ಫೆ. 21ಕ್ಕೆ ಹಿರಿಯೂರು ಬಂದ್, ರೈತಪರ ಸಂಘಟನೆಗಳಿಂದ ಕರೆ | ಸಾರಿಗೆ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ

แชร์
ฝัง
  • เผยแพร่เมื่อ 2 ม.ค. 2025
  • ಶಿರಸಿ ವಿಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಇದೀಗ ಡಿಜಿಟಲ್ ಪೇಮೆಂಟ್‌ಗೆ ಅವಕಾಶ ಕಲ್ಪಿಸಲಾಗಿದೆ. ಪೋನ್ ಪೇ, ಗೂಗಲ್ ಪೇ ಹಾಗೂ ಯುಪಿಐ ಬಳಸಿ ಪ್ರಯಾಣಿಕರು ಟಿಕೆಟ್ ಖರೀದಿಸಬಹುದಾಗಿದೆ. ಬಸ್ಸುಗಳಲ್ಲಿ ನಗದು ಕಳ್ಳತನ, ಚಿಲ್ಲರೆ ಸಮಸ್ಯೆ, ಬಸ್ಸ್ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಉಂಟಾಗುತ್ತಿದ್ದ ಸಮಸ್ಯೆಗಳನ್ನು ತಪ್ಪಿಸಲು, ಈ ವಿಧಾನ ಜಾರಿಗೊಳಿಸಲಾಗಿದೆ ಎಂದು ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಹೆಚ್ ಶ್ರೀನಿವಾಸ್ ತಿಳಿಸಿದ್ದಾರೆ.
    __________________________________________________________________________
    ಭದ್ರಾ ಮೇಲ್ಡಂಡೆ ಯೋಜನೆ ಕಾಮಗಾರಿ ಶೀಘ್ರ ಅನುಷ್ಟಾನಗೊಳಿಸಲು ಆಗ್ರಹಿಸಿ, ಫೆ. 21 ರಂದು ರೈತ ಸಂಘಟನೆಗಳಿಂದ ಹಿರಿಯೂರು ಬಂದ್‌ಗೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸುಮಾರು 5,300 ಕೋಟಿ ಅನುದಾನ ಘೋಷಿಸಿತ್ತು. ಆದರೆ ಇನ್ನೂ ಅನುದಾನ ಬಿಡುಗಡೆ ಮಾಡದ ಕಾರಣ ಬಂದ್‌ಗೆ ಕರೆನೀಡಲಾಗಿದೆ. ಭರದ ನಾಡಿಗೆ ನೀರಿನ ಬವಣೆ ತೀರಿಸಲು, ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ, ಬಂದ್‌ಗೆ ಕರೆ ನೀಡಿರುವುದಾಗಿ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ ಹೋರಕೆರಪ್ಪ ತಿಳಿಸಿದರು.

ความคิดเห็น •