ಅಕ್ಷರ ಜೋಳಿಗೆಗೆ..! ದೇಣಿಗೆ ಸಲ್ಲಿಸುವ ವಿಧಾನ. (How to Donate)

แชร์
ฝัง
  • เผยแพร่เมื่อ 16 ต.ค. 2024
  • ಶ್ರೀ ಗವಿಸಿದ್ಧೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯ
    ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ.
    ಅನ್ನ, ಅಕ್ಷರ, ಅರಿವು, ಆರೋಗ್ಯ, ಆಧ್ಯಾತ್ಮ ದಾಸೋಹದ ಕ್ಷೇತ್ರ ಶ್ರೀ ಗವಿಮಠ. ತಾವು ಪೂಜಿಸುವ ದೇವರ ಮಂದಿರದಲ್ಲಿ ದೀಪ ಹಚ್ಚುವುದಕ್ಕಿಂತ, ದೀಪವೇ ಇಲ್ಲದ ಗುಡಿಸಿಲಿನ ಮಕ್ಕಳ ಎದೆಯಲ್ಲಿ ಅಕ್ಷರದೀಪ ಹಚ್ಚುವ ಕಾರ್ಯವೇ ಲಿಂಗಪೂಜೆಯೆಂದು ಅರಿತವರು ಶ್ರೀಮಠದ ಪೂಜ್ಯರು. ಈ ನಾಡಿನ ಮಕ್ಕಳ ಏಳ್ಗೆಗಾಗಿ ಶಿಕ್ಷಣ ಸಂಸ್ಥೆ ಸ್ಥಾಪನೆಯ ಜೊತೆಗೆ ಮುಖ್ಯವಾಗಿ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾವಿಕಾಸಕ್ಕೆ ಗವಿಮಠ ಆಸರೆಯ ತಾಣವಾಗುತ್ತಿದೆ.
    1951ರಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಉಚಿತ ಪ್ರಸಾದ ನಿಲಯ ಇಂದು 5000 ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅನುಕೂಲಕರವಾದ ವಿದ್ಯಾರ್ಥಿ ಕೊಠಡಿಗಳು, ಅಡುಗೆಮನೆ, ದಾಸೋಹ ಭವನ, ಗ್ರಂಥಾಲಯ, ಆಸ್ಪತ್ರೆಯನ್ನೊಳಗೊಂಡ ಬೃಹತ್ ಕಟ್ಟಡವು ವಿದ್ಯಾರ್ಥಿಗಳಿಗಾಗಿ ನಿರ್ಮಾಣಗೊಂಡಿದೆ.
    ಇದಲ್ಲದೆ 1200 ವಿದ್ಯಾರ್ಥಿನಿಯರಿಗಾಗಿ ಕೋಳೂರು-ಕಾಟ್ರಳ್ಳಿ ಸಮೀಪದಲ್ಲಿ 45 ಎಕರೆ ಸ್ಥಳದಲ್ಲಿ 50 ಕೋಟಿ ರೂಪಾಯಿ ಯೋಜನೆಯ ವೆಚ್ಚದಲ್ಲಿ ‘ಶ್ರೀ ಗವಿಸಿದ್ಧೇಶ್ವರ ಗುರುಕುಲವನ್ನು ಸ್ಥಾಪಿಸಿ ಅಲ್ಲಿ ವಸತಿ ಸಹಿತ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ’ದ ನೀಲನಕ್ಷೆ ಸಿದ್ಧಗೊಂಡು ಕಟ್ಟಡವು ಪೂರ್ಣಗೊಳ್ಳವ ಹಂತದಲ್ಲಿದೆ, 2025-26ನೇ ಶೈಕ್ಷಣಿಕ ವರ್ಷದಿಂದ ಇದನ್ನು ಪ್ರಾರಂಭಿಸಲಾಗುವುದು.
    ಈ ಮಹಾನ್ ಶಿಕ್ಷಣ ಸೇವಾಕಾರ್ಯ ಮುಂದುವರೆಯಲು ಸಾವಿರಾರು ಮಕ್ಕಳ ಬದುಕಿಗೆ ಆಸರೆಯಾಗುವ ಅನ್ನ-ಅಕ್ಷರ-ನೀಡುವ ಈ ಸತ್ಕಾರ್ಯದಲ್ಲಿ ದೇಣಿಗೆ ರೂಪದಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರು ಪ್ರತಿ ತಿಂಗಳಿಗೆ ನೂರು ರೂಪಾಯಿಗಳನ್ನು ಅಥವಾ ತಮ್ಮ ಇಚ್ಚಾನುಸಾರ ಅಧಿಕ ದೇಣಿಗೆಯನ್ನು ಕ್ಯೂ.ಆರ್ ಕೋಡ್ ಬಳಸಿ ಸ್ವಇಚ್ಚೆಯಿಂದ ದೇಣಿಗೆ ಸಲ್ಲಿಸಬಹುದು.
    ಅನ್ನ ಅಕ್ಷರದಾಸೋಹದ ಪುಣ್ಯ ಕಾರ್ಯಕ್ಕೆ ಕೈ ಜೋಡಿಸೋಣ ಸಮಾನ ಮನಸ್ಕರೊಂದಿಗೆ ಈ ವಿಷಯ ಹಂಚಿಕೊಳ್ಳೋಣ.

ความคิดเห็น •