ರಾಮನವಮಿಯ ದಿನವಾದರೂ ಇಷ್ಟು ಬೇಗ ಮುಚ್ಚಬಾರದಿತ್ತು. ಇಲ್ಲಿ ರಾಮಮಂದಿರ ಇದೆ ಅನ್ನೋದು ಜನರಿಗೆ ಗೊತ್ತಿಲ್ಲ.ಪರ್ಕಳ ಉಡುಪಿ.

แชร์
ฝัง
  • เผยแพร่เมื่อ 6 ก.ย. 2024
  • ರಾಮನವಮಿಯ ದಿನವಾದರೂ ಇಷ್ಟು ಬೇಗ ಮುಚ್ಚಬಾರದಿತ್ತು. ಇಲ್ಲಿ ರಾಮಮಂದಿರ ಇದೆ ಅನ್ನೋದು ಜನರಿಗೆ ಗೊತ್ತಿಲ್ಲ, ಕೊಡಂಗೆ,ಪರ್ಕಳ ಉಡುಪಿ.
    ಸ್ನೇಹಿತರೆ ಈ ವಿಡಿಯೋ ಯಾರ ಮನಸ್ಸಿಗೂ ನೋವು ಉಂಟು ಮಾಡುವ ದೃಷ್ಟಿಯಿಂದ ಮಾಡಿದ್ದಲ್ಲ.
    ನಾನು ರಾಮನವಮಿಯ ದಿನದಂದು ನನ್ನ ಮನೆಗೆ ಹತ್ತಿರವಾದಂತಹ ರಾಮಮಂದಿರ ಇದೆಯಾ ಎಂದು ಗೂಗಲ್ ನಲ್ಲಿ ಚೆಕ್ ಮಾಡಿದಾಗ ಉಡುಪಿ ಸಿಟಿಗೆ ಸಮೀಪದಲ್ಲೇ ಇರುವ ಪರ್ಕಳ ನಲ್ಲಿ ಇರುವಂತಹ ಒಂದು ರಾಮಮಂದಿರ ಗೂಗಲ್ ನಲ್ಲಿ ಸಿಕ್ಕಿತು. ಇದು ಉಡುಪಿ ಸಿಟಿಗೆ ಬಹಳ ಹತ್ತಿರವಾದ ರಾಮಮಂದಿರ. ರಾಮನವಮಿಯ ದಿನದಂದು ಆದರೂ ಇಷ್ಟು ಬೇಗ ರಾಮಮಂದಿರವನ್ನು ಮುಚ್ಚಬಾರದು ಇತ್ತು ಎನ್ನುವುದು ನನ್ನ ಅನಿಸಿಕೆ, ಏಕೆಂದರೆ ರಾಮನವಮಿಯ ದಿನದಂದು ರಾಮನ ದರ್ಶನ ಮಾಡಬೇಕೆಂದು ನಾನು ಬಹಳ ಉತ್ಸಾಹದಿಂದ ಎಂಟು ಕಿಲೋಮೀಟರ್ ದೂರದಿಂದ ಈ ಮಂದಿರಕ್ಕೆ ಬಂದಾಗ ಇಲ್ಲಿ ಬಾಗಲು ಹಾಕಿರುವುದನ್ನು ನೋಡಿ ಬಹಳ ಬೇಸರವಾಯಿತು.
    ಸಾಮಾನ್ಯವಾಗಿ ಮಧ್ಯಾಹ್ನ ಹನ್ನೆರಡುವರೆ ವರೆಗೂ ಎಲ್ಲ ದೇವಸ್ಥಾನಗಳು ಓಪನ್ ಇರುತ್ತದೆ.ನಾನು ಇಲ್ಲಿ ಬಂದಾಗ 11.15am ಹಾಗಾಗಿ ಬೇಸರದಿಂದ ಈ ಒಂದು ವಿಡಿಯೋ ಮಾಡಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ. ಇದಾದ ನಂತರ ಮತ್ತೆ ಸಂಜೆ ಐದಕ್ಕೆ ಇದೇ ರಾಮ ಮಂದಿರಕ್ಕೆ ಭೇಟಿ ಕೊಟ್ಟೆ ಬಹಳ ಸಂತೋಷವಾಯಿತು ಇದರ ಬಗ್ಗೆಯೂ ಸಹ ವಿಡಿಯೋ ಮಾಡಿದ್ದೇನೆ ಇಲ್ಲಿ ಸತ್ಯನಾರಾಯಣ ಪೂಜೆ ಹಾಗೂ ರಾಮನ ಪೂಜೆ ಬಹಳ ಚೆನ್ನಾಗಿ ಆಯ್ತು ಭಜನೆಗಳು ನಡೆಯಿತು. ಇದರ ಬಗ್ಗೆಯೂ ಸಹ ವಿಡಿಯೋ ಮಾಡಿದ್ದೇನೆ ತಪ್ಪದೆ ಮುಂಬರುವ ವಿಡಿಯೋವನ್ನು ನೋಡಿ ರಾಮನ ದರ್ಶನ ವನ್ನು ಮಾಡಿಕೊಂಡು ರಾಮನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ. ಇದರ ಜೊತೆಗೆ ನನ್ನ ಮತ್ತೊಂದು ಅನಿಸಿಕೆ ಏನೆಂದರೆ ಆಗಾಗ ಹೊಸ ಹೊಸ ದೇವಸ್ಥಾನಗಳನ್ನು ಕಟ್ಟಿಸುತ್ತಿರುವದನ್ನು ನಾವೆಲ್ಲರೂ ನೋಡಿರುತ್ತೇವೆ. ಕಟ್ಟಿಸುವುದು ತಪ್ಪಲ್ಲ ಆದರೆ ಇದಕ್ಕೂ ಮುಂಚೆ ಇರುವ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಬೇಕು. ಸಮಯಕ್ಕೆ ಸರಿಯಾಗಿ ಪೂಜೆ ಹಾಗೂ ಭಕ್ತಾದಿಗಳಿಗೆ ಬೆಳಿಗ್ಗೆ ಹನ್ನೆರಡುವರೆ ವರೆಗೂ ಹಾಗೂ ಸಂಜೆ 8 ಗಂಟೆವರೆಗೂ ದೇವರ ದರ್ಶನ ಮಾಡಲು ಅನುಕೂಲವಾಗುವಂತೆ ಮಾಡಬೇಕು ಎಂದು ಈ ಮುಖಾಂತರ ವಿನಂತಿಸಿಕೊಳ್ಳುತ್ತಿದ್ದೇನೆ. ಅದರಲ್ಲೂ ಹಬ್ಬ ಹರಿದಿನಗಳಂದು ದೇವಸ್ಥಾನವನ್ನು ಸಮಯಕ್ಕೆ ಮುಂಚೆಯೇ ಮುಚ್ಚುವುದು ಸರಿ ಕಾಣುವುದಿಲ್ಲ ಎನ್ನುವುದು ನನ್ನ ಅನಿಸಿಕೆ.
    #positivevibeskarnataka
    #Ramnavami
    #deguladarshanaudupi

ความคิดเห็น • 15