ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಹುಟ್ಟು ಹಬ್ಬ ಸಂಭ್ರಮ | Happy Birthday Rachitha Ram | Super News Kannada

แชร์
ฝัง
  • เผยแพร่เมื่อ 6 ต.ค. 2024
  • Super News Kannada : ಡಿಂಪಲ್ ಕ್ವೀನ್‌' ರಚಿತಾ ರಾಮ್ ಅವರು ತಮ್ಮ ಈ ಬಾರಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದ್ದರು. ಆ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ದರು. "ಎಲ್ಲರಿಗೂ ನಮಸ್ಕಾರ. ಈ ಬಾರಿ ಚಿತ್ರೀಕರಣ ಇರುವ ಕಾರಣ, ಅಕ್ಟೋಬರ್ 3ರಂದು ಹುಟ್ಟುಹಬ್ಬದ ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ. ಎಲ್ಲರ ಕ್ಷಮೆಯಾಚಿಸುತ್ತೇನೆ. ಎಂದಿನಂತೆ ಪ್ರತಿ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ" ಎಂದು ರಚಿತಾ ಹೇಳೀಕೊಂಡಿದ್ದರು. ಅಂತೆಯೇ ಅವರು ಇಂದು ಬೆಂಗಳೂರಿನಲ್ಲಿ ಇಲ್ಲ. ಹಾಗಾದರೆ, ರಚಿತಾ ಈಗ ಎಲ್ಲಿದ್ದಾರೆ? ಉಡುಪಿ.
    ಹೌದು, ವಸತಿ ಸಚಿವ ಜಮೀರ್ ಆಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಹೀರೋ ಆಗಿರುವ 'ಕಲ್ಟ್‌' ಸಿನಿಮಾದಲ್ಲಿ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಉಡುಪಿಯಲ್ಲಿ ನಡೆಯುತ್ತಿದ್ದು, ಅಲ್ಲಿಯೇ ರಚಿತಾ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಲಾಗಿದೆ. ರಚಿತಾಗೆ ಝೈದ್ ಖಾನ್ ಅವರು ಕೇಕ್ ತಿನ್ನಿಸಿ, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಿರ್ದೇಶಕ ಅನಿಲ್ ಕುಮಾರ್, ಆಲ್‌ ಓಕೆ ಅಲೋಕ್ ಕೂಡ ಈ ಸಂದರ್ಭದಲ್ಲಿ ಇದ್ದರು.
    “ಕಲ್ಟ್” ಚಿತ್ರದ ಚಿತ್ರೀಕರಣ ಸೆಟ್ ನಲ್ಲಿ ನಮ್ಮ ಕನ್ನಡದ ಲೇಡಿ ಸೂಪರ್ ಸ್ಟಾರ್ “ರಚಿತಾ ರಾಮ್” ರವರ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಲಾಯಿತು
    Super News Kannada # Rachitha Ram # Happy Birthday

ความคิดเห็น •