ಏನ ಬೇಡಲಿ ನಿನ್ನ ಬಳಿಗೆ ಬಂದು|Ena bedali ninna | ಗೋಪಾಲದಾಸರ ರಚನೆ | Lakshmi Mralidhar.

แชร์
ฝัง
  • เผยแพร่เมื่อ 4 ก.พ. 2024
  • ಏನ ಬೇಡಲಿ ನಿನ್ನ ಬಳಿಗೆ ಬಂದು|
    ನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ|| ಪ||
    ಜನನಿಯ ಕೊಡು ಎಂದು ಜಯವಂತ ಬೇಡುವೆನೆ| ಜನನಿಯೇ ನಿತ್ತಳಾದ್ರುವರಾಯಗೆ|
    ಜನಕನಾ ಕೊಡು ಎಂದು ಜಗದೀಶ ಬೇಡುವೆನೆ| ಜನಕನೇನಿತ್ತನಾ ಪ್ರಹ್ಲಾದ ಗೆ||1||
    ಅನುಜನಾ ಕೊಡು ಎಂದು ಅತಿಶಯದಿ ಬೇಡುವೆನೆ|
    ಅನುಜನೇ ನಿತ್ತನೈ ಆವಾಲಿಗೆ|
    ಧನವನ್ನೆ ಕೊಡು ಎಂದು ದೈನ್ಯದಲಿ ಬೇಡುವೆನೆ ಧನವ ಗಳಿಸಿದ ಸುಯೋಧನನೇನಾದನು||2||
    ಸತಿಯಳಾ ಕೊಡು ಎಂದು ಮತಿವಂತ ಬೇಡುವೆನೆ | ಸತಿಯಿಂದ ದ್ಸುನಾಮಕನೇನಾದನಯ್ಯ|
    ಸುತರುಗಳ ಕೊಡು ಎಂದು ಸತತದಲಿ ಬೇಡುವೆನೆ ಸುತರಿಂದ ದೃತರಾಷ್ಟ್ರಗತಿಯಷ್ಟು ಪಡೆದ||3||
    ಬಂಧುಗಳ ಕೊಡು ಎಂದ ಚಂದದಲಿ ಬೇಡುವೆನೆ ಬಂಧುಗಳು ಸಲಹಿದರೆ ಗಜರಾಜನ|
    ಅಂದಣವ ಕೊಡು ಎಂದು ಚಂದದಲಿ ಬೇಡುವೆನೆ|ಅಂದಣೇರಿದನಹುಷನೇನಾದನಯ್ಯಾ||4||
    ಬೇಡುವೆನು ನಾನಿನ್ನ ಬೇಡ ತಕ್ಕುದ ದೇವ ನೀಡೆನೆಂಬುದು ನಿನ್ನ ಮನದೊಳಿತ್ತೆ| ಮೂಡಲಗಿರಿವಾಸ ಗೋಪಾಲ ವಿಠ್ಠಲ ಪರರ ಬೇಡದಂತೆ ಮಾಡಯ್ಯ ಹರಿಯೆ||5||

ความคิดเห็น • 14

  • @gururaosubbachar2888
    @gururaosubbachar2888 21 วันที่ผ่านมา

    ಅತೀ ಅದ್ಭುತ ಗಾಯನ 👌👌🙏

  • @user-zh7nz1nm9r
    @user-zh7nz1nm9r วันที่ผ่านมา

    Super wow nice song madam

  • @NagaRaju-tg4sz
    @NagaRaju-tg4sz 4 หลายเดือนก่อน +2

    SUPER SUPER SUPER SONG MADAM SUPER SUPER VOICE MADAM HAPPY UGADI MADAM 🎉🎉🎉.

  • @raghavendraraom7743
    @raghavendraraom7743 5 หลายเดือนก่อน +1

    ಮನ: ಪೂರ್ವಕವಾಗಿ ಹಾಡಿದ ತಮಗೆ ಅಭಿನಂದನೆಗಳು

  • @krhungund
    @krhungund 5 หลายเดือนก่อน +1

    ಭಕ್ತಿಭಾವದ ಗಾಯನ . . . . . . ಅಜನ ಪಿತ ವಿಠಲದಾಸ

  • @vijayalakshmirao6702
    @vijayalakshmirao6702 5 หลายเดือนก่อน +1

    Beautiful song with beautiful lyrics, beautiful lly rendered. Thank you. Madam. JAI SRIKRISHNA. 🙏🙏🙏🙏🙏🙏🙏🙏🙏

  • @sankarshancpshan4051
    @sankarshancpshan4051 4 หลายเดือนก่อน +1

    🙏🙏🙏

  • @venkataraman6614
    @venkataraman6614 2 หลายเดือนก่อน

    Super singing Very devotional.