭೋಗ
    ನಿನ್ನೊಲುಮೆ ಇರುವಾಗ ಇಳೆ ಸ್ವರ್ಗವೇ
    ಮಾಯೆ
    ಮನ ನಿನ್ನ ನೆನೆವಂತೆ ಹರಸೆನ್ನನು ||
    Song 3
    ತಾಯೆ ಶ್ರೀ ತುಳಸಿ ಬಾರಮ್ಮ
    ನಮ್ಮಮ್ಮ ನೀನು
    ಮನೆಮನೆಯಂಗಳದಲಿ ನೀ ಶೋಭಿಸಿ
    ಅಮಿತ ವರಗಳ ಕೊಡುತಿಹೆ ಹರಸಿ
    ಜನನಿಯೆ ನಿನ್ನಯ ಪೂಜಿಪ ಸದ್ಭಾವನೆಯನು ನಿರತವು ಎಮಗೆ ಕರುಣಿಸುತಾ
    ಶಮನಿಧಿ ಶ್ರೇಯೋವತಿ ಶ್ರೀ ತುಳಸಿ
    ಯಮುನಾ ಪ್ರಿಯ ಶ್ರೀ ಲೋಕಪಾವನಿ
    ಲೋಕಪ್ರಿಯೆ ನೀ ಶೋಚ್ಯ ಮಾನಸೆ
    ಶಂಕಿಣಿ ಚಕ್ರಿಣಿ ಚಾರಿಣಿ ನಮಿಪೆ
    ಕೃಷ್ಣಾ ಕೃಷ್ಣ ಪ್ರಿಯೆ ಶ್ರೀ ನಂದಿನಿ
    ವೈಷ್ಣವ ಕುಲವರ ವರ್ಷಿಣಿ ಹರ್ಷಿಣಿ
    ಪಾಪ ತಾಪ ಶಮನಿ ಶುಭ ಗೋತ್ರಿಣಿ
    ಈಪ್ಸಿತಾರ್ಥವನು ಮುದದಲಿ ನೀಡುತ
    Song 4
    ಬಾರಮ್ಮ ಬಡವರ ಮನೆಗೆ
    ದಯಮಾಡಮ್ಮ
    ಅಮ್ಮ ಬಾರಮ್ಮ ಬಡವರ
    ಮನೆಗೆ ದಯಮಾಡಮ್ಮ
    ಲಕ್ಷ್ಮಿ ಮಹಾಲಕ್ಷ್ಮಿ ಆ ಆ ಆ
    ಲಕ್ಷ್ಮಿ ಮಹಾಲಕ್ಷ್ಮಿ
    ಲಕ್ಷ್ಮಿ ಜಯಲಕ್ಷ್ಮಿ
    ಲಕ್ಷ್ಮಿ ಶುಭಲಕ್ಷ್ಮಿ
    ನೀ ಧನವಾಗಿ ಧಾನ್ಯವಾಗಿ
    ಶ್ರೀ ಹರಿ ಮನೋ ವಿಲಾಸಿನಿ
    ಶ್ರೀ ನಿಧಿ ಮಹಾ ಪ್ರಚೋದಿನಿ
    ಶ್ರೀ ಸುಖಿ ಸುಮಂಗಳಾಂಗಿಣಿ
    ಸರ್ವ ಇಷ್ಟ ಸುಪ್ರದಾಯಿನಿ
    ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ
    ಶಾರದೆ ಜೊತೆಯಲ್ಲಿ ಹಾಡಿ ನಲಿಯಮ್ಮ
    ನಿನ್ನ ಗಂಡ ಲೋಕನಾಯಕ
    ನೀನು ಅವನ ಹೃದಯತಾರಕ
    ನಿನ್ನ ಮಗನು ಲೋಕ ಕಾರಕ
    ನೀನು ಅವನ ಸೃಷ್ಟಿ ಪ್ರೇರಕ
    ನಿನ್ನ ದಯದಲ್ಲಿ ಎಲ್ಲ ಬಂಗಾರ
    ಮಣ್ಣಿನ ಮಡಿಲಲ್ಲಿ ಚಿನ್ನ
    ರತ್ನದ ಭಂಡಾರ
    Song 5
    ಬಾಗಿಲ ತೆರೆದಿರುವೆ ತಾಯೆ
    ಪೂಜೆಗೆ ಕಾದಿರುವೆ ಸೇವೆಯ ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೇ ||
    ೧.ಹೊಸಿಲಿನ ಪೂಜೆ ಮಾಡಿದೆಯಮ್ಮ ||
    ಹಸಿರು ತೋರಣ ಕಟ್ಟಿದೆಯಮ್ಮ ||
    ತುಪ್ಪದ ದೀಪ ಬೆಳಗಿದೆಯಮ್ಮ ||
    ಮಲ್ಲಿಗೆ ಮಾಲೆ ಕಾದಿದೆಯಮ್ಮ ||
    ಕಮಲಾಕ್ಷಿ ಕಮಲಮುಖಿ
    ಕಮಲೋದ್ಭವೇ ಬಾರೆ ||
    ೨. ನೀನು ಬರುವಾಗ ಹೊನ್ನ ಕಾಲ್ಗೆಜ್ಜೆ
    ನಾದ ನಾ ಕೇಳುವಂತೆ ||
    ನಿನ್ನ ನಗೆಯಿಂದ ನನ್ನ ಭಯವೆಲ್ಲ
    ಓಡಿ ಮರೆಯಾಗುವಂತೆ ||
    ಮನೆಯು ಬೆಳಕಾಗಿ ಮನವು
    ಬೆಳಕಾಗಿ ಬಾಳು ಬೆಳಕಾಗುವಂತೆ ||
    ದಯಮಾಡಿಸು ನಾರಾಯಣನ
    ಹೃದಯೇಶ್ವರಿಯೇ ||
    ೩. ನಿನ್ನ ಮನೆಯೆಂದು ನಿನ್ನ ಗುಡಿಯೆಂದು
    ಬಂದು ಸ್ಥಿರವಾಗಿ ನೆಲಸು ||
    ಬಂದ ಕ್ಷಣದಿಂದ ತಂದ ಸುಖಶಾಂತಿ
    ನಮ್ಮ ಬದುಕಲ್ಲಿ ಬೆರೆಸು ||
    ನಿತ್ಯ ಹರಿಪೂಜೆ ನಿತ್ಯ ಗುರುಸೇವೆ
    ಇಲ್ಲಿ ನೆಡೆವಂತೆ ಹರಸು ||
    ದಯ ತೋರಿಸು ಶರಣೆನ್ನುವೆ
    ಸೌಭಾಗ್ಯದ ನಿಧಿಯೇ ||
    ನಮಸ್ಕಾರ
    ಈ ಚಾನೆಲ್ ನಿಂದ ನಿಮಗೆ ಸರಳವಾದ ಜನಪದಗೀತೆ ,ದೇಶಭಕ್ತಿಗೀತೆ ಭಕ್ತಿಗೀತೆ,ಭಜನೆಗಳನ್ನು,ದಾಸರಪದಗಳನ್ನು ಕಲಿಯಲು ಅನುಕೂಲವಾಗುತ್ತದೆ .
    ಇನ್ನು ಹೆಚ್ಚಿನ ವೀಡಿಯೋಸ್ಗಳಿಗಾಗಿ
    ನನ್ನ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ .
    ನಾನು ಹಾಡುವಂತ ಎಲ್ಲ ಹಾಡುಗಳು ನಿಮಗೆಲ್ಲರಿಗೂ ಇಷ್ಟವಾದಲ್ಲಿ ನಿಮ್ಮ ಮನೆಯ ಮಕ್ಕಳಿಗೂ ಕಲಿಸಿ ,ನೀವು ಕಲಿಯಿರಿ .ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಈ ಹಾಡುಗಳೆಲ್ಲವೂ ಹಾಡಲು ಉಪಯುಕ್ತವಾಗುತ್ತೆ ಹೀಗೆ ಸಹಕರಿಸಿ
    ಧನ್ಯವಾದಗಳು
    🥰🥰🥰🥰🥰🥰🥰🥰
    Please watch my new vlog channel ಸಬ್ಸಕ್ರೈಬ್ ಮಾಡಿ ನನ್ನ ಹೊಸ ವ್ಲಾಗ್ ಚಾನಲ್ ನ -----------------------------------------------------------------------
    ************"***********"" / @malenadaruchi ******"*""***************************"**""""********************************"""""------------------------------------------------------------------------
    Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.Starting Music Credits
    you tube librery 😍
    Hai everyone
    I Shared Deepavali songs in this video .
    Please subscribe my channel .
    You can see all types of kannada Devotional songs ,small Bhajans ,and Dasarapadas.
    If you like this video pls like,share,and comment .keep watching my all videos and support me .
    Don't forgot to subscribe !!
    Shiva Bhajan - • Ganga jathadhara kanna...
    *Ganapriye Devi song - • Ganapriye Devi karunam...
    *Kannadave kasthuri song - • Kannada Rajyothsava so...
    *Ganesha Bhajan - • Vighnesha Thava Sharan...
    *Ninnathma nishchalaviralu song - • Ninnathma Nishchalavir...
    *Sharanu ninage Ganesha invocation song - • Kannada Ganesha Invoca...
    *Gopala Radhalola Bhajan - • Gopala Radha Lola | Kr...
    *Pahi pahi Shive navarathri song -
    • Navarathri Song|ನವರಾತ್...
    *Govinda Rama Bhajan - • Rama Bhajan , Govinda ...
    *Shyam sundara Bhajan - • Shyama sundara madana ...
    *Nagabharana - • Nagabharana Hay Natara...
    *Sharade jayajagavandithe - • Sharade jaya jagavandi...
    *Dasharatha nandana Bhajan- • Dasharatha Nandana Ram...
    *Neene gathi neene mathi song - • Neene gathi neene math...
    *Jagadananda Hare Devotional song - • Jagadananda Hare Kanna...
    Pls subscribe ,like and comment and share my videos
    Thanks For Watching
    #Navyamruthashetty,
    #DeepavaliLakshmihadugalu,
    #Deepavalilakshmisongsinkannada,
    #Lakshmisongsinkannada,
    #Lakshmisongs,
    #5Deepavalisongsinkannada,
  • เพลง

ความคิดเห็น • 23