ನಾಯಕ ವಿತ್ ವಿನಾಯಕ| Na Someshwar -Part 2 | Vinayak Joshi |Nayaka with Vinayaka Podcast-2

แชร์
ฝัง

ความคิดเห็น • 284

  • @mallappabparagi6967
    @mallappabparagi6967 ปีที่แล้ว +2

    ಖುಷಿ ಕೊಟ್ಟಂತಹ ಸಂದರ್ಶನ. ಅಭಿನಂದನೆಗಳು 🎉

  • @vinayakjoshi
    @vinayakjoshi  2 ปีที่แล้ว +58

    ನಮ್ಮ ಕಾರ್ಯಕ್ರಮಕ್ಕೆ ಒಂದು ಅರ್ಥ ಸಿಕ್ಕಿದೆ, ನಮ್ಮ ಶ್ರಮ ಸಾರ್ಥಕವಾಯಿತು.
    ಮುಂಬರುವ ಸಂದರ್ಶಗಳಲ್ಲಿ ಇನ್ನು ಹಲವಾರು ಸಾಧಕರು ಹಾಗೂ ಸ್ಪೂರ್ತಿ ತುಂಬುವ ಕಥೆಗಳು ನಿಮಗಾಗಿ ಕಾಯುತ್ತಿದೆ.
    ಕಂಗ್ಲಿಷ್ ಬಳಸುವ ಉದ್ದೇಶ ಇಷ್ಟೇ, ಕನ್ನಡ ಹಾಗೂ ಕನ್ನಡಿಗರ ಆಚೆ ಈ ಸಂದರ್ಶನ ತಲುಪಬೇಕು. ಹಾಗಾಗಿ ಸಬ್ ಟೈಟಲ್ ಕೂಡ ಹಾಕ್ತಿದೀವಿ.
    ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ, ವಿಮರ್ಶೆ ಹಾಗು ತಪ್ಪು ಮಾಡಿದಾಗ ತಿದ್ದುವ ಮನೋಭಾವ ಅತ್ಯಾವಶ್ಯಕ. ದಯಮಾಡಿ ಹೀಗೆ ನಿಮ್ಮ ಪ್ರೋತ್ಸಾಹ ಮುಂದುವರೆಯಲಿ.
    ತಡವಾಗಿ ಬರೆದ ಈ ಪ್ರತಿಕ್ರಿಯೆಗೆ ಕ್ಷಮೆ ಕೇಳುತ್ತ, ನಿಮ್ಮ ನಂಬಿಕೆ ಹಾಗು ಅಭಿಮಾನ ಉಳಿಸಿಕೊಳ್ಳುವ ಪ್ರಯತ್ನ ಸದಾ ಮಾಡ್ತೀವಿ ಅನ್ನೋ ಭರವಸೆಯೊಂದಿಗೆ ನನ್ನ ಧನ್ಯವಾದಗಳನ್ನ ಅರ್ಪಿಸುತ್ತೇನೆ. 🙏🙏
    ವಿನಾಯಕ ಹಾಗು *ನಾಯಕ ವಿಥ್ ವಿನಾಯಕ* ತಂಡ ಮಾಡುವ ಪ್ರಣಾಮಗಳು 🙏🙏

    • @nutandl522
      @nutandl522 ปีที่แล้ว +1

      👌👌👌🙏🙏🙏

    • @classicaldance6069
      @classicaldance6069 ปีที่แล้ว +1

      Thumba danyavaadagalu Sir🙏🙏🙏🙏

    • @shashikumarkalledevar8433
      @shashikumarkalledevar8433 ปีที่แล้ว

      ಕಂಗ್ಲೀಷ್ ನಿಂದ ಯಾರಿಗೂ ಸಹಾಯ ಆಗಲಾರದು. ಆದಷ್ಟು ಭಾಷೆಯನ್ನು ಶುದ್ಧವಾಗಿಡಲು ಪ್ರಯತ್ನಿಸಿ. ಆ ಭಾಷಾ ಸೌಂದರ್ಯಕ್ಕಾಗಿಯಾದರೂ ನಿಮ್ಮ ಬೆನ್ನು ಬೀಳುವಂತಾಗಲಿ....

  • @Bookoholic1997
    @Bookoholic1997 ปีที่แล้ว +3

    ಎಂಥಾ ಅದ್ಭುತವಾದ ವ್ಯಕ್ತಿತ್ವ 🙏

  • @nanuunknown611
    @nanuunknown611 2 ปีที่แล้ว +16

    ನಾ ಸೋಮೇಶ್ವರ್ ಹೊಸ ಯೂಟ್ಯೂಬ್ ಚಾನಲ್ ಶುರು ಮಾಡ್ಬೇಕು 💛❤️

  • @Visibility757
    @Visibility757 ปีที่แล้ว +44

    These two episodes added value to your channel Mr. vinayak. thanks a lot for bringing Dr. Someshwar sir 👍

    • @vasudevarajumk2111
      @vasudevarajumk2111 ปีที่แล้ว

      sir,
      you did't ask Dr.Naa.Someswar about the method of reading and grasping .
      will you please let me know his contact number .

    • @rajeshwarigm4236
      @rajeshwarigm4236 ปีที่แล้ว

      @@vasudevarajumk2111 x,

  • @tusharguled
    @tusharguled 2 ปีที่แล้ว +13

    ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ.
    ಈ ವಿಡಿಯೋ ಶೇರ್ ಮಾಡುವುದಕ್ಕೆ ಮೊದಲೇ ಎಂಟು ನಿಮಿಷದಿಂದ ಕಾಯುತ್ತಿದ್ದೇನೆ.

  • @Seema98709
    @Seema98709 ปีที่แล้ว +1

    I can see this interview again and again. Thank you Vinayak.

  • @manjulaprasad1971
    @manjulaprasad1971 2 ปีที่แล้ว +17

    ತುಂಬಾ ಇಷ್ಟ ಆಯ್ತು. ನಾವೆಲ್ಲಾ ಸೋಮೇಶ್ವರ sir ಅಭಿಮಾನಿಗಳು. ಧನ್ಯವಾದಗಳು.

  • @prajwalhosmath5724
    @prajwalhosmath5724 2 ปีที่แล้ว +19

    ನನ್ನ ಜೀವನದಲ್ಲಿ ಚಂದನ ವಾಹಿನಿಯ ಯೋಗದಾನ ತುಂಬಾ ಮಹತ್ವವದ ವಿಚಾರ....
    ಒಂದು ಅದ್ಭುತ ವ್ಯಕ್ತಿ ಹಾಗೂ ವಕ್ಯತಿತ್ವದ ಜೊತೆಗಿನ ಈ ಸಂದರ್ಶನ ಎಲ್ಲರ ಮನಸ್ಸಿಗೆ ಹಾಗೂ ಹೃದಯಕ್ಕೆ ಮುಟ್ಟಲೇ ಬೇಕು.....ಇಲ್ಲಿರುವ ಎಲ್ಲರಿಗೂ ಒಂದು ಕೋರಿಕೆ ಆದಷ್ಟು ಇದನ್ನು ಶೇರ್ ಮಾಡಿ 😇🙏
    .
    .
    .
    ವಿನಾಯಕ ಹಾಗೂ ತಂಡಕ್ಕೆ ಜಯವಿರಲಿ ❤️

  • @gnanark7650
    @gnanark7650 ปีที่แล้ว +22

    ಅದ್ಬುತ ವಾದ ಸಂದರ್ಶನ 👍 ಈ ಕಾರ್ಯಕ್ರಮ ನೋಡಿ ಮನಸಿಗೆ ಸೋತೋಷ ಮತ್ತು ಚೈತನ್ಯ ತುಂಬಿತು ಧನ್ಯವಾದಗಳು 🙏 ನಿಮ್ಮ ತಂಡಕ್ಕೆ ಒಳ್ಳೇದಾಗ್ಲಿ 💐

  • @ChanneshHkvpura
    @ChanneshHkvpura ปีที่แล้ว +5

    ಡಾ|| ನಾ. ಸೋಮೇಶ್ವರ ರವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಬ್ಬರದಲ್ಲ... ಅರಿವಿನದ್ದು... ಅ ಪರಿಯಲ್ಲಿ ಸೂಕ್ಷ್ಮವಾಗಿ ಕೊಡುಗೆ ನೀಡಿದ ಅವರಿಗೆ ಅನಂತಾನಂತ ಧನ್ಯವಾದಗಳು.. ಸರ್ ನಿಮಗೆ ದೈವ ಸದಾ ಹರಸಲಿ.. 🙏🙏💐💐

  • @ajeyav2773
    @ajeyav2773 2 ปีที่แล้ว +8

    ಕನ್ನಡದ ಬಗ್ಗೆ ಆಡಿದ ಮಾತುಗಳು ರೋಮಾಂಚಕವಾದಿದ್ದವು... ಕನ್ನಡವನ್ನೇ ಬಳಸೋಣ... ದಯವಿಟ್ಟು ಕನ್ನಡದಲ್ಲೇ ಆದಷ್ಟು ಕಮೆಂಟ್ ಬರೆಯಲು ಪ್ರಯತ್ನಿಸೋಣ ... ❤

  • @sagarty8301
    @sagarty8301 2 ปีที่แล้ว +23

    ಅದ್ಭುತವಾದ ಸಂದರ್ಶನ!! ಡಾII ನಾ ಸೋಮೇಶ್ವರ್ ಅವರ ಬದುಕಿನ ಅನುಭವಗಳನ್ನು ಕೇಳಿ ಮನಸ್ಸಿಗೆ ತುಂಬ ಸಂತೊಷವಾಯಿತು. ಇದನ್ನು ನಮಗೆ ತಲುಪಿಸಿದ ವಿನಾಯಕ ಜೋಷಿಯವರಿಗೆ ತುಂಬು ಹೃದಯದ ಧನ್ಯವಾದಗಳು.

  • @kirankumar4728
    @kirankumar4728 2 ปีที่แล้ว +7

    🍂🍁🌾💐🌷🌹🥀🌺
    *27.03.2022*
    *ಹಿತಮಿತವಾದದ್ದೆ ಬದುಕು - ನಾ. ಸೋಮೇಶ್ವರರ ಮನವನರಳಿಸುವ ಸಂದರ್ಶನ*
    ***
    ಇಂದಿನ ಡಿಜಿಟಲ್ ವಿದ್ಯುನ್ಮಾನ ಯುಗದಲ್ಲಿ ಡಿಜಿಟಲ್ ಕಂಟೆಂಟ್ ಹೇರಳವಾಗಿ ಹಲವು ಮಾಧ್ಯಮಗಳ ಮುಖಾಂತರ ದೊರಕುತ್ತಿವೆ. ಇಂತಹ ಮಹಾಪೂರದ ನಡುವೆಯೂ ಎರಡನೆ ಕಂತಿನಲ್ಲೆ ಸುದ್ದಿಮಾಡುರುವ “ನಾಯಕ ವಿತ್ ವಿನಾಯಕ” ದ ನಾ. ಸೋಮೇಶ್ವರರ ಸಂದರ್ಶನದ ಬಗ್ಗೆ ನಮ್ಮ ಎರಡು ನುಡಿ.
    ನಾ. ಸೋಮೇಶ್ವರರು ನಾಡಿನ ಖ್ಯಾತ ಕ್ವಿಜ್ ಮಾಸ್ಟರ್, ಕನ್ನಡದ ಚಿಂತಕರು, ವೈದ್ಯರು. ಅವರೇ ಸಂದರ್ಶನದಲ್ಲಿ ಹೇಳುವಂತೆ “ಚಂದನ ವಾಹಿನಿ ಅಬ್ಬರವಿಲ್ಲದ, ಮನಸ್ಸನ್ನು ಉದ್ದೀಪಿಸದ, ಹೇಳಿದ್ದನ್ನೆ ಹೇಳದ, ನಾಡಿನ ಸಮಸ್ತ ಜನರನ್ನು ಪ್ರತಿನಿಧಿಸುವ ಕಾರ್ಯಕ್ರಮ ರೂಪಿಸುವ, ಮನರಂಜನೆಗಷ್ಟೇ ಮೀಸಲಾಗಿರದೆ ಜನರನ್ನು ಜಾಗೃತಗೊಳಿಸುವ ವಾಹಿನಿ”. ಬಹುಶಃ “ನಾಯಕ ವಿತ್ ವಿನಾಯಕ” ದ ಈ ಎಪಿಸೋಡ್ ಗೂ ಇದೆ ಗುಣವಾಚಕ ಬಳಸಬಹುದು. ಅಬ್ಬರವಿಲ್ಲದ, ಅನಗತ್ಯ ಆಡಂಬರವಿಲ್ಲದ ಶುದ್ಧ ಸಾಧಕನ ಸಂಭಾಷಣೆ, ಅಷ್ಟೇ ಪ್ರಬುದ್ಧ ನಿರೂಪಕನಿಂದ. ಈ ಪಾಡ್ಕಾಸ್ಟ್ನ ಇನ್ನೊಂದು ವಿಶೇಷವೆಂದರೆ, ಇದನ್ನು ನೋಡಲೇಬೇಕೆಂದಿಲ್ಲ, ಕೇಳಿದರೆ ಸಾಕು. ಇಲ್ಲಿನ ವಿಚಾರ, ಪಾಂಡಿತ್ಯಯುತ ಉತ್ತರಗಳು, ಸಂವೇದನಾಶೀಲ ಸಂಭಾಷಣೆಗಳು ಕೇಳಿದಷ್ಟೂ ಹಿತ
    ಸೋಮೇಶ್ವರರ ಬದುಕು, ಬರಹ, ಸಾಧನೆಗಳನ್ನು ಒಂದೊಂದಾಗಿ ಬಗೆದು ಲೀಲಾಜಾಲವಾಗಿ ವಿನಾಯಕ್ ಅವರ ಒಳಮನಸ್ಸು ಬಿಚ್ಚಿಡುವ ಹಾಗೆ ಕಂತನ್ನು ನಿರ್ವಹಿಸಿದ್ದಾರೆ, ಗೆದ್ದಿದ್ದಾರೆ. ಸರಳತೆ, ಸೌಜನ್ಯ ಹಾಗು ಪಾಂಡಿತ್ಯಗಳ ಮೇರುಸದೃಶರನ್ನು ಅಷ್ಟೇ ಗೌರವಪೂರ್ವಕವಾಗಿ, ಲವಲವಿಕೆಯಿಂದ, ಶ್ರದ್ಧೆಯಿಂದ ಮಾತಿಗೆಳಿದಿದ್ದಾರೆ, ಪುಸ್ತಕಗಳ ರಾಶಿಯ ನಡುವೆ. ಇಂತಹ ಕಾರ್ಯಕ್ರಮಗಳು ನೂರ್ಪಟ್ಟಾಗಬೇಕು
    ಬೆಂಗಳೂರಿನ ಚರಿತ್ರೆಯನ್ನು ಸೂಕ್ಷ್ಮವಾಗಿ ಮಲ್ಲೇಶ್ವರಕ್ಕೆ ಸ್ಯಾಂಕಿಟ್ಯಾಂಕಿಗೆ ನೀರು ಹರಿಸುವ, ಧೋಬೀಘಾಟಿನ, ಅಯ್ಯರ್ ಕಾಫ಼ಿಯ, ಈಜುಕೊಳ ಬಡಾವಣೆಯ, ವಾಟರ್ ಪೋಲ್ ಸ್ಪರ್ಧೆಯ ಮುಖಾಂತರ ಅವರು ಹೇಳಿದ್ದು ಕೇಳಿ ದಂಗಾದೆವು! ಈ ಕತೆಯೇ ಬಹುಶಃ ಎರಡು ಸಂದರ್ಶನಗಳಿಗಾಗುವ ವಸ್ತು ಹೊಂದಿವೆ
    “ಬಾಲ್ಯವೇ ಹಸಿವು,
    ಓದೋ ಹಸಿವು,
    ವಿಚಾರ ತಿಳಿಯುವ ಹಸಿವು,
    ತಿಳಿದದ್ದ ಹಂಚುವ ಹಸಿವು,
    ಬದುಕಿನ ಮೂಲವೇ ಹಸಿವು..”
    ಹೀಗೆ ಹಸಿವಿನ ಬಗೆಗಿನ ಅವರ ನುಡಿಗಳು, ಶರಣ ಸಂಸ್ಕೃತಿಯ ಅನ್ನದಾನದ ಪ್ರೇರಣೆ, ಮಧ್ಯಾಹ್ನದ ಬಿಸಿಯೂಟದ ಮಹತ್ವ ಬೇಂದ್ರೆಯವರ ಅನ್ನದಾನದ ಕವನವನ್ನು ಮರೆಯೋದು ಹೇಗೆ? ಇವು ಬಾಯಿಂದ ಬಂದ ಮಾತಲ್ಲ, ಬದುಕು ಕಲಿಸಿದ ಕಟುಸತ್ಯಗಳು.
    ಮೈಸೂರು ಬ್ಯಾಂಕಲ್ಲಿ ಹತ್ತುಸಾವಿರ ಲೋನ್ ಪಡೆದು ಎಂಬಿಬಿಎಸ್ ಮಾಡಿದ ಅವರ ಶಿಸ್ತು, ಶ್ರಮ ಹಾಗು ಅನುಭವ ಇಂದಿನ “ಉಕ್ರೇನ್ ನಿಂದ ಹಿಂದಿರುಗಿದ ಲಕ್ಷಲಕ್ಷ ತೆತ್ತ ವಿದ್ಯಾರ್ಥಿಗಳ ಪಾಡನ್ನು ನೆನೆದು” ಮನಸು ಭಾರವಾಯಿತು.
    “ಯುವಕರಿಗೆ ಕಿವಿಮಾತು ಹೇಳೋಲ್ಲ! ಏಕೆಂದರೆ ನಾ ಯುವಕನಾಗಿದ್ದಾಗ ಯಾರ ಮಾತೂ ಕೇಳುತ್ತಿರಲಿಲ್ಲ” - ವಾಹ್! ಎಂತ ಮನದ ಗಂಭೀರ ಮಾತು. ಗಾಂಧೀಜಿಯವರು ಹೇಳಿದಂತೆ ಮಾಡಿದ್ದನ್ನು ಬೋಧಿಸು ಎನ್ನುವವರು ಎಷ್ಟು ಜನ ಇದ್ದಾರೆ ಜಗದಲ್ಲೀಗ? ಸೋಮೇಶ್ವರರ ಮೇಲಿನ ಅಭಿಮಾನವನ್ನು ಹೆಚ್ಚಾಗಿಸಿತು ಈ ಉತ್ತರ
    “ಕನ್ನಡ ಲಿಪಿಗಳ ರಾಣಿ, ಎಲ್ಲ ದಾಳಿಗಳನ್ನೂ ಜೀರ್ಣಿಸಿಕೊಂಡು ಕನ್ನಡ ಬೆಳೆದಿದೆ” ಎನ್ನುವ ಅವರ ನೇರ ಉತ್ತರ ಅವರ ಕನ್ನಡಾಭಿಮಾನಕ್ಕೆ ಸಾಕ್ಷಿ.
    ಬಹುಶಃ ಇಷ್ಟು ಸ್ಪಷ್ಟವಾದ ಕನ್ನಡದ ಸಂದರ್ಶನ ಇತ್ತೀಚಿನ ವರ್ಷಗಳಲ್ಲಿ ನಾವು ಕೇಳಿರಲಿಲ್ಲ. ವಿನಾಯಕ್ ಕೇಳಿದ ಬೆಂಗಳೂರಿನ ಕಂಗ್ಲೀಷ್ ಪ್ರಶ್ನೆಗಳಿಗೂ ಅವರ ಅಚ್ಚ ಕನ್ನಡದ ನೇರ ಉತ್ತರ! “ಮಾರ್ಜಕ ವಿಭಾಗ, ಶಸ್ತ್ರವೈದ್ಯರು, ಗುಣಿಶೌಚ, ದೃಶ್ಯಮಾಧ್ಯಮ, ಕಲಿಕೆ ಹಾಗು ನೆನಪಿನ ವಿಧಾನ, ಚೈತನ್ಯದಾಯೀ ಪುನೀತ್, ಕಥೆ ಡಬ್ಬಿ, ಜೇನುಗೂಡು” - ಹೀಗೆ ಪುಂಖಾನುಪುಂಖವಾಗಿ ಅವರಿಂದ ಕನ್ನಡದ ಮುತ್ತುಗಳು ಸಾವಕಾಶವಾಗಿ ಉದುರುತ್ತಿದ್ದರೆ ಅದನ್ನು ಕೇಳೋದೆ ಚೆನ್ನ. ಜಿಪಿ ರಾಜರತ್ನಂ ಹಾಗು ಡಾ. ರಾಜಕುಮಾರರಷ್ಟು ಕನ್ನಡ ಇನ್ನೂ ಬಂದಿಲ್ಲ ತನಗೆ ಎನ್ನುವ ಸೌಜನ್ಯ ಅವರನ್ನು ದೊಡ್ಡವರನ್ನಾಗಿಸಿದೆ.
    ಸಂದರ್ಶನದ ಕಡೆಯ ಮಾತುಗಳಂತೂ ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿವೆ
    “429 ಸಂಚಿಕೆಗಳಾದರೂ, ಸುಮಾರು 50 ಸಾವಿರ ಪ್ರಶ್ನೆ ಕೇಳಿದ್ದರೂ (ತಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ) ಅದರಲ್ಲಿ ನನ್ನದೇನೂ ಇಲ್ಲ. ಇವೆಲ್ಲ ನಾಡಿನ ಸಾಧಕರದ್ದು. ಅದನ್ನು ಜೇನುನೊಣ ಸಾವಿರಾರು ಹೂಗಳಿಂದ ಶೇಖರಿಸಿ ಕ್ರೌಢೀಕರಿಸುವಂತೆ ನಾನೂ ಸಂಪಾದಿಸಿದ್ದೇನೆ ಅಷ್ಟೇ” ಎನ್ನುವಾಗ “ಮೇಲಕೇರಿದವನು ಚಿಕ್ಕವನಿರಬೇಕು” ಎಂಬ ಬೇಂದ್ರೆಯವರ ಮಾತಿನ ರೂಪಕವಾಗಿ ಕಂಡರು ಸೋಮೇಶ್ವರರು. ಇವರ ಸರಳತೆ, ಸ್ಪಷ್ಟತೆ, ಸಹೃದಯತೆ, ಸೌಜನ್ಯ ಹಾಗು ಸಾಧನೆಗೆ ಕನ್ನಡಿಗರ ಪರವಾಗಿ ಶರಣು
    ಅತಿಯಾದ ಘೋಷಣೆಗಳಿಲ್ಲದೆ, ಒಣ ಅಭಿನಯಗಳಿಲ್ಲದೆ, ಮುಜುಗರ ತರುವ ತೀರ ವೈಯಕ್ತಿಕ ಪ್ರಶ್ನೆಗಳಿಲ್ಲದೆ ಅತ್ಯಂತ ಪ್ರಬುದ್ಧವಾಗಿ, ಉತ್ಸುಕರಾಗಿ, ಎಂದಿನ ನಗುಮೊಗದಿಂದ, ನೇರವಾದ ಪ್ರಶ್ನೆಗಳಿಂದ ವಿನಾಯಕ್ ಇವರ ಸಂದರ್ಶನ ನಡೆಸಿದ್ದಾರೆ. ಮಾತಿಗಿಂತ ಮಾತಿನಲ್ಲಿನ ಧ್ವನಿ, ವಸ್ತು ಹಾಗು ವಿಚಾರದೆಡೆಗೆ ಇಬ್ಬರ ಗಮನವೂ ಇದ್ದು ಇದೊಂದು ನೆನಪಿನಲ್ಲಿಡಬಹುದಾದ ಸ್ತುತ್ಯರ್ಹ ಸಂದರ್ಶನ.
    ಹೆಚ್ಚು ಹೆಚ್ಚು ಈ ರೀತಿಯ ಪ್ರಬುದ್ಧ ಸಂದರ್ಶನಗಳು ಬರಲಿ, ನಾಡಿನ ಖ್ಯಾತರ ವಿಚಾರಧಾರೆಗಳು ಪಸರಿಸಲಿ, ಸಮಾಜದ ಜಾಗೃತಿಯಾಗಲಿ, ನಾಡಿನ ಹಾಗು ರಾಷ್ಟ್ರಪ್ರೇಮ ವಿಕಾಸವಾಗಲಿ, ‘ನಾಯಕ ವಿಥ್ ವಿನಾಯಕ' ನಾಡಿನ ಮನೆಮಾತಾಗಲಿ ಎಂಬುದು ನಮ್ಮ ಅಭಿಮಾನದ ಹಾರೈಕೆ.
    *ಮತ್ತೆ ವಿನಾಯಕ್, ವರ್ಷ ಬೆಳವಾಡಿ ಹಾಗು ತಂಡಕ್ಕೆ ಶುಭಹಾರೈಕೆಗಳು*
    ಇಂತಿ
    ಶ್ರೀಮತಿ ಸರಸ್ವತಿಯೊಂದಿಗೆ
    ಕಿರಣ್ ಹಿರಿಸಾವೆ,
    ಬೆಂಗಳೂರು

  • @darksoul9227
    @darksoul9227 2 ปีที่แล้ว +7

    ಕನ್ನಡಿಗರು ದಯವಿಟ್ಟು ಕನ್ನಡ ಲಿಪಿಯಲ್ಲಿ ಕಾಮೆಂಟ್ ಮಾಡಿ 💛❤. ಮೊದಲು ನಮ್ಮ ಭಾಷೆಯ ಹಿರಿಮೆ ತಿಲಿದುಕೊಳ್ಳಿ....!!!

    • @mohann2289
      @mohann2289 ปีที่แล้ว

      *ತಿಳಿದುಕೊಳ್ಳಿ

  • @ssn5885
    @ssn5885 2 ปีที่แล้ว +25

    ಇಂತಹ ಮಹನೀಯರು ನಮ್ಮ ಕನ್ನಡದ ದೇವರುಗಳು.... Big Fan of you sir... And Thanks Vinayaka for this episode....

  • @likithabhilashc44777
    @likithabhilashc44777 10 ชั่วโมงที่ผ่านมา

    One of the finest personality kannada has found🙏🏻❤️

  • @chandanhn425
    @chandanhn425 2 ปีที่แล้ว +12

    ಡಾ|| ನಾ. ಸೋಮೇಶ್ವರ ಸರ್ ರವರನ್ನ ತಮ್ಮ ವೇದಿಕೆಗೆ ಕರೆಸಿದಕ್ಕೆ ನಿಮಗೆ ಮೊದಲನೇ ಧನ್ಯವಾದ ಹಾಗೂ ತಮ್ಮ ಅದ್ಬುತ ನೆನಪುಗಳನ್ನ & ವಿಚಾರಧಾರೆಯನ್ನ ನಮ್ಮೊಡನೆ ಹಂಚಿಕೊಂಡ ಡಾ|| ನಾ. ಸೋಮೇಶ್ವರ ಸರ್ ರವರಿಗೂ ಹೃದಯದ ಪೂರ್ವಕ ಧನ್ಯವಾದಗಳು 🙏🙏 ಶುಭವಾಗಲಿ.

  • @prakshpraksh9345
    @prakshpraksh9345 ปีที่แล้ว +1

    Good. Voice

  • @maheshns9937
    @maheshns9937 2 ปีที่แล้ว +14

    ಅವರ ಮಾತು ಕೇಳ್ತಾ ಇದ್ರೆ ಇನ್ನ ಕೇಳ್ತಾನೆ ಇರ್ಬೇಕು ಅನ್ಸುತ್ತೆ
    ಮನ ಮುಟ್ಟುವ ಮಾತುಗಳು
    ಜೈ ಕನ್ನಡಾಂಬೆ ❤️💛

  • @ranjithshetty
    @ranjithshetty ปีที่แล้ว +5

    ಶ್ರೀ ಕುಮುದೇಂದು ಅವರ ಬಗ್ಗೆ ತಿಳಿದಿರಲಿಲ್ಲ. ತುಂಬಾ ಧನ್ಯವಾದಗಳು ನಮಗೆ ತಿಳಿಸಿದ್ದಕ್ಕೆ ಮತ್ತು ವಿನಾಯಕ್ ಅವರಿಗೂ ಅಭಿನಂದನೆಗಳು.

  • @vibhudhamv5717
    @vibhudhamv5717 2 ปีที่แล้ว +11

    Amazing podcast ever. ಹೊಸಲು ದಾಟಿ ಒಳಗೆ ಬಂದ್ಮೇಲೆ ಕನ್ನಡ ಬಳಸಿ 👌👌👌👌ಒಳ್ಳೆಯ ಮಾತು...

  • @sudhanvarao1
    @sudhanvarao1 2 ปีที่แล้ว +45

    Wahh what a podcast..! Looking forward for more such knowledge filled Podcasts in Kannada.. "Nayaka With Vinayaka" 💥🤩

    • @vinayakjoshi
      @vinayakjoshi  2 ปีที่แล้ว +4

      Honoured 🙏

    • @darksoul9227
      @darksoul9227 2 ปีที่แล้ว +2

      ಅದುನ್ನೆ ಕನ್ನಡಲ್ಲಿ ಅಕ್ಬೆಕು ಅಂಸ್ಲಿಲ್ವ ನಿಂಗೆ ಈ podcast ಕೆಳುದ್ಮೆಲು ನಿರಾಭಿಮಾನಿಯೆ💛❤.

  • @sooryaborker
    @sooryaborker ปีที่แล้ว +2

    ಮರೆಯಲಾಗದ podcast

  • @vikrampujari2952
    @vikrampujari2952 2 ปีที่แล้ว +7

    ತುಂಬಾ ಒಳ್ಳೆಯ ಕಾರ್ಯಕ್ರಮ ವಿನಾಯಕ್ ಸರ್, ನಿಮಗೆ ತುಂಬಾ ಧನ್ಯವಾದಗಳು, ನಾ
    ಸೋಮೇಶ್ವರ ಸರ್ ಅವರ ಕನ್ನಡಾಭಿಮಾನಕ್ಕೆ ನಾನು ಸೋತು ಹೋದೆ, ಗೆಳೆಯರೇ ನಾವೆಲ್ಲೇರು ಕನ್ನಡದ ಬೆಳವಣಿಗೆ ಬಗ್ಗೆ ಸ್ವಲ್ಪ್ ದುಡಿಯಬೇಕು, ಎಷ್ಟು ನಮ್ಮಿಂದ ಸಾಧ್ಯನೋ ಅಷ್ಟು ನಾನು ಕನ್ನಡವನ್ನು ಬೆಳಸಲು ದುಡಿಯೋಣ, ದಯವಿಟ್ಟು ನಾವೆಲ್ಲೂರು ಸೇರಿ ಕನ್ನಡವನ್ನ ಬೆಳಿಸೋಣ, ಜೈ ಕನ್ನಡದ ಜೈ ಕರ್ನಾಟಕ.

  • @storiesofmiles2289
    @storiesofmiles2289 2 ปีที่แล้ว +6

    ನನ್ನ ಭಾಷೆಯ ಬಗ್ಗೆ ಇದ್ದ ಅಭಿಮಾನ ಗೌರವ ದುಪ್ಪಟ್ಟು ಜಾಸ್ತಿ ಆಯಿತು ಇವರ ಮಾತುಗಳನ್ನು ಕೇಳಿ! 😍

  • @Yavanigottu
    @Yavanigottu ปีที่แล้ว +4

    ಆಹಾ ಅದ್ಬುತವಾದ ಸಂದರ್ಶನ ಎಷ್ಡು ದೊಡ್ಡ ವ್ಯಕ್ತಿ ನಾನು ಏನು ಸಾಧನೆ ಮಾಡಿಲ್ಲಾ ನನ್ನ ಕೆಲಸ ಜೇನು ಕೆಲಸ ಅಷ್ಟೇ ಅಂದಾಗ ಇನ್ನ ನಾವೆಲ್ಲಾ ಎಷ್ಟು ತಿಳಿದುಕೊಳ್ಳಬೇಕು ಹೇಳಿ ನಿಮ್ಮಂತಹ ಶಿಕ್ಷಕರು ಬೇಕು ಸರ್ ನಮಗೆ

  • @mynakumaris1400
    @mynakumaris1400 ปีที่แล้ว

    ತುಂಬಾ ಧನ್ಯವಾದಗಳು. ವಿನಾಯಕ್ 🎉💐

  • @belavenki2505
    @belavenki2505 2 ปีที่แล้ว +7

    ತುಂಬಾ ಚೆನ್ನಾಗಿದೆ.ಸಮಯ ಕಳೆದಿದ್ದೇ ಗೊತ್ತಾ ಗಲ್ಲಿಲ್ಲ. ಇನ್ನೂ ಬೇಕ ನಿಸೀ ದೆ. Missed my breakfast

  • @ranjinit.e5084
    @ranjinit.e5084 2 ปีที่แล้ว +7

    ಎರಡು ಸಂಚಿಕೆಗಳು ಬಹಳ ಚೆನ್ನಾಗಿದೆ ಮೂಡಿ ಬಂದಿದೆ.👍ತುಂಬಾ ಧನ್ಯವಾದಗಳು😀

  • @drrekhamdrrekham2064
    @drrekhamdrrekham2064 ปีที่แล้ว +2

    ಈ ಸಂಚಿಕೆ ನೋಡಿದ ನಂತರ ನಿಮ್ಮ ವಾಹಿನಿಗೆ ಚಂದಾದಾರಾಳಾಗಿದ್ದೇನೆ ವಿನಾಯಕ್ ಅವರೇ 💐🙂

  • @anandundi3040
    @anandundi3040 2 ปีที่แล้ว +8

    ನಾನು ಇತ್ತೀಚೆಗೆ ನೋಡಿದ ಅತ್ಯುತ್ತಮ ಸಂದರ್ಶನ... 👏🙏

  • @nandishd9786
    @nandishd9786 2 ปีที่แล้ว +8

    ಅದ್ಭುತ ಸಂದರ್ಶನ, ತಪ್ಪದೇ ವೀಕ್ಷಿಸಿ

  • @PawanGanavi
    @PawanGanavi ปีที่แล้ว +9

    ಈ ಸಂದರ್ಶನವನ್ನು ಇನ್ನೂ ಹೆಚ್ಚಿನ ಕಂತುಗಳಲ್ಲಿ ಮುಂದುವರಿಸಿ ...... ವಿನಂತಿ

  • @nagarajucnnaga5424
    @nagarajucnnaga5424 ปีที่แล้ว

    super sir valueble 2 episod sir

  • @shatrujeet18
    @shatrujeet18 ปีที่แล้ว +8

    ನಿಮ್ಮ ಕಾರ್ಯಕ್ರಮ ಅದ್ಭುತ ಹಾಗೂ ನಾ ಸೋಮೇಶ್ವರ sir ಅವರ ಅನುಭವದ ಮಾತು ಹಾಗೂ ಜ್ಞಾನವನ್ನು ನಮಗೆ ನೀಡುತ್ತಿದ್ದಾರೆ

  • @ShivaKumar-qq8qm
    @ShivaKumar-qq8qm ปีที่แล้ว +3

    ತುಂಬಾ ಚೆನ್ನಾಗಿ ಮೂಡಿಬಂದಿದೆ... ತುಂಬಾ ಖುಷಿಯಾಯಿತು 💖
    ಕೂರಿಕೆ - ದುಂಡಿರಾಜ್ ಅವರನ್ನು‌ ಮುಂದಿನ ದಿನಗಳಲ್ಲಿ ಕರೆದು ತನ್ನೀ

  • @manjularaghunath7756
    @manjularaghunath7756 2 ปีที่แล้ว +8

    ತುಂಬಾ ಸೊಗಸಾದ ಕಾರ್ಯಕ್ರಮ
    ವಿನಾಯಕ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು

  • @uploaded1029
    @uploaded1029 ปีที่แล้ว +3

    "ಈ ಪುಸ್ತಕ ನನ್ನಲ್ಲಿಯೇ ಉಳಿಯಿತು" ಹಾಗೂ "ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ " ಈ ಎರಡೂ ನುಡಿಗಟ್ಟುಗಳು ತುಂಬಾ ಖ್ಯಾತಿ ಆಗಿವೆ ಗುರುಗಳೇ ನಿಮ್ಮ ಮಾತುಗಳು ಕನ್ನಡ ಅಭಿಮಾನ ಆ ಭಾಷೆ ಕೇಳುತ್ತಾ ಇದ್ದರೆ ಮನಸ್ಸಿಗೆ ಆನಂದ ಆಗುತ್ತದೆ ಆಹಾ! ಎನ್ನುತ್ತದೆ ನನ್ನ ಮನಸ್ಸು

  • @tusharguled
    @tusharguled 2 ปีที่แล้ว +6

    27:50 ಕೇಳೋದಕ್ಕೆ ಬೇಜಾರಾಗುತ್ತೆ.😭💔

  • @chanduchandan057
    @chanduchandan057 2 ปีที่แล้ว +7

    ವಾಹ್ ಜ್ಞಾನ ಭಂಡಾರ 🤗

  • @madhuraraghunandana2438
    @madhuraraghunandana2438 2 ปีที่แล้ว +2

    Very good

  • @bellikiranprakash4946
    @bellikiranprakash4946 ปีที่แล้ว +3

    ಡಾ. ನಾ ಸೋಮೇಶ್ವರ ಸರ್ ಅವರೊಟ್ಟಿಗಿನ ಸಂದರ್ಶನ ಅತ್ಯದ್ಭುತವಾಗಿತ್ತು,, ಹೀಗೆ ಇನ್ನೂ ಅನೇಕ ಮಹನೀಯರ ಸಂದರ್ಶನವನ್ನು ಮಾಡಿ ನಮಗೆ ರಸದೌತಣವನ್ನು ನೀಡಿ..

  • @lbsrao
    @lbsrao 2 ปีที่แล้ว +6

    CTR dose was too dam good answer sir !. For one of your question, naa. Someshwar sir answered so well with example of legends work in Kannada(contribution). ee program inda tumba visheya tilithui. As a host, nivu tumbha olle Nayaka' ranna select madidira !. Nimma podcast na heege continue maadi. good work. Thank you.

  • @prashantrt
    @prashantrt ปีที่แล้ว +5

    ಒಂದೇ ಪದ "ಹೃದಯ ಸ್ಪರ್ಶಿ" 🙏

  • @bgnith
    @bgnith 2 ปีที่แล้ว +4

    Very emotional and knowledgeable podcast.
    Hasivu (hunger) to make such content innu jyasthi aagli ninge Vinayaka 👏🏻👌🏼🙂👍🏼.
    Part 1 and Part 2 both were very good.

  • @divyaarunkumar6329
    @divyaarunkumar6329 2 ปีที่แล้ว +7

    ಅದ್ಭುತವಾದ ಕಾರ್ಯಕ್ರಮ 😍

  • @madhukeshwarms5823
    @madhukeshwarms5823 ปีที่แล้ว +2

    ಕನ್ನಡಕ್ಕೆಂದಿಗೂ ಸಾವಿಲ್ಲ💛❤️

  • @mahalakshmimah
    @mahalakshmimah 2 ปีที่แล้ว +4

    sir one request
    pls make an interview of ಮೈಸೂರಿನ ಕಥೆಗಳು ಧರ್ಮೇಂದ್ರ sir
    if possible

  • @vijayvinayakv
    @vijayvinayakv 2 ปีที่แล้ว +6

    Wow.. Love for ur podcast continues! Well structured... Amazingly conducted show! 👏🏼👏🏼🙏🏼🙏🏼

  • @BritainKaRaja
    @BritainKaRaja 3 หลายเดือนก่อน +2

    The best thing about we kannadigas is we say shuddha kannada and speak sanskrit which much is new and modren 😂 sometimes i think sanskrit is not even old language

  • @chaitanyaranade8318
    @chaitanyaranade8318 2 ปีที่แล้ว +7

    This was like my morning dose of energy..full of knowledge and inspiration..ಧನ್ಯವಾದಗಳು..🙏

  • @nageshml7859
    @nageshml7859 ปีที่แล้ว +3

    ಮುಂದಿನ ದಿನಗಳಲ್ಲಿ ವೀಕೆಂಡ್ ವಿತ್ ರಮೇಶ್ ನಲ್ಲಿ ನಿಮ್ಮನ್ನ ನೋಡಲು ಬಯಸುತ್ತೇನೆ. ಆ ಕುರ್ಚಿಗೆ ನೀವು ಅರ್ಹರು

  • @bhargavpuligal7414
    @bhargavpuligal7414 ปีที่แล้ว +1

    ಕನ್ನಡ ಭಾಷೆಯ ಬಗ್ಗೆ ನಮಗೆಲ್ಲರಿಗೂ ತಿಳುವಳಿಕೆಗೆ ನೀಡಿದ ಡಾಕ್ಟರ್ ನಾ. ಸೋಮೇಶ್ವರ ಸಾರ್ ರವರೆಗೆ ಹೃತ್ಪೂರ್ವಕ ವಂದನೆಗಳು..🙏 🙏
    ಹಾಗೂ ನಮಗೆಲ್ಲರಿಗೂ ಡಾಕ್ಟರ್ ನಾ. ಸೋಮೇಶ್ವರ ಸಾರ್ ರಂತಹ ಮಾನ್ಯರ ಬಗ್ಗೆ ತಿಳಿಸಿಕೋಟ ವಿನಾಯಕ ರವರೆಗೆ ಧನ್ಯವಾದಗಳು..🙏

  • @KannadaForKids
    @KannadaForKids ปีที่แล้ว +2

    ಮನತುಂಬಿ ಬಂದ ಸಂದರ್ಶನ.. ಧನ್ಯವಾದಗಳು 🙏

  • @preetirenake5597
    @preetirenake5597 ปีที่แล้ว +1

    ನಿನ್ನೇ ಒಂದು ಚಿಕ್ಕ ಕ್ಲಿಪ್ ನೋಡದೆ ಇನ್ಸ್ಟಾಗ್ರಾಂ ಅಲ್ಲಿ ಯೂಟಬ್ ಅಲ್ಲಿ ಹುಡಕದ್ದೆ ನಾನ್ ಸಮಯ ವೇಸ್ಟ್ ಅಗಲಿಲ್ಲ ಧನ್ಯವಾದಗಳು 🙌😊

  • @tusharguled
    @tusharguled 2 ปีที่แล้ว +4

    ಈ ವಿಡಿಯೋ ನಾ ಎಲ್ಲರಿಗೂ ಹಂಚಿ

  • @cookingbowlvegetariancooki6958
    @cookingbowlvegetariancooki6958 2 ปีที่แล้ว +5

    Na someshwar sir Thank you for sharing ur abundance knowledge and valuable matters!! 💐🙏🏻💖😇

  • @abhiramazad5740
    @abhiramazad5740 2 ปีที่แล้ว +14

    The 1st episode itself was ultimate , I feel that the 2nd one is gonna be even more fantastic. Dhanyavadagalu. Na Someshwar sir for sharing all of ur knowledge nd Vinayak anna hatsoff.

  • @sudhanva4521
    @sudhanva4521 2 ปีที่แล้ว +3

    ನಾನು ಹೆಮ್ಮೆ ಪಡಬಾರದಾ ಕನ್ನಡಿಗನಾಗಿ???

  • @LearningCorridorBharathMS
    @LearningCorridorBharathMS 2 ปีที่แล้ว +4

    Ondu muttina kathe Idu! 🫡

  • @shantlahirimath7742
    @shantlahirimath7742 ปีที่แล้ว +1

    ಅವರ ಕುಟುಂಬದ ಹೆಂಡತಿ ಮಕ್ಕಳ ಕುರಿತಾಗಿ ಕೆಲವು ವಿಷಯ ತಿಳಿಸಬೇಕಿತ್ತು

  • @aryagoutham007
    @aryagoutham007 2 ปีที่แล้ว +8

    It was an amazing episode. The knowledge what he has shared is only 5% . If you do 100 episode is not enough for sharing of knowledge. Thank you jo for getting him ❤️❤️❤️

  • @nithinkulal
    @nithinkulal ปีที่แล้ว +2

    ಮುಪ್ಪನ್ನು ಮುಂದೂಡುವುದು.. wow.. 34:23

  • @kiranVaShanKi
    @kiranVaShanKi ปีที่แล้ว +3

    ಕೊನೆಯ ಕಥೆ ಅವರ ಸ್ವತಃ ಅವರ ಅನುಭವ ❤️

  • @mynakumaris1400
    @mynakumaris1400 ปีที่แล้ว +2

    ಎಂತಹ. ಹೆಮ್ಮೆಯ. ವ್ಯೆಕ್ತಿ 🙏🙏🙏💐

  • @manjumanju-sr5go
    @manjumanju-sr5go ปีที่แล้ว +1

    ಚಂದನ ವಾಹಿನಿ ನನ್ನ ಜೀವನದ ಒಂದು ಅದ್ಭುತವಾದ ಭಾಗ .ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಹೇಗೆ ಹೋಗಬೇಕು, ದಯವಿಟ್ಟು ತಿಳಿಸಿ .ನಿಮ್ಮ ಈ ಚಾನಲ್ ಒಂದು ಅದ್ಭುತವಾದ ಸಂದೇಶ ನೀಡುತ್ತಿದೆ,ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಚಾನೆಲ್ ಗೆ

  • @sumanthsr25
    @sumanthsr25 2 ปีที่แล้ว +7

    Thank you for the interview! Quality content and a reminiscence of my childhood days! From thatt anta heli to vidyarthi Bhavan. 🙏🏼

  • @chethanashetty8528
    @chethanashetty8528 ปีที่แล้ว +2

    ಎಷ್ಟೋ ಯೂಟ್ಯೂಬ್‌ ಚಾನೆಲ್ ನಲ್ಲಿ ಕಾರ್ಯಕ್ರಮಗಳನ್ನು ನೊಡಿದ್ದೇನೆ ಆದರೆ ಇಂತಹ ಕಾರ್ಯಕ್ರಮ ಬಹಳ ವಿರಳ ದಯಮಾಡಿ ಇಂತಹ ಕಾರ್ಯಕ್ರಮವನ್ನು ಮುಂದುವರಿಸಿ ಬಹಳ ಅದ್ಭುತವಾದ ಕಾರ್ಯಕ್ರಮ .ದೇವರು ಒಳ್ಳೆಯದನ್ನು ಮಾಡಲಿ ನಿಮಗೆ .ಧನ್ಯವಾದಗಳು

  • @deeksha6025
    @deeksha6025 ปีที่แล้ว +4

    ಅದ್ಬುತ ವ್ಯಕ್ತಿತ್ವ ಹಾಗೂ ಅರ್ಥಪೂರ್ಣ ಸಂದರ್ಶನ ❤️

  • @kishan744
    @kishan744 ปีที่แล้ว +1

    namma baalya "That Antha Heli" Kaaryakrama nodkondu beladiddivi annodu khushi. Nimminda Kannada na ishtu spashtavaagi mathadodu kalthiddivi Gurugale. Dhanyavadagalu Vinayak.

  • @siddlingeshwarnakati130
    @siddlingeshwarnakati130 2 ปีที่แล้ว +3

    Kannadakke aatanka bandirodu .. Kannadigrinda adu banglore navrinda

  • @subrahmanyab.a.7359
    @subrahmanyab.a.7359 ปีที่แล้ว +2

    ಡಾ. ನಾ. ಸೋಮೇಶ್ವರ ಅವರ ಸಂದರ್ಶನ ನಮಗೆ ತುಂಬಾ ಸಂತೋಷವನ್ನುಂಟುಮಾಡಿತು, ತಮಗೆ ಕೃತಜ್ಞತೆಗಳು, ಇದೇ ರೀತಿಯ ಕನ್ನಡ ಹಾಗೂ ಅದ್ವೈತದ ಬಗ್ಗೆ ಅಧಿಕೃತವಾಗಿ ತಿಳಿದಿರುವ ವ್ಯಕ್ತಿ *ಡಾ. ಪಾವಗಡ ಪ್ರಕಾಶ್ ರಾವ್* ಅವರ ಸಂದರ್ಶನವನ್ನು ಸಹ ತಾವು ನಡೆಸಿಕೊಡಬೇಕಾಗಿ ವಿನಂತಿ.

  • @hcsiddappa9
    @hcsiddappa9 ปีที่แล้ว +1

    ಡಾIIನಾ ಸೋಮೇಶ್ವರ ಅವರ ವಿವರವಾದ ಸಂದರ್ಶನಕ್ಕೆ 🙏🙏

  • @guruprasad5971
    @guruprasad5971 ปีที่แล้ว +1

    Nanu subscribe madkonde super content broiii...❤️

  • @anjanakulkarni25
    @anjanakulkarni25 2 ปีที่แล้ว +4

    Fantastic Joshi avare... kannada da bagge sir avar maatugalu kelode Chanda... neevu kannada da bagge keliddu amazing... Ee 2 episodes na forever mariyalla🙏🙏🙏🙏

  • @shwetha44
    @shwetha44 2 ปีที่แล้ว +2

    ನನ್ನ 10 ವರ್ಷದ ಮಗಳು ಇಂಗ್ಲೀಷ್ ಪುಸ್ತಕಗಳ, ಕಾದಂಬರಿಗಳ, ವಾರಪತ್ರಿಕೆಗಳ ಮಧ್ಯೆ ಕನ್ನಡ ಪುಸ್ತಕ ಓದಲು ಮರೆತಾಗೆಲ್ಲ ನಾನು ಇದನ್ನೇ ಹೇಳೋದು. ನಿಮ್ಮ generation ಅವ್ರು ಕನ್ನಡ ಓದೋಕೆ ಆಸಕ್ತಿ ತೋರಿಸದಿದ್ದರೆ ಮುಂದೆ ನಮ್ಮ ಕನ್ನಡ ಭಾಷೆ ಉಳಿಯಲ್ಲ ಅಂತ. ಅವಳಿಗೆ ಈ ವಿಡಿಯೋ ತೋರಿಸ್ತೀನಿ. ನಾನು ಅವಳು 6 ವರ್ಷದವಳಿದ್ದಾಗಿಂದ ಕನ್ನಡ ಪುಸ್ತಕಗಳನ್ನ ಅವಳಿಂದ ಓದಿಸ್ತಾ ಇದ್ದೀನಿ. ಪ್ರತಿ ದಿನ ಕನ್ನಡ ಪುಸ್ತಕ ಓದಲೇಬೇಕು ಅಂತ ನಿಯಮ. ಮನೇಲೂ ಬರಿ ಕನ್ನಡ ಮಾತು. ಶಾಲೆ ಹಾಗೂ ರಸ್ತೆಯ ಸ್ನೇಹಿತರೊಂದಿಗೆ ಇಂಗ್ಲಿಷ್ ಅವಳದ್ದು. ಅವಳ ಸ್ನೇಹಿತರನ್ನೂ ನಾನಂತೂ ಕನ್ನಡದಲ್ಲೇ ಮಾತಾನಾಡಿಸೋದು. ಕನ್ನಡ ಪುಸ್ತಗಳನ್ನು ಎಲ್ಲಾ ಕನ್ನಡಿಗರೂ ಹೆಮ್ಮೆಯಿಂದ ಓದಬೇಕು. English ಓದೋದೇ ಒಂದು grade ಅನ್ನೋ ಹಾಗಾಗಿದೆ ಈಗಂತೂ. ಡಾ . ನಾ ಸೋಮೇಶ್ವರ್ ಅವರು ನಿಜಕ್ಕೂ ಕನ್ನಡದ ವಿಶ್ವಕೋಶ 🙏 ಅವರ ಥಟ್ ಅಂತ ಹೇಳಿ journey ಬಗ್ಗೆ ಇತ್ತೀಚಿಗೆ ತರಂಗ ವಾರಪತ್ರಿಕೆಲಿ ಓದಿದ್ದೆ. ಈ ಇಂಟರ್ವ್ಯೂ ಇನ್ನೂ ಖುಷಿ ಕೊಡ್ತು. ಬೆಂಗಳೂರು ನಗರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅವರಿಂದ ಪಡೆಯಬಹುದಿತ್ತು. Part 3 part 4 ಬರಲಿ.

  • @pradeepbs2166
    @pradeepbs2166 2 ปีที่แล้ว +3

    It is not just Na Someshwara, it should be Dr. Na. Someshwara. Please respect and edit the title accordingly.

  • @proudindian2379
    @proudindian2379 2 ปีที่แล้ว +4

    Excellent episode, made me very emotional. Great work keep going

  • @pramodnayak1588
    @pramodnayak1588 ปีที่แล้ว +2

    Ondu overacting illa ondu nataka illa...pakka sathyavada mathugalu. A olle kannada hinneleya sathyathegalu. Nijakku bhahala khushi aythu keli. Long way to go vinayak ATB for NWV👍

  • @sharadambamk1035
    @sharadambamk1035 ปีที่แล้ว +1

    Nanna snehitaru avaru antha helooke tumba santhoshavagatte. Naanu haduva compitation ge hogthiddaaga avaru doc ooduthiddaru avaru kooda debetege baruthiddaru. Tumba olle snehitaru. Tumba ista pattu noodide ee intervie
    Wna vinayak joshiyavare thanks.

  • @BSS666
    @BSS666 ปีที่แล้ว +1

    ಕನ್ನಡ ಇವತ್ತು ಚೆನ್ನಾಗಿದೆ, definetely better than prior to 35 years in Border areas of our state, am an eye witness at Bellary and Belgaum. Today, even Marathas have accepted Kannada at Belagavi and Telugites at Bellary

  • @AdityaParasharTheAVP
    @AdityaParasharTheAVP 2 ปีที่แล้ว +7

    Thank you for completing that childhood connection to 'Thatt Antha HeLi" with this episode ❤️🙏🏼 absolutely loved the questions and the structure of the show. This one for life ina trophy cabinet 🏆

  • @sampathkrishna1806
    @sampathkrishna1806 ปีที่แล้ว +1

    Dr ರವರಿಗೆ ಇವರ ಶ್ರಮ ಕ್ಕ ಪದ್ಮಭೂಷಣ ಪ್ರಶಸ್ತಿ ಯಾಕೆ ಕೊಡಬಾರದು.ಇವರದ್ದು ಎಂಥಾ ಜ್ಞಾನಯಗ್ಘ.

  • @PrakashPatil-vq2ll
    @PrakashPatil-vq2ll ปีที่แล้ว +1

    Wow... Great Sir... Really appreciated Episode...
    My great follower n Hero is Someshwar Sir...HRUDAYA POORVAKA NAMASKAARAGALU🙏🙏🙏🙏🙏

  • @ChanneshHkvpura
    @ChanneshHkvpura ปีที่แล้ว +3

    ಅದ್ಭುತ ವ್ಯಕ್ತಿತ್ವ.. ಇಬ್ಬರದ್ದೂ... 🙏🙏

  • @abhijittandeltandel142
    @abhijittandeltandel142 2 ปีที่แล้ว +5

    Hat's off to vinayak joshi.... It takes a lot research and guts to speak with na someshwar sir...

    • @vinayakjoshi
      @vinayakjoshi  2 ปีที่แล้ว +1

      Please watch our other episodes too.. You will love it for sure. We have a great time and a fantastic guest list

    • @abhijittandeltandel142
      @abhijittandeltandel142 2 ปีที่แล้ว +1

      @@vinayakjoshi watching it again... This interview is so clam

  • @manjunathgiridhar4909
    @manjunathgiridhar4909 2 ปีที่แล้ว +3

    Very very good. Every single second is worth watching. Lot of insights.

  • @vishwakannada2022
    @vishwakannada2022 ปีที่แล้ว +1

    ಕನ್ನಡ ಬಳಸಿ ಕನ್ನಡ ಬೆಳೆಸಿ , ಜೈ ಕನ್ನಡ ಭುವನೇಶ್ವರಿ

  • @chinmayb172
    @chinmayb172 ปีที่แล้ว +6

    I remember old days when whole family used to watch the show "thatt antha heli" after dinner...and guess answers...good old days❤️

    • @user-jt1qu1di2u
      @user-jt1qu1di2u ปีที่แล้ว

      After dinner😅😅

    • @chinmayb172
      @chinmayb172 ปีที่แล้ว +1

      @@user-jt1qu1di2u okay bro corrected for ur satisfication :)

    • @user-jt1qu1di2u
      @user-jt1qu1di2u ปีที่แล้ว

      @@chinmayb172 😝😝😝

  • @snehaudupa4255
    @snehaudupa4255 2 ปีที่แล้ว +3

    Hege intha vykthigala sandarshana madi..tilidu kolluva vichara tumba ide..vinyak Joshi avre nimagu hagu nimma tandakku tumba dhanyavadagalu..

  • @gadda017
    @gadda017 2 ปีที่แล้ว +4

    Thank you Vinayak Joshi for bringing this interview. What a gem of a person is Dr. Na Someshwar, Hats off sir for your selfless contribution to our society 🫡

  • @manjuachar2085
    @manjuachar2085 2 ปีที่แล้ว +7

    An emotional episode, indeed. Best wishes from Melbourne, Australia.

    • @vijayalakshmivijaya7883
      @vijayalakshmivijaya7883 ปีที่แล้ว

      ಇಲ್ಲಿನ ಜಾಗ ಬೇಕು ಇಲ್ಲಿನ ಉದ್ಯೋಗ ಬೇಕು ಇಂದಿನ ನೀರು ಬೇಕು ಇಲ್ಲಿ ಮಕ್ಕಳು ಬೆಳೆಯಬೇಕು ಭಾಷೆ ಮಾತ್ರ ಬೇಡ ಇಂಥವರನ್ನು ಒಡೆದು ಓಡಿಸಬೇಕು

  • @Vinayak4d
    @Vinayak4d ปีที่แล้ว +1

    ಕನ್ನಡ ಉಳಿಸಿ ಎಂದು ಹೇಳುವುದೇ ಅಸಹ್ಯಕರ ಮತ್ತು ಬೇಸರದ ಸಂಗತಿ ... ಸರಿಯಾಗಿ ಹೇಳಿದಿರಿ 👌🏻 ಕನ್ನಡದ ಸಾಹಿತಿಗಳನ್ನು ನೋಡಿದ ನಾವೇ ಧನ್ಯರು.. ಮತ್ತೆ ಇಂಥಹವರನ್ನು ನೋಡುವುದು ಕಷ್ಟ ಮುಂಬರುವ ಪೀಳಿಗೆಯಲ್ಲಿ..

  • @Sdeepful
    @Sdeepful 2 ปีที่แล้ว +2

    Namaskara Vinayak avre.... Neevu Nadesuttiruva Nayaka with Vinayaka Tumba Adbhutha vagide... Bahala Chennagi mudi bartide... Heege munduvaresi... Namma Korike enendare Sadhyavadare kelavu Cricketer galannu Nimma Karyakramadalli karesi... Udaharanege : Javagal Srinath, Venkatesh Prasad, Sunil Joshi, Vijay Bharadwaj

  • @dpksatan
    @dpksatan 2 ปีที่แล้ว +3

    Adbuthavada sandarshana...
    We look forward to more such beautiful conversation with more such beautiful people... hats off

  • @prajwalpraju268
    @prajwalpraju268 ปีที่แล้ว +1

    Sir you have to get kannada ratna Karnataka ratna.

  • @ramanandasg5698
    @ramanandasg5698 2 ปีที่แล้ว +4

    ಅದ್ಭುತ ಕಾರ್ಯಕ್ರಮ

  • @SScientechlogical_AV
    @SScientechlogical_AV 16 วันที่ผ่านมา +1

    my daughters scold me as nimmavanu in kannada, i love kannada and my kids going to kannada medium school

  • @satishagowdru7238
    @satishagowdru7238 ปีที่แล้ว +2

    ಜ್ಞಾನಿಗಳಿಂದ ಮಾತ್ರ ಜ್ಞಾನ ಹಂಚುವುದಕ್ಕೆ ಸಾಧ್ಯ. ಅದುವೇ ನಿಮ್ಮಂತವರಿಂದಲೇ ..
    ಬಹಳ ಬಹಳ ಒಳ್ಳೆಯ ಕಾರ್ಯಕ್ರಮ.. ಪ್ರಭಾವ ಪರಿಣಾಮ ಉದ್ದೇಶ ಉತ್ತಮವಾಗಿರುವುದೇ ಅಗಿದೆ