ಕುಂಸಿ ಬಳಿಯ ಮುದ್ದಿನಕೊಪ್ಪ ದಲ್ಲಿ ಬೆಂಕಿ ಅವಘಡ | ಫೆಬ್ರವರಿ 13 ರಂದು ರೈತ ಸಂಘಟನೆಗಳಿoದ ‘ದಿಲ್ಲಿ ಚಲೋ’
ฝัง
- เผยแพร่เมื่อ 2 ม.ค. 2025
- ಶಿವಮೊಗ್ಗದ ಕುಂಸಿ ಬಳಿಯ, ಮುದ್ದಿನಕೊಪ್ಪದಲ್ಲಿ ಭಾನುವಾರ ಮಧ್ಯಾಹ್ನ ಅಡಿಕೆ ತೋಟಕ್ಕೆ ಬೆಂಕಿ ತಗುಲಿದ್ದು, ಸುಮಾರು ೩ ಎಕರೆಗೂ ಅಧಿಕ ತೋಟ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ರೈತರಾದ ಹರೀಶ್ ಹಾಗೂ ಮಂಜುನಾಥ್ ಅವರಿಗೆ ಸೇರಿದ ಅಡಿಕೆ ಗಿಡಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ೧೦ ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ತಿಳಿದು ಬಂದಿದೆ.
______________________________________________________________________
ರೈತ ಸಂಘಟನೆಗಳು ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಫೆಬ್ಬವರಿ ೧೩ರಂದು ದೆಹಲಿಯಲ್ಲಿ ‘ದಿಲ್ಲಿ ಚಲೊ’ ಪ್ರತಿಭಟನೆ ಹಮ್ಮಿಕೊಂಡಿವೆ. ದೇಶದ ಅನೇಕ ಕಡೆಗಳಿಂದ ರೈತರು ದೆಹಲಿಗೆ ಬರಲಿದ್ದು, ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವ ಹಿನ್ನೆಲೆ ದೆಹಲಿಯಲ್ಲಿ ಒಂದು ತಿಂಗಳ ಕಾಲ ಸೆಕ್ಷನ್ ೧೪೪ ಜಾರಿಗೊಳಿಸಲಾಗಿದೆ. ದೆಹಲಿ ಪೊಲೀಸರು ಅಲರ್ಟ್ ಆಗಿದ್ದು, ವಿವಿಧ ರಾಜ್ಯಗಳಿಗೆ ಹೊಂದಿಕೊAಡಿರುವ ಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.