ಇಂದಿರೆಯರಸ ಸುಕುಮಾರ | ಶ್ರೀ ವಾದಿರಾಜರ ಕೃತಿ | Indireyarasa Sukumara | Sri Vadirajara Kruti | Dasara pada

แชร์
ฝัง
  • เผยแพร่เมื่อ 9 ก.พ. 2025
  • ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಇಂದಿರೆಯರಸ ಸುಕುಮಾರ ಇಂತು
    ನೊಂದವಳ ಬಳಿಗೇಕೆ ಬಾರ
    ಇಂದವನ ಬೇಗ ತೋರದಿರೆ
    ಕೊಂದಲ್ಲದೆ ಬಿಡ ಸಖಿ ಮಾರ ||ಪ||
    ಮಧುರೆಗೆ ಪೋಗಿ ನಮ್ಮ ಮರೆದ ಅಲ್ಲಿ
    ಇದಿರಾದ ಖಳರನು ಜರಿದ
    ಕದನಕರ್ಕಶನೆಂಬ ಬಿರುದ ತೋರಿ ತನ್ನ
    ಪದಕೆರಗಿದವರ ಪೊರೆದ ||೧||
    ಕಂದರ್ಪಕೋಟಿಯ ಗೆಲುವ ಇವ
    ಸೌಂದರ್ಯದಿಂದತಿಚೆಲುವ
    ನಂದನ ಕಂದ ಭಕ್ತರಿಗೊಲಿವ ಇವ
    ಎಂದೆಂದು ಮುನಿವೃಂದಕೆ ಸಲುವ ||೨||
    ಕೊಡುವನು ಬೇಡಿದ ಫಲವ ಇವ
    ಬಿಡ ಸಖಿ ಖಳರೊಳು ಛಲವ
    ಒಡಂಬಡಿಸಿ ರಿಪುವ ಗೆಲುವನೆಂದು
    ಮೃಡ ಬಲ್ಲನಿವನ ಕೌಶಲವ ||೩||
    ಇಂಥ ಭವದ ದುರಂತ ಬಲು
    ಸಂತಾಪವನುಂಬ ಭ್ರಾಂತ
    ಅಂಥಾ ಹರಿಯೊಳೆನಗೆ ಪಂಥಸಲ್ಲ
    ಸಂತತ ನಿನಗೆ ನಿಶ್ಚಿಂತ ||೪||
    ಇನ್ನಾದರೆ ಸುಪ್ರಸನ್ನ ನಮ್ಮ
    ಚೆನ್ನಿಗ ಹಯವದನನ್ನ
    ವರ್ಣಿಸಿ ವರ್ಣಿಸಿ ನಿನ್ನವನ ತಾರೆ
    ಹೆಣ್ ತೋರೆ ಬೇಗದಿ ಅವನ ||೫||
    iMdireyarasa sukumAra iMtu
    noMdavaLa baLigEke bAra
    iMdavana bEga tOradire
    koMdallade biDa saKi mAra ||pa||
    madhurege pOgi namma mareda alli
    idirAda KaLaranu jarida
    kadanakarkaSaneMba biruda tOri tanna
    padakeragidavara poreda ||1||
    kaMdarpakOTiya geluva iva
    sauMdaryadiMdaticeluva
    naMdana kaMda Baktarigoliva iva
    eMdeMdu munivRuMdake saluva ||2||
    koDuvanu bEDida Palava iva
    biDa saKi KaLaroLu Calava
    oDaMbaDisi ripuva geluvaneMdu
    mRuDa ballanivana kauSalava ||3||
    iMtha Bavada duraMta balu
    saMtApavanuMba BrAMta
    aMthA hariyoLenage paMthasalla
    saMtata ninage niSciMta ||4||
    innAdare suprasanna namma
    cenniga hayavadananna
    varNisi varNisi ninnavana tAre
    heN tOre bEgadi avana ||5||

ความคิดเห็น • 3