ಆದಿಪರ್ವ-ಆರನೆಯ ಸಂಧಿ-ಭಾಗ 20

แชร์
ฝัง
  • เผยแพร่เมื่อ 17 ต.ค. 2024
  • ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ
    ಆದಿಪರ್ವ-ಆರನೆಯ ಸಂಧಿ-ಭಾಗ 20
    ಪದ್ಯ 45 : ಸುರಗಿ ಸಬಳ | ರಾಗ : ಹಂಸಧ್ವನಿ
    ಪದ್ಯ 46 : ಜನಪ ಕೇಳೈ ಭೀಮ | ರಾಗ : ರೀತಿಗೌಳ
    ವಾಚನ : ಕುಮಾರಿ ಆಶ್ರಿತ (ಗಮಕ ಪ್ರಥಮ 2023-24 : 2ನೇ Rank)
    ವ್ಯಾಖ್ಯಾನ : ಕಲಾಶ್ರೀ ಶ್ರೀಮತಿ ಗಂಗಮ್ಮ ಕೇಶವಮೂರ್ತಿ
    ಸುರಗಿ ಸಬಳ ಕಠಾರಿಯುಬ್ಬಣ
    ಹರಿಗೆ ಹಿರಿಯುಬ್ಬಣವಡಾಯುಧ
    ಪರಿಘ ಚಕ್ರ ಮುಸುಂಡಿ ತೋಮರ ಭಿಂಡಿವಾಳ ಚಯ |
    ಪರಶು ಕಕ್ಕಡೆ ಮುಸಲ ಹಲ ಮು
    ದ್ಗರ ಧನುರ್ದಂಡಾದಿ ಶಾಸ್ತ್ರೋ
    ತ್ಕರದಲನಿಬರು ಕುಶಲರಾದರು ಮುನಿಯ ಗರುಡಿಯಲಿ || 45 ||
    ಜನಪ ಕೇಳೈ ಭೀಮ ದುರ್ಯೋ
    ಧನರು ಗದೆಯಲಿ ಮಿಗಿಲು ಕರ್ಣಾ
    ರ್ಜುನರು ಧನುವಿನಲಧಿಕರಾದರು ನೃಪ ಕುಮಾರರಲಿ |
    ತನತನಗೆ ಸರ್ವಾಯುಧಂಗಳ
    ಲನಿಬರರಿದರು ಕೊಡೆ ಗುರುವಿನ
    ಮನಕೆ ಹತ್ತೆಯವಾದನರ್ಜುನನಸ್ತ್ರ ಶಿಕ್ಷೆಯಲಿ || 46 ||
    ನಿರ್ಮಾಣ: ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು
    ದೃಶ್ಯ-ಶ್ರವ್ಯ ಸಂಕಲನ : ʻಧೀʼ ಕ್ರಿಯೇಶನ್ಸ್‌, ಬೆಂಗಳೂರು

ความคิดเห็น •