ಹಂದಾಡಿ ಕಂಬಳದ ಸುವರ್ಣ ಮಹೋತ್ಸವ-2024

แชร์
ฝัง
  • เผยแพร่เมื่อ 5 ก.พ. 2025
  • ‪@parthasarathi6684‬
    ಇಲ್ಲಿನ ಹಂದಾಡಿ ನಾಲ್ಕು ಮನೆಯ ಪೈಕಿ ಪಳ್ತಮನೆಯಲ್ಲಿ ಗ್ರಾಮಸ್ಥರ ಸಹಕಾರದಿಂದ ನಡೆಯುವ ಕಂಬಳ.
    ಕಂಬಳ ದಿನ ಮಧ್ಯಾಹ್ನ ಕುಟುಂಬದ ಮನೆಯಲ್ಲಿ ಮನೆದೇವರು, ಗ್ರಾಮದೇವರನ್ನು ಪ್ರಾರ್ಥಿಸಲಾಗುತ್ತದೆ. ಫಲವನ್ನು ತೆಗೆದಿಟ್ಟು ತುಳಸಿಕಟ್ಟೆಯ ಎದುರು ಮನೆಯ ಕೋಣಗಳನ್ನು ಸಿಂಗರಿಸಿ ಪ್ರಸಾದ ಹಚ್ಚಿ ಮೆರವಣಿಗೆಯಲ್ಲಿ ದೊಡ್ಡಮನೆ ಹೆಬ್ಟಾಗಿಲು ಮೂಲಕ ಸಾಗಿ ನಾಗ ಬೊಬ್ಬರ್ಯ ದೇವರಿಗೆ ಪೂಜೆ ಸಲ್ಲಿಸಲಾಗುವುದು. ಬಳಿಕ ಕಂಬಳ ಗದ್ದೆಗೆ 1 ಸುತ್ತು ಹಾಕಿ ಮನೆ ಕೋಣಗಳನ್ನು ಗದ್ದೆಗೆ ಇಳಿಸಲಾಗುತ್ತದೆ.
    ಈ ಕಂಬಳಕ್ಕೆ ಶತಮಾನದ ಇತಿಹಾಸವಿದ್ದು, ಮಧ್ಯದಲ್ಲಿ ಕಾರಣಾಂತರದಿಂದ ನಿಂತಿತ್ತು. ಅನಂತರ ಕಂಬಳವನ್ನು ಮತ್ತೆ ಆರಂಭಿಸಬೇಕು ಎಂದು ಪ್ರಶ್ನೆಯಲ್ಲಿ ತಿಳಿದುಬಂದ ಪ್ರಕಾರ ಪಳ್ತಮನೆ ದಿ| ಭುಜಂಗ ಶೆಟ್ಟಿಯವರು ಕುಟುಂಬಸ್ಥರು ಹಾಗೂ ಊರವರ ಸಹಕಾರದಿಂದ 1974ರಿಂದ ಪುನರಾರಂಭ ಮಾಡಿದ್ದರು.
    ಕಂಬಳಕ್ಕೆ ಹಿಂದಿನ ವೃಶ್ಚಿಕ ಸಂಕ್ರಮಣದಂದು ಗರಡಿಯಲ್ಲಿ ಬಂಟ ಶಿವರಾಯರ ಸನ್ನಿಧಿಯಲ್ಲಿ ದರ್ಶನ ಸೇವೆ ಮೂಲಕ ಪ್ರಸಾದ ತೆಗೆದು ಕಂಬಳಕ್ಕೆ ದಿನ ನಿಗದಿ ಮಾಡುವುದು ವಾಡಿಕೆ. ಕಂಬಳಕ್ಕೆ ದಿನ ನಿಗದಿಯಾದ ಬಳಿಕ ಗರಡಿಯ ಹಾಲಬ್ಬಕ್ಕೆ ದಿನ ನಿಗದಿ ಮಾಡುತ್ತಾರೆ. ಸಂಪ್ರದಾಯದ ಜತೆಗೆ ವಿವಿಧ ವಿಭಾಗಗಳ ಸ್ಪರ್ಧೆಯೂ ನಡೆಯುತ್ತದೆ.

ความคิดเห็น • 4