Madikeri Dasara 2021: ರಾತ್ರಿ ಬೆಳಕಿನ ರಂಗವಲ್ಲಿ ಮೂಡಿದಂತೆ ಕಂಡು ಬಂದ ಮಂಜಿನ ನಗರಿ | Vijay Karnataka

แชร์
ฝัง
  • เผยแพร่เมื่อ 5 ต.ค. 2024
  • ದಸರಾ ಬಂತೆಂದ್ರೆ ಪ್ರವಾಸಿಗರ ಸ್ವರ್ಗ ದಕ್ಷಿಣದ ಕಾಶ್ಮೀರ ಎಂಬ ಹೆಗ್ಗಳಿಕೆಯ ಕೊಡಗಿನಲ್ಲಿ ಹಬ್ಬದ ಸಂಭ್ರಮ. ಅದರಲ್ಲಿ ಐತಿಹಾಸಿ ಮಡಿಕೇರಿ ದಸರಾ ಅಂತೂ ಎಲ್ಲರ ಅಚ್ಚುಮೆಚ್ಚು.
    ಪ್ರತೀ ವರ್ಷ ವಿಜೃಂಭನೆಯಿಂದ ಆಚರಿಸಲಾಗುವ ಮಡಿಕೇರಿ ದಸರಾ ಕಳೆದ ವರ್ಷ ಕೋವಿಡ್‌ನಿಂದಾಗಿ ಕಳೆಗುಂದಿತ್ತು. ಆದರೆ ಈ ಬಾರಿ ವೈಭವವಾಗಿ ಆಚರಿಸಲಾದರೂ ಕೂಡ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿದ್ದರಿಂದ ಸರಾ ಪ್ರೇಕ್ಷಕರಿಗೆ ಕೊಂಚ ನಿರಾಸೆ ಉಂಟು ಮಾಡಿತ್ತು. ಇನ್ನುಳಿದಂತೆ ಸಹಸ್ರಾರು ಜನ ಪ್ರೇಕ್ಷಕರು ಭಾಗಿಯಾಗಿ ಮಡಿಕೇರಿ ದಸರಾ ಕಳೆಕಟ್ಟಿತ್ತು.
    ಮಡಿಕೇರಿ ದಸರಾ ಉತ್ಸವ ದಶಮಂಟಪಗಳ ಶೋಭಾಯಾತ್ರೆಗೆ, ನಗರದ ಪೇಟೆ ಶ್ರೀ ರಾಮಮಂದಿರದ 'ಸಂಜೀವಿನಿ ಪರ್ವತ ಹೊತ್ತ ಆಂಜನೇಯ ಸ್ವಾಮಿ'ಯ ಕಲಾಕೃತಿ ಒಳಗೊಂಡ ಮಂಟಪದ ಮೆರವಣಿಗೆಯ ಆರಂಭದೊಂದಿಗೆ ಚಾಲನೆ ದೊರಕಿತು.
    ಪೇಟೆ ಶ್ರೀರಾಮ ಮಂದಿರ ಮಂಟಪ ನಾಲ್ಕು ಶಕ್ತಿ ದೇವತಗಳಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಗೌಳಿ ಬೀದಿಯ ಶ್ರೀ ಕಂಚಿಕಾಮಾಕ್ಷಿಯಮ್ಮ, ಮಡಿಕೇರಿಯ ಕೋಟೆಯ ಪಾರ್ಶ್ವದ ಶ್ರೀ ಮಾರಿಯಮ್ಮ ಮತ್ತು ಶ್ರೀ ದಂಡಿನ ಮಾರಿಯಮ್ಮ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಅಲ್ಲಿನ ಮಂಟಪಗಳು ಆರಂಭಗೊಂಡವು.
    #Dasara #KodaguDasara #Dasara2021
    Our Website : Vijaykarnataka...
    Facebook: / vijaykarnataka
    Twitter: / vijaykarnataka

ความคิดเห็น • 1

  • @cmr7345
    @cmr7345 3 ปีที่แล้ว

    🔥