ಶರಣು ನಿನ್ನ ಪಾದಕೆ (Sharanu ninna paadake - Devotional song)

แชร์
ฝัง
  • เผยแพร่เมื่อ 31 ส.ค. 2019
  • Lyrics:
    ಗಜಮುಖನೇ ..ಗಣಪತಿಯೇ ..ಶರಣು ನಿನ್ನ ಪಾದಕೇ
    ತ್ರಿಜಗವಂದಿತ ಸುಮುಖ ನಿನಗೆ ಎನ್ನ ವಂದನೆ l
    ಸಿದ್ಧಿ ಬುದ್ಧಿ ಜ್ಞಾನ ನೀಡಿ ನೀನೆ ಗಣಪ ಸಲಹು ಬಾ
    ಶುದ್ಧ ಮನವ ನೀಡು ಎಂದು ಬೇಡುವೆ ಪದಕೆರಗುತಾ
    ಅಭಯವ ತೋರೀ ..ಕರುಣಿಸು ಸ್ವಾಮೀ...
    ಹಗಲು ಇರುಳು ನಿನ್ನ ಧ್ಯಾನ ಸತತ ಗೈಯ್ಯುವೇ
    ಮೊದಲ ಪೂಜೆಗೊಳುವ ಗಣಪ ನಿನ್ನ ನಿರತ ಸ್ಮರಿಸುವೇ l
    ವಿಘ್ನಹರ್ತ ನೀನೆ ನಮಗೆ ಮತಿಯ ಪ್ರೇರಿಸು
    ಭಗ್ನಹೃದಯದೊಳಗೆ ಪ್ರೇಮಜ್ಯೋತಿಯನ್ನು ಬೆಳಗಿಸು l
    ಕರುಣಾಮಯಿ ಗಣಪತಿಯೇ ನಿನ್ನ ನಂಬಿದೆ
    ನಿರುತ ಭಕುತಿಯನ್ನು ನೀಡು ಎಂದು ನಿನ್ನ ಬೇಡುವೇ
    ಅಭಯವ ತೋರೀ ..ಕರುಣಿಸು ಸ್ವಾಮೀ... ll ಗಜಮುಖನೇ ll
    ಏನು ನಿನ್ನ ಲೀಲೆಗಳೋ ಬಣ್ಣಿಸಲೆಂತು
    ಎನಿತು ಗಣಪ ನಿನ್ನ ಕೃಪೆಯೋ ಎಮ್ಮ ಕಾವುದಕೆಂದೂ l
    ಅರಿತು ಬಾಳ್ವ ಸಹನೆಯನು ನೀಡು ಎಂದೆಂದೂ
    ಎನ್ನಂತರಂಗದೊಳಗೆ ನೆಲೆಸು ಕಾಯುವ ಬಂಧು l
    ಆನಂದದಿಂದ ನಿನ್ನ ನಾಮವನ್ನು ಹಾಡುತಾ
    ಹೃದಯ ಮಂದಿರದಿ ನಿನ್ನ ಬೆಳಕು ನಿತ್ಯ ತುಂಬುತಾ
    ಹಾಡುವೆನಯ್ಯ ನಾ ನಿನ್ನ ಸ್ಮರಿಸುತಾ... ll ಗಜಮುಖನೇ ll
    (ರಚನೆ - ರವಿರಾಜ್ ಒಡಿಯೂರ್)
  • บันเทิง

ความคิดเห็น • 67