ಸೋಮಶಿವ ಶಿರ್ವಭವ|Soma Shiva| ಜಗನ್ನಾಥದಾಸರ ರಚನೆ| Lakshmi Muralidhar

แชร์
ฝัง
  • เผยแพร่เมื่อ 6 ต.ค. 2024
  • ಕೃತ್ತಿವಾಸನೆ ಹಿಂದೆ ನೀನಾಲ್ವತ್ತು ಕಲ್ಪ ಸಮೀರನಲಿ ಶಿಷ್ಯತ್ವ ವಹಿಸಿ ಅಖಿಳಾಗಮಾರ್ಥಗಳ ಓದಿ ಜಲಧಿಯೊಳು ಹತ್ತು ಕಲ್ಪದಿ ತಪವಗೈದು ಆದಿತ್ಯರೊಳಗೆ ಉತ್ತಮನೆನಿಸಿ ಪುರುಷೋತ್ತಮ ಪರ್ಯಂಕ ಪದ ಗೈದಿದೆಯೋ ಮಹದೇವ
    ಸೋಮಶಿವ ಶಿರ್ವಭವ ಶಿತಿಕಂಠ ನಿನ್ನ ಪದ
    ತಾಮರಸ ಯುಗ್ಮಗಳಿಗಾನಮಿಸುವೆ|| ಪ||
    ಕಾಮಹರ ಕೈಲಾಸ ಹೇಮಗಿರಿಯಾ ವಾಸ
    ರಾಮನಾಮವಭಜಿಪ ಉಮೆಯರಸ ಶಂಭೋ||ಅಪ||
    ಮೃತ್ಯುಂಜಯ ಮೃಗಾಂಗ ಕೃತ್ತಿವಾಸ ಕೃಪಾಳು
    ವಿತ್ತ ಪತಿ ಸಖ ವಿನಾಯಕನ ಜನಕ
    ಭೃತ್ಯವರ್ಗಕೆ ಬಾಹೋ ಅಪಮೃತ್ಯು ಪರಿಹರಿಸಿ ಸಂಪತ್ತು ಪಾಲಿಪುದು ನಿವೃತ್ತಿ ಸಂಗಮಪ||1||
    ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ
    ತೋಪಲೋಪಮಕಂಠ ಚಾಪಪಾಣೆ
    ಶ್ರೀಪತಿಯ ಶ್ರೀನಾಭಿ ಕೂಪ ಸಂಭವತನಯ
    ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ||2||
    ಭಸಿತ ಭೂಷಿತ ಡಮರು ತ್ರಿಸುಳನೈಯನೆ ಶಂಭೋ
    ಕಿಸಲಯೋಪಮ ರವಿಶಶಿಭೂಷಣ
    ಅಸುರರಿಪು ಸಿರಿ ಜಗನ್ನಾಥವಿಠ್ಠಲನಪದ
    ಬಿಸಜಧ್ಯಾನವ ನೀ ಯೋಹಸನಾಗಿ ಕಾಯೋ||3||

ความคิดเห็น • 4