ಶ್ರೀ ರಾಮಾಯಣ ದರ್ಶನಂ : ಅಭಿಷೇಕ ವಿರಾಟ್ ದರ್ಶನಂ | Sri Ramayana Darshanam : Abhisheka Virat Darshanam

แชร์
ฝัง
  • เผยแพร่เมื่อ 6 ก.ย. 2024
  • ಮಹಾಕವಿ ಕುವೆಂಪು ಶ್ರೀ ರಾಮಾಯಣ ದರ್ಶನಂ ನಲ್ಲಿ ಒಂದೆಡೆ ಹೀಗೆ ಹೇಳುತ್ತಾರೆ .
    ಕೊಂದ ಕತದಿಂದೇಂ
    ಪೆರ್ಮನಾದನೆ ರಾಮನಾ ಮಾತನುಳಿ : ಪಗೆಯೆ ?
    ತೆಗೆತೆಗೆ ! ಪೆರ್ಮೆಗೊಲ್ಮೆಯೆ ಚಿಹ್ನೆ. ಮಹತ್ತಿಗೇಂ
    ಬೆಲೆಯೆ ಪೇಳ್ ಕೊಲೆ ? ದೈತ್ಯನಂ ಗೆಲಿದ ಕಾರಣಕಲ್ತು,
    ತನ್ನ ದಯಿತೆಯನೊಲಿದ ಕಾರಣಕೆ, ಗುರು ಕಣಾ
    ರಾಮಚಂದ್ರಂ. ಕೋಲಾಹಲದ ರುಚಿಯ ಮೋಹಕ್ಕೆ
    ಮರುಳಾದ ಮಾನವರ್ ರಾವಣನ ಕೊಲೆಗಾಗಿ
    ರಾಮನಂ ಕೊಂಡಾಡಿದೊಡೆ ಕವಿಗುಮಾ ಭ್ರಾಂತಿ
    ತಾನೇಕೆ ? ಮಣಿಯುವೆನು ರಾಮನಡಿದಾವರೆಗೆ :
    ದಶಶಿರನ ವಧೆಗಾಗಿಯಲ್ತು ; ಮಂದಾಕಿನಿಯ
    ತಿಳಿವೊನಲ ಮೀಯುತಿರಲೊರ್‌ದಿನಂ ತಾಂ ಕಂಡ
    ದೃಶ್ಯಸೌಂದರ್ಯದಿಂದಾತ್ಮದರ್ಶನಕೇರ್ದ
    ರಸಸಮಾಧಿಯ ಮಹಿಮೆಗಾಗಿ !
    ರಾಮಾಯಣದಲ್ಲಿದಲ್ಲಿನ ಹಿಂಸೆಯ ವೈಭವೀಕರಣದ ಸುತ್ತ ಹೆಣೆದುಕೊಂಡ ನಿರೂಪಣೆಯಲ್ಲಿ, ಅದನ್ನು ಪ್ರಸ್ತುತತೆಗಿಟ್ಟು ನೋಡುವಲ್ಲಿ ಕವಿ ಕುವೆಂಪು ಅವರಿಗೆ ಯಾವ ಆಸಕ್ತಿಯೂ ಇರಲಿಲ್ಲ. ಕುವೆಂಪು ಅವರಿಗೆ ರಾಮನ ಬಗೆಗೆ ಗೌರವವಿದ್ದದ್ದು ತನ್ನ ಸತಿಯನ್ನು ಒಲಿದ ಕಾರಣಕ್ಕೆ , ಅವನಿಗಿದ್ದ ಅದಮ್ಯವಾದ ನಿಸರ್ಗಪ್ರೀತಿಗೆ. ಶ್ರೀ ರಾಮಾಯಣ ದರ್ಶನಂ ಕೃತಿಯ “ಅಭಿಷೇಕ ವಿರಾಟ್ ದರ್ಶನಂ” ಅಧ್ಯಾಯದ ಆರಂಭದ ಕೆಲವು ಸಾಲುಗಳನ್ನು ಇಲ್ಲಿ ಇತ್ತೀಚೆಗೆ ನಿಧನರಾದ ನಾಡು ಕಂಡ ಅಪರೂಪದ ಗಮಕ ಕಲಾವಿದ ಚಂದ್ರಶೇಖರ ಕೆದ್ಲಾಯ ಅವರು ಹಾಡಿದ್ದಾರೆ.
    ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ yt.orcsnet.com...
    ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಮತ್ತು ಅವಿರತ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿಸೆಪ್ಟೆಂಬರ್ 23-24 2018 ರಂದು ಕುಪ್ಪಳ್ಳಿಯಲ್ಲಿ ನಡೆದ "ಶ್ರೀ ರಾಮಾಯಣ ದರ್ಶನಂ" ( ವಾಚನ - ವಾಖ್ಯಾನ - ಉಪನ್ಯಾಸ ) ಕಾರ್ಯಕ್ರಮದ ದಾಖಲೀಕರಣ ಋತುಮಾನ ಕೈಗೆತ್ತಿಕೊಂಡಿತ್ತು. ಗಮಕ ಮತ್ತು ಹಲವು ಪ್ರಾಜ್ಞರ ಉಪನ್ಯಾಸಗಳು ಮುಂದೆ ಋತುಮಾನದಲ್ಲಿ ಪ್ರಕಟಗೊಳ್ಳಲಿವೆ.

ความคิดเห็น •