ಆದಿಪರ್ವ-ಐದನೆಯ ಸಂಧಿ-ಭಾಗ 12

แชร์
ฝัง
  • เผยแพร่เมื่อ 17 ต.ค. 2024
  • ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ
    ಆದಿಪರ್ವ-ಐದನೆಯ ಸಂಧಿ-ಭಾಗ 12
    ಪದ್ಯ23 : ಮರುಳೆಲೌ | ರಾಗ : ವಲಚಿ
    ಪದ್ಯ24 : ಮುನಿಗಳು | ರಾಗ : ಸಾರಮತಿ
    ವಾಚನ : ‍ಶ್ರೀಮತಿ ಸತ್ಯಲಕ್ಷ್ಮಿಅನಂತಪದ್ಮನಾಭ
    ವ್ಯಾಖ್ಯಾನ : ಶ್ರೀ ಭ ರಾ ವಿಜಯಕುಮಾರ್
    ಮರುಳೆಲೌ ನೀವಕ್ಕ ನಿಮ್ಮೈ
    ವರು ಕುಮಾರರು ನಿಮ್ಮ ಕೈಯೆಡೆ
    ಧರಣಿಪತಿ ನಿಡು ನಿದ್ರೆಗೈದನು ನನ್ನ ತೋಳಿನಲಿ ||
    ಸುರವಧುಗಳೊಡನಿರಲಿ ನಿನ್ನಯ
    ಹರಿಬವೆನ್ನದು ನೋಡು ತನ್ನಯ
    ಪರಿಯನೀತನ ನಿನಗೆ ಕೊಡೆನೆಂದಂಘ್ರಿಗೆರಗಿದಳು ||(೨೩) ||
    ಮುನಿಗಳೀಕೆಯ ತಿಳುಹಿ ಮಾದ್ರಿಗೆ
    ಜನಪತಿಯ ಸಹಗಮನದಲಿ ಮತ
    ವೆನಿಸಿ ಶವಸಂಸ್ಕಾರವನು ವೈದಿಕ ವಿಧಾನದಲಿ ||
    ಮುನಿಗಳೇ ಮಾಡಿದರು ಮಾದ್ರೀ
    ವನಿತೆ ತನ್ನ ಕುಮಾರರಿಬ್ಬರ
    ತನುಜ ನೀ ಸಲಹೆಂದು ಕೊಟ್ಟಳು ಧರ್ಮಜನ ಕರೆದು || (೨೪) ||
    ನಿರ್ಮಾಣ: ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು
    ದೃಶ್ಯ-ಶ್ರವ್ಯ ಸಂಕಲನ : ʻಧೀʼ ಕ್ರಿಯೇಶನ್ಸ್‌, ಬೆಂಗಳೂರು

ความคิดเห็น •