#*Bhaktigeete* *ಭಕ್ತಿ ಗೀತೆ* ರಚನೆ : ಜಯಲಕ್ಷ್ಮಿ ಹರಡುಗೋಡು., ಗಾಯನ:ಕೃಷ್ಣಾ ಕುಮಾರಿ ಜೆ ಆರ್ ಭಟ್.

แชร์
ฝัง
  • เผยแพร่เมื่อ 8 ก.พ. 2025
  • ಬಾಗಿ ನಮಿಸಲಿ ಶಿರವು
    ಬಾಗಿ ನಮಿಸುತಲಿರಲಿ ಶಿರವದು
    ಯೋಗಿ ನಿನ್ನಯ ಚರಣಕೆ
    ಆಗಲೆನ್ನಯ ಹೃದಯ ಪದ್ಮವು
    ಯೋಗ್ಯ ನಿನ್ನಯ ವಾಸಕೆ
    ನಿನ್ನ ಚರಣದ ಸೇವೆಗೈಯುವ
    ಭಾಗ್ಯ ಒದಗಲಿ ಬಾಳಿಗೆ
    ನನ್ನಿ ನುಡಿಯಲಿ ನಿನ್ನ ಸ್ಮರಣೆಯ
    ಜೊತೆಗೆ ಎನ್ನಯ ನಾಲಿಗೆ
    ಮಡದಿ ಮಕ್ಕಳು ವಸ್ತ್ರಭೂಷಣ
    ಎಲ್ಲ ನಿನ್ನದೆ ಕಾಣಿಕೆ
    ಎಡರು ತೊಡರನು ತಡೆದು ರಕ್ಷಿಸು
    ನೀಡು ಚೇತನ ಹೃದಯ ಕೆ
    ನೀನೆ ತಾಯಿಯು ತಂದೆ ಗೆಳೆಯನು
    ಬಂಧು ಬಳಗವು ನೀ ಗುರು
    ಕಾಣದಂತಹ ದೂರ ತೀರಕೆ
    ನಾವಿಕನು ನೀನಾಗಿರು
    ನಡೆವ ಪಥದಲಿ ಎಡವಿ ಬೀಳಲು
    ದೇವ ನೀನೇ ಆಸರೆ
    ಒಡೆಯ ದುರಿತವು ಬರದು ಎಂದಿಗು
    ನಿನ್ನ ನೆರಳಲಿ ನಾನಿರೆ
    ಜಯಲಕ್ಷ್ಮಿ ಹರಡುಗೋಡು
    *********
    #ಭಕ್ತಿಗೀತೆ
    #ಯೋಗಿ
    #bhakisagar
    #bhavageete
    #yogi

ความคิดเห็น • 4