ಮುಂಗೊಂಡಾದ ಮಾದೇಶ್ವರಗೆ | Mungondada Mahadeshwarage | Janapada Folk Song | Sridevi Nachiket | Kamsale

แชร์
ฝัง
  • เผยแพร่เมื่อ 13 ก.พ. 2024
  • Chapters
    0:14 : Introduction
    03:18 : Mungondada Mahadeshwarage Sharanu Sharanayya Song by Sridevi Nachiket
    #Janapada #kannadafolksongs #Janapadageetegalu #ಜನಪದಗೀತೆಗಳು #ಕನ್ನಡಜನಪದಗೀತೆಗಳು #KannadaMelodiousSong #Kamsale #KannadaDevotionalSong #SrideviNachiket #CelebrateKannada #MungondadaMahadeshwarage #KarnatakaFolkDance #ಮುಂಗೊಂಡಾದಮಹದೇಶ್ವರಗೆ #BhaktiGeete #ಕಂಸಾಳೆ #KannadaFolkDance #KamsaleFolkDance
    Janapada Impu (ಜನಪದ ಇಂಪು) a series of Kannada Folk songs . In this Educational Series, we present to you many Janapada songs which you can learn, hum along, and sing.
    This time we present to you a beautiful folk song 'Mungonda Mahadeshwara Sharanu Sharanyya,' associated with Kamsale.
    Kamsale is a popular dance form in the Mysore and Karnataka regions. It has been practiced for centuries, originating from the devotees of Mahadeshwara. Folk dances play a significant role in preserving a community's culture and historical heritage. These dances instill pride and respect for one's own culture among the people.
    Janapada songs are a reflection of the diversity of our culture. Let us do our part in preserving the rich heritage & tradition of Janapada and rejoice the richness of our language. Come let’s Celebrate Kannada!
    ಆನುಮಲೆ ಜೇನುಮಲೆ
    ಗುಂಜುಮಲೆ ಗುಲಗಂಜಿಮಲೆ
    ಎಪ್ಪತೇಳು ಮಲೆಯೊಳಗೆ
    ತಪ್ಪದೆ ನಲಿದು ನಾಟ್ಯವಾಡತಕ್ಕಂತಹ
    ನಮ್ಮ ಅಪ್ಪಾಜಿ ಮುದ್ದು ಮಾದೇಶ್ವರನ ಪಾದಕೊಂದ್ಸಲ
    ಉಘೇ ಎನ್ರಪ್ಪೋ
    ಉಘೇ.... ಉಘೇ.... ಉಘೇ....
    ಮುಂಗೊಂಡಾದ ಮಾದೇವನವರು ಮುಂದಲ ಪೂಜೆಗೆ ಬರುವಾಗ
    ಹಣ್ಣು ಕಾಯಿ ಸಾಮ್ರಾಣಿಯ ಗಮನ ಮಂಜು ಗವಿದಾವೆ
    ಬೆಟ್ಟದ ಮಾದಪ್ಪ ಬರುವಾಗ ಹುಟ್ಟುಗಲ್ಲು ಗುಡುಗುಟ್ಟಿದವು
    ಹುಲಿಯ ಮೇಲೆ ಮಾದೇವ ಬರುವ ಮಾಯ ನೋಡಯ್ಯ
    ಮುಂಗೊಂಡಾದ ಮಾದೇಶ್ವರಗೆ ಶರಣು ಶರಣಯ್ಯ ಮಾಯಕಾರ ಮಾದೇಶ್ವರಗೆ ಶರಣು ಶರಣಯ್ಯ
    ಓ ಓ ಓ ಓ ಓ ಓ ಓ ಓ
    ಆ ಆ ಆ ಆ ಆ ಆ ಆ ಆ
    ಕಾಣಿಕೆ ತಂದೀವ್ನಿ ಸ್ವಾಮಿ ಕಾಣಿನೆಲ್ಲೋ ಮಾದೇಶ್ವರನ
    ಕಾಣಿಕೆ ನೀಡಿ ಧೂಪವ ಹಾಕಿ ಬೇಡುವೆ ಮಾದೇವನಾ
    ಗಂಡುಲಿ ಮ್ಯಾಲಿನ ಗದ್ದುಗೆಯೋ ಸ್ವಾಮಿ ಹಿಂಡುಲಿ ಮ್ಯಾಲಿನ ನಿದ್ದಾರಿಯೋ
    ಎತ್ತಿದರು ದುಂಡು ಮಾದೇವನ ಗಂಡು ಹುಲಿಯ ಮ್ಯಾಲೆ
    ಮುಂಗುಂಡಾದ ಮಾದೇಶ್ವರಗೆ ಶರಣು ಶರಣಯ್ಯ ಮಾಯಕಾರ ಮಾದೇಶ್ವರಗೆ ಶರಣು ಶರಣಯ್ಯ
    ಓ ಓ ಓ ಓ ಓ ಓ ಓ
    ಆ ಆ ಆ ಆ ಆ ಆ ಆ ಆ
    ಕಾಡು ಪಾರಿವಾಳನಕ್ಕಿ ಕಣ್ಣ ನವಿಲು ಮರಿ ದುಂಬಿಗಳೊ
    ಲಾವಳನಕ್ಕಿ ಪಿಕ್ಕಿ ದುಂಡಯ್ಯನ ಕೂಗಿ ಕರೆದಾವೇ ಕೋಗಿಲೆ ಎದ್ದು ಕೊಂಬೆಯನೇರಿ ಕೂಗುತಾವೋ ಮಾದೇಶ್ವರನ
    ರಾಗವನೆತ್ತಿ ದುಂಡು ಮಾದಯ್ಯನ ಕರೆಯುತ್ತಾವೆ ನೋಡೆ
    ಮುಂಗೊಂಡಾದ ಮಾದೇಶ್ವರಗೆ ಶರಣು ಶರಣಯ್ಯ ಮಾಯಕಾರ ಮಾದೇಶ್ವರಗೆ ಶರಣು ಶರಣಯ್ಯ
    ಓ ಓ ಓ ಓ ಓ ಓ ಓ
    ಆ ಆ ಆ ಆ ಆ ಆ ಆ ಆ
    ಎಲ್ಲಾ ರೂಪವು ತಾನಂತೆ ಶಿವ ಎಲ್ಲೆಲ್ಲಿಯೂ ತಾನಿಹನಂತೆ
    ಅಲ್ಲಲ್ಲರಸುತ ಗುಡಿಗಳ ತಿರುಗುವ ಜನಗಳ ಕಣ್ಣಿಗೆ ಕಲ್ಲಂತೆ
    ಕಣ್ಣಿಲ್ಲದವರಿಗೆ ಕಣ್ಣಂತೆ ಶಿವ ಕಣ್ಣಿಗೆ ಕಣ್ಣಾಗಿಹನಂತೆ ಎಲ್ಲರ ಜೀವದಿ ಮಾದಪ್ಪ ಬಣ್ಣ ಬಣ್ಣವಾಗಿಹನಂತೆ
    ಮುಂಗುಂಡಾದ ಮಾದೇಶ್ವರಗೆ ಶರಣು ಶರಣಯ್ಯ ಮಾಯಕಾರ ಮಾದೇಶ್ವರಗೆ ಶರಣು ಶರಣಯ್ಯ...
    ಓ ಓ ಓ ಓ ಓ ಓ ಓ
    ಆ ಆ ಆ ಆ ಆ ಆ ಆ ಆ

ความคิดเห็น • 7

  • @NaveenKumar-lh4et
    @NaveenKumar-lh4et หลายเดือนก่อน +1

    Supermedem

  • @NaveenKumar-lh4et
    @NaveenKumar-lh4et หลายเดือนก่อน

  • @kidmankiddy100
    @kidmankiddy100 5 หลายเดือนก่อน

    ತುಂಬಾ ಚೆನ್ನಾಗಿ ಮೂಡಿಬಂದಿದೆ medam

  • @parimalaks4278
    @parimalaks4278 2 หลายเดือนก่อน

    👌👌👌👌👌👌❤

  • @user-zg4mq3vd4c
    @user-zg4mq3vd4c 5 หลายเดือนก่อน

    Super❤mdm👌👌👌👌

  • @trivenighaste2783
    @trivenighaste2783 5 หลายเดือนก่อน

    Very nice