ದೆಹಲಿ ಸುಲ್ತಾನರ ಮಗಳು ವರನಂದಿ,,ಮೇಲುಕೋಟೆಗೆ ಬಂದಿದ್ದು ಹೇಗೆ....??

แชร์
ฝัง
  • เผยแพร่เมื่อ 10 ต.ค. 2024
  • ಶ್ರೀ ವರನಂದಿ ದೇವಿ... ವೃತ್ತಾಂತ
    ನಮ್ಮ ಭಾರತ ದೇಶ ಪುರಾತನ ಕಾಲದಿಂದಲೂ, ದೇವರ ಪೂಜೆ ಕೈಂಕರ್ಯ ಉತ್ಸವಾದಿಗಳನ್ನು ಮಾಡಿಕೊಂಡು ಬಂದಿದೆ. ಅದಕ್ಕೆ ಹಿಂದೂಗಳ ದೈವೀ ಭಾವನೆ ಮತ್ತು ಆಸಕ್ತಿ ಹಾಗೂ ನಂಬಿಕೆಗಳು ಮುಖ್ಯ ಕಾರಣ, ತಮ್ಮ ತಮ್ಮ ಇಷ್ಟ ದೇವರನ್ನು ಆರಾಧಿಸಿ ತಮಗೆ ತಿಳಿದ ರೀತಿ, ಕೈಂಕರ್ಯ ಮಾಡಿಕೊಂಡು ಹೋಗುತ್ತಿರುತ್ತಾರೆ. ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಿಂದ ದೇವರ ಪೂಜಾಧಿಗಳು ನಡೆಯುತ್ತವೆ. ಎಷ್ಟೋ ಶತಮಾನ ಕಳೆದರೂ, ಹಾಗೂ ತಮ್ಮ ಧರ್ಮದ ಮೇಲೆ, ವಿದೇಶಿ ಧರ್ಮಗಳ ಪ್ರಭಾವ ಬೀರಿದರೂ, ತಮ್ಮ ಧರ್ಮ ಪೂಜೆ ಪುನಸ್ಕಾರಗಳು ಉಳಿದುಕೊಂಡು ಬಂದಿದೆ. ದೇವರ ಪೂಜೆಯಲ್ಲಿ ದೇವರು ನಮ್ಮಂತೆ ಬಾಳುವ ಮಾಡುವನೆಂದು ನಂಬಿ, ಅವರುಗಳಿಗೆ ಕಲ್ಯಾಣೋತ್ಸವ, ವಸಂತೋತ್ಸವ, ತಪ್ಪೋತ್ಸವ, ಇತ್ಯಾದಿ ಉತ್ಸವ ಮಾಡಿ, ತಮ್ಮ ಮನದಣಿಯ ತೃಪ್ತಿಪಡುತ್ತಾರೆ. ಇದು ಭಾರತದುದ್ದಗಲಕ್ಕೂ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಗುಜರಾತಿನಿಂದ ಬಂಗಾಳದವರೆಗೆ ಹರಡಿ, ತಮಗೆ ಅನುಕೂಲವಾದ ರೀತಿಯಲ್ಲಿ ಸೇವೆ ಸಲ್ಲಿಸಿ ತೃಪ್ತರಾಗುತ್ತಾರೆ.
    ಪ್ರತಿಯೊಂದು ದೇವಸ್ಥಾಗಳಲ್ಲಿರುವ ದೇವರುಗಳು ಹೇಗೆ ಅಲ್ಲಿ ನೆಲೆಸಿದರು, ಅದಕ್ಕೆ ಕಾರಣ ಏನು?, ಅದರ ಹಿನ್ನೆಲೆ ಏನು? ಇಂತಹ ವಿಷಯಗಳು ಆಯಾ ಪ್ರದೇಶ, ಜನಪದದಲ್ಲಿ, ಹಾಡು, ಗೀತೆ, ಇತ್ಯಾದಿಗಳಲ್ಲಿ ಈಗಲೂ ನೋಡಬಹುದು. ಪ್ರತಿಯೊಂದು ದೇವರು ಆಯಾಯ ಜಾಗದಲ್ಲಿ ನೆಲೆಸಲು ಕಾರಣ ಇದೆ. ಅದು ಚರಿತ್ರೆಯಲ್ಲಿ, ಪುರಾಣಗಳಲ್ಲಿ ನೋಡಬಹುದು. ಉದಾ:ಶ್ರೀ
    ತಿರುಪತಿಯ ಶ್ರೀ ಶ್ರೀನಿವಾಸನು ಅಲ್ಲಿ ನೆಲೆಸಿದ್ದೇಕೆ ಎನ್ನುವುದಕ್ಕೆ ಬೇಕಾದಷ್ಟು ಕಥೆಗಳಿವೆ. ಅವನು ಹೇಗೆ ತನ್ನ ಹೆಂಡತಿ ಲಕ್ಷ್ಮಿಯನ್ನು ಪದ್ಮಾವತಿ ರೂಪದಲ್ಲಿ ಪಾಣಿಗ್ರಹಣ ಮಾಡಿದ. ಇದೆಲ್ಲಾ ಪುರಾಣದಲ್ಲಿ ಕಂಡುಬರುತ್ತದೆ. ಅದೇ ರೀತಿ ಪ್ರತಿಯೊಂದು ಕಡೆ ನೆಲೆಸಿರುವ ದೇವತೆಗಳಿಗೆ ತನ್ನದೇ ಆದ ಕಥೆ ಇರುತ್ತದೆ. ಇದೆಲ್ಲಾ ಪುರಾಣೀತಿಹಾಸಗಳನ್ನು ಕಾಣಬಹುದಾಗಿದೆ. ಇಂತಹುದೇ ಆದ ಒಂದು ವೃತ್ತಾಂತವನ್ನು ನಾವು ಈಗ ತಿಳಿಯಬೇಕಲ್ಲವೇ?
    ದಿಲ್ಲಿ (ದೆಹಲಿ)ಯಲ್ಲಿ ಮುಸಲ್ಮಾನ ದೊರೆಗಳು ಆಳುತ್ತಿದ್ದ ಕಾಲವದು. ಮುಸಲ್ಮಾನ ದೊರೆಗಳು ಆಗ ತಮ್ಮ ಇಷ್ಟ ಬಂದ ಕಡೆ ನುಗ್ಗಿ, ದೇವಾಲಯಗಳನ್ನು ಲೂಟಿ ಮಾಡುತ್ತಿದ್ದರು. ತಮಗೆ ಸಿಕ್ಕ ಸಂಪತ್ತನ್ನು ದೋಚುವುದರ ಜೊತೆಗೆ ವಿಗ್ರಹಗಳ ಅಂದ ಕೆಡಿಸಿ, ಹಾಳು ಮಾಡುತ್ತಿದ್ದರು. ಆ ದೇವಾಲಯಗಳ ಗೋಜಿಗೆ ಮತ್ತೆ ಹೋಗದೆ ಬೇರೆ ಕಡೆ ಹೋಗಿ ಲೂಟಿ ಮಾಡುತ್ತಿದ್ದರು. ಈ ರೀತಿ ಲೂಟಿ ಮಾಡಿದ ಸಂಪತ್ತನ್ನು ತಮ್ಮ ಐಶಾರಾಮ ಜೀವನಕ್ಕೆ ಉಪಯೋಗ ಮಾಡಿಕೊಳ್ಳುತ್ತಿದ್ದರು. ವಿಗ್ರಹಗಳು ಮುದ್ದಾಗಿದ್ದರೆ, ಅಂದವಾಗಿದ್ದರೆ, ಅವುಗಳನ್ನು ಹಾಗೆಯೇ ಹಾಳಾಗದಂತೆ, ಭದ್ರ ಮಾಡಿ ಇಡುತ್ತಿದ್ದರು. ಈ ಭದ್ರವಾದ ಪೆಟ್ಟಿಗೆ ತೆರೆಯಲು ಅಥವಾ ನೋಡಲು ಬೇರೆಯವರಿಗೆ ಅವಕಾಶ ಕೊಡುತ್ತಿರಲಿಲ್ಲ, ಇಂತಹ ಭದ್ರವಾದ ಪೆಟ್ಟಿಗೆಯಲ್ಲಿ 'ರಾಮ ಪ್ರಿಯ” ಚಲುವನಾರಾಯಣನ ವಿಗ್ರಹವೂ ಇತ್ತು. ದಿಲ್ಲಿಯ ಬಾದಷಹ ಸಂಪತ್ತಿನ ಪೆಟ್ಟಿಗೆಯ ಜೊತೆ 'ರಾಮ ಪ್ರಿಯ'ನ ವಿಗ್ರಹ ಇರುವ ಪೆಟ್ಟಿಗೆಯೂ ಇತ್ತು. ಹೀಗಾಗಿ ದೇವನಾದ ನಾರಾಯಣನು ಸಹ ಪೆಟ್ಟಿಗೆಯಲ್ಲಿ ಬಂದಿಯಾಗಿ ಇರಬೇಕಾಗಿ ಬಂದಿತ್ತು.
    ಈ ರೀತಿ ರಾಮಪ್ರಿಯನ ವಿಗ್ರಹ ರೂಪದಲ್ಲಿ ಬಂದಿಯಾದ್ದರಿಂದ ಅವನಿಗೆ ಪೂಜೆ, ಪುನಸ್ಕಾರಗಳು ನಡೆಯಲು ಅವಕಾಶವಾಗುತ್ತಿರಲಿಲ್ಲ, ಈ ವಿಷಯ ತ್ರಿಲೋಕ ಸಂಚಾರಿ ನಾರದರಿಂದ ದೇವಲೋಕದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರಾದಿಯಾಗಿ, ಸರ್ವರಿಗೂ ತಿಳಿಯಿತು. ನಾರದರಿಗಂತೂ ಈ ಹರಿಯನ್ನು ಕಾಣದೇ ಹೇಗಾದರೂ ಮಾಡಿ ಬಾದಷಹನ ಹಿಡಿತದಿಂದ ಬಿಡಿಸಬೇಕೆಂದು ನಾನಾ ರೀತಿಯಲ್ಲಿ ಯೋಚಿಸಿ ಬ್ರಹ್ಮನ ಬಳಿ ಬಂದು ವಿನಂತಿ ಮಾಡಿಕೊಂಡನು. 'ಹೇ ಸೃಷ್ಟಿಕರ್ತ ಜಗನ್ನಿಯಾಮಕ, ಚತುರ್ಮುಖ ಬ್ರಹ್ಮ ದೇವನೇ, ನೀವು ರಾಮಪ್ರಿಯನ ಸೇವೆ ಮಾಡಬೇಕು, ಅವನಿಗೆ ಪ್ರತಿ ದಿನ ಪೂಜೆ ನಡೆಯುವಂತೆ ಮಾಡಬೇಕೆಂದು' ನಾರದನು ಪ್ರಾರ್ಥಿಸಿದನು. ಅದಕ್ಕೆ ಬ್ರಹ್ಮದೇವನು ಒಪ್ಪಿ ರಾತ್ರಿ ಕಾಲದಲ್ಲಿ ಮಾತ್ರ ದಿಲ್ಲಿಯಲ್ಲಿ ಎಲ್ಲರೂ ಮಲಗಿದ ಮೇಲೆ ಕಾವಲುಗಾರರ ಸುಳುವಿಗೆ ಬಾರದಂತೆ ಅಗೋಚರವಾಗಿ ರಾಮಪ್ರಿಯನ ಸೇವೆ ಮಾಡಿ ಬರುತ್ತಿದ್ದನು.
    ನಾರದ ಮಹರ್ಷಿಯು ಶ್ರೀ ಹರಿ ರಾಮಪ್ರಿಯನನ್ನು ಹೇಗಾದರೂ ಮಾಡಿ ಇಲ್ಲಿಂದ ಬಿಡುಗಡೆ ಮಾಡಬೇಕೆಂದು ಸಂಕಲ್ಪ ಮಾಡಿದ್ದಂತೆ ಶ್ರೀ ಲಕ್ಷ್ಮಿದೇವಿಯು ಇದಕ್ಕೆ ಒಪ್ಪಿ ಸಹಕಾರ ನೀಡಿದರೆ ಈ ಕೆಲಸ ಸಾಧ್ಯವೆಂದು ಬ್ರಹ್ಮನೊಡನೆ ಚರ್ಚಿಸಿ ಶ್ರೀ ಲಕ್ಷ್ಮಿಯು ಬಾದಷಹನ ಮಗಳಾಗಿ ಹುಟ್ಟಿ, ರಾಮಪ್ರಿಯನಿಗೆ ರಾಣಿಯಾದರೆ ರಾಮಪ್ರಿಯನು ಸ್ವಸ್ಥಾನಕ್ಕೆ ಹೋಗಬಹುದೆಂದು ಯೋಜನೆ ಹಾಕಿಕೊಂಡನು. ದಿಲ್ಲಿಯ ಬಾದಷಹನಿಗೆ ಮಕ್ಕಳಿಲ್ಲವೆಂಬ ಕೊರಗು ದಿನೇ ದಿನೇ ಜಾಸ್ತಿಯಾಗುತ್ತಿತ್ತು. ಶಾಸ್ತ್ರ ಪುರಾಣ ಗ್ರಂಥ ಪಠಣ ಮಾಡಿಸಿ ನೋಡಿದನು.
    ಬ್ರಹ್ಮ, ಇಂದ್ರ, ನಾರದರಾದಿಯಾಗಿ ಸಕಲ ದೇವತೆಗಳು ಶ್ರೀ ಲಕ್ಷ್ಮಿಯನ್ನು ತಮ್ಮ ಬೇಡಿಕೆಗೆ ಮನ್ನಣೆ ನೀಡಬೇಕೆಂದು ಬೇಡಿಕೊಂಡರು. ಕ್ಷೀರ ಸಾಗರದಲ್ಲಿ ಜನಿಸಿದ ಲಕ್ಷ್ಮಿಯೇ ನೀನು ಆದಿಲಕ್ಷ್ಮಿಯಾಗಿರುವೆ, ನೀನು ಭಾಗ್ಯಲಕ್ಷ್ಮಿ ಧನಲಕ್ಷ್ಮಿ, ಐಶ್ವರ್ಯಲಕ್ಷ್ಮಿ, ಸಂತಾನಲಕ್ಷ್ಮಿ, ಧೈರ್ಯಲಕ್ಷ್ಮಿಯ ರೂಪದಲ್ಲಿರುವೆಯಾದ್ದರಿಂದ ನೀನು ಸಮ್ಮತಿಸಿ ಬಾದಷಹನ ಗೃಹದಲ್ಲಿ ಉದಯಿಸಬೇಕೆಂದು ಬೇಡಿಕೊಂಡರು. ಇದಕ್ಕೆ ಶ್ರೀ ಲಕ್ಷ್ಮಿಯು, ತಾವು ಸಕಲ ವೇದಗಳಿಂದ ಸ್ತುತಿಸಲ್ಪಟ್ಟವಳಾಗಿ, ಮೇಚ್ಛರಮನೆಯಲ್ಲಿ ಹುಟ್ಟುವುದೇ? ಆದ್ದರಿಂದ ಈ ಕೆಲಸ ನನ್ನಿಂದಾಗದು ಎಂತಹ ಬ್ರಹ್ಮಾದಿಗಳ ಮಾತನ್ನು ನಿರಾಕರಿಸಿದಳು.
    ಆಗ ರುದ್ರ ಸತಿಯಾದ ಪಾರ್ವತಿಯು ಶ್ರೀ ಲಕ್ಷ್ಮಿಗೆ ಈ ರೀತಿ ಸಾಂತ್ವನ ಹೇಳುತ್ತಾಳೆ, ನೀನು ನೇರವಾಗಿ ಬಾದಷಹನ ಮಡದಿಯಲ್ಲಿ ಜನಿಸಬೇಕಾಗಿಲ್ಲ, ಕಲಮದೊಳು ನೆಲೆಸಿದ್ದು, ಕಾಲಾನಂತರದಲ್ಲಿ ಬಾದಷಹನ ಹೆಂಡತಿಯ ಕರ್ಣದೊಳು ಹುಟ್ಟಿ ಬರಬೇಕೆಂದೂ, ಆ ಮೂಲಕ ರಾಮಪ್ರಿಯನ ನಿನ್ನ ಮನೋವಲ್ಲಭನ ಸೆರೆ ಬಿಡಿಸಬೇಕೆಂದು ಪ್ರಾರ್ಥಿಸಿದಳು. ಅದಕ್ಕೆ ಶ್ರೀ ಲಕ್ಷ್ಮಿಯು ನಾನು ಆ ರೀತಿ ಅಲ್ಲಿ ಹುಟ್ಟಿ ಬೆಳೆದು ಅಂಗಿ, ಲುಂಗಿ, ಬುರ್ಕಾ ಹಾಕಬೇಕಾಗುತ್ತೆ, ಮೇಲು ಮುಸುಕು ಹಾಕಲಾರನು, ಪಾಪಾಸು ಹಾಕಲಾರೆನು, ಕಣ್ಣಿಗೆ ಕಪ್ಪು ಇಡಲಾರೆನು, ಇಂತಹ ಕೃತ್ಯ ನನ್ನಿಂದಾಗದು ಎಂದು ತಾನು ಬೆಸ್ತರ ಮಗಳಾಗಿ ಹುಟ್ಟಲಿಲ್ಲವೇ? ಹಾಗಿದ್ದು ಹರನ ಸತಿಯಾಗಲಿಲ್ಲವೇ? ದೇವೆ ಕೆಲಸದಲ್ಲಿ ರಾಮಪ್ರಿಯನ ಬಿಡುಗಡೆ ಜೊತೆಗೆ, ಪ್ರಿಯ ಸಖನ ಸಮಾಗಮ ಇದು ನಿನಗೆ ಸಹ್ಯವಾಗದೇ ಎಂದು ಪಾರ್ವತಿಯು ಶ್ರೀ ಲಕ್ಷ್ಮಿಗೆ ತಿಳಿಯ ಹೇಳಲಾಗಿ, ಲಕ್ಷ್ಮಿಯು ಬಾದಷಹ ಮಗಳಾಗಿ ಹುಟ್ಟಲು ಒಪ್ಪಿದಳು.
    ಕ್ಷೀರಸಾಗರದಲ್ಲಿ ಕಮಲದ ಮಧ್ಯೆ ಸಾಸಿರದಳಗಳಾಗಿ ಶೋಭಿತ ವರ್ಣದ ಶ್ರೀ ಲಕ್ಷ್ಮಿಯು ಬ್ರಹ್ಮನಿಗೆ ಕಾಣಿಸಿಕೊಂಡಳು. ನೆಲದಿಂದ ಮೇಲೆದ್ದ ನಾಗರ ಹೆಡೆಯಂತೆ, ಮಿರಮಿರ ಮಿರುಗುವ ಬಣ್ಣಗಳ ಹೆಡೆಮುಡಿ ಕಂಡು ಬ್ರಹ್ಮನಿಗೆ ಮಹಾದಾನಂದವಾಗಿ ಲಕ್ಷ್ಮಿಯನ್ನು ಸ್ತೋತ್ರ ಮಾಡಿದರು. ನಯನ ಮನೋಹರ ಶಿರ ಪ್ರಧಾನೆ, ಆಶ್ರಿತ ಜನರ ಮನಸೋಭಿಷ್ಟೆ, ಸುಂದರಾಂಗಿ, ಬಿಂಬೋಧರೆ, ನಾರದಸನ್ನು ತೆ, ಹರಿಪ್ರಿಯೇ, ಎನ್ನುತ ಕೊಂಡಾಡಿದರು. ಪ್ರಸೀದಳಾದ ಶ್ರೀಮಾತೆ ಲಕ್ಷ್ಮಿಯು ಪ್ರಕಟಗೊಂಡು, ನಾನು ಬಾದಷಹನಲ್ಲಿಗೆ ಹೋಗಿ, ನನ್ನ ರಮಣನನ್ನು ಸೆರೆ ಬಿಡಿಸುತ್ತೇನೆ ಎಂದು ಹೇಳಿದ ಮಾತನ್ನು ಕೇಳಿ ಪಾರ್ವತಿ ಪರಮೇಶ್ವರ, ಶಾರದ ಬ್ರಹ್ಮ, ಇಂದ್ರಾದಿ ದೇವತೆಗಳು ಈ ಕರ್ಣಾನಂದವಾದ • ಮಾತನ್ನು ಕೇಳಿ, ರಾಮಪ್ರಿಯನ ಬಿಡುಗಡೆಯಾಗಿ ನಮಗೆಲ್ಲಾ ಅವರ ದರ್ಶನ ಲಭ್ಯವೆಂದು ಸಂತೋಷಪಟ್ಟರು. ಅದರಂತೆ ಶ್ರೀ ಲಕ್ಷ್ಮಿಯು ಕಮಲದಲ್ಲಿ........ ಇನ್ನು ಕಥೆ ಮುಂದೆ ಇದೆ ಇದನ್ನು ನಿಮಗೆ ಒಂದು.. video ಮುಖಾಂತರ ತಿಳಿಸಿಕೊಡುತ್ತೇನೆ...

ความคิดเห็น • 5