ಇವತ್ತಿನ ದಿನ ಅನ್ನ ಮುಟ್ಟಬೇಡಿ ಅರಳಿ ಮರಕ್ಕೆ ಸ್ವಲ್ಪ ನೀರು ಹಾಕಿ

แชร์
ฝัง
  • เผยแพร่เมื่อ 12 ม.ค. 2025
  • ⚜️ *ಧಾರ್ಮಿಕ ವಿಚಾರ*⚜️
    📖,#ತಾರೀಕು#10/01/2025 ರಂದು ಶುಕ್ರವಾರ ಈ ವರ್ಷದ ಮೊದಲ ವೈಕುಂಠ ಏಕಾದಶಿ, ಎಲ್ಲಾ 24 ಏಕಾದಶಿಗಳಲ್ಲಿ, ಅತ್ಯಂತ ಶ್ರೇಷ್ಠವಾದ ಏಕಾದಶಿ ಎಂದರೆ ಅದು ವೈಕುಂಠ ಏಕಾದಶಿ, ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ,
    01🪔, ವೈಕುಂಠ ಏಕಾದಶಿ ಎಂದರೆ ಶ್ರೀಮನ್ನಾರಾಯಣನ್ನು ಯೋಗ ನಿದ್ರೆಯಿಂದ ಏಳುವ ದಿನ, ಅಂದರೆ ದಕ್ಷಿಣಾಯನ ಪ್ರಾರಂಭಿಸುವಾಗ ಶ್ರೀಮನ್ನಾರಾಯಣನು ಯೋಗ ನಿದ್ರೆಗೆ ಜಾರುತ್ತಾನೆ ಮತ್ತೆ ಉತ್ತರಾಯಣ ಪ್ರಾರಂಭವಾಗುವ ಸಮಯದಲ್ಲಿ ಶುಕ್ಲ ಪಕ್ಷದ ಏಕಾಶಿಯ ದಿನ ಶ್ರೀಮನ್ನಾರಾಯಣನು ಯೋಗ ನಿದ್ರೆಯಿಂದ ಏಳುತ್ತಾನೆ,
    02🪔, ಈ ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂತಲೂ ಕರೆಯುತ್ತಾರೆ ಈ ದಿನ ವಿಷ್ಣುವಿನ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ,
    03🪔, ಈ ವೈಕುಂಠ ಏಕಾದಶಿಯ ದಿನ ವೈಕುಂಠದ ಬಾಗಿಲು ಅಂದರೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಇನ್ನೂ ಈ ದಿನ ಮಹಾ ವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ ಅನ್ನುವ ನಂಬಿಕೆ ಇದೆ ಆದ್ದರಿಂದ ಈ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂಬದಾಗಿ ಕರೆಯುತ್ತಾರೆ
    04🪔, ಈ ಮುಕ್ಕೋಟಿ ಏಕಾದಶಿಯು ಮೂರು ಕೋಟಿ ಏಕಾದಶಿಗಳಿಗೆ ಸಮವಾದ ಪವಿತ್ರತೆಯನ್ನು ಹೊಂದಿದೆ,
    05🪔, ಏಕೆಂದರೆ ಈ ವೈಕುಂಠ ಏಕಾದಶಿಯ ದಿನ ಹಲಾಹಲಾ -ಅಮೃತ ಎರಡು ಹುಟ್ಟಿದವು ಈ ದಿನವೇ ಶಿವನು ಹಾಲಹಾಲವನ್ನು ನುಂಗಿದ,
    06🪔, ಮಹಾಭಾರತದ ಯುದ್ಧದಲ್ಲಿ ಭಗದ್ವತ್ಗೀತೆಯನ್ನು ಶ್ರೀ ಕೃಷ್ಣನು ಅರ್ಜುನನಿಗೆ ಇದೇ ದಿನ ಉಪದೇಶಿಸಿದ ಎಂಬ ನಂಬಿಕೆ ಇದೆ,
    07🪔, ವರ್ಷದಲ್ಲಿ ಬರುವ ಎಲ್ಲಾ ಏಕಾದಶಿಗಳಿಗಿಂತ ಈ ವೈಕುಂಠ ಏಕಾದಶಿವ ಅತ್ಯಂತ ವಿಶಿಷ್ಟವಾದದ್ದು,
    08🪔, ವೈಕುಂಠ ಏಕಾದಶಿಯ ದಿನ ಒಂದು ದಿನ ಉಪವಾಸ ಇದ್ದರೆ ಉಳಿದ 24 ಏಕಾದಶಿಗಳಲ್ಲಿ ಉಪವಾಸ ಮಾಡಿದ್ದಕ್ಕೆ ಸಮನಾಗಿರುತ್ತದೆ,
    09🪔, ವೈಕುಂಠ ಏಕಾದಶಿಯ ದಿನ ವಿಷ್ಣು ಬಾಗಿಲು ಅಂದರೆ ಸ್ವರ್ಗದ ಬಾಗಿಲು ತೆರೆದಿರುವ ದಿನ ಎಂದು ಹೇಳಲಾಗುತ್ತದೆ ಆದುದರಿಂದ ಈ ದಿನ ಉಪವಾಸವಿದ್ದು ಶ್ರೀಮನ್ನಾರಾಯಣ ಅಥವಾ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದರೆ, ನಾವುಗಳು ಮಾಡಿರುವ ಏಳೇಳು ಜನ್ಮಗಳ ಪಾಪವು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ, ಹಾಗೂ ನಾವು ಈ ಲೋಕವನ್ನು ತ್ಯಜಿಸಿದಾಗ ಸ್ವರ್ಗಪ್ರಾಪ್ತಿಯಾಗುತ್ತದೆ, ಎಂಬ ನಂಬಿಕೆಯೂ ಸಹ ಇದೆ,
    10🪔, ಈ ದಿನದಂದು ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥಗಳನ್ನು ತಿನ್ನಬಾರದು ಹಾಗೂ ಅನ್ನದ ನೈವೇದ್ಯವನ್ನು ದೇವರಿಗೆ ಇಡಬಾರದು, ಒಂದು ವೇಳೆ ಅನ್ನವನ್ನು ತಿಂದರೆ ಹುಳುಗಳನ್ನು ತಿಂದಿದ್ದಕ್ಕೆ ಸಮವಾಗುತ್ತದೆ ಹಾಗೂ ನಕರಾತ್ಮಕ ಗುಣಗಳು ರಾಕ್ಷಸ ಗುಣಗಳು ನಮ್ಮಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಜಡತ್ವ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ,
    11🪔, ವೈಕುಂಠ ಏಕಾದಶಿಯ ದಿನದಂದು ವಿಷ್ಣುವಿನ ಮಂತ್ರವನ್ನು ಪಠಣೆ ಮಾಡಬೇಕು ಇದರಿಂದ ವಿಷ್ಣುವಿನಕೃಪೆಗೆಪಾತ್ರರಾಗುತ್ತಾರೆ, ಹಾಗೂ ಇಷ್ಟಾರ್ಥ ಸಿದ್ಧಿಗಳು ಪ್ರಾಪ್ತವಾಗುತ್ತದೆ,
    12🪔, ಈ ವೈಕುಂಠ ಏಕಾದಶಿಯ ದಿನದಂದು ಹಳದಿ ಬಟ್ಟೆಯನ್ನು ಧರಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ ವಿಷ್ಣುವಿನ ನೆಚ್ಚಿನ ಬಣ್ಣ ಹಳದಿಯಾಗಿರುವುದರಿಂದ ವಿಷ್ಣುವಿನ ಆಶೀರ್ವಾದ ಲಭಿಸುತ್ತದೆ,
    13🪔, ಹಾಗೂ ವಿಷ್ಣು ದೇವರಿಗೆ ಹಳದಿ ಹೂವಿನ ಜೊತೆ ತುಳಸಿಯನ್ನು ಸಹ ಅರ್ಪಿಸಿ ಪಂಚಾಮೃತ ಅಭಿಷೇಕವನ್ನು ಸಹ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ,
    14🪔 ಏಕಾದಶಿಯ ದಿನದಂದು ಅರಳಿಮರದ ಬೇರಿಗೆ ನೀರನ್ನು ಅರ್ಪಣೆ ಮಾಡುವುದರಿಂದ ಶ್ರೀಮನ್ನಾರಾಯಣನ ಆಶೀರ್ವಾದ ಲಭಿಸುತ್ತದೆ ಹಾಗೂ ಕಷ್ಟಗಳು ದೂರವಾಗುತ್ತದೆ ಎನ್ನಲಾಗಿದೆ, ಏಕೆಂದರೆ ಶ್ರೀಹರಿ ವಿಷ್ಣು ಅರಳಿ ಮರದಲ್ಲಿ ನೆಲೆಸಿರುತ್ತಾರೆ ಎನ್ನುವ ನಂಬಿಕೆ ಇದೆ,
    15🪔, ವೈಕುಂಠ ಏಕಾದಶಿಯ ದಿನದಂದು ಹಳದಿ ವಸ್ತ್ರವನ್ನು ದಾನ ಮಾಡುವುದು ಹಳದಿ ಬೇಳೆ ಕಾಳುಗಳು ಹಳದಿ ಬಟ್ಟೆ ಹಳದಿ ಹೂವು ಹೀಗೆ ಒಟ್ಟಾರೆ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ,
    16🪔 ಚಿಕ್ಕ ಮಕ್ಕಳು ಅಂದರೆ ಐದು ವರ್ಷದಿಂದ ಕೆಳಗಿರುವ ಮಕ್ಕಳು ಹಾಗೂ ಗರ್ಭಿಣಿಯರು ಬಾಣಂತಿಯರು ಮತ್ತು 80 ವರ್ಷಕ್ಕೆ ಮೇಲ್ಪಟ್ಟವರು ಹಾಗೂ ರೋಗಿಗಳು ಈ ವೈಕುಂಠ ಏಕಾದಶಿಯ ದಿನದಂದು ಉಪವಾಸವನ್ನು ಮಾಡಬಾರದು, 🙏💐
    🚩 *ಭಗವಂತ ಶ್ರೀ ಪರಶುರಾಮ*🚩

ความคิดเห็น •